Author: admin

ಬಂಟ್ವಾಳ: ಜಿಲ್ಲೆಯ ಕಾರಣಿಕ ದೈವಸ್ಥಾನ ಸಜೀಪಮೂಡ ಗ್ರಾಮದ ಪಣೋಲಿಬೈಲಿನ ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಈ ತಿಂಗಳ ನಾಲ್ಕು ದಿನ ಅಗೇಲು ಸೇವೆ ಇರುವುದಿಲ್ಲ.ಮಾ.10 ಭಾನುವಾರ ಅಮಾವಾಸ್ಯೆಯ ಪ್ರಯುಕ್ತ ಅಗೇಲು ಸೇವೆ ಇರುವುದಿಲ್ಲ, ಅದೇ ರೀತಿ ಮಾ. 22, 24, 26 ರಂದು ಸಜೀಪ ಮಾಗಣೆ ಪಡ್ಡೆರಮಾಡ ಜಾತ್ರೆಯ” ಪ್ರಯುಕ್ತ ಕ್ಷೇತ್ರದಲ್ಲಿ ಆಗೇಲು ಸೇವೆ ಇರುವುದಿಲ್ಲ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.

Read More

ಬಂಟ್ವಾಳ: ಬಿ ಮೂಡ ಗ್ರಾಮದ ಬಿ ಸಿ ರೋಡು ಗೂಡಿನಬಳಿಯ ಚಿಕ್ಕಯಮಠ ಎಂಬಲ್ಲಿ ಗುಡ್ಡೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ಜು ಬಂಟ್ವಾಳ ಕಂದಾಯ ಇಲಾಖೆಯ ಕರೆಯಂತೆ ತಕ್ಷಣ ಬಂಟ್ವಾಳಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.ಈ ಸಂದರ್ಭದಲ್ಲಿಅಗ್ನಿ ಶಾಮಕ ದಳ ಬಂಟ್ವಾಳದ ಸಹಾಯಕ ಠಾಣಾಧಿಕಾರಿ ರಾಜೇಶ್ ಶೆಟ್ಟಿ ಹಾಗೂ ಸಿಬ್ಬಂದಿ ವರ್ಗಇವರೊಂದಿಗೆ ಬಂಟ್ವಾಳ ಕಂದಾಯ ಇಲಾಖೆಯ ಕರಿಬಸಪ್ಪ ನಾಯಕ್, ಸಿಬ್ಬಂದಿ ಸದಾಶಿವ ಕೈಕಂಬಸಹಕರಿಸಿದರುಹತ್ತಿರದಲ್ಲಿ ಅನೇಕ ಮನೆಗಳಿದ್ದು ಯಾವುದೇ ಆಪಾಯ ಆಗಿರುವುದಿಲ್ಲ.

Read More

ಬಂಟ್ವಾಳ: ಗೌಡ ಸಾರಸ್ವತ ಬ್ರಾಹ್ಮಣ ವೃಂದದವರ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದ ಬ್ರಹ್ಮರಥೋತ್ಸವ ಕಾರ್ಯಕ್ರಮ ಸಹಿತ ಉತ್ಸವಾದಿ ಕಾರ್ಯಕ್ರಮಗಳು ಮಾರ್ಚ್ 12ರಿಂದ 17ರವರೆಗೆ ನಡೆಯಲಿದೆ. ಇದು ಬಂಟ್ವಾಳ ಬ್ರಹ್ಮರಥದ 200ನೇ ವರ್ಷಾಚರಣೆಯೂ ಆಗಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಲಿವೆ ಎಂದು ಶ್ರೀ ದೇವಳದ ಆಡಳಿತ ಮೊತ್ತೇಸರರಾದ ಅಶೋಕ್‌ ಶೆಣೈ ಹೇಳಿದರು. ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಕಾರ್ಯಕ್ರಮಗಳಿಗೆ ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಮಾರ್ಚ್ 10ರಂದು ಆಗಮಿಸಿ 17ರವರೆಗೆ ಬಂಟ್ವಾಳದಲ್ಲಿ ಉಪಸ್ಥಿತರಿದ್ದು, ಶ್ರೀಗಳ ಆಜ್ಞಾನುಸಾರ ಕಾರ್ಯಕ್ರಮಗಳು ನಡೆಯಲಿವೆ, ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಎಲ್ಲ ಕಾರ್ಯಕ್ರಮಗಳಲ್ಲಿ ಸಹಭಾಗಿಗಳಾಗಿ ಶ್ರೀಹರಿಗುರುಕೃಪೆಗೆ ಪಾತ್ರರಾಗಬೇಕು ಎಂದವರು ವಿನಂತಿಸಿದರು. ಸಮಾಜ ಬಾಂಧವರಿಂದ ಮಾರ್ಚ್ 10ರಂದು ಶ್ರೀದೇವರಿಗೆ ಮಲ್ಲಿಗೆ ಹೂವಿನಿಂದ ಸಹಸ್ರನಾಮ ಪುಷ್ಪಾಂಜನೆ, ಸಾಯಂಕಾಲ ವಿಶೇಷ ಹೊರೆಕಾಣಿಕೆ, ಸಮಾರಾಧನೆ ನಡೆಯಲಿದೆ. ಅಂದು ಬೆಳಗ್ಗೆ 11.30ಕ್ಕೆ ಶ್ರೀ ಕಾಶೀ ಮಠಾಧೀಶ ಶ್ರೀಮದ್…

Read More

ಬಂಟ್ವಾಳ: ಶಂಭೂರಿನ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಕಸವನ್ನು ಹೊತ್ತಿಸುವ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಆಸ್ಪತ್ರೆಗೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಮಾ. ೧ ರಂದು ಶಂಭೂರು ಶಾಲಾ ಆವರಣದಲ್ಲಿ ಘಟನೆ ನಡೆದಿದ್ದು, ಬಳಿಕ ಬಾಲಕನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು . ಇದೀಗ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ರಾಜೇಶ್ ನಾಯ್ಕ್ ಅವರು ಘಟನೆಯ ಬಗ್ಗೆ ಬಾಲಕನಿಂದ ಮಾಹಿತಿ ಪಡೆದಿದ್ದಾರೆ. ಈ ಬಗ್ಗೆ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಯವರಿಂದಲೂ ಮಾಹಿತಿ ಕೇಳಿ ಪಡೆಯುದಾಗಿ ತಿಳಿಸಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವೈಯಕ್ತಿಕವಾಗಿ ಧನಸಹಾಯ ಮಾಡಿದಲ್ಲದೆ ಧೈರ್ಯ ತುಂಬಿದ್ದಾರೆ. ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಉಪಸ್ಥಿತರಿದ್ದರು.

Read More

ಬಂಟ್ವಾಳ: ಕಾವಳಮೂಡೂರು ಗ್ರಾಮದ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಬಸವ ಶಂಕರ ಅನಾರೋಗ್ಯದಿಂದ ಕೆದ್ದಳಿಕೆಯ ಮನೆಯೊಂದರಲ್ಲಿ ಸೋಮವಾರ ಅಸು ನೀಗಿದೆ.ಬಸವ ಶಂಕರ ಕಳೆದ 14 ವರ್ಷಗಳಿಂದ ಕಾರಿಂಜ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ. ಒಂದು ವರ್ಷ ಪ್ರಾಯದ ಬಸವನನ್ನು ದೇವರಿಗೆ ಹರಕೆ ರೂಪದಲ್ಲಿ ಒಪ್ಪಿಸಲಾಗಿತ್ತು. ಶಿವ ಕ್ಷೇತ್ರವಾದುದರಿಂದ ಶಂಕರ ಎಂದು ನಾಮಕರಣ ಮಾಡಲಾಗಿತ್ತು. ಸೌಮ್ಯ ಸ್ವಭಾವದ ಶಂಕರ ತನ್ನ ಗಾಂಭೀರ್ಯದಿಂದ ಜಾತ್ರೆ ಸಂದರ್ಭದಲ್ಲಿ ಆಕರ್ಷಣೆಯ ಕೇಂದ್ರವಾಗಿದ್ದ. ಜಾತ್ರೆ ಸಮಯದಲ್ಲಿ ಪ್ರತೀವರ್ಷ ಶಂಕರನಿಗೆ ರಾಜ ಪೋಶಾಕನ್ನು ಕಾವಳಕಟ್ಟೆಯ ದಿನೇಶ್ ಟೈಲರ್ ಅವರು ಸಿದ್ಧಪಡಿಸುತ್ತಿದ್ದರು. ಈ ಬಾರಿಯೂ ಹೊಸ ವಸ್ತ್ರ ತಯಾರಾಗಿತ್ತು. ಕೆಲವು ದಿನಗಳ ಹಿಂದೆ ಶಂಕರನನ್ನು ಆರೈಕೆಗಾಗಿ ಕೆದ್ದಳಿಕೆಗೆ ಕೊಂಡೊಯ್ಯಲಾಗಿತ್ತು. ಶಿವರಾತ್ರಿ ಜಾತ್ರೆಗೆ ಕೆಲವೇ ದಿನಗಳಿರುವಾಗ ಶಂಕರ ಮೃತಪಟ್ಟಿದ್ದು ಗ್ರಾಮಸ್ಥರಿಗೆ ದು:ಖವನ್ನುಂಟುಮಾಡಿದೆ. ಬಸವ ಶಂಕರನ ಅಂತಿಮ ಸಂಸ್ಕಾರವನ್ನು ಕೆದ್ದಳಿಕೆಯಲ್ಲಿ ನೆರವೇರಿಸಲಾಯಿತು.

Read More

ಬಂಟ್ವಾಳ: ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಮೂಲಕ ದೀನ ದುರ್ಬಲರಿಗೆ ನೆರವಿನ ಮೂಲಕ ದೊಡ್ಡ ತಪಸ್ಸಿನ ಕಾರ್ಯ ನಡೆಯುತ್ತಿದ್ದು, ಇದು ಸನ್ಯಾಸಿಗಳ ತ್ಯಾಗಕ್ಕಿಂತಲೂ ಮಿಗಿಲಾದ ಸೇವೆಯಾಗಿದೆ. ಇಂತಹ ಸಂಸ್ಥೆಗಳಿಗೆ ನಾವೆಲ್ಲರೂ ದಾನಿಗಳನ್ನು ಕರೆ ತರುವ ಕಾರ್ಯ ಮಾಡಬೇಕಿದೆ. ಕ್ಷಯ ರೋಗಿಗಳಿಗೆ ದೇಹದ ಮೇಲೆ ಔಷಧ ಕೆಲಸ ಮಾಡಬೇಕಾದರೆ ಪೌಷ್ಟಿಕಾಹಾರ ಅಗತ್ಯ ಎಂದು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು. ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಢಾನದ ವತಿಯಿಂದ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ಮಂಗಳವಾರ ನಡೆದ ಆಹಾರ ದವಸ ಧಾನ್ಯದ ಕಿಟ್ ವಿತರಿಸಿ ಅವರು ಆಶೀರ್ವಚನ ನೀಡಿದರು. ಸೇವಾಂಜಲಿ ಪ್ರತಿಷ್ಠಾನದಿಂದ ಆಡಳಿತ ಟ್ರಸ್ಟಿ ಕೆ.ಕೃಕುಮಾರ್ ಪೂಂಜ ಪ್ರಸ್ತಾವನೆಗೈದು, ದೇಶವು 2025ಕ್ಕೆ ಕ್ಷಯ ಮುಕ್ತ ಭಾರತ ಆಗಬೇಕು ಎಂಬ ಪ್ರಧಾನಿಗಳ ಆಶಯಕ್ಕೆ ಪೂರಕವಾಗಿ ಪ್ರತಿಷ್ಠಾನವು ಪ್ರತಿ ತಿಂಗಳು ಕ್ಷಯರೋಗಿಗಳಿಗೆ 10 ಬಗೆಯ ಆಹಾರ ಧಾನ್ಯ ವಿತರಿಸಲಾಗುತ್ತಿದ್ದು, ಒಂದು ರೋಗಿಗೆ ತಲಾ 6 ಸಾವಿರ ರೂ. ಖರ್ಚು ಮಾಡಲಾಗುತ್ತಿದೆ. ಈವರೆಗೆ 98…

Read More

https://youtu.be/vwXE4a8LG4M for video click here ⬆️ ಬಂಟ್ವಾಳ: ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿಯಮಿತ ಇದರ ಬೋಳಂತೂರು ಸ್ಥಳಾಂತರಗೊಂಡ ಶಾಖೆಯ ಉದ್ಘಾಟನಾ ಸಮಾರಂಭ ಸೋಮವಾರ ಬೋಳಂತೂರು ಗ್ರಾಮದ ಉತ್ತಮ ನಗರದಲ್ಲಿ ನಡೆಯಿತು. ಆದರ್ಶ ಸೊಸೈಟಿಯ ನಿರ್ದೇಶಕ ಮಹಾಬಲ ರೈ ಹೊಸಮನೆ ಶಾಖೆ ಉದ್ಘಾಟಿಸಿದರು. ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಜೀಪಮುನ್ನೂರು ಮೂರ್ತೇದಾರರ ಸೇವಾ ಸಹಕಾರಿ ಸಂಘದ ೧೩ ಶಾಖೆಗಳು ಉತ್ತಮವಾಗಿ ಕಾರ್ಯಹಿಸುತ್ತಿದ್ದು ಮುಂದಿನ ದಿನಗಳಲ್ಲಿ ವೇಣೂರು ಹಾಗೂ ಬಿ.ಸಿ. ರೋಡಿನಲ್ಲಿ ಹೊಸ ಶಾಖೆಗಳು ಆರಂಭಗೊಳ್ಳಲಿವೆ. ೨೫ ಶಾಖೆಗಳನ್ನು ಹೊಂದಿ ೧೦೦ ಮಂದಿ ಮಹಿಳೆಯರಿಗೆ ಉದ್ಯೋಗ ಒದಗಿಸಿಕೊಡುವ ಚಿಂತನೆ ಆಡಳಿತ ಮಂಡಳಿಯ ಮುಂದಿದೆ ಎಂದರು. ಪ್ರಾಮಾಣಿಕತೆ ಹಾಗೂ ನಂಬಿಕೆಯಿಂದ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಅತ್ಯುತ್ತಮ ಸಂಘ ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತಾ.ಪಂ. ಮಾಜಿ ಉಪಾಧ್ಯಕ್ಷ ಅಬ್ಬಾಸ್ ಅಲಿ ಮಾತನಾಡಿ ಶ್ರಮಜೀವಿಯಾಗಿರುವ ಸಂಜೀವ ಪೂಜಾರಿಯವರ…

Read More

ಬಂಟ್ವಾಳ: ನಾವೂರು ಕೂಡಿ ಬೈಲಿನಲ್ಲಿ ನಡೆದ 13 ನೇ ವರ್ಷದ ಮೂಡೂರು ಪಡೂರು ಜೋಡುಕರೆ ಕಂಬಳ ಸಮಾಪನ ಗೊಂಡಿದ್ದು ಫಲಿತಾಂಶ ಇಂತಿದೆ. ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : ಕನೆಹಲಗೆ: 09 ಜೊತೆ, ಅಡ್ಡಹಲಗೆ: 04 ಜೊತೆ ಹಗ್ಗ ಹಿರಿಯ: 15 ಜೊತೆ, ನೇಗಿಲು ಹಿರಿಯ: 29 ಜೊತೆ , ಹಗ್ಗ ಕಿರಿಯ: 20ಜೊತೆ , ನೇಗಿಲು ಕಿರಿಯ: 105 ಜೊತೆಒಟ್ಟು ಕೋಣಗಳ ಸಂಖ್ಯೆ: 182 ಜೊತೆ Advertisement Advertisement ಕನೆಹಲಗೆ:ಪ್ರಥಮ: ಬೇಲಾಡಿ ಬಾವ ಅಶೋಕ್ ಶೆಟ್ಟಿಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗದ್ವಿತೀಯ: ಅಲ್ಲಿಪಾದೆ ಕೆಳಗಿನಮನೆ ವಿನ್ಸೆಂಟ್ ಪಿಂಟೊಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿಅಡ್ಡ ಹಲಗೆ:ಪ್ರಥಮ: ಅಲ್ಲಿಪಾದೆ ಪೆರಿಯಾರ್ ಮಿಂಗಲ್ ಸೇನ್ಹಲಗೆ ಮುಟ್ಟಿದವರು:ಭಟ್ಕಳ ಹರೀಶ್ದ್ವಿತೀಯ: ಅಲ್ಲಿಪಾದೆ ಕೆಳಗಿನಮನೆ ವಿನ್ಸೆಂಟ್ ಪಿಂಟೋಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ Advertisement Advertisement ಹಗ್ಗ ಹಿರಿಯ:ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ “ಎ”ಓಡಿಸಿದವರು: ಬಂಬ್ರಾಣ ಬೈಲು ವಂದಿತ್ ಶೆಟ್ಟಿದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್ “ಬಿ”ಓಡಿಸಿದವರು:ಕಾವೂರ್ ತೋಟ ಸುದರ್ಶನ್ಹಗ್ಗ…

Read More

ಬಂಟ್ವಾಳ: ಭೂ ಕೈಲಾಸ ಪ್ರತೀತಿಯ ಇತಿಹಾಸ ಪ್ರಸಿದ್ಧ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ 50 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾದ ನೂತನ ಮಹಾರಥದ ಸಮರ್ಪಣೆ ಕಾರ್ಯಕ್ರಮದ ಶೋಭಾಯಾತ್ರೆಗೆ ರವಿವಾರ ಬಿ.ಸಿ.ರೋಡ್‌ನಲ್ಲಿ ಚಾಲನೆ ನೀಡಲಾಯಿತು. Advertisement Advertisement ಬಿ.ಸಿ.ರೋಡ್ ನಿಂದ ಶ್ರೀ ಕ್ಷೇತ್ರ ಕಾರಿಂಜದವರೆಗೆ ನಡೆದ ಶೋಭಾಯಾತ್ರೆಗೆ ಬಿ.ಸಿ.ರೋಡ್ ಶ್ರೀ ರಕ್ತೇಶ್ವರಿ ದೇವಸ್ಥಾನದ ಬಳಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಶ್ರೀ ರಕ್ತೇಶ್ವರಿ ಸನ್ನಿಧಿಯಲ್ಲಿ ದೀಪ ಬೆಳಗಿಸಿ ಹಿರಿಯ ಸಾಹಿತಿ ಕೆ.ಎಲ್. ಆಚಾರ್ಯ ಅವರು ಪ್ರಾರ್ಥನೆ ಸಲ್ಲಿಸಿದರು. ಉದ್ಯಮಿ ಕೆ.ಕೆ.ಶೆಟ್ಟಿ. ಶ್ರೀ ರಕ್ತೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಬಿ.ವಿಶ್ವನಾಥ, ಉಪಾಧ್ಯಕ್ಷ ಕೆ.ಸಂಜೀವ ಪೂಜಾರಿ ಗುರುಕೃಪಾ,ಮಾಜಿ ಅಧ್ಯಕ್ಷ ಗೋಪಾಲ ಸುವರ್ಣ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬಂಟ್ವಾಳ ಬಿಜೆಪಿ ಕ್ಷೇತ್ರಾದ್ಯಕ್ಷ ದೇವಪ್ಪ ಪೂಜಾರಿ, ಉದ್ಯಮಿ ರಮೇಶ್ ಸಾಲ್ಯಾನ್, ನಿವೃತ್ತ ಕಂದಾಯ ಅಽಕಾರಿಗಳಾದ ರೋಹಿನಾಥ್ ಪಟ್ರಾಡಿ, ಅಣ್ಣು…

Read More

ಬಂಟ್ವಾಳ: ಶಿಕ್ಷಕನು ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವ ಶಕ್ತಿಯಾಗಿದ್ದು ತನ್ನ ಬದುಕಿನುದ್ದಕ್ಕೂ ಕನ್ನಡಿಯಂತೆ ವ್ಯಕ್ತಿತ್ವವನ್ನು ಹೊಂದಿರಬೇಕಾಗುತ್ತದೆ, ಶಿಕ್ಷಕನ ವೃತ್ತಿ ಧರ್ಮವು ಸೇವೆಯ ರೂಪದಲ್ಲಿದ್ದು ಮಾದರಿ ವ್ಯಕ್ತಿತ್ವವನ್ನು ಹೊಂದಿರ ಬೇಕಾಗುತ್ತದೆ.ತನ್ನ ಉತ್ತಮ ನಡತೆ , ನಿಷ್ಪಕ್ಷಪಾತ ಸೇವೆ, ಶಾಲೆಯ ಅಭಿವೃದ್ಧಿ, ಮಕ್ಕಳ ಮಾದರಿ ಶಿಕ್ಷಕನಾಗಿ ಇದ್ದಾಗ ಮಾತ್ರ ಸೇವೆಯಲ್ಲಿ ಸಂಪೂರ್ಣತೆಯನ್ನು ಪಡೆಯಲು ಸಾಧ್ಯ ಎಂದು ಕಲ್ಲಡ್ಕ ವಲಯದ ಶಿಕ್ಷಣ ಸಂಯೋಜಕಿ ಪ್ರತಿಮಾ ಹೇಳಿದರು. Advertisement Advertisement Advertisement ಅವರು ಶನಿವಾರ ಬಂಟ್ವಾಳ ತಾಲೂಕಿನ ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಮಜಿ ವೀರಕಂಭ ಇಲ್ಲಿ ನಡೆದ ಗುರುವಂದನಾ ಕಾರ್ಯಕ್ರಮವನ್ನು‌ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಲ್ಲಡ್ಕ ಕ್ಲಸ್ಟರ್ ನಲ್ಲಿ ಈ ವರ್ಷ ದಲ್ಲಿ ನಿವೃತರಾದ ಮಜಿ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಹಾಗೂ ಕೆಲಿಂಜ ಶಾಲೆಯ ನಿವೃತ್ತ ಸಹಶಿಕ್ಷಕಿ ಗಾಯತ್ರಿ ದೇವಿ ಇವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಕಲ್ಲಡ್ಕ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಅಬೂಬಕರ್ ಅಶ್ರಫ್, ಹಾಗೂ ಕಲ್ಲಡ್ಕ ಕ್ಲಸ್ಟರಿನ ಶಾಲೆಗಳ ಶಿಕ್ಷಕರು ಹಾಜರಿದ್ದರು. Advertisement Advertisement…

Read More