
ಬಂಟ್ವಾಳ : ತಾಲೂಕು ಕುಲಾಲ ಸುಧಾರಕ ಸಂಘ ಬಂಟ್ವಾಳ ಇದರ ಆಶ್ರಯದಲ್ಲಿ ಕುಲಾಲ ಸಂಘಗಳ ಸಾಂಸ್ಕೃತಿಕ ಕಾರ್ಯಕ್ರಮ ಕಲಾವಳಿಗೆ ಹಿರಿಯ ರಂಗಕರ್ಮಿ ರಮಾ ಬಿ.ಸಿ.ರೋಡು ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ದೀಪಪ್ರಜ್ವಲಿಸಿ ಚಾಲನೆ ನೀಡಿದರು.
ಅವರು ಮಾತಮಾಡಿ ನಿಸ್ವಾರ್ಥ ಸೇವೆಗೆ ನಿದರ್ಶನ ದೀಪ. ತಾನು ಕತ್ತಲಲ್ಲಿದ್ದರೂ ದೀಪ ಇತರರಿಗೆ ಬೆಳಕು ನೀಡುತ್ತದೆ. ಅಂತೆಯೇ ಇಂದು ದೀಪಪ್ರಜ್ವಲಿಸುವ ಮೂಲಕ ಕಲಾಂಜಲಿ ಉದ್ಘಾಟನೆಗೊಂಡಿದೆ.


ಕುಲಾಲರ ಮೂಲ ಕಲೆ. ಚಕ್ರ ಕುಲಾಲರ ಸಂಕೇತ, ಅಭಿವೃದ್ದಿಯ ಸಂಕೇತ. ಅನೇಕ ಮಂದಿ ಕಲಾವಿದರು ಕುಲಾಲ ಸಮಾಜದಲ್ಲಿದ್ದಾರೆ. ಕಲಾವಿದರಿಗೆ ವೇದಿಕೆ ಒದಗಿಸುವ ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಸಂಘದ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ ಸ್ವಾಗತಿಸಿದರು,
ಕೋಶಾಧಿಕಾರಿ ರಮೇಶ್ ಸಾಲ್ಯಾನ್ ವಂದಿಸಿದರು. ಸಂದೀಪ್ ಸಾಲ್ಯಾನ್ ಉದ್ಘಾಟಕರನ್ನು ಪರಿಚಯಿಸಿದರು. ರಂಗಕಲಾವಿದ ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು
Advertisement







