Author: admin

ಬಂಟ್ವಾಳ: ತುಳುನಾಡ ದೈವಾರಾಧನೆ ಸಂರಕ್ಷಣೆ ವೇದಿಕೆ (ರಿ)ಯು ಜಿಲ್ಲೆಯ ಎಲ್ಲಾ ದೈವಸ್ಥಾನಗಳಿಗೆ ಹಾಗೂ ದೇವಸ್ಥಾನಗಳಿಗೆ ದೈವ ನರ್ತನದ ಫೋಟೋ, ವಿಡಿಯೋ ಚಿತ್ರೀಕರಣ ಮಾಡದಂತೆ ಸೂಚನಾ ಫಲಕವನ್ನು ನೀಡುತ್ತಿದೆ. ತುಳುನಾಡ ದೈವಾರಾಧನೆ ಸಂರಕ್ಷಣೆ ವೇದಿಕೆ (ರಿ) ಇದರ ಸದಸ್ಯರು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೋಲ, ನೇಮೋತ್ಸವದಲ್ಲಿ ದೈವ ನರ್ತನದ ಫೋಟೋ, ವಿಡಿಯೋ ಚಿತ್ರೀಕರಣ ಮಾಡದಂತೆ ಇದುವರೆಗೂ ಸುಮಾರು 25ಕ್ಕೂ ಅಧಿಕ ದೈವಸ್ಥಾನದಲ್ಲಿ ಆಡಳಿತ ಮಂಡಳಿಗೆ ಮನವಿ ಮಾಡಿ ಬಳಿಕ ನಿಷೇಧ ಬರಹದ ಬೋರ್ಡನ್ನು ನೀಡುತ್ತಿದ್ದಾರೆ. ಈ ಮೂಲಕ ತುಳುನಾಡಿನ ಸಮಸ್ತ ದೈವಾರದಕರಲ್ಲಿ ದೈವದ ಹಾಗೂ ದೈವ ನರ್ತನದ ಫೋಟೋ/ಲ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಾಕಬಾರದಾಗಿ ವಿನಂತಿ ಮಾಡುತ್ತಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ತುಳುನಾಡ ದೈವಾರಾಧನೆ ಸಂರಕ್ಷಣೆ ವೇದಿಕೆ ಸದಸ್ಯರ ಈ ನಂಬಿಕೆಯ ಕಾರ್ಯಕ್ಕೆ ದೈವಾರದಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read More

ಬಂಟ್ವಾಳ: ರಾಷ್ಟ್ರೀಯ ಸ್ವಯಂ ಸೇವಕ ಸಂಘ,ಕುರಿಯಾಳ ಇದರ ವತಿಯಿಂದ ಶ್ರೀ ಓಂಕಾರೇಶ್ವರಿ ದೇವಿ ಭಜನಾ ಮಂದಿರದ ವಠಾರದಲ್ಲಿ ದೀಪ ಪೂಜನಾ ಕಾರ್ಯಕ್ರಮ ಮಂಗಳವಾರ ಸಂಜೆ ನಡೆಯಿತು.ಯೋಗಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಇವರು ದೀಪ ಮಹತ್ವದ ಬಗ್ಗೆ ಮಾರ್ಹದರ್ಶನ ಮಾಡಿ ದೀಪ ಎಂಬುವುದು ಜ್ಞಾನದ ಬೆಳಕು, ಶಕ್ತಿಯ ಸ್ವರೂಪ ನೆಮ್ಮದಿಯ ಪ್ರತೀಕ ಎಂದರು. ಒಂದು ಹೆಣ್ಣಿಗೆ ಇರುವಂತಹ ಶಕ್ತಿಯು ತನ್ನ ಕುಟುಂಬವನ್ನು ಪ್ರೀತಿಯಿಂದ ಯಾವ ರೀತಿಯಾಗಿ ಸರಿದೂಗಿಸಿಕೊಂಡು, ಎಲ್ಲರಿಗೂ ಹೊಂದಿಕೊಂಡು, ದೇವರಿಗೆ ಶ್ರದ್ಧೆ ಭಕ್ತಿಯಿಂದ ತನ್ನನ್ನು ತಾನು ಸಮರ್ಪಿಸಿಕೊಂಡು, ಮನೆಯಲ್ಲಿರುವ ಕಷ್ಟಸುಖಗಳಲ್ಲಿ ಪತಿಯೊಂದಿಗೆ ಭಾಗಿಯಗುತ್ತಾ ಪೂರ್ಣ ಮಾತೃ ಆಗುವಂತಹ ಸುಂದರವಾದ ಕ್ಷಣಗಳನ್ನು ಪೂಜೆಯ ಮುಖಾಂತರ ಕಣ್ಣು ತೆರೆಸುವ ವಿಚಾರದ ಬಗ್ಗೆ ತಿಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘ ಅಮ್ಟಾಡಿ ಮಂಡಲ ಕಾರ್ಯವಾಹ ಸತೀಶ್ ಶೆಟ್ಟಿ, ಅಮ್ಟಾಡಿ ಮಂಡಲ ಪ್ರಮುಖ್ ಅಶೋಕ್ ಪೂಜಾರಿ ಪಾಪುದಡ್ಕ, ಓಂಕಾರೇಶ್ವರಿ ದೇವಿ ಭಜನಾ ಮಂದಿರ ಜೀರ್ಣೊಧ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹರೀಶ್ ಶೆಟ್ಟಿ ಪಡು,ಶ್ರೀ…

Read More

ಬಂಟ್ವಾಳ: ರಾಜ್ಯ ಸರ್ಕಾರ ಜಾರಿ ಮಾಡಿದ ಪಂಚ ಗ್ಯಾರಂಟಿ ಯೋಜನೆಗಳ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾಗಿ ಹಾಗೂ ಬಂಟ್ವಾಳ ತಾಲೂಕಿನ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ ಜಯಂತಿ ವಿ. ಪೂಜಾರಿ ನೇಮಕಗೊಂಡಿದ್ದಾರೆ. ಮಾಜಿ ಸಚಿವ ಬಿ.ರಮಾನಾಥ ರೈ ಅವರ ಶಿಫಾರಸ್ಸಿನ ಮೇರೆಗೆ ಜಯಂತಿ ವಿ.ಪೂಜಾರಿ ಅವರನ್ನು ಕರ್ನಾಟಕ ಸರ್ಕಾರ ನೇಮಕ ಮಾಡಿದೆ‌. ಜಯಂತಿ ಪೂಜಾರಿ ಅವರು ದ.ಕ.ಜಿಲ್ಲಾ ಕೆಡಿಪಿಯ ಮಾಜಿ ಸದಸ್ಯರಾಗಿದ್ದು ಪ್ರಸ್ತುತ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ, ದ.ಕ. ಜಿಲ್ಲಾ ಕಾಂಗ್ರೆಸ್ ಸದಸ್ಯರಾಗಿ, ಶಿವಗಿರಿ ಮಹಿಳಾ ಸಹಕಾರಿ ಬ್ಯಾಂಕ್ ನ ಸ್ಥಾಪಕಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜನಜಾಗೃತಿ ವೇದಿಕೆ ಕಲ್ಲಡ್ಕ ವಲಯದ ಮಾಜಿ ಅಧ್ಯಕ್ಷರಾಗಿ, ಪ್ರಸ್ತುತ ಮಾಣಿ ವಲಯ ಜನಜಾಗೃತಿ ವೇದಿಕೆಯ ಸದಸ್ಯರಾಗಿರುವ ಜಯಂತಿ ಅವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ

Read More

ಬಂಟ್ವಾಳ: 2023 ರಾಜ್ಯ ವಿಧಾನಸಭಾ ಚುನಾವಣಾ ಕರ್ತವ್ಯ ನಿರ್ವಹಿಸಿದ ವಾಹನಗಳ ನಿಗದಿತ ಬಾಡಿಗೆಯನ್ನು ನೀಡದೆ ಅನ್ಯಾಯವೆಸಗಿರುವ ಬಗ್ಗೆ ದ.ಕ. ಜಿಲ್ಲಾ ಟೂರಿಸ್ಟ್ ಕಾರು ವ್ಯಾನು ಚಾಲಕರ ಮಾಲಕರ ಸಂಘ ಬಿ.ಸಿ.ರೋಡು ಇದರ ವತಿಯಿಂದ ಬಿ.ಸಿ.ರೋಡಿನ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ದ.ಕ. ಜಿಲ್ಲಾ ಟೂರಿಸ್ಟ್ ಕಾರು ವ್ಯಾನು ಚಾಲಕರ ಮಾಲಕರ ಸಂಘದ ಅಧ್ಯಕ್ಷ ಸದಾನಂದ ಗೌಡ ನಾವೂರು ಮಾತನಾಡಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ಚುನಾವಣ ಆಯೋಗ ವಾಹನಗಳಿಗೆ ದಿನ ಬಾಡಿಗೆಯನ್ನು ನಿಗದಿ ಪಡಿಸಿ ಆದೇಶ ಹೊರಡಿಸಿತ್ತು. ಅದರಂತೆಯೇ ನಾವು ಚುನಾವಣ ಕರ್ತವ್ಯಕ್ಕೆ ವಾಹನವನ್ನು ಒದಗಿಸಿಕೊಟ್ಟಿದ್ದೇವೆ. ಆದರೆ ಬಾಡಿಗೆ ನೀಡುವಾಗ ಕಡಿತ ಮಾಡಿ ಅನ್ಯಾಯವೆಸಗಲಾಗಿದೆ. ಮುಂದಿನ ಚುನಾವಣೆಯಲ್ಲಿ ಇಂತಹ ಅನ್ಯಾಯ ಮರುಕಳಿಸಬಾರದು ಹಾಗೂ ಬಾಕಿ ಉಳಿಸಿರುವ ಬಾಡಿಗೆ ಹಣವನ್ನು ನೀಡಬೇಕೆಂದು ಆಗ್ರಹಿಸಿದರು. ಇದು ಸಾಂಕೇತಿಕ ಪ್ರತಿಭಟನೆಯಾಗಿದ್ದು ಸರಿಯಾದ ಸ್ಪಂದನೆ ಸಿಗದೇ ಇದ್ದಲ್ಲಿ ಚುನಾವಣೆಯ ದಿನದಂದು ನಾವು ವಾಹನಗಳನ್ನು ಇಟ್ಟು ಸಾಮೂಹಿಕ ಪ್ರತಿಭಟನೆ ಮಾಡಲಿದ್ದೇವೆ. ವಾಹನಕ್ಕೆ ಅಧಿಕೃತ ಬಾಡಿಗೆ ನಿಗದಿ ಪಡಿಸುವವರೆಗೆ…

Read More

ಬಂಟ್ವಾಳ: ತಾಲೂಕಿನ ಕಳ್ಳಿಗೆ ಗ್ರಾಮದ ಶ್ರೀ ಮೂಕಾಂಬಿಕಾ ಕೃಪಾ ಶ್ರೀರಾಮ ಭಜನಾ ಮಂದಿರ ಬ್ರಹ್ಮರಕೂಟ್ಲು ಇದರ 2024-2025 ನೇ ಸಾಲಿನ ಅಧ್ಯಕ್ಷರಾಗಿ ನವೀನ್ ಬಂಗೇರ ಪಲ್ಲ ಎರಡನೇ ಬಾರಿಗೆ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.ಗೌರವಾಧ್ಯಕ್ಷರಾಗಿ ದಯಾನಂದ ಸುವರ್ಣ ಪಲ್ಲ, ಗೌರವ ಸಲಹೆಗಾರರಾಗಿ ಶಶಿಧರ್ ಬ್ರಹ್ಮರಕೂಟ್ಲು, ಸಲಹೆಗಾರರಾಗಿ ಪುರುಷ ಎನ್. ಸಾಲಿಯನ್ , ನಾಗೇಶ್ ಶೆಟ್ಟಿ ಪೆರಿಯೋಡಿ ಬೀಡು, ಉದಯ್ ತುಂಬೆ, ದಿನಕರ ಬ್ರಹ್ಮರಕೂಟ್ಲು,ಜಗದೀಶ್ ಕಂಜತ್ತೂರು, ಮನೋಹರ ಪುಡಿಕೆಲ್ಲಾಯ ಕೋಡಿ, ಕವಿರಾಜ್ ಚಂದ್ರಿಗೆ,ಪ್ರಧಾನ ಕಾರ್ಯದರ್ಶಿಯಾಗಿ ಹೇಮಂತ್ ಸನಿಲ್ ದರಿಬಾಗಿಲು, ಹರೀಶ್ ದರಿಬಾಗಿಲು, ಕೋಶಾಧಿಕಾರಿ ಶಿವಪ್ರಸಾದ್ ಬ್ರಹ್ಮರಕೂಟ್ಲು, ಉಪಾಧ್ಯಕ್ಷರಾಗಿ ಧೂಮಪ್ಪ ಪೂಜಾರಿ ದರಿಬಾಗಿಲು, ಮಾಧವ ಪೂಜಾರಿ ದರಿಬಾಗಿಲು, ಸಂಜೀವ ದರಿಬಾಗಿಲು, ಮನೋಹರ ದರಿಬಾಗಿಲು, ಯೋಗೀಶ್ ವಿ‌.ಕೆ. ದರಿಬಾಗಿಲು, ನಾಗೇಶ್ ಜಾರಂದಗುಡ್ಡೆ, ನವೀನ್ ಪೆರಿಯೋಡಿ ಬೀಡು, ಹರೀಶ್ ಚಂದ್ರಿಗೆ, ಸತೀಶ್ ವಳವೂರು. ಜತೆ ಕಾರ್ಯದರ್ಶಿಯಾಗಿ ದೀಕ್ಷಿತ್ ಗುಂಡಿ, ರಂಜನ್ ದರಿಬಾಗಿಲು, ಸಚಿನ್ ಪಂಬದಬೆಟ್ಟು, ಸಂದೇಶ್ ದರಿಬಾಗಿಲು, ಅರ್ಚಕ ವೃಂದ ಕೋಟ್ಯಪ್ಪ ಶಾಂತಿ ಕಂಜತ್ತೂರ್, ಪ್ರಕಾಶ್ ಪಲ್ಲ, ವಿಶ್ವನಾಥ್ ಪೆತ್ತ…

Read More

ಬಂಟ್ವಾಳ: ಇಲ್ಲಿನ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ‌ ದೇವಸ್ಥಾನದ ಬ್ರಹ್ಮರಥೋತ್ಸವದ 200 ವರ್ಷಾಚರಣೆಯ ಪ್ರಯುಕ್ತ ದೇವಸ್ಥಾನಕ್ಕೆ ಚಿತ್ತೈಸಿರುವ ಕಾಶೀ ಮಠದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಯವರು ಸೋಮವಾರ ರಾತ್ರಿ ನೇತ್ರಾವತಿ ನದಿ ತೀರದಲ್ಲಿ ಗಂಗಾರತಿ ನೆರವೇರಿಸಿದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಈ ಸಂದರ್ಭ ಉಪಸ್ಥಿರಿದ್ದು ಅಪರೂಪದ ದೃಶ್ಯವನ್ನು ಕಣ್ತುಂಬಿಕೊಂಡರು.

Read More

ಚಿತ್ರ:.ಶ್ರೀ ಕ್ಷೇತ್ರ ಕಾರಿಂಜ ಜಾತ್ರೋತ್ಸವದಲ್ಲಿ ಇತಿಹಾಸ ಪ್ರಸಿದ್ಧ ಪಾರ್ವತಿ-ಪರಮೇಶ್ವರ ಭೇಟಿ ನಡೆಯಿತು ಬಂಟ್ವಾಳ : ಇತಿಹಾಸ ಪ್ರಸಿದ್ಧ ಭೂಕೈಲಾಸ ಪ್ರತೀತಿಯ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ, ಜಾತ್ರೋತ್ಸವ ಪ್ರಯಕ್ತ ವಿಶೇಷ ಕಾರ್ಯಕ್ರಮವಾದ ಶ್ರೀ ಪಾರ್ವತಿ, ಪರಮೇಶ್ವರರ ಭೇಟಿ ನಡೆಯಿತು.ಕ್ಷೇತ್ರದ ತಂತ್ರಿ ವರ್ಕಾಡಿ ಗಣೇಶ ತಂತ್ರಿ ಅವರ ನೇತೃತ್ವದಲ್ಲಿ ಕ್ಷೇತ್ರದ ಅರ್ಚಕರಾದ ಮಿಥುನ್ ರಾಜ್ ನಾವಡ ಮತ್ತು ಜಯಶಂಕರ ಉಪಾಧ್ಯಾಯ ಅವರ ಸಹಕಾರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.ಮಾ.೮ರಂದು ಕಾರಿಂಜೇಶ್ವರ ಸನ್ನಿಧಿಯಲ್ಲಿ ತುಲಾಭಾರ ಸೇವೆ, ಏಕಾದಶ ರುದ್ರಾಭಿಷೇಕ, ರಂಗಪೂಜೆ ನಡೆಯಿತು. ಸಾವಿರಾರು ಭಕ್ತರು ಮಹಾಶಿವರಾತ್ರಿ ಜಾಗರಣೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡರು. ರಾತ್ರಿ ಯಕ್ಷಗಾನ ಬಯಲಾಟ ನಡೆಯಿತು. ಮಾ.೯ರಂದು ರಾತ್ರಿ ಬಲ್ಲೋಡಿ ಮಾಗಣೆ ಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಆಗಮಿಸಿತು. ಸಂಜೆ ಭರತನಾಟ್ಯ, ಯಕ್ಷರೂಪಕ ನಡೆಯಿತು. ರಾತ್ರಿ ಜಾತ್ರೋತ್ಸವದಲ್ಲಿ ಪ್ರಮುಖ ಆಕರ್ಷಣೆಯಾಗಿರುವ ಪಾರ್ವತಿ-ಪರಮೇಶ್ವರ ದೇವರ ಭೇಟಿ ನಡೆಯಿತು. ಬಳಿಕ ಚಂದ್ರ ಮಂಡಲ ಉತ್ಸವ, ಬೆಳಗ್ಗೆ ಶಯನೋತ್ಸವ…

Read More

ಬಂಟ್ವಾಳ: ಕನ್ನಡ ಭವನ ಮತ್ತು ಗ್ರಂಥಾಲಯ (ರಿ )ಕನ್ನಡ ಭವನ ಪ್ರಕಾಶನ ಕಾಸರಗೋಡು ಮತ್ತು ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಕಥಾಬಿಂದು ಪ್ರಕಾಶನ ಮಂಗಳೂರು ಇದರ ವತಿಯಿಂದ ಪಯಸ್ವಿನಿ ಪ್ರಶಸ್ತಿ 2024 ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕನ್ನಡ ಭವನ ಕಾಸರಗೋಡಿನಲ್ಲಿ ಮಾ.10 ರಂದು ಭಾನುವಾರ 10 ಗಂಟೆಗೆ ನಡೆಯಲಿರುವ ಕೇರಳಮತ್ತು ಕರ್ನಾಟಕ ಕನ್ನಡ ಸಂಸ್ಕೃತಿ ಗಡಿನಾಡ ಉತ್ಸವ -2024 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಪ್ರದಾನ ನಡೆಯಲಿದೆ. ಕರ್ನಾಟಕ ಹಾಗೂ ಕೇರಳದ ಗಣ್ಯರಾದ ಪಿ.ವಿ.ಪ್ರದೀಪ ಕುಮಾರ್ , ಹಿರಿಯ ಕವಿಗಳಾದ ವಿ.ಜಿ.ಕುಳಮರ್ವ,ರಾಧಾಕೃಷ್ಣ ಉಳಿಯತಡ್ಕ ಮೊದಲಾದವರ ಉಪಸ್ಥಿತಿಯಲ್ಲಿ ಕವಿಗೋಷ್ಠಿ ಹಾಗೂ ವಿವಿಧ ಕಾರ್ಯ ಕ್ರಮಗಳು ನಡೆಯಲಿವೆ ಎಂದು ಕನ್ನಡ ಭವನ ಅಧ್ಯಕ್ಷ ವಾಮನ ರಾವ್ ಬೇಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಬಂಟ್ವಾಳ: ಜನರ ಹಣ ಜನರ ಕೈ ಸೇರಬೇಕು, ರಾಜ್ಯದ ಪ್ರತಿಯೊಬ್ಬರೂ ಕೂಡ ನಾಗರೀಕ ಜೀವನ ನಡೆಸಬೇಕು ಎನ್ನುವ ಉದ್ದೇಶದಿಂದ ರಾಜ್ಯ ಸರಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ರಾಜ್ಯ ಸರಕಾರದ ಬೊಕ್ಕಸ ಖಾಲಿಯಾಗುತ್ತದೆ ಎನ್ನುವ ಟೀಕೆಯ ನಡುವೆಯೂ ಎಲ್ಲಾ ಗ್ಯಾರಂಟಿ ಯೋಜನೆಗಳನನು ಸರಕಾರ ಸಂಪೂರ್ಣವಾಗಿ ಅನುಷ್ಠಾನಕ್ಕೆ ತಂದು ನುಡಿದಂತೆ ನಡೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು. ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಶನಿವಾರ ಮದ್ಯಾಹ್ನ ನಡೆದ ಬಂಟ್ವಾಳ ತಾಲೂಕು ವ್ಯಾಪ್ತಿಯ ಗ್ಯಾರಂಟಿ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ ಪ್ರಮಾಣ ವಚನ ಮಾಡಿದ ದಿನದಂದೆ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ೫ ಗ್ಯಾರಂಟಿಗಳ ಘೋಷಣೆ ಮಾಡಿದರು. ಯುವನಿಧಿ ಯೋಜನೆಯ ಮೂಲಕ ಯುವಕ ಯುವತಿಯರಿಗೆ ಶಕ್ತಿ ತುಂಬುವ ಕಾರ್ಯ ಆಗಿದೆ. ಅನ್ನ ಭಾಗ್ಯ ಯೋಜನೆಯ ಮೂಲಕ ಬಡವರ ಹಸಿವು ನೀಗಿದೆ. ಬಿಪಿಎಲ್ ಖಾತೆಗೆ ೫ ಕೆ.ಜಿ…

Read More

ಬಂಟ್ವಾಳ: ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ಸಂಚಾಲಕಿ, ಕೃಷಿಕರು ಹಾಗೂ ಹವ್ಯಾಸಿ ಛಾಯಾಗ್ರಾಹಕಿಯಾಗಿರುವ ರಮ್ಯ ನಿತ್ಯಾನಂದ ಶೆಟ್ಟಿಯವರ ಚೊಚ್ಚಲ ಕೃತಿ ಕಂಬಳಲೋಕ ಭಾಗ-೧ ನ್ನು ಸಿದ್ಧಕಟ್ಟೆ ಶ್ರೀ ಪದ್ಮ ಕ್ಲೀನಿಕ್‌ನ ಡಾ| ಪ್ರಭಾಚಂದ್ರರು, ಪಿಡಿಒ ಗಣೇಶ್ ಶೆಟ್ಟಿ ಗೋಳಿದೊಟ್ಟು, ಶಿಕ್ಷಕ ರಾಜೇಶ್‌ರಾವ್ ನೆಲ್ಯಾಡಿ ಹಾಗೂ ಪೊಡುಂಬ ಸರೋಜಿನಿ ಸಂಜೀವ ಶೆಟ್ಟಿಯವರು ಅನಾವರಣ ಮಾಡಿ ಶುಭ ಹಾರೈಸಿದರು. ನಿತ್ಯಾನಂದ ಶೆಟ್ಟಿ ಹಾಗೂ ರಮ್ಯಾ ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು.

Read More