ಬಂಟ್ವಾಳ : ಕುಲಾಲ ಸಮುದಾಯ ಸಾಂಸ್ಕೃತಿಕವಾಗಿ ಬೆಳೆದಿದ್ದು ಪ್ರಸ್ತುತ ಶೈಕ್ಷಣಿಕವಾಗಿ, ಆರ್ಥಿಕವಾಗಿಯೂ ಬೆಳೆಯುತ್ತಿದೆ. ಕುಲಾಲರಿಗೆ ಅರ್ಹತೆಯ ಆಧಾರದ ಮೇಲೆ ಗೌರವಗಳು ಸಿಗುತ್ತಿದೆ. ಕುಲಾಲರ ಸ್ವಾಭಿಮಾನದ ಸಂಕೇತವಾಗಿರುವ ವೀರನಾರಾಯಣ ದೇವಸ್ಥಾನ ಪುನರ್ ನಿರ್ಮಾಣಗೊಂಡಿರವುದೇ ಇದಕ್ಕೆಲ್ಲಾ ಕಾರಣ ಎಂದು ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಹೇಳಿದರು.
ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿ ಭಾನುವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆದ ಅವಿಭಜಿತ ಜಿಲ್ಲೆಯ ಕುಲಾಲ ಸಂಘಗಳ ಸಾಂಸ್ಕೃತಿಕ ಕಾರ್ಯಕ್ರಮ ಕಲಾವಳಿಗೆ-೨೦೨೪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಗುಣಮಟ್ಟವನ್ನು ಕಾಯ್ದುಕೊಂಡು ತುಳುನಾಡಿನ ಸಾಂಸ್ಕೃತಿಕ ವೈಭವವನ್ನು ತೆರೆದಿಡುವ ಕಾರ್ಯವನ್ನು ಕಲಾವಳಿ ಮಾಡಿದೆ. ಮುಂದಿನ ವರ್ಷ ಮುಂಬೈ ಕುಲಾಲ ಸಂಘದ ಸಹಕಾರದೊಂದಿಗೆ ಜಿಲ್ಲಾ ಮಾತೃ ಸಂಘ ಕಲಾವಳಿ ಆಯೋಜಿಸಲಿದೆ ಎಂದು ಘೋಷಿಸಿದರು. ಮುಂಬಯಿ ಕುಲಾಲ ಸಂಘದ ಅಧ್ಯಕ್ಷ ರಘು ಎ. ಮೂಲ್ಯ ಮಾತನಾಡಿ ಬಂಟ್ವಾಳ ಕುಲಾಲ ಸಂಘ ರಾಧಕೃಷ್ಣ ಬಂಟ್ವಾಳ ಅವರ ನೇತೃತ್ವದಲ್ಲಿ ಅತ್ಯುತ್ತಮವಾದ ಕಾರ್ಯವನ್ನು ಮಾಡಿದೆ. ಕಳೆದ ೨ ತಿಂಗಳಿನಿಂದ ಅವಿಭಜಿತ ಜಿಲ್ಲೆಯ ಕುಲಾಲ ಸಂಘಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿಲು ಅಭ್ಯಾಸದಲ್ಲಿ ತೊಡಗಿಸಿಕೊಂಡಿದೆ. ಎಲ್ಲರ ಸಹಕಾರ ಇದ್ದಾಗ ಇಂತಹ ಯಶಸ್ವಿ ಕಾರ್ಯಕ್ರಮಗಳು ಮೂಡಿಬರಲು ಸಾಧ್ಯವಿದೆ ಎಂದರು. ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ ಹಿಂದುಳಿದ ವರ್ಗವಾಗಿ ರಾಜಕೀಯ ಅವಕಾಶದಿಂದ ದೂರ ಉಳಿದಿದ್ದ ಕುಲಾಲ ಸಮಾಜ ಇಂದು ಅನೇಕ ಯುವಕರ ಬುದ್ದಿವಂತಿಕೆಯಿಂದ ಸಮಾಜದಲ್ಲಿ ಮುಂದೆ ಬರುತ್ತಿದೆ ಎಂದು ತಿಳಿಸಿದರು.
ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಸುರೇಶ್ ಕುಮಾರ್ ನಾವೂರು ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಂಬೈಯ ಜ್ಯೋತಿ ಕೋ ಅಪರೇಟಿವ್ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ಗಿರೀಶ್ ಸಾಲ್ಯಾನ್, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಸಂಘಟನಾ ಕಾರ್ಯದರ್ಶಿ ಅನಿಲ್ ದಾಸ್, ಮುಂಬೈ ಕುಲಾಲ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಮಮತಾ ಗುಜರನ್, ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಆಡಳಿತ ಮೋಕ್ತೇಸರ ಪುರುಷೋತ್ತಮ ಕಲ್ಬಾವಿ ಭಾಗವಹಿಸಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಕೇಶವ ಮಾಸ್ಟರ್ ಸ್ವಾಗತಿಸಿದರು, ಪ್ರಧಾನ ಸಂಚಾಲಕ ದಾಮೋದರ ಮಾಸ್ಟರ್ ಪ್ರಾಸ್ತವಿಕವಾಗಿ ಮಾತನಾಡಿದರು. ವಂದಿಸಿದರು.
ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಸತ್ಕಾರ ಸಮಿತಿಯ ಸಂಚಾಲಕ ಮಚ್ಚೇಂದ್ರ ಸಾಲ್ಯಾನ್ ವಂದಿಸಿದರು.
ಬೆಳಿಗ್ಗೆ ಹಿರಿಯ ರಂಗನಿರ್ದೇಶಕ ರಮಾ ಬಿ.ಸಿ.ರೋಡು ಕಾರ್ಯಕಾರಿ ಸಮಿತಿ ಸದಸ್ಯ ರ ಉಪಸ್ಥಿತಿಯಲ್ಲಿ ಕಲಾವಳಿಗೆ ಚಾಲನೆ ನೀಡಿದರು. ಸಂಜೆ ರಾಧಕೃಷ್ಣ ಬಂಟ್ವಾಳ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಮುಖ್ಯ ಅತಿಥಿಗಳಾಗಿ ದಕ್ಷಿಣ ಭಾರತ ಪ್ರಜಾಪತಿ ಕುಂಬಾರರ ಒಕ್ಕಟದ ಅಧ್ಯಕ್ಷ ಡಾ. ಎಂ .ಅಣ್ಣಯ್ಯ ಕುಲಾಲ್, ಕುಲಶೇಖರ ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರೇಮಾನಂದ ಕುಲಾಲ್, ರೋಟರಿ ಕ್ಲಬ್ ಬೈಕಂಪಾಡಿ ಅಧ್ಯಕ್ಷ ಸುಧಾಕರ ಎನ್. ಸಾಲ್ಯಾನ್ ಉಪಸ್ಥಿತರಿದ್ದರು ತೀರ್ಪುಗಾರರಾದ ಬಿ.ರಾಮಚಂದ್ರ ರಾವ್, ಭಾಸ್ಕರ್ ನೆಲ್ಯಾಡಿ, ಗೀತಾ ಸುಳ್ಯ ಅನಿಸಿಕೆ ವ್ತಕ್ತಪಡಿಸಿದರು.
ಸ್ಪರ್ಧೆಯಲ್ಲಿ ದ.ಕ. ಕುಲಾಲರ ಮಾತೃ ಸಂಘ ಮಂಗಳೂರು ಪ್ರಥಮ ಬಹುಮಾನವನ್ನು, ಕುಲಾಲ ಮಹಿಳಾ ಪ್ರೇರಣಾ ಸಂಘ ಮೊಗರ್ನಾಡು ದ್ವಿತೀಯ ಬಹುಮಾನವನ್ನು, ಕುಲಾಲ ಸಂಘ ಮೂಡಬಿದಿರೆ ತೃತೀಯ ಬಹುಮಾನವನ್ನು ಗೆದ್ದುಕೊಂಡರು. ಸಂಘದ ನಿಕಟಪೂರ್ವಾಧ್ಯಕ್ಷ ನಾರಾಯಣ ಸಿ. ಪೆರ್ನೆ ಸ್ವಾಗತಿಸಿದರು, ಉಪಾಧ್ಯಕ್ಷ ಸುಕುಮಾರ್ ಬಂಟ್ವಾಳ್ ವಂದಿಸಿದರು. ಎಚ್ಕೆ ನಯನಾಡು ಹಾಗೂ ಈಶ್ವರ ಕುಲಾಲ್ ಮಿತ್ತಪೆರಾಜೆ ಕಾರ್ಯಕ್ರಮ ನಿರೂಪಿಸಿದರು.