Author: admin
ಬಂಟ್ವಾಳ: ದ್ವಿಚಕ್ರ ವಾಹನಕ್ಕೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಬಿ.ಸಿ.ರೋಡಿನ ಕೈಕಂಬ ಎಂಬಲ್ಲಿ ನಡೆದಿದೆ. ಮೂಲತಃ ಫರಂಗಿಪೇಟೆ ಸಮೀಪದ ಅಮ್ಮೆಮಾರ್ ನಿವಾಸಿ; ಪ್ರಸಕ್ತ ಪಾಣೆಮಂಗಳೂರು – ಆಲಡ್ಕದಲ್ಲಿ ವಾಸ್ತವ್ಯವಿದ್ದ ಅಶ್ರಫ್ (32) ಮೃತಪಟ್ಟ ಯುವಕ. ಅವರು ಸ್ನೇಹತನಿಗೆ ಸಹಾಯ ಮಾಡಲು ತೆರಳಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಅಶ್ರಫ್ ಇಂದು ಮುಂಜಾನೆ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಸ್ನೇಹಿತ ಆಲಡ್ಕ ನಿವಾಸಿ ತನ್ವೀರ್ ಎಂಬವರನ್ನು ತನ್ನ ಸ್ಕೂಟರ್ ನಲ್ಲಿ ಬಿ.ಸಿ.ರೋಡ್ ಕೈಕಂಬದಲ್ಲಿರುವ ಅಂಗಡಿಗೆ ಬಿಡಲು ತೆರಳಿದ್ದರು. ಹಾಗೆ 5:30ರ ಸುಮಾರಿಗೆ ಕೈಕಂಬಕ್ಕೆ ತಲುಪಿದ ಇವರು ತನ್ವೀರ್ ರನ್ನು ಸ್ಕೂಟರ್ ನಿಂದ ಇಳಿಸಬೇಕು ಅನ್ನುವಷ್ಟರಲ್ಲಿ ಅದೇ ಅಂಗಡಿಗೆ ತರಕಾರಿ ತಂದು ಹಿಂದಿರುಗುತ್ತಿದ್ದ ಲಾರಿಯನ್ನು ಅದರ ಚಾಲಕ ಅಜಾಗರೂಕತೆಯಿಂದ ಹಿಂಬದಿಗೆ ಚಲಿಸಿ ಸ್ಕೂಟರ್ ಗೆ ಢಿಕ್ಕಿ ಹೊಡೆದಿದ್ದಾನೆ ಎಂದು ಸ್ಥಳೀಯರು ಆರೋಪಿದ್ದಾರೆ. ಘಟನೆಯಿಂದ ಇಬ್ಬರಿಗೂ ಗಾಯಗಳಾಗಿದ್ದು, ಗಂಭೀರ ಗಾಯಗೊಂಡಿದ್ದ ಅಶ್ರಫ್ ರನ್ನು ತಕ್ಷಣ ಮಂಗಳೂರಿನ…
ಬಂಟ್ವಾಳ : ತಾಲೂಕಿನ ಬೋರಿಮಾರ್ ಮೂಲದ ಅನಿಲ್ ಜಾನ್ ಸಿಕ್ವೇರಾ ರವರು 2023 ರ ಕರ್ನಾಟಕ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸಿದ್ದಾರೆ, ಪ್ರಿಲಿಮ್ಸ್, ಮೇನ್ಸ್ ಮತ್ತು ಸಂದರ್ಶನದಲ್ಲಿ 25 ನೇ ವಯಸ್ಸಿನಲ್ಲಿ ಉತ್ತೀರ್ಣರಾಗಿದ್ದಾರೆ. ಇದು ಅವರನ್ನು ಕಿರಿಯ ಸಿವಿಲ್ ನ್ಯಾಯಾಧೀಶರನ್ನಾಗಿ ಮಾಡಿದೆ.ಇವರ ತಂದೆ ಎವರೆಸ್ಟ್ ಸಿಕ್ವೇರಾ ಮತ್ತು ತಾಯಿ ಐವಿ ಸಿಕ್ಕ್ವೇರಾ ಬಂಟ್ವಾಳ ತಾಲೂಕಿನ ಬರಿಮಾರು ಎಂಬಲ್ಲಿ ವಾಸಿಸುತ್ತಿದ್ದು ಕೃಷಿಯನ್ನು ತಮ್ಮ ಜೀವನಕ್ಕೆ ಆಧಾರವಾಗಿ ಇದ್ದ ಇವರು ಇವರ ಮಗನ ಸಾಧನಗೆ ಹಲವು ಪ್ರಶಂಸೆ ವ್ಯಕ್ತವಾಗಿದೆ. ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಬಿಬಿಎ ಪದವೀಧರರಾಗಿರುವ ಅನಿಲ್, ತಮ್ಮ ಶೈಕ್ಷಣಿಕ ಪಯಣದುದ್ದಕ್ಕೂ ಸತತವಾಗಿ ಶೈಕ್ಷಣಿಕ ಉತ್ಕೃಷ್ಟತೆಯನ್ನು ಪ್ರದರ್ಶಿಸಿದ್ದಾರೆ. ಅವರು ಬೋರಿಮಾರ್‌ನಲ್ಲಿರುವ ಸೇಂಟ್ ಜೋಸೆಫ್ ಹೈಯರ್ ಪ್ರೈಮರಿ ಶಾಲೆಯಲ್ಲಿ ತಮ್ಮ ಶಿಕ್ಷಣವನ್ನು ಪ್ರಾರಂಭಿಸಿದರು, ನಂತರ ಅವರ ಪ್ರೌಢಶಾಲಾ ಅಧ್ಯಯನಕ್ಕಾಗಿ ಮಾಣಿ ಕರ್ನಾಟಕ ಹೈಸ್ಕೂಲ್ ಅನ್ನು ಪ್ರಾರಂಭಿಸಿದರು. ಅವರ ಪದವಿ ಪೂರ್ವ ಶಿಕ್ಷಣವು ಪುತ್ತೂರಿನ ಸೇಂಟ್ ಫಿಲೋಮಿನಾ ಪಿಯು ಕಾಲೇಜಿನಲ್ಲಿ ಪೂರ್ಣಗೊಂಡಿತು. ಮಂಗಳೂರು ವಕೀಲರ…
ಬಂಟ್ವಾಳ : ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬಾ ಕ್ಷೇತ್ರ ಇದರ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಫೆ.25 ಹಾಗೂ ಫೆ.27ರಂದು ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಅಗೇಲು ಸೇವೆ ಇರುವುದಿಲ್ಲವೆಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.
ಸುಳ್ಯ: ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರ ಹಾಗೂ ರಾಷ್ರೀಯ ಕೃಷಿ ಸಂಶೋಧನಾ ನಿರ್ವಹಣೆ ಅಕಾಡಮಿ, ಹೈದ್ರಾಬಾದ್ ಇವರ ಸಂಯುಕ್ತ ಆಶ್ರಯದಲ್ಲಿ ಪರಿಶಿಷ್ಟ ಜಾತಿಯ ರೈತರಿಗೆ ಎರೆಹುಳ ಗೊಬ್ಬರ ತಯಾರಿಕೆ ಕುರಿತು ಕೌಶಲ್ಯ ಅಭಿವೃದ್ದಿ ತರಬೇತಿ ಕಾರ್ಯಕ್ರಮವನ್ನು ಸುಳ್ಯ ತಾಲೂಕಿನ ಪೇರಾಲು ಗ್ರಾಮದಲ್ಲಿ ಹಮ್ಮಿಕೊಳಲಾಗಿತು. ನಾರ್ಮ, ಹೈದ್ರಾರಾಬಾದ ಪ್ರಧಾನ ವಿಜ್ಞಾನಿ ಡಾ. ಬಾಲಕೃಷ್ಣನ್ ಕಾರ್ಯಕ್ರಮವನ್ನು ಉದ್ಘಾಟಿಸಿ ರೈತರು ತಮ್ಮ ಕೃಷಿ ಕ್ಷೇತ್ರದಲ್ಲಿ ದೊರಕುವ ಸಾವಯವ ವಸ್ತುಗಳನ್ನು ಎರೆಹುಳುಗಳನ್ನು ಬಳಸಿ ಅದನ್ನು ಪೋಷಕಾಂಶವುಳ್ಳ ಸಾವಯವ ಗೊಬ್ಬರಗಳನ್ನಾಗಿ ಮಾರ್ಪಾಡಿಸಿ ತಮ್ಮ ಕೃಷಿ ಕ್ಷೇತ್ರದ ಬೆಳೆಗಳಿಗೆ ಉಪಯೋಗಿಸಬೇಕೆಂದು ಕರೆ ನೀಡಿದರು. ಮುಖ್ಯ ಅತಿಥಿಯಾಗಿ ಕೃಷಿ ವಿಜ್ಞಾನ ಕೇಂದ್ರ ಹಿರಿಯ ವಿಜ್ಞಾನಿ ಮಂಗಳೂರು ಡಾ. ಟಿ. ಜೆ. ರಮೇಶ, ಮಂಡೆಕೋಲು ಗ್ರಾ.ಪಂ. ಸದಸ್ಯೆ ಶಶಿಕಲಾ ಭಾಗವಹಿಸಿದರು. ಕೃಷಿ ವಿಜ್ಞಾನ ಕೇಂದ್ರದ ಬೇಸಾಯಶಾಸ್ತ್ರ ವಿಜ್ಞಾನಿಗಳಾದ ಡಾ. ಹರೀಶ್ ಶೆಣೈರವರು ಎರೆಹುಳ ಗೊಬ್ಬರ ತಯಾರಿಸುವ ವಿಧಾನ, ಎರೆಹುಳದ ಜೀವನಚಕ್ರ ಕುರಿತು ಮಾಹಿತಿ ನೀಡಿ ಪ್ರಾತ್ಯಕ್ಷಿಕೆ ಮುಖಾಂತರ ತರಬೇತಿಯನ್ನು ನಡೆಸಿಕೊಟ್ಟರು. ಮಾಧವ ಕೆ.…
ಬಂಟ್ವಾಳ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ನೇತ್ರಾವತಿ ವಲಯ, ಬಂಟ್ವಾಳ ತಾಲೂಕುಜಿಲ್ಲಾ ಸಮಿತಿ ವತಿಯಿಂದ ಮಹಾತೋಭಾರ ಶ್ರೀ ಕಾರಿಂಜೇಶ್ವರ ದೇಗುಲದಲ್ಲಿ ಶುಕ್ರವಾರ ಮುಂಜಾನೆ ರಥಸಪ್ತಮಿಯ ಪ್ರಯುಕ್ತ ಸಾಮೂಹಿಕ 108 ಸೂರ್ಯ ನಮಸ್ಕಾರ ನಡೆಯಿತು. ಮಹಾತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಗ್ರಾಮಣಿಗಳಾದ ವೆಂಕಟರಮಣ ಮುಚ್ಚಿನ್ನಾಯ ಕಳ್ಳಿಮಾರ್ ಚಾಲನೆ ನೀಡಿದರು. ಪತಂಜಲಿ ಯೋಗ ಶಿಕ್ಷಣ ಸಮಿತಿಯ ಪ್ರಾಂತ ಸಂಚಾಲಕ ಹರೀಶ, ಜಿಲ್ಲಾ ಸಹಸಂಚಾಲಕ ನಾರಾಯಣ, ಜಿಲ್ಲಾ ಶಿಕ್ಷಣ ಪ್ರಮುಖ್ ಹರೀಶ, ತಾಲೂಕು ಶಿಕ್ಷಣ ಪ್ರಮುಖ್ ಗಣೇಶ, ತಾಲೂಕು ಸಹಸಂಚಾಲಕಿ ನಯನ, ತಾಲೂಕು ವಿಸ್ತರಣಾ ಪ್ರಮುಖ್ ಕಿಶೋರ್ ಭಾಗವಹಿಸಿದ್ದರು. ಶಿವಶಂಕರ್ ರಥಸಪ್ತಮಿಯ ವಿಶೇಷತೆಯ ಬಗ್ಗೆ ಬೌದ್ಧಿಕ್ ನೀಡಿದರು, ಶಕುಂತಳ ನಿರೂಪಿಸಿ, ಹೇಮಂತ್ ವಂದಿಸಿದರು.
ಬಂಟ್ವಾಳ: ತಾಲೂಕಿನ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೊತ್ಸವದ ಪ್ರಥಮ ದಿನದಂದು ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನೇರವೇರಿತು. ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ ಸಂಚಯಗಿರಿ ಬಂಟ್ವಾಳದ ಪ್ರೊ.ತುಕರಾಮ್ ಪೂಜಾರಿಯವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಹಾದೇವ ಗೌಡ ಮುದ್ದಾಜೆ, ತುಕರಾಮ್ ಶೆಟ್ಟಿ, ಶ್ರೀಹರಿ ಭಟ್, ರಮಾನಂದ ಭಟ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸದಾನಂದ ಗೌಡ ಮತ್ತಾವೂ , ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರಾಜೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಗೌಡ ಕಾರಂಬಡೆ, ಪ್ರಧಾನ ಅರ್ಚಕರು ರಾಮಚಂದ್ರ ಭಟ್, ದಿನೇಶ್ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಚೌಟ, ರಾಯಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಂತೋಷ್ ಕುಮಾರ್, ಭಜನಾ ಮಂಡಳಿ ಅಧ್ಯಕ್ಷ ರಾಜೇಶ್ ಶಿವನಗರ, ಸಮಿತಿ ಕಾರ್ಯದರ್ಶಿಗಳಾದ ಪ್ರದೀಪ್ ಮಿಯಾಲು ಸಮಿತ್ ಶಿವನಗರ, ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿ ಸ್ವಾಗತಿಸಿದರು. ವೇದಿಕೆ ಸಮಿತಿ ಸಂಚಾಲಕ ದಿನೇಶ್ ಸುವರ್ಣ ನಿರೂಪಿಸಿದರು.
ಬಂಟ್ವಾಳ: ಆದರ್ಶಗಳನ್ನು ಇಟ್ಟುಕೊಂಡು ಮುಂದು ಹೋದರೆ ಜೀವನದಲ್ಲಿ ಸುಖ ಶಾಂತಿ ಸಿಗುತ್ತದೆ. ಯಾವುದೋ ಸಿನಿಮಾ ಹಾಡುಗಳಿಗೆ ಮಕ್ಕಳು ರೀಲ್ಸ್ ಮಾಡುವ ಬದಲುತ್ರಿಪದಿಗಳನ್ನು ಹೇಳುವ ರೀಲ್ಸ್ ಮಾಡಿದರೆ ಅದು ಪ್ರಯೋಜನಕಾರಿಯಾಗುತ್ತದೆ ಈ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಬೇಕು ಎಂದು ಬಂಟ್ವಾಳ ತಹಶೀಲ್ದಾರ್ ಅರ್ಚನ ಭಟ್ ಹೇಳಿದರು. ಅವರು ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟದ ವತಿಯಿಂದ ಬಿ.ಸಿ.ರೋಡಿನ ಆಡಳಿತ ಸೌಧದದ ಸಭಾಂಗಣದಲ್ಲಿ ನಡೆದ ಸರ್ವಜ್ಞ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಸುರೇಶ್ ಕುಮಾರ್ ನಾವೂರು ಉಪನ್ಯಾಸ ನೀಡಿ ಕವಿ ಸರ್ವಜ್ಞ ತನ್ನ ತ್ರಿಪದಿಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿಳಿಸುವ ಕಾರ್ಯವನ್ನು ಮಾಡಿದ್ದಾರೆ. ಅವರಿಂದ ಸಾವಿರಕ್ಕಿಂತಲೂ ಅಧಿಕ ತ್ರಿಪದಿಗಳು ರಚನೆಯಾಗಿದ್ದು ಸಾರ್ವಕಾಲಿಕ ಸತ್ಯವನ್ನು ತಿಳಿಸುತ್ತದೆ ಎಂದರು.ಬಂಟ್ವಾಳ ತಾಲೂಕು ಹಿರಿಯ ನಾಗರಿಕರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಸೋಮಯ್ಯ ಹನೈನಡೆ, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ, ರಾಜ್ಯ ಕುಲಾಲ ಕುಂಬಾರರ…
ಬಂಟ್ವಾಳ: ಬಿ.ಸಿ.ರೋಡಿನ ಕುಲಾಲರ ಮಠದ ಶ್ರೀ ಕುಂಭೋದರಿ ದೇವಿ ನಾಗಬ್ರಹ್ಮ ಮತ್ತು ಪರಿವಾರ ದೈವಗಳ ಕ್ಷೇತ್ರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಭಾನುವಾರ ಸಂಜೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಮಾಣಿಲ ಶ್ರೀಧಾಮದ ಶ್ರೀ ಮೋಹನದಸ ಪರಮಹಂಸ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭ ಪ್ರಮುಖರಾದ ಭುವನೇಶ್ ಪಚ್ಚಿನಡ್ಕ, ರಾಮದಾಸ್ ಬಂಟ್ವಾಳ, ಮಚ್ಚೇಂದ್ರ ಸಾಲ್ಯಾನ್, ನಾಗೇಶ್ ಸಾಲ್ಯಾನ್, ಸುದರ್ಶನ್ ಬಜ, ವಿಶ್ವನಾಥ ಬಿ., ಗೋಪಾಲ ಸುವರ್ಣ, ಟ್ರಸ್ಟ್‌ನ ಆಡಳಿತ ಮಂಡಳಿ ಅಧ್ಯಕ್ಷ ಯೋಗೀಶ ಸಿ. ಗಾಂದೋಡಿ, ಉಪಾಧ್ಯಕ್ಷ ಕೆ. ಗಂಗಾಧರ, ಗೌರವಾಧ್ಯಕ್ಷರಾದ ಚಂದಪ್ಪ ಮೂಲ್ಯ, ಮಂಜುನಾಥ ಮೂಲ್ಯ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಬಿ. ಮೋಹನ್, ಅಧ್ಯಕ್ಷ ಕೃಷ್ಣಪ್ಪ ಬಿ., ಕಾರ್ಯಾಧ್ಯಕ್ಷ ಬಿ. ಕುಮಾರ್, ಪ್ರಧಾನ ಕಾರ್ಯದರ್ಶಿ ರವಿರಾಜ್ ಮಠ, ಕಾಐದರ್ಶಿ ಭಾಸ್ಕರ ಕಾಮಾಜೆ, ಕೋಶಾಧಿಕಾರಿ ರೇಷ್ಮಾ ವಿನಯ್, ಸಂಚಾಲಕ ಸೇಸಪ್ಪ , ಸಹಸಂಚಾಲಕ ಸುಕುಮಾರ್, ಉಪಾಧ್ಯಕ್ಷರಾದ ನಾರಾಯಣ ಪೆರ್ನೆ, ವಾಮನ ಕುಲಾಲ್ , ಕಿಶೋರ್ ಬಸ್ತಿಪಡ್ಪು, ಲಕ್ಷ್ಮಣ್ ಅಗ್ರಬೈಲು, ಕೇಶವ…
ಬಂಟ್ವಾಳ: ತಾಲೂಕಿನ ನಾವೂರು ಗ್ರಾಮದ ಮೈಂದಾಳ ಕೆಮ್ಮಟೆ ಎಂಬಲ್ಲಿ ದಾನಿಗಳು, ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬಡಕುಟುಂಬದ ರೇವತಿ ಪೂಜಾರಿಯವರಿಗೆ ನಿರ್ಮಾಣಗೊಂಡ ಶ್ರೀ ದುರ್ಗಾ ನಿವಾಸದ ಗೃಹಪ್ರವೇಶ ಭಾನುವಾರ ನಡೆಯಿತು.ಬಳಿಕ ನಡೆದ ಕೃತಜ್ಞತಾ ಸಭೆಯಲ್ಲಿ ಮಂಜೇಶ್ವರ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ ಜೋಸೆಫ್ ಕ್ರಾಸ್ತ ಮನೆಮಂದಿಗೆ ಕೀ ಹಸ್ತಾಂತರಿಸಿ ಮಾತನಾಡಿ ಸರ್ವ ಧರ್ಮದ ದಾನಿಗಳ ನೆರವಿನಿಂದ ರೇವತಿ ಅವರಿಗೆ ಸುಂದರ ನಿರ್ಮಾಣಗೊಂಡಿದೆ. ಮನೆ ನಿರ್ಮಾಣದ ವೇಳೆ ಸಾಕಷ್ಟು ತೊಂದರೆಗಳು ಬರುವುದು ಸಹಜ, ಅವೆಲ್ಲವನ್ನು ಮೀರಿ ಮನೆ ನಿರ್ಮಾಣದಂತಹ ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಮಾನವ ಧರ್ಮ ಎಂದು ತಿಳಿಸಿದರು. ಅಟೋಮೇಶನ್ ಕ್ಲೌಡ್ ಸೊಲ್ಯುಷನ್ ಸಂಸ್ಥೆಯ ಅಧ್ಯಕ್ಷ ಜಗದೀಶ್ ರಾಮ ಉಡುಗೊರೆ ಹಸ್ತಾಂತರಿಸಿ ಶುಭಾಶಯ ಕೋರಿದರು. ಉದಯ ಯುವಕ ಮಂಡಲ ಅಧ್ಯಕ್ಷ ರಿತೇಶ್ ಅಬ್ಬೆಟ್ಟು, ಹೊಟೇಲ್ ಉದ್ಯಮಿ ಸದಾನಂದ ಬಂಗೇರ, ಯುವವಾಹಿನಿ ಮಂಗಳೂರು ಮಹಿಳಾ ಸಮಿತಿ ಅಧ್ಯಕ್ಷೆ ಶುಭಾ ರಾಜೇಂದ್ರ, ತುಳುನಾಡು ಸೇವಾ ಫೌಂಡೇಶನ್ ಟ್ರಸ್ಟ್ ಪ್ರಧಾನ ಕಾರ್ಯದರ್ಸಿ ವಿಜಯ ಕುಮಾರ್ ಅಮ್ಟಾಡಿ, ನಾವೂರು…
ಬಂಟ್ವಾಳ: ತುಂಬೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ನಡೆಯುತ್ತಿರುವ ಪುನಃ ಪ್ರತಿಷ್ಠೆ, ಅಷ್ಟಬಂಧ, ಬ್ರಹ್ಮಕಲಶಾಭಿಷೇಕ ಮತ್ತು ಧ್ವಜಾಸ್ತಂಭ ಪ್ರತಿಷ್ಠೆ ಮತ್ತು ಜಾತ್ರಾಮಹೋತ್ಸವದ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡಿದರು. ದೇವರ ದರ್ಶನ ಪಡೆದ ಅವರು ದೇವಸ್ಥಾನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇವಾಲಯ ನಿರ್ಮಾಣ ಕಾರ್ಯ ಅತ್ಯಂತ ಸುಂದರವಾಗಿ ಮೂಡಿಬಂದಿದ್ದು ಚಂದ್ರಪ್ರಕಾಶ್ ಶೆಟ್ಟಿಯವರ ನೇತೃತ್ವದ ತಂಡದ ಕಾರ್ಯ ಶ್ಲಾಘನೀಯ ಎಂದರು ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ಶ್ರೀ ಕ್ಷೇತ್ರದ ವತಿಯಿಂದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಗೌರವಿಸಿದರು. ಈ ಸಂದರ್ಭ ಮಾಜಿ ಸಚಿವ ಬಿ. ರಮನಾಥ ರೈ, ಪ್ರಮುಖರಾದ ರವಿಶಂಕರ್ ಶೆಟ್ಟಿ ಬಡಾಜೆ, ಅಶ್ವನಿ ಕುಮಾರ್ ರೈ, ಪದ್ಮರಾಜ್ ಆರ್, ಇನಾಯತ್ ಅಲಿ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ದೇವಸ್ಥಾನದ ವಿವಿಧ ಸಮಿತಿಯ ಪದಾಧಿಕಾರಿಗಳು, ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.








