
ಬಂಟ್ವಾಳ: ಗೃಹಪಯೋಗಿ ವಸ್ತುಗಳ ಮಾರಾಟ ಮಳಿಗೆ ಆರ್. ಎಸ್. ಫರ್ನಿಚರ್ ಆಂಡ್ ಮಾರ್ಕೆಂಟಿಂಗ್ ಬಂಟ್ವಾಳ ಪೇಟೆಯ ಕಾಲೇಜು ರಸ್ತೆಯಲ್ಲಿರುವ ನವದುರ್ಗಾ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.


ಕಟ್ಟಡದ ಮಾಲಕರಾದ ಬಾಮಿ ಶ್ರೀನಿವಾಸ ಶೆಣೈ ಹಾಗೂ ಶಾಂತೇರಿ ಶ್ರೀನಿವಾಸ ಶೆಣೈ ದೀಪ ಪ್ರಜ್ವಲಿಸಿ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು.

ಸೌತಡ್ಕ ಸ್ಟೀಲ್ಸ್ ಆಂಡ್ ಫರ್ನಿಚರ್ಸ್ ನ ಮಾಲಕರಾದ ನಾಗೇಶ್ ಸಾಲ್ಯಾನ್ ಹಾಗೂ ಪಲ್ಲವಿ ನಾಗೇಶ್ ಈ ಸಂದರ್ಭ ಉಪಸ್ಥಿತರಿದ್ದು ಶುಭ ಹಾರೈಸಿದರು.
ಹಲವು ವರ್ಷಗಳಿಂದ ಒಂದೇ ಸಂಸ್ಥೆಯಲ್ಲಿ ಉದ್ಯೋಗಿಗಳಾಗಿದ್ದ ರಾಜೇಶ್ ಹಾಗೂ ಮಹಮ್ಮದ್ ರಶೀದ್ ತಮ್ಮ ಸ್ವಂತ ಉದ್ಯಮವನ್ನು ಸ್ಥಾಪಿಸುವ ಯೋಜನೆ ರೂಪಿಸಿದ್ದರು. ಅಂತೆಯೆ ಇದೀಗ ತಮ್ಮ ಕನಸಿನ ಆರ್. ಎಸ್. ಫರ್ನಿಚರ್ ಅಂಡ್ ಮಾರ್ಕೆಟಿಂಗ್ ಸಂಸ್ಥೆಯನ್ನು ಸ್ಥಾಪಿಸಿ ಹೊಸ ಉದ್ಯಮಕ್ಕೆ ಚಾಲನೆ ನೀಡಿದ್ದಾರೆ. ಇಲ್ಲಿ ಕಪಾಟು, ಡೈನಿಂಗ್ ಟೇಬಲ್, ಚೆಯರ್, ಟೀಪಾಯಿ, ಬೆಡ್ ಸೇರಿದಂತೆ ಎಲ್ಲಾ ಬಗೆಯ ಗೃಹಪಯೋಗಿ ವಸ್ತುಗಳು ಲಭ್ಯವಿದೆ. ಇವರ ಹಲವು ವರ್ಷಗಳ ಅನುಭವದಿಂದ ಗ್ರಾಹಕರಿಗೆ ಉತ್ತಮ ಸೇವೆ ಲಭ್ಯವಾಗಲಿದೆ.


ಉದ್ಘಾಟನಾ ಸಮಾರಂಭದ ವೇಳೆ ಸಂಸ್ಥೆಯ ಆಡಳಿತ ಪಾಲುದಾರರಾದ ರಾಜೇಶ್, ಮಹಮ್ಮದ್ ರಶೀದ್, ಪ್ರಮುಖರಾದ ಸಂಧ್ಯಾ ರಾಜೇಶ್, ಸಹಲ ರಶೀದ್, ಚೆನ್ನಪ್ಪ ಕುಲಾಲ್, ಶಶಿಕಲಾ, ಗಣೇಶ್ ಕುಲಾಲ್, ಬಾಲಕೃಷ್ಣ, ಪುಷ್ಪಲತಾ, ಬೀಫಾತಿಮ, ರಝೀನಾ ಮೊದಲಾದವರು ಉಪಸ್ಥಿತರಿದ್ದು ನೂತನ ಸಂಸ್ಥೆಗೆ ಶುಭ ಹಾರೈಸಿದರು.
