ಬಂಟ್ವಾಳ: ಬಿ.ಸಿ.ರೋಡಿನ ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಬಿ.ಸಿ.ರೋಡಿನ ಅಜ್ಜಿಬೆಟ್ಟುವಿನಲ್ಲಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಿ.ಮೂಡದ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.
Advertisement
ಇವರಲ್ಲಿ ಮೂವರು ಪ್ರಥಮ, ಒಬ್ಬರು ದ್ವಿತೀಯ ಹಾಗೂ ಮೂವರು ತೃತೀಯ ಬಹುಮಾನ ಪಡೆದಿದ್ದಾರೆ. 4ನೇ ತರಗತಿಯ ವಿಹಾನ್ ಛದ್ಮವೇಷದಲ್ಲಿ ಪ್ರಥಮ, 4ನೇ ತರಗತಿಯ ಯಜ್ಞಶ್ರೀ ಇಂಗ್ಲೀಷ್ ಕಂಠಪಾಠದಲ್ಲಿ ಪ್ರಥಮ, 2ನೇ ತರಗತಿಯ ಸಮರ್ಥ ಅಭಿನಯಗೀತೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. 3ನೇ ತರಗತಿಯ ನಮಸ್ಯಾ ಚಿತ್ರಕಲೆಯಲ್ಲಿ ದ್ವಿತೀಯ,
6ನೇ ತರಗತಿಯ ಶಿವರಾಜ್ ಆಶುಭಾಷಣದಲ್ಲಿ ತೃತೀಯ, 7ನೇ ತರಗತಿಯ ಕೃತೇಶ್ ಚಿತ್ರಕಲೆಯಲ್ಲಿ ತೃತೀಯ ಹಾಗೂ
7ನೇ ತರಗತಿಯ ಬಿನೀತ್ ಕವನವಾಚನದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
Advertisement