ಬಂಟ್ವಾಳ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ವಿಶ್ವ ಹಿಂದೂ ಪರಿಷದ್ ಸ್ಥಾಪನ ದಿನದ ಷಷ್ಠಿ ಪೂರ್ತಿ ಕಾರ್ಯಕ್ರಮದ ಅಂಗವಾಗಿ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ಪುದು ಗ್ರಾಮದ ಕಡೆಗೋಳಿ ನಾಣ್ಯದ ಗದ್ದೆಯಲ್ಲಿ ನಡೆಯಿತು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಬಂಟ್ವಾಳ ಪ್ರಖಂಡ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷ ಪ್ರಸಾದ್ ಕುಮಾರ್ ವಿಶ್ವ ಹಿಂದೂ ಪರಿಷದ್ ನ ಕಾರ್ಯಚಟುವಟಿಕೆಯ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷದ್ ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಬಜರಂಗದಳದ ಜಿಲ್ಲಾ ಸಂಯೋಜಕ್ ಭರತ್ ಕುಮ್ಡೇಲ್, ಭಾ.ಜ.ಪ.ಜಿಲ್ಲಾ ವಿಶೇಷ ಅಹ್ವಾನಿತರಾದ ಜನಾರ್ಧನ ಅರ್ಕುಳ, ಶ್ರೀಧರ ಹೊಳ್ಳ, ಗಣೇಶ್ ಕಾಮಾಜೆ, ಭುವನೇಶ್ ಪಚ್ಚಿನಡ್ಕ, ಸಂದೀಪ್ ಆಚಾರ್ಯ ಬಿ.ಸಿ ರೋಡು, ರುಕ್ಮಯ ನಲಿಕೆ, ವಿಶ್ವನಾಥ ಕೆಂಪುಗುಡ್ಡೆ, ಧನರಾಜ್ ಶೆಟ್ಟಿ ಫರಂಗಿಪೇಟೆ, ಸೋಮನಾಥ ಕುಮ್ಡೇಲ್, ವೆಂಕಪ್ಪ ಗುರಿಕಾರ ಕುಮ್ಡೇಲ್, ಪ್ರಖಂಡ ಸಂಯೋಜಕ್ ಶಿವಪ್ರಸಾದ್ ತುಂಬೆ ಉಪಸ್ಥಿತರಿದ್ದರು. ಪ್ರಾಂತ ಧರ್ಮಪ್ರಸರಣ ಪ್ರಮುಖ್ ಸೂರ್ಯನಾರಾಯಣ ಜೀ, ವಿಭಾಗ ಸಂಯೋಜಕ್ ಪುನೀತ್ ಅತ್ತಾವರ ಮತ್ತಿತರ ಸಂಘಟನೆಯ ಪ್ರಮುಖರು ಆಗಮಿಸಿ ಶುಭಹಾರೈಸಿದರು. ಬಜರಂಗದಳ ಜಿಲ್ಲಾ ಸುರಕ್ಷಾ ಪ್ರಮುಖ್ ಸಂತೋಷ್ ಸರಪಾಡಿ ಸ್ವಾಗತಿಸಿದರು.