ಬಂಟ್ವಾಳ ತಾಲೂಕಿನಾದ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿರುವ ಗೃಹಪಯೋಗಿ ವಸ್ತುಗಳ ಬೃಹತ್ ಮಾರಾಟ ಮಳಿಗೆ ಭದ್ರಾ ಹೋಂ ಅಪ್ಲೈಯೆನ್ಸಸ್ ಪ್ರಥಮ ಶಾಖೆ ಬಂಟ್ವಾಳ ತಾಲೂಕಿನ ಕೇಂದ್ರ ಸ್ಥಾನವಾಗಿರುವ ಬಿ.ಸಿ.ರೋಡಿನಲ್ಲಿ ಗುರುವಾರ ಶುಭಾರಂಭಗೊಂಡಿತು.
ಬಿ.ಸಿ.ರೋಡಿನ ಸೋಮಾಯಜಿ ಹೌಸ್ ನಲ್ಲಿ ಸಂಸ್ಥೆಯ ಮೊದಲ ಶಾಖೆಯನ್ನು ಭದ್ರಾ ಸಮೂಹ ಸಂಸ್ಥೆಗಳ ಪ್ರವರ್ತಕ ಮಂಜುನಾಥ ಆಚಾರ್ಯ ಅವರ ಮಾತೃಶ್ರೀ ಆಶಾಲತಾ ಬಾಯಿ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಮಂಗಳೂರು ವೀರ ವೆಂಕಟೇಶ ದೇವಸ್ಥಾನದ ತಂತ್ರಿಗಳಾದ ಪಂಡಿತ್ ಕಾಶಿನಾಥ ಆಚಾರ್ಯ, ಭದ್ರಾ ಹೋಂ ಅಪ್ಲಾಯನ್ಸೆಸ್ ನ ಮಾಲಕಿ
ಮೇಘ ಆಚಾರ್ಯ, ಭದ್ರಾ ಸಮೂಹ ಸಂಸ್ಥೆಗಳ ಪ್ರವರ್ತಕ ಮಂಜುನಾಥ ಆಚಾರ್ಯ, ಮದ್ವ ಆಚಾರ್ಯ
ಮಾಲ್ಸಿ ಆಚಾರ್ಯ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಜನಪ್ರತಿನಿಧಿಗಳು, ಗಣ್ಯರು, ಗ್ರಾಹಕರು ಭೇಟಿ ನೀಡಿ ಶುಭಹಾರೈಸಿದರು. ನೂತನ ಶಾಖೆಯ ಪ್ರಥಮ ಗ್ರಾಹಕ ಸಿದ್ದಿಕ್ ಗೂಡಿನ ಬಳಿಯವರನ್ನು ಗೌರವಿಸಲಾಯಿತು. ಬಂಟ್ವಾಳ ಬಸ್ತಿಪಡ್ಪುವಿನಲ್ಲಿ ಅಗ್ನಿಶಾಮಕ ಠಾಣೆಯ ಮುಂಭಾಗ ಭಧ್ರಾ ಹೋಂ ಅಪ್ಲೈಯನ್ಸ್ ಪ್ರಧಾನ ಕಚೇರಿ ಹಾಗೂ ಶೋರೂಂ ಕಾರ್ಯ ನಿರ್ವಹಿಸುತ್ತಿದ್ದು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ಮೂಲಕ ಅತ್ಯಂತ ಕಡಿಮೆ ಅವಧಿಯಲ್ಲಿ ತಾಲೂಕಿನಾದ್ಯಂತ ಮನೆಮಾತಾಗಿದೆ. ಗುಣಮಟ್ಟದ ವಸ್ತುಗಳ ಮಾರಾಟ ಹಾಗೂ ನಗುಮೊಗದ ಸೇವೆಯಿಂದಾಗಿ ಸಂಸ್ಥೆ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇದೀಗ ಸಂಸ್ಥೆಯ ಪ್ರಥಮ ಶಾಖೆ ಬಿ.ಸಿ.ರೋಡಿನಲ್ಲಿ ಆರಂಭಗೊಳ್ಳುವ ಮೂಲಕ ಭದ್ರ ಜನರಿಗೆ ಇನ್ನಷ್ಟು ಹತ್ತಿರವಾಗಿದೆ.
ಎಲ್ಲಾ ಕಂಪೆನಿಗಳ, ಎಲ್ಲಾ ಬಗೆಯ ಎಲೆಕ್ಟ್ರಾನಿಕ್ಸ್ ವಸ್ತುಗಳು, ಫರ್ನಿಚರ್ ಗಳು ಹಾಗೂ ಹಾಗೂ ಗೃಹಪಯೋಗಿ ವಸ್ತುಗಳು ಇಲ್ಲಿ ಲಭ್ಯವಿದೆ. ಬಸ್ತಿಪಡ್ಪುವಿನಲ್ಲಿ ಬೃಹತ್ ಶೋ ರೂಂ ಇದ್ದು ಮನೆಗೆ ಬೇಕಾಗುವ ಎಲ್ಲಾ ವಸ್ತುಗಳು ಒಂದೇ ಸೂರಿನಡಿ ಲಭ್ಯವಿದೆ. ಅತ್ಯಮೋಘ ಆಫರ್ ಗಳು, ಎಕ್ಸ ಚೇಂಜ್ ಆಫರ್ ಗಳು, ಇಎಂಐ ಮೇಳ, ಪ್ರತೀ ಖರೀದಿಗೂ ಉಚಿತ ಉಡುಗೊರೆಗಳು ಇದ್ದು ಸಂಸ್ಥೆ ಗ್ರಾಹಕರಿಗೆ ಒದಗಿಸಿರುವ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಂಸ್ಥೆಯ ಮಾಲಕಿ ಮೇಘಾ ಆಚಾರ್ಯ ತಿಳಿಸಿದ್ದಾರೆ.