ಬಂಟ್ವಾಳ: ತಾಲೂಕು ಹಿಂದಿ ಭಾಷಾ ಶಿಕ್ಷಕ ಸಂಘದ ಆಶ್ರಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬಂಟ್ವಾಳ, ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಶಿಕ್ಷಕ ಸಂಘ ಬೆಂಗಳೂರು, ಹಾಗೂ ಲಯನ್ಸ್ ಕ್ಲಬ್ ಬಂಟ್ವಾಳದ ಸಹಯೋಗದೊಂದಿಗೆ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಬುಧವಾರ ಹಿಂದಿ ದಿವಾಸ ಕಾರ್ಯಕ್ರಮ ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ರಾಷ್ಟ್ರ ಭಾಷೆಯಾಗಿರುವ ಹಿಂದಿ ಹೃದಯದ ಭಾಷೆ. ಎಲ್ಲ ಹಿಂದಿ ಭಾಷಾ ಶಿಕ್ಷಕರನ್ನು ಸಂಘಟಿಸಿಕೊಂಡು ಪ್ರತೀ ವರ್ಷ ಹಿಂದಿ ದಿವಾಸ್ ಆಚರಿಸಿಕೊಂಡು ಬರುತ್ತಿರುವುದು ಅಭಿದನೀಯ ಎಂದು ಹೇಳಿದರು.
ಲಯನ್ಸ್ ಕ್ಲಬ್ ಬಂಟ್ವಾಳದ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಉದ್ಯೋಗ ಅಥವಾ ಇನ್ನಿತರ ಕಾರಣಗಳಿಗೆ ಹೊರ ರಾಜ್ಯಗಳಿಗೆ ಹೋಗಬೇಕಾದ ಅನಿವಾರ್ಯತೆ ಬಂದಾಗ ಹಿಂದಿ ಭಾಷೆಯ ಅಗತ್ಯವಿದೆ. ಶಾಲೆಯಲ್ಲಿ ಪಠ್ಯದ ಜೊತೆಗೆ ಹಿಂದಿ ಭಾಷೆ ಕಲಿಕೆಯ ಅಭಿಯಾನವನ್ನು ಆರಂಭಿಸಿದರೆ ವಿದ್ಯಾರ್ಥಿಗಳು ವ್ಯಾಕರಣ ಬದ್ದವಾಗಿ ಹಿಂದಿ ಮಾತನಾಡಲು ಸಾಧ್ಯವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿಂದಿ ರತ್ನ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಮಂಚಿ ಸರಕಾರಿ ಪ್ರೌಢಶಾಲೆಯ ಹಿಂದಿ ಶಿಕ್ಷಕಿ ಶಾಂತ ಅವರಿಗೆ ನೀಡಲಾಯಿತು. ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಯಿತು. ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಅಭಿನಂದಿಸಲಾಯತು. ಮುಖ್ಯ ಶಿಕ್ಷಕರಾಗಿ ಬಡ್ತಿ ಹೊಂದಿದ ಹಿಂದಿ ಶಿಕ್ಷಕರನ್ನು ಹಾಗೂ ಗೌರವಾಧ್ಯಕ್ಷ ರಮಾನಂದ ನೂಜಿಪ್ಪಾಡಿಯವರನ್ನು ಗೌರವಿಸಲಾಯಿತು. ಶೇ.100 ಫಲಿತಾಂಶ ಪಡೆದ ಹಿಂದಿ ಶಿಕ್ಷಕರನ್ನು ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ರಾಘವೇಂದ್ರ ಬಳ್ಳಾಲ್, ಬಂಟ್ವಾಳ ತಾಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ಜೋಯಲ್ ಲೋಬೋ, ಹಿಂದಿ ಭಾಷಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷೆ ಗೀತಾ, ತಾಲೂಕು ಅಧ್ಯಕ್ಷೆ ಪೌಲಿನ್ ಉಪಸ್ಥಿತರಿದ್ದರು. ಉಪನ್ಯಾಸಕಿ ಡಾ. ಮಾಲತಿ ಪೈ ಸಂಪನ್ಮೂಲ ಭಾಗವಹಿಸಿ ಮಾಹಿತಿ ನೀಡಿದರು.
ಗೌರವಾಧ್ಯಕ್ಷ ರಮಾನಂದ ನೂಜಿಪ್ಪಾಡಿ ಪ್ರಾಸ್ತವಿಕ ಮಾತುಗಳೊಂದಿಗೆ ,ಸ್ವಾಗತಿಸಿದರು.ಷಡಕ್ಷರಿ ವರದಿ ವಾಚಿಸಿದರು. ಶಿಕ್ಷಕಿ ದೀಪಿಕಾ ವರದಿ ವಾಚಿಸಿದರು, ಶಿಕ್ಷಕ ಇಮ್ತಿಯಾಝ್ ಕಾರ್ಯಕ್ರಮ ನಿರೂಪಿಸಿದರು.