ಬಂಟ್ವಾಳ: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಬಲಾಡ್ಯವಾಗಿ ಬೆಳೆದಿದ್ದು, ಇಡೀ ದೇಶದಲ್ಲಿ ಶೇ.೧೦೦ ಸಾಲ ಮರುಪಾವತಿಯಾಗುವ ಜಿಲ್ಲೆಯಿದ್ದರೆ ಅದು ದ.ಕ. ಮಾತ್ರ ಎಂದು ಕರ್ನಾಟಕ ಸಹಕಾರ ಮಾರಾಟ ಮಹಾಮಂಡಲ ಬೆಂಗಳೂರು ಹಾಗೂ. ದ,ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಇದರ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ಬಿ.ಸಿ. ರೋಡಿನ ಸ್ಪರ್ಶಾಕಲಾಮಂದಿರದಲ್ಲಿ ಶನಿವಾರ ನಡೆದ ದ.ಕ. ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿ. ಬಂಟ್ವಾಳ ಇದರ ವಿಂಶತಿ ಸಂಭ್ರಮ – ಸದಸ್ಯರ ಸಮಾಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಹಕಾರ ಸಂಘವನ್ನು ಸ್ಥಾಪಿಸುವುದು ಸುಲಭ, ಆದರೆ ಮುನ್ನಡೆಸುವುದು ಕಷ್ಟ. ದ.ಕ. ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ಆರಂಭಗೊಂಡು ಇದೀಗ ೨೦ ವರ್ಷದ ಸಂಭ್ರಮ ಆಚರಿಸುತ್ತಿರುವುದು ಎಲ್ಲರಿಗೂ ಖುಷಿ ಕೊಟ್ಟಿದೆ ಎಂದರು.
ದ.ಕ. ಬ್ಯಾಂಕ್ಗಳ ತವರೂರು. ಅನೇಕ ವಾಣಿಜ್ಯ ಬ್ಯಾಂಕ್ಗಳು ಹಾಗೂ ಸಹಕಾರಿ ಸಂಘಗಳು ಇಲ್ಲಿ ಹುಟ್ಟಿಕೊಂಡಿವೆ. ವಾಣಿಜ್ಯ ಬ್ಯಾಂಕ್ಗಳು ಇತರ ಬ್ಯಾಂಕ್ಗಳೊಂದಿಗೆ ವಿಲೀನ ಗೊಂಡಿದೆ, ಗ್ರಾಹಕರಿಕೆ ನೀಡುವ ಸೇವೆಯಿಂದ ಇಂದು ಸಹಕಾರಿ ಸಂಘಗಳು ಜನರಿಗೆ ಹತ್ತಿರವಾಗಿದೆ ಎಂದರು. ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಸಹಕಾರಿ ಮನೋಭಾವ ಹೃದಯದಲ್ಲಿ ಬರಬೇಕು, ಜನರಿಗೆ ಆರ್ಥಿಕ ಸಮೃದ್ದಿ ಕೊಡಲು ಸಹಕಾರಿ ಸಂಘಗಳಿಂದ ಸಾಧ್ಯವಾಗಿದೆ ಎಂದರು.
ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಅಧ್ಯಕತೆ ವಹಿಸಿದ್ದರು. ಅವರು ಪ್ರಾಸ್ತವಿಕವಾಗಿ ಮಾತನಾಡಿ ವರ್ತಕರು ಗ್ರಾಹಕರ ನಡುವೆ ಬಾಂಧವ್ಯವನ್ನು ಉತ್ತಮ ಪಡಿಸುವ ಉದ್ದೇಶದಿಂದ ಹಾಗೂ ವರ್ತಕರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವಿಂಶತಿ ಕಾರ್ಯಕ್ರಮವನ್ನು ವಿಜ್ರಂಭಣೆಯಿಂದ ಆಚರಿಸಲಾಗಿದೆ ಎಂದರು.
ಮಾಜಿ ಸಚಿವ ಬಿ.ರಮನಾಥ ರೈ ಅಶಕ್ತರಿಗೆ ಸಹಾಯಧನ ವಿತರಿಸಿ ಮಾತನಾಡಿ ದ.ಕ. ವರ್ತಕರ ಸಂಘ ಒಳ್ಳೆಯ ಸಹಕಾರಿ ಸಂಘವಾಗಿ ಬೆಳೆದು ಬರುತ್ತಿದ್ದು ಅವಿಭಜಿತ ದ.ಕ. ಜಿಲ್ಲೆ ಸಹಕಾರಿ ಕ್ಷೇತ್ರದಲ್ಲಿಂದು ಹೆಸರುವಾಸಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಶಕ್ತರಿಗೆ ಧನ ಸಹಾಯ ನೀಡಲಾಯಿತು. ಡಾ. ಎಂ.ಎನ್. ರಾಜೇಂದ್ರ ಕುಮಾರ್, ಮಾಜಿ ಸಚಿವ ಬಿ. ರಮಾನಾಥ ರೈ, ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್, ಸಹಕಾರಿ ಸುದರ್ಶನ್ ಜೈನ್ ಸೇರಿದಂತೆ, ಸಂಘದ ಆರಂಭಿಕ ಪ್ರವರ್ತಕರು, ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರನ್ನು ಗೌರವಿಸಲಾಯಿತು. ೧೩ ಶಾಖೆಗಳ ಅದೃಷ್ಟವಂತ ಗ್ರಾಹಕರಿಗೆ ಬಹುಮಾನ ನೀಡಲಾಯಿತು, ಸವ್ಯಸಾಚಿ ಶಾಖೆಯನ್ನು ಅಭಿನಂದಿಸಲಾಯಿತು.
ಬಂಟ್ವಾಳ ಪುರಸಭೆ ಅಧ್ಯಕ್ಷ ವಾಸು ಪೂಜಾರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ಮಂಗಳೂರಿನ ಧವಳ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷ ಸುದರ್ಶನ್ ಜೈನ್
ಅಧ್ಯಾಪಕರ ಸಹಕಾರಿ ಸಂಘ ವಿಟ್ಲ ಇದರ ಅಧ್ಯಕ್ಷ ರಮೇಶ್ ನಾಯಕ್ ರಾಯಿ, ಪಾಣೆಮಂಗಳೂರಿನ ಸುಮಂಗಲ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷ ನಾಗೇಶ್ ಕಲ್ಲಡ್ಕ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್
ಬಂಟ್ವಾಳ ಸಾರ್ವಜನಿಕ ಉದ್ಯೋಗಸ್ಥರ ಸಹಕಾರಿ ಸಂಘದ ಅಧ್ಯಕ್ಷ ಕೆ. ಜಯಂತ್ ನಾಯಕ್, ಬೆಳ್ತಂಗಡಿಯ ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಜಯಕೀರ್ತಿ ಜೈನ್, ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಅಧ್ಯಕ್ಷ ಪದ್ಮನಾಭ ದೇವಾಡಿಗ, ಸಂಘದ ಉಪಾಧ್ಯಕ್ಷ ಮಂಜುನಾಥ ರೈ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಜಿತ್ ಕುಮಾರ್ ಜೈನ್ ಉಪಸ್ಥಿತರಿದ್ದರು. ನಿರ್ದೇಶಕರಾದ ದಿವಾಕರ ದಾಸ್ ಸ್ವಾಗತಿಸಿದರು, ಲೋಕೆಶ್ ಸುವರ್ಣ ವಂದಿಸಿದರು. ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.
—