ಬಂಟ್ವಾಳ: ಅಮ್ಟಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಅಮ್ಟಾಡಿ ಬಂಟ್ವಾಳ ಇದರ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ನೂತನ ನಿವೇಶನದಲ್ಲಿ ಸಂಘದ ಅಧ್ಯಕ್ಷೆ ಮಲ್ಲಿಕಾ ವಿ. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಶನಿವಾರ ಜರಗಿತು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಯ್ ಕುಮಾರ್ ಅಜಿಲ ವರದಿ ಮಂಡಿಸಿ ಸಂಘವು ವರದಿ ಸಾಲಿನಲ್ಲಿ ರೂ 223.26 ಕೋಟಿ ವ್ಯವಹಾರ ನಡೆಸಿ ವರ್ಷಾಂತ್ಯಕ್ಕೆ ರೂ 1,02,30,807.89 ನಿವ್ವಳ ಲಾಭಗಳಿಸಿ ಶೇಕಡ 9 ಡಿವಿಡೆಂಟ್ ನೀಡಲಾಗುವುದು. ಸಂಘವು ವರದಿ ಸಾಲಿನಲ್ಲಿ ರೂ 40.30ಕೋಟಿ ಠೇವಣಿ ಹೊಂದಿದ್ದು ರೂ.36.65 ಕೋಟಿ ಸಾಲ ವಿತರಿಸಿದೆ. ಸಂಘದಲ್ಲಿ ರೂ. 1.65ಕೋಟಿ ಕ್ಷೇಮನಿಧಿ ಹಾಗೂ ಇತರ ನಿಧಿಗಳನ್ನು ಹೊಂದಿದೆ ಎಂದರು.
ಸಂಘದ ಹಿರಿಯ ಸದಸ್ಯರಾದ ರಾಮಣ್ಣ ಪೂಜಾರಿ ಕಂಗಿತ್ಲು, ನವೀನ್ಚಂದ್ರ ಶೆಟ್ಟಿ ಮುಂಡಾಜೆ ಗುತ್ತು, ಅಲ್ಬಟ್ ಡಿಸೋಜ ಗುತ್ತಾರ್, ರಾಘವನ್ ನಾಯರ್ ರಾಮಲ್ಕಟ್ಟೆ , ಭಾರತಿ ಚೌಟ ಅಮ್ಟಾಡಿ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾದನೆ ಮಾಡಿದ ಫ್ರಾನ್ಸಿಸ್ ಡೇಸ, ರೋಶನ್ ಆಲೆಕ್ಸಂಡರ್ ಲೋಬೊ , ಕು. ರೀಚಾ ಶೀಫಾಲಿ ಡಿ’ಸೋಜ , ರಶ್ಮಿತಾ ಭಂಡಾರಿ, ಕೃಷಿ ಕ್ಷೇತ್ರದಲ್ಲಿ ಅರ್ವಿನ್ ಡಿಸೋಜ, ಕಲಾಕ್ಷೇತ್ರದಿಂದ ಮನೋಜ್ ಕನಪಾಡಿ, ಕ್ರೀಡಾಕ್ಷೇತ್ರದಿಂದ ಕು. ಶರಣ್ಯ ಎನ್.ಟಿ ಇವರನ್ನು ಸನ್ಮಾನಿಸಲಾಯಿತು ಮತ್ತು ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷೆ ಮಲ್ಲಿಕಾ ವಿ ಶೆಟ್ಟಿ ಮಾತನಾಡಿ ಸಂಘವು 4 ವರ್ಷದ ಅವಧಿಯಲ್ಲಿ 2 ನೂತನ ಶಾಖೆಗಳು ಮತ್ತು ಕೇಂದ್ರ ಕಛೇರಿಗೆ ನೂತನ ನಿವೇಶನ ಖರೀದಿಸಿ. ಸುಸಜಿತ ಕಟ್ಟಡ ನಿರ್ಮಾಣವನ್ನು ಕೈಗೊಂಡಿದೆ. ಸದಸ್ಯರ ಸಹಕಾರದಿಂದ ವರಧಿ ವರ್ಷದಲ್ಲಿ ಗರಿಷ್ಠ ಲಾಭ ದಾಖಲಿಸಿದೆ. ಸಂಘವು ಸದಸ್ಯರಿಗೆ ವಿವಿಧ ಸೇವೆಗಳನ್ನು ನೀಡುತ್ತಿದ್ದು ಇದರ ಲಾಭ ಪಡೆಯುವಂತೆ ವಿನಂತಿಸಿದರು.
ಮಹಾಸಭೆಯ ನಂತರ ತೋಟಗಾರಿಕಾ ಇಲಾಖೆ ಹಾಗೂ ಕೃಷಿ ಇಲಾಖೆ ಬಂಟ್ವಾಳ ಇವರ ಜಂಟಿ ಆಶ್ರಯದಲ್ಲಿ ಬೆಳೆ ಸಮೀಕ್ಷೆ, ಬೆಳೆ ವಿಮೆ ಹಾಗೂ ಇಲಾಖಾ ಸೌಲಭ್ಯಗಳ ಕುರಿತು ಬಂಟ್ವಾಳ ತೋಟಗಾರಿಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಜೋ ಪ್ರದೀಪ್ ಡಿಸೋಜ ಮಾಹಿತಿ ನೀಡಿದರು. ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಪದ್ಮನಾಭ ರಾವ್. ನರಸಿಂಹ ಹೊಳ್ಳ, ತೋಮಸ್ ಸಲ್ಡಾನ, ಅನೀಲ್ ಪಿಂಟೊ, ಪೂರ್ಣಿಮಾ ಕೆಂಪುಗುಡ್ಡೆ, ಫ್ಲೋಸಿ ಡಿ’ಸೋಜ, ಪೂರ್ಣಿಮಾ ಬೆದ್ರಗುಡ್ಡೆ, ರಮೇಶ್, ಕಮಾಲಾಕ್ಷ, ಶಿವಪ್ರಸಾದ್ ಕನಪಾಡಿ ಉಪಸ್ತಿತರಿದ್ದರು. ನಲ್ಕೆಮಾರ್ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಸಂಘದ ಸಿಬ್ಬಂದಿಗಳಾದ ರೇಣುಕಾ ರೈ, ಅಲ್ವಿನ್ ವೇಗಸ್, ದುರ್ಗಾಪ್ರಸಾದ್, ರಮ್ಯ ಸನ್ಮಾನಪತ್ರ ವಾಚಿಸಿದರು. ಸಂಘದ ಉಪಾಧ್ಯಕ್ಷ ಅಲ್ವಿನ್ ವಿನಯ ಲೋಬೋ ಸ್ವಾಗತಿಸಿ, ನಿರ್ದೇಶಕ ಬಿ. ಸುರೇಶ್ ಭಂಡಾರಿ ಅರ್ಭಿ ವಂದಿಸಿದರು. ಲೊರೊಟ್ಟೋ ಶಾಖಾ ವ್ಯವಸ್ಥಾಪಕ ದಿನೇಶ್ ಅಮೀನ್ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.