
ಬಂಟ್ವಾಳ: ಕುರಿಯಾಳ ಗ್ರಾಮದ ಶ್ರೀ ಓಂಕಾರೇಶ್ವರಿ ದೇವಿ ಭಜನಾ ಮಂದಿರದಲ್ಲಿ ನವರಾತ್ರಿಯ ಮೊದಲ ದಿನವಾದ ಗುರುವಾರ ನೂತನ ಪಾಕಶಾಲ ಕಟ್ಟಡದ ಉದ್ಘಾಟನೆ ಹಾಗೂ ವಿಮಾ ಗ್ರಾಮ ಘೋಷಣೆ ಕಾರ್ಯಕ್ರಮ ನಡೆಯಿತು.




ಸಭಾ ಕಾರ್ಯಕ್ರಮದಲ್ಲಿ ಭಾರತೀಯ ಜೀವಾ ವಿಮಾ ನಿಗಮ ಬಂಟ್ಟಾಳ ಶಾಖೆಯ ಮುಖ್ಯ ಶಾಖಾಧಿಕಾರಿ ಕೆ.ಸತೀಶ್ ಕುಮಾರ್, ಸಹಾಯಕ ಶಾಖಾಧಿಕಾರಿ ಬಿ.ಎಚ್ ಕೃಪಾಲ್, ಅಭಿವೃದ್ಧಿ ಅಧಿಕಾರಿ ಮದ್ವರಾಜ್ ಕಲ್ಮಾಡಿ, ಶ್ರೀ ಓಂಕಾರೇಶ್ವರಿ ದೇವಿ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸಂತ ವಿ ಮಣಿಹಳ್ಳ, ಆಡಳಿತ ಸಮಿತಿ ಗೌರವಾಧ್ಯಕ್ಷ ಜಗದೀಶ್ ಭಂಡಾರಿ, ಅಧ್ಯಕ್ಷ ಶ್ರೀನಿಧಿ ವಿ ಬಂಗೇರ, ಅರ್ಚಕ ಹೊನ್ನಪ್ಪ ಪೂಜಾರಿ ಉಪಸ್ಥಿತರಿದ್ದರು. ಚೈತ್ರ ಶ್ರೀನಿಧಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.




Advertisement







