ಬಂಟ್ವಾಳ: ಅತ್ತುತ್ತಮ ಹಾಸ್ಯಕೃತಿಗಾಗಿ ಕರ್ನಾಟಕ ಲೇಖಕಿಯರ ಸಂಘವು ಪ್ರತಿ ವರ್ಷ ನೀಡುವ ಪ್ರತಿಷ್ಠಿತ ‘ನುಗ್ಗೆಹಳ್ಳಿ ಪಂಕಜ ಪ್ರಶಸ್ತಿ’ಗೆ ಬಿ.ಸಿ.ರೋಡ್ ನಿವಾಸಿ ಹಾಗೂ ಉಪನ್ಯಾಸಕಿ ರೇಶ್ಮಾ ಭಟ್ ಅವರ ‘ಲಘುಬಗೆ’ ಕೃತಿ ಆಯ್ಕೆಯಾಗಿದೆ. ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ ಅವರು ವಿವಿಧ ಪ್ರಶಸ್ತಿಗಳನ್ನು ಪಡೆದವರ ಪಟ್ಡಿಯನ್ನು ಬಿಡುಗಡೆ ಮಾಡಿದರು. 2021 ರಲ್ಲಿ ಪ್ರಕಟವಾದ ಅತ್ಯುತ್ತಮ ಹಾಸ್ಯಕೃತಿ ಎನ್ನುವ ನೆಲೆಯಲ್ಲಿ ಈ ಪ್ರಶಸ್ತಿಯು ಸಂದಿದೆ. ಇದೆ ಜುಲೈ 23 ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
Advertisement
Advertisement