ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಇದರ ಬಂಟ್ವಾಳ ವಲಯದ ಅಧ್ಯಕ್ಷರಾಗಿ ಪ್ರೀತಿ ಸ್ಟುಡಿಯೋದ ಮಾಲಕ ಕಿಶೋರ್ ಯಸ್. ಕುಮಾರ್ ಆಯ್ಕೆಯಾಗಿದ್ದಾರೆ.
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ. ಕ. ಮತ್ತು ಉಡುಪಿ ಜಿಲ್ಲೆ ಇದರ ಬಂಟ್ವಾಳ ವಲಯದ ಮಹಾಸಭೆ ಮಂಗಳವಾರ ಬಿ.ಸಿ.ರೋಡಿನ ಲಯನ್ಸ್ ಸಭಾಂಗಣದಲ್ಲಿ ಜರಗಿತು. ಈ ಸಭೆಯಲ್ಲಿ 2023-25 ರ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
Advertisement
ಪ್ರಧಾನ ಕಾರ್ಯದರ್ಶಿಯಾಗಿ ಪ್ರಶಾಂತ್ ಕಲ್ಲಡ್ಕ, ಗೌರವ ಅಧ್ಯಕ್ಷರಾಗಿ ಹರೀಶ್ ಕುಂದರ್ ಉಪಾದ್ಯಕ್ಷರುಗಳಾಗಿ ಲಕ್ಷ್ಮಣ್ ಮೆಲ್ಕಾರ್ ಹಾಗೂ ವಿಕೇಶ್ ಬಂಟ್ವಾಳ ಕೋಶಾಧಿಕಾರಿಯಾಗಿ ವರುಣ್ ಕಲ್ಲಡ್ಕ, ಜತೆ ಕಾರ್ಯದರ್ಶಿಯಾಗಿ ರಿಚರ್ಡ್ ಹಾಗೂ ವಿವೇಕ್ ಅಮ್ಟಾಡಿ , ಸಂಘಟನಾ ಕಾರ್ಯದರ್ಶಿಯಾಗಿ ಶರತ್ ಕಲ್ಲಡ್ಕ, ಕ್ರೀಡಾ ಕಾರ್ಯದರ್ಶಿಯಾಗಿ ಮೋಹನ್ ಏಕದಂತ ಹಾಗೂ ಹರೀಶ್ ಕನ್ಯಾನ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಂತೋಷ್ ಕೊಯಿಲ, ಮಾಧ್ಯಮ ಪ್ರತಿನಿಧಿಯಾಗಿ ಹರೀಶ್ ನಾಟಿ, ಛಾಯಾ ಕಾರ್ಯದರ್ಶಿಯಾಗಿ ಶ್ರೀ ಪ್ರಸಾದ್ ಇವರು ಆಯ್ಕೆಯಾಗಿದ್ದಾರೆ.
—
Advertisement