ಬಂಟ್ವಾಳ: ಸಜಿಪಮೂಡ ಗ್ರಾಮದ ಸುಭಾಷ್ ನಗರದಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕೃಷಿ ಉತ್ಪನ್ನಗಳ ಮಾರಾಟ, ರೈತ ಮಹಿಳೆಯರ ಸ್ವ ಉದ್ಯೋಗಕ್ಕಾಗಿ ಅಮೃತ ಮಾರಾಟ ಮಳಿಗೆಯನ್ನು ಶಾಸಕ ರಾಜೇಶ್ ನಾಯ್ಕ್ ಶನುವಾರ ಉದ್ಘಾಟಿಸಿದರು.
ಅಮೃತ್ ಸ್ಟಾಲ್ ಮಾರಾಟ ಮಳಿಗೆಯನ್ನು ಸಜಿಪಮೂಡ ಜಲಾನಯನ ಸಮಿತಿಯ ಅಕ್ಷಯ ಸ್ವಸಹಾಯ ಸಂಘದ ಸದಸ್ಯರಿಗೆ ಜೀವನೋಪಾಯ ಚಟುವಟಿಕೆ ಘಟಕದಡಿ ಜಲಾನಯನ ವ್ಯಾಪ್ತಿಯಲ್ಲಿ ವ್ಯಾಪಾರ ವಹಿವಾಟು ನಡೆಸಿ ಸ್ವಾವಲಂಬನೆ ಹೊಂದಲು ಕೃಷಿ ಇಲಾಖೆ ಜಲಾನಯನ ವಿಭಾಗದಿಂದ ನೀಡಿದ ಸೌಲಭ್ಯವಾಗಿರುತ್ತದೆ.
ಬೇಕರಿ ಉತ್ಪನ್ನಗಳ ಮಾರಾಟಕ್ಕೆಂದು ಸ್ವಸಹಾಯ ಸಂಘಕ್ಕೆ ನೀಡಿದ ಅಮೃತ್ ಮಳಿಗೆಗೆ ಇಲಾಖೆಯಿಂದ ರೂ. 56 ಸಾವಿರ ರೂಪಾಯಿ ಸಹಾಯಧನ ನೀಡಲಾಗಿದೆ. ಈ ಸಂದಭದಲ್ಲಿ ದ.ಕ. ಜಿಲ್ಲೆ ಜಂಟಿ ಕೃಷಿ ನಿದೇಶಕರಾದ ಡಾ| ಕೆಂಪೇಗೌಡ, ಮಂಗಳೂರು ಉಪ ಕೃಷಿ ನಿರ್ದೇಶಕಿ ಭಾರತಿ, ಬಂಟ್ವಾಳ ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ವೀಣಾ, ತಾಲೂಕು ತಾಂತ್ರಿಕ ಅಧಿಕಾರಿ ನಂದನ್ ಶೆಣೈ, ಸಜೀಪಮೂಡ ಗ್ರಾಮ ಪಂಚಾಯತಿ ಸದಸ್ಯರಾದ ವಿಶ್ವನಾಥ ಬೆಳ್ಚಾಡ, ಹೇಮಾವತಿ, ವಿಜಯಾ, ಮಹಾದೇವಿ, ಸೋಮನಾಥ, ಸುಂದರಿ, ಎನ್.ಆರ್.ಎಲ್.ಎಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಸುಧಾ, ಎನ್.ಆರ್.ಎಲ್.ಎಂ ತಾಲೂಕು ವ್ಯವಸ್ಥಾಪಕ ಪ್ರದೀಪ್ ಕಾಮತ್, ಅಕ್ಷತಾ, ಹರಿಣಾಕ್ಷಿ, ಸ್ಥಳೀಯ ನಿವಾಸಿ ರೇವತಿ, ಕೃಷಿ ಸಖಿ ವಿನೋದ, ಪಶು ಸಖಿ ಜಯಶ್ರೀ, ಆತ್ಮ ಯೋಜನೆ ಎ.ಟಿ.ಎಂ ಹನುಮಂತ್ ಕಾಳಗಿ, ಪಿಎಂಕೆಎಸ್ ವೈ ಯೋಜನೆಯ ಸಿಬ್ಬಂದಿಗಳಾದ ನಿತಿನ್, ಸಚಿನ್, ವಿನೀತ್ ಮತ್ತಿತರರು ಉಪಸ್ಥಿತರಿದ್ದರು