Author: admin
ಬಂಟ್ವಾಳ: ಮಾಜಿ ಸಚಿವ ಬಿ. ರಮಾನಾಥ ರೈಯವರ ಹುಟ್ಟುಹಬ್ಬದ ಪ್ರಯುಕ್ತ ಬಂಟ್ವಾಳ ಬ್ಲಾಕ್ ಯುವಕಾಂಗ್ರೆಸ್ ವತಿಯಿಂದ ಬಿ.ಸಿ.ರೋಡಿನ ರಕ್ತೇಶ್ವರೀ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ಬಂಟ್ವಾಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಜ್ವಲ್ ಶೆಟ್ಟಿ, ಬಂಟ್ವಾಳ ವಿಧಾನಸಭಾ ಕ್ಷೇತ್ರ ಅಕ್ರಮ ಸಕ್ರಮ ಸಮಿತಿ ಸದಸ್ಯ ಸುರೇಶ್ ಜೋರಾ, ಕಿಶೋರ್ ಪೂಜಾರಿ ನಾಯರ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.
ಬಂಟ್ವಾಳ: ಮಂಚಿ ವ್ಯವಸಾಯ ಸೇವಾ ಸಹಕಾರಿ ಸಂಘ ಲಿ.ಮಂಚಿ ಕುಕ್ಕಾಜೆ ಇದರ 2025-26ನೇ ಸಾಲಿನ ವಾರ್ಷಿಕ ಮಹಾ ಸಭೆ ಮಂಚಿ ಕುಕ್ಕಾಜೆಯಲ್ಲಿರುವ ಸಂಘದ ಕೇಂದ್ರ ಕಚೇರಿಯಲ್ಲಿ ಸಂಘದ ಅಧ್ಯಕ್ಷ ಕೇಶವ ರಾವ್ ಎನ್. ಅಧ್ಯಕ್ಷತೆಯಲ್ಲಿ ನಡೆಯಿತು. ವಾರ್ಷಿಕ ಮಹಾಸಭೆಯ ಕಾರ್ಯಕಲಾಪಗಳನ್ನು ನಡೆಸಿಕೊಟ್ಟ ಸಂಘದ ಅಧ್ಯಕ್ಷ ಕೇಶವ ರಾವ್ ಎನ್. ಮಾತನಾಡಿ 72 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿರುವ ನಮ್ಮಸಂಘ ವಿಶೇಷವಾದ ಹಿನ್ನಲೆಯನ್ನು ಹೊಂದಿದೆ. ಹಿರಿಯರು, ಅನುಭವಿಗಳ ಮಾರ್ಗದರ್ಶನ, ಸಿಬ್ಬಂದಿಗಳ ಪರಿಶ್ರಮ, ಸದಸ್ಯರ ಸಹಕಾರದಿಂದ ಸಂಘ ಈ ಹಂತಕ್ಕೆ ಬೆಳೆದಿದೆ ಎಂದು ತಿಳಿಸಿದರು. ಎಲ್ಲಾ ಸದಸ್ಯರ ಸಹಕಾರದಿಂದ ಸಂಘ ಅಭಿವೃದ್ಧಿ ಹಾದಿಯಲ್ಲಿ ಸಾಗುತ್ತಿದೆ. ಸರ್ಕಾರ ಘೋಷಿಸಿದ ಯೋಜನೆಗಳನ್ನು ಪಡೆಯಲು ಸಹಕಾರಿ ಸಂಘ ಸುಲಭದ ದಾರಿಯಾಗಿದ್ದು, ಸಂಘ ಇನ್ನಷ್ಟು ಬೆಳೆಯಲು ಸದಸ್ಯರು, ಅಧಿಕಾರಿಗಳ ಕೃಪೆ ಅಗತ್ಯ ಎಂದರು. ಕಾನೂನು ಚೌಕಟಿನೊಳಗೆ ಸಾಧ್ಯತೆ ಇರುವ ಎಲ್ಲಾ ಅಭಿವೃದ್ದಿ ಕಾರ್ಯಗಳನ್ನು ಆಡಳಿತ ಮಂಡಳಿ ಮಾಡುತ್ತಿದ್ದು ರೈತರನ್ನು ಗುರುತಿಸುವ ನಿಟ್ಟಿನಲ್ಲಿ ಸಂಸ್ಥೆ ಬೆಳೆಯುತ್ತಿದೆ. ಸದಸ್ಯರು ಸೂಕ್ತ ದಾಖಲೆಗಳನ್ನು ನೀಡಿ ತಮಗೆ…
ಬಂಟ್ವಾಳ: ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರ ಪುತ್ತೂರು ಇದರ ನೃತ್ಯ ನಿರ್ದೇಶಕಿ ರೋಹಿಣಿ ಉದಯ್ ಅವರ ಶಿಷ್ಯೆಯಂದಿರಾದ ವಿದೂಷಿ ಶ್ರದ್ಧಾ ಹಾಗೂ ಶ್ರಮ್ಯ ಅವರ ಭರತನಾಟ್ಯ ರಂಗಪ್ರವೇಶ ಸೆ.13 ರಂದು ಸಂಜೆ 5 ಗಂಟೆಗೆ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಲಿದೆ. ನಾಟ್ಯರಾಣಿ ಶಾಂತಲಾ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಕಲಾಶ್ರೀ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ದೀಪಪ್ರಜ್ವಲಿಸುವರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು ಇದರ ನಿರ್ದೇಶಕಿ ಭಾರತಿ ಜಿ. ಭಟ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅನುವಂಶಿಕ ಅರ್ಚಕ ವೆಂಕಟರಮಣ ಆಸ್ರಣ್ಣ, ಸನಾತನ ನಾಟ್ಯಾಲಯ, ಮಂಗಳೂರು ಇದರ ನೃತ್ಯ ಗುರುಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್, ದಾಯ್ಕಿವರ್ಲ್ಡ್ ಟಿವಿ ವಾಹಿನಿ ಸಂಸ್ಥಾಪಕ ವಾಲ್ಟರ್ ನಂದಳಿಕೆ ಭಾಗವಹಿಸಲಿದ್ದಾರೆ.
ಬಂಟ್ವಾಳ: ಇಲ್ಲಿನ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್‌ನ ಹಿಂದುಳಿದ ವರ್ಗ ಘಟಕದ ಅಧ್ಯಕ್ಷರಾಗಿ ಪ್ರಸಾದ್ ಗಾಣಿಗ ನೇಮಕಗೊಂಡಿದ್ದಾರೆ. ಮಾಜಿ ಸಚಿವ ಬಿ. ರಮಾನಾಥ ರೈ ಅವರ ಶಿಫಾರಸ್ಸಿನ ಮೇರೆಗೆ ನೇಮಕಾತಿ ಮಾಡಲಾಗಿದೆ ಎಂದು ಪಾಣೆಮಂಗಲೂರು ಬ್ಲಾಖ್ ಕಾಂಗ್ರೆಸ್ ಅಧ್ಯಕ್ಷ ಬಿ. ಚಂದ್ರಶೇಖರ ಬಂಡೆಆರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಟ್ವಾಳ: ಇತ್ತೀಚೆಗೆ ಜೆಸಿಐ ಮಡಂತ್ಯಾರು ಅತಿಥ್ಯದಲ್ಲಿ ನಡೆದ ಜೆಸಿಐ ವಲಯ 15 ರ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನ ಮೃದಿನಿ -2026 ಕಾರ್ಯಕ್ರಮದಲ್ಲಿ ಜೆಸಿಐ ಬಂಟ್ವಾಳ ಘಟಕ ಹಲವು ಪುರಸ್ಕಾರಗಳನ್ನು ಗೆದ್ದುಕೊಂಡಿದೆ. ಶೇ. 100% ಎಫಿಶಿಯನ್ಸಿಯಲ್ಲಿ 87.5 ಅಂಕ ಪಡೆದು ವಲಯದಲ್ಲಿ ನಂ.1 ಸ್ಥಾನ ಹಾಗೂ ಜಿ&ಡಿ ಪಾಯಿಂಟ್ ಟೇಬಲ್ ನಲ್ಲಿ 3ನೇ ಸ್ಥಾನ ಕಾಯ್ದುಕೊಂಡು ಸಾಧನೆ ಮಾಡಿದೆ. ಜೆಸಿಐ ಬಂಟ್ವಾಳದ ವಿಶೇಷ ಸಾಧನೆಗೆ ವ್ಯವಹಾರ ಸಮ್ಮೇಳನದಲ್ಲಿ ವಲಯಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಬಂಟ್ವಾಳ ಘಟಕದ ಅಧ್ಯಕ್ಷ ಕಿಶೋರ್ ಕುಮಾರ್ ಆಚಾರ್ಯ ಅವರಿಗೆ ಹಲವಾರು ಪುರಸ್ಕಾರಗಳನ್ನು ನೀಡಿ ಗೌರವಿಸಿದರು. ಈ ಸಂದರ್ಭ ವಲಯ ಉಪಾಧ್ಯಕ್ಷ ಕಾಶೀನಾಥ್ ಗೋಗಟೆ, ವಲಯ ನಿರ್ದೇಶಕ ವಿಕೇಶ್ ಮಾನ್ಯ, ರಂಜಿತ್ ಎಚ್ ಡಿ.ಮತ್ತಿತರರು ಉಪಸ್ಥಿತರಿದ್ದರು.
ಬಂಟ್ವಾಳ: ಇತ್ತೀಚೆಗೆ ಜೆಸಿಐ ಮಡಂತ್ಯಾರು ಅತಿಥ್ಯದಲ್ಲಿ ನಡೆದ ಜೆಸಿಐ ವಲಯ 15 ರ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನ 2026 ಕಾರ್ಯಕ್ರಮದಲ್ಲಿ ಜೆಸಿಐ ಬಂಟ್ವಾಳದ ಉಪಾಧ್ಯಕ್ಷ ಶ್ರೀನಿವಾಸ್ ಅರ್ಬಿಗುಡ್ಡೆಯವರಿಗೆ ಸಾಧನಾಶ್ರೀ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಸಂದರ್ಭ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ, ವಲಯ ಉಪಾಧ್ಯಕ್ಷ ಕಾಶೀನಾಥ್ ಗೋಗಟೆ, ವಲಯ ನಿರ್ದೇಶಕ ವಿಕೇಶ್ ಮಾನ್ಯ, ಜೆಸಿಐ ಬಂಟ್ವಾಳದ ಅಧ್ಯಕ್ಷ ಕಿಶೋರ್ ಕುಮಾರ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಬಂಟ್ವಾಳ: ಶ್ರೀ ಗುರು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ನಿ. 2025-26 ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅಧ್ಯಕ್ಷತೆಯಲ್ಲಿ ಮೆಲ್ಕಾರ್ ನ ಬಿರ್ವ ಸಭಾಂಗಣದಲ್ಲಿ ನಡೆಯಿತು. ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ, ಮಹಾಸಭೆಯ ಕಾರ್ಯಕಲಾಪವನ್ನು ನಡೆಸಿ ಮಾತನಾಡಿದ ಅವರು ಸಂಘವು ವರದಿ ಸಾಲಿನಲ್ಲಿ 130.67 ಕೋಟಿ ರೂ. ಠೇವಣಿ ಸಂಗ್ರಹಿಸಿದೆ.52.73 ಕೋಟಿ ಸಾಲ ಹಂಚಿಕೆ ಮಾಡಿ, 47.09 ಕೋಟಿ ರೂ. ಸಾಲ ವಸೂಲಾತಿ ಮಾಡಿದೆ. 27.62 ಕೋಟಿ ರೂ. ಹೊರಬಾಕಿ ಇದೆ. 5.75 ಕೋಟಿ ರೂ. ಹೂಡಿಕೆ ಮಾಡಿದೆ. 32 ಸ್ವಸಹಾಯ ಗುಂಪುಗಳಿದ್ದು 296 ಸದಸ್ಯರು ಅದರಲ್ಲಿ ತೊಡಗಿಸಿಕೊಂಡಿದ್ದಾರೆ. 35.64 ಲಕ್ಷ ಸಾಲ ಹೊರ ಬಾಕಿ ಇದೆ. 2025-26 ರಲ್ಲಿ ಸಂಘ ಒಟ್ಟು 246.49 ಕೋಟಿ ರೂ.ವಹಿವಾಟು ನಡೆಸಿ 42.75 ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ. 15 ಡಿವಿಡೆಂಟ್ ನೀಡುವುದಾಗಿ ಘೋಷಿಸಿದರು. ಎಲ್ಲರನ್ನೂ ಒಟ್ಟುಗೂಡಿಸಿ ಕೊಂಡು ಸಂಘ ಕಟ್ಟಬೇಕು ಎನ್ನುವುದು ನಮ್ಮಕನಸು. ಈ ಸಂಸ್ಥೆಯ…
ಬಂಟ್ವಾಳ: ಸಮಾಜ ಸೇವೆ ಮನುಷ್ಯನ ಆಂತರ್ಯದಲ್ಲಿರುವ ಒಳ್ಳೆಯ ಗುಣ. ಕೃಷ್ಣ ಕುಮಾರ್ ಪೂಂಜ ಅವರ ಮೂಲಕ ಸೇವಾಂಜಲಿ ಸಂಸ್ಥೆಯ ಸೇವಾ ಕಾರ್ಯದ ಪ್ರಯೋಜನ ಈ ಭಾಗದ ಜನರಿಗೆ ಸಿಗುತ್ತಿದೆ ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್ ಪ್ರಕಾಶ್ ಕಾರಂತ್ ಹೇಳಿದರು. ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಸೇವಾಂಜಲಿ ಸಭಾಗೃಹದಲ್ಲಿ ಕ್ಷಯ ರೋಗಿಗಳಿಗೆ ಪೌಷ್ಟಿಕಾಹಾರ ವಿತರಿಸಿ ಮಾತನಾಡಿದರು. ಇಂದು ನೆರವು ಪಡೆಯುತ್ತಿರುವ ರೋಗಿಗಳು ರೋಗ ಗುಣಮುಖರಾದ ಬಳಿಕವೂ ಸೇವಾಂಜಲಿಯತ್ತ ಹಿಂದಿರುಗಿ ನೋಡುವ ಕಾರ್ಯ ಆಗಬೇಕಿದೆ. ನಾವು ಸಾಗಿ ಬಂದ ಹಾದಿಯ ಗುರುತನ್ನು ನೆನೆಪಿಸಿಕೊಳ್ಳಬೇಕು ಎಂದು ತಿಳಿಸಿದರು. ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ರವಿಚಂದ್ರ ಬಂಟ್ವಾಳ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕ್ಷಯ ರೋಗಿಗಳಿಗೆ ಆಹಾರದ ಕಿಟ್ ನೀಡುವ ಮಹೋನ್ನತ ಕಾರ್ಯವನ್ನು ಸೇವಾಂಜಲಿ ಸಂಸ್ಥೆ ಮಾಡುತ್ತಿದೆ. ಇದು ಇತರ ಸಂಘ ಸಂಸ್ಥೆಗಳಿಗೆ ಮಾದರಿ ಎಂದು ತಿಳಿಸಿದರು. ಸದಾನಂದ ಆಳ್ವ ಅರ್ಕುಳ ಕಂಪ ಶುಭ ಹಾರೈಸಿದರು. ವೇದಿಕೆಯಲ್ಲಿ…
ಬಂಟ್ವಾಳ: ಹಗುರ, ಸುರಕ್ಷಿತ ಹಾಗೂ ನಾಲ್ಕೇ ಗಂಟೆಗಳಲ್ಲಿ ವಿತರಣೆಯ ಗುರಿ ಹೊಂದಿರುವ ಭಾರತ್ ಪೆಟ್ರೋಲಿಯಂ ಸಂಸ್ಥೆ ಬಿಡುಗಡೆ ಮಾಡಿರುವ ಹೊಸ ತಲೆಮಾರಿನ ಫೈಬರ್ ಕಾಂಪೊಸಿಟ್ ಎಲ್.ಪಿ.ಜಿ. ಸಿಲಿಂಡರ್ ಭಾರತ್ ಗ್ಯಾಸ್ ಲೈಟ್ ಜಿಪ್ ಬಂಟ್ವಾಳದ ಭದ್ರಾ ಗ್ಯಾಸ್ ಏಜನ್ಸೀಸ್ ನಲ್ಲಿ ಶುಕ್ರವಾರ ಬಿಡುಗಡೆಗೊಂಡು, ವಿತರಣೆ ಆರಂಭಿಸಿತು. ಭಾರತ್ ಪೆಟ್ರೋಲಿಯಂ ಸಂಸ್ಥೆಯ ಟೆರಿಟರಿ ಮ್ಯಾನೇಜರ್ ಸಂದೀಪ್ ಕುಮಾರ್ ರೈನಾ ಮಾತನಾಡಿ, ಇದು ಭವಿಷ್ಯದ ಅನಿಲ ಸಿಲಿಂಡರ್ ಆಗಲಿದ್ದು, ಬಂಟ್ವಾಳಕ್ಕೆ ಪರಿಚಯಿಸಿದ ಭದ್ರಾ ಗ್ಯಾಸ್ ನ ಮಂಜುನಾಥ್ ಆಚಾರ್ಯ ಅವರ ಪ್ರಯತ್ನ ಶ್ಲಾಘನೀಯವಾಗಿದ್ದು, ಇಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿರುವುದು ಗಮನಾರ್ಹ ಎಂದರು. ಸಾಂಪ್ರದಾಯಿಕ ಗ್ಯಾಸ್ ಸಿಲಿಂಡರ್ ಗಳಿಗಿಂತ ಇದು ಹೆಚ್ಚು ಸುರಕ್ಷಿತ ಹಾಗೂ ಸುಲಭವಾಗಿ ಮಹಿಳೆಯರು ಬಳಸಬಹುದಾದ ಆಧುನಿಕ ವಿನ್ಯಾಸಗಳನ್ನು ಒಳಗೊಂಡಿದೆ ಎಂದವರು ಹೇಳಿದರು. ಬಂಟ್ವಾಳದ ಕಾರ್ಮಿಕ ಇಲಾಖೆ ನಿರೀಕ್ಷಕಿ ಲವೀನಾ ಡಿಸೋಜ ಉದ್ಘಾಟಿಸಿ ಮಾತನಾಡಿ, ಹೊಸತನದೊಂದಿಗೆ ಉದ್ಯಮಗಳು ಮುನ್ನಡೆಯುವ ಸಂದರ್ಭ, ಕಾರ್ಮಿಕರಿಗೂ ಉದ್ಯೋಗಗಳು ದೊರಕುತ್ತದೆ ಎಂದು ಶುಭ ಹಾರೈಸಿದರು. ಮಾರುಕಟ್ಟೆ ಪ್ರಬಂಧಕ ದರ್ಶಿತ್…
ಬಂಟ್ವಾಳ: ಆಹಾರದಲ್ಲಿ ಶುದ್ದತೆಯ ಜೊತೆಗೆ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು, ಆಹಾರ ಸುರಕ್ಷತೆಯ ದೃಷ್ಟಿಯಿಂದ ಅಧಿಕೃತವಾದ ನಿಯಮ, ರೂಪುರೇಷೆಗಳನ್ನು ಜಾರಿಗೆ ತರಲು ಉದ್ದೇಶಿಸಿದ್ದು, ಕ್ಯಾಟರಿಂಗ್ ಮಾಲಕರ ಸಂಘದ ಸಲಹೆ ಅಗತ್ಯವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಯು.ಟಿ.ಖಾದರ್ ಹೇಳಿದರು. ಬಿ.ಸಿ.ರೋಡಿನ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಕ್ಯಾಟರಿಂಗ್ ಮಾಲಕರ ಸಂಘ ಮಂಗಳೂರು ಇದರ ಬಂಟ್ವಾಳ ವಲಯದ ಪದಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಜನಸಾಮಾನ್ಯರಿಗೆ ಬೇಕಾದ ಆಹಾರ ವ್ಯವಸ್ಥೆಯನ್ನು ನೀಡುವ ಕಾರ್ಯ ಸಮಾಜಕ್ಕೆ ದೊಡ್ಡ ಕೊಡುಗೆಯಾಗಿದೆ. ಯಾವುದೇ ಕಾರ್ಯಕ್ರಮದಲ್ಲಿ ಕ್ಯಾಟರಿಂಗ್ ವ್ಯವಸ್ಥೆ ಚೆನ್ನಗಿದ್ದರೆ ಆ ಕಾರ್ಯಕ್ರಮವೇ ಚೆನ್ನಗಿದ್ದಂತೆ. ಸಭೆಯನ್ನು ಸುಧಾರಿಸಿಕೊಂಡು ಹೋಗುವ ಶಕ್ತಿಯನ್ನು ದೇವರು ಕ್ಯಾಟರಿಂಗ್ ಉದ್ದಿಮೆದಾರರಿಗೆ ನೀಡಿದ್ದಾರೆ. ಜಿಲ್ಲೆಯ ಕ್ಯಾಟರಿಂಗ್ ಉದ್ಯಮಕ್ಕೆ ಒಳ್ಳೆಯ ಹೆಸರಿದೆ. ಒಗ್ಗಟ್ಟಿನ ಕ್ಯಾಟರಿಂಗ್ ಸಂಘಟನೆ ನಮ್ಮ ಜಿಲ್ಲೆಯಲ್ಲಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಪುತ್ತೂರು ಕುಂಬಾರ ಗುಡಿಕೈಗಾರಿಕೆಯ ಅಧ್ಯಕ್ಷ ಭಾಸ್ಕರ ಎಂ. ಪೆರುವಾಯಿ ಮಾತನಾಡಿ ರುಚಿಕರ ಆಹಾರ ತಯಾರಿಸುವುದರ ಜೊತೆಗೆ ಗುಣಮಟ್ಟ,…








