Author: admin
ಬಂಟ್ವಾಳ: ಅಮ್ಮಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಕಳೆದ ಸಾಲಿನಲ್ಲಿ ಒಟ್ಟು 277.22 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ, ರೂ 1.13 ಕೋಟಿ ಮೊತ್ತದ ಲಾಭ ಗಳಿಸುವ ಮೂಲಕ ಸದಸ್ಯರಿಗೆ ಶೇ10ರಷ್ಟು ಲಾಭಾಂಶ ವಿತರಿಸುತ್ತಿದೆ ಎಂದು ಸಂಘದ ಅಧ್ಯಕ್ಷೆ ಮಲ್ಲಿಕಾ ವಿ ಶೆಟ್ಟಿ ಹೇಳಿದರು. ತೊಡಂಬಿಲ ಸೇಕ್ರೆಡ್ ಹಾರ್ಟ್ ಚರ್ಚ್ ಹಾಲ್ ನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘವು ಸದಸ್ಯರಿಗೆ ಅನೇಕ ಯೋಜನೆಗಳನ್ನು ರೂಪಿಸಿದ್ದು ಅದರ ಸದುಪಯೋಗ ಪಡೆಯುವಂತೆ ವಿನಂತಿಸಿದರು, ಸಂಘವು ಅಡಿಟ್ ವರ್ಗಿಕರಣದಲ್ಲಿ “ಎ” ಸ್ಥಾನಮಾನ ಪಡೆದು, ಸಾಲ ವಸೂಲಾತಿಯಲ್ಲಿ ಶೇ 99.40 ಪ್ರಗತಿ ದಾಖಲಿಸಿದೆ ಎಂದರು. ವಾರ್ಷಿಕ ಮಹಾ ಸಭೆಯನ್ನು ಸಂಘದ ಹಿರಿಯ ಸದಸ್ಯರಾದ ಪದ್ಮನಾಭ ರಾವ್, ರಾಘವನ್ ನಾಯರ್, ಮೊಂತು ಡಿ ಸೋಜಾ, ಪಿಲಿಪ್ ಮೊಂತೆರೋ, ಪ್ಲಾವಿಯ ಮೊಂತೆರೋ, ಉದ್ಘಾಟಿಸಿದರು. ಇದೇ ವೇಳೆ ಸಂಘದ ಸಿಇಒ ಅಜಯ್ ಕುಮಾರ್ ಅಜಿಲ ವಾರ್ಷಿಕ ವರದಿ ಮಂಡಿಸಿ, ರೂ47.85ಕೋಟಿ ಠೇವಣಿ ಸಂಗ್ರಹ,…
ಬಂಟ್ವಾಳ: ನರಿಕೊಂಬು ಗ್ರಾಮದ ಅರುಂಧತಿ ಸಂಜೀವಿನಿ ಒಕ್ಕೂಟದ ಮಹಾಸಭೆಯು ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಕಾರ್ಯಕ್ರಮದಲ್ಲಿ ನರಿಕೊಂಬು ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕುಮಾರ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹರೀಶ್ ಎಚ್, ಎಸ್ ಡಿಎ ಗೋಪಾಲ್ ಬಿಸ್ಪೆ, ಒಕ್ಕೂಟದ ಅಧ್ಯಕ್ಷೆ ವಿದ್ಯಾ ಪುಷ್ಪರಾಜ್, ಕೋಶಾಧಿಕಾರಿ ಗೀತಾ ಉಪಸ್ಥಿತರಿದ್ದರು. ಕೃಷಿ ಇಲಾಖೆಯ ಹನುಮಂತ ಸದಸ್ಯರಿಗೆ ಅಣಬೆ ಹಾಗೂ ಮಲ್ಲಿಗೆ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿ ಪುಷ್ಪಲತಾ ಪರಿವರ್ತನಾ ಕಾರ್ಯಕ್ರಮದಡಿ ಮಾದಕ ವ್ಯಸನ ಮುಕ್ತ ಕರ್ನಾಟಕ ಬಗ್ಗೆ ಮಾಹಿತಿ ನೀಡಿ ಪ್ರತಿಜ್ಞೆ ವಿಧಿ ಬೋಧಿಸಿದರು. ಎಸ್ ಡಬ್ಲ್ಯು ಎಂ ವಾಹನ ಚಾಲಕಿ ಮತ್ತು ನಿರ್ವಾಹಕಿಯನ್ನು ಅಭಿನಂದಿಸಲಾಯಿತು. ಎಲ್ ಸಿ ಆರ್ ಪಿ ರಶ್ಮಿ ಸ್ವಾಗತಿಸಿದರು. ಒಕ್ಕೂಟದ ಕಾರ್ಯದರ್ಶಿ ಗಾಯತ್ರಿ 2024-25 ನೇ ಸಾಲಿನ ವರದಿಯನ್ನು ಮಂಡಿಸಿದರು. ರೂಪ ಲೆಕ್ಕಪತ್ರ ಮಂಡಿಸಿದರು.ವೀಣಾ ವಂದಿಸಿದರು.ಪಶು ಸಖಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರು, ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.
ಬಂಟ್ವಾಳ: ದೀನ ದುರ್ಬಲರು, ಹಿಂದುಳಿದ ವರ್ಗಗಳ ಜನರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಹಿಂದುಳಿದ ವರ್ಗದ ಜನರು ಶಿಕ್ಷಣ ವಂತರಾಗಿ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಲು ಕಾರಣಕರ್ತರಾದವರು ಎಂದು ಬಂಟ್ವಾಳ ಪುರಸಭಾಧ್ಯಕ್ಷ ವಾಸು ಪೂಜಾರಿ ಹೇಳಿದರು. ಬಂಟ್ವಾಳ ತಾಲೂಕು ಪಂಚಾಯತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬಂಟ್ವಾಳ ಇದರ ಆಶ್ರಯದಲ್ಲಿ ಬಿ.ಸಿ.ರೋಡಿನ ಎಸ್ ಜೆ ಎಸ್ ಆರ್ ವೈ ಸಭಾಂಗಣದಲ್ಲಿ ನಡೆದ ಡಿ. ದೇವರಾಜ ಅರಸು ಅವರ 110 ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಸಚಿನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನೋಣಯ್ಯ ನಾಯ್ಕ, ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ, ಜಾನುವಾರು ಅಭಿವೃದ್ಧಿ ಅಧಿಕಾರಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ…
ಬಂಟ್ವಾಳ: ಧರ್ಮಸ್ಥಳ ಧರ್ಮ ರಕ್ಷಣಾ ವೇದಿಕೆ ಬಂಟ್ವಾಳ ಇದರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಮೇಲಿನ ಅವಹೇಳನವನ್ನು ಖಂಡಿಸಿ ಜನಾಗ್ರಹ ಸಭೆ ಬಿ.ಸಿ.ರೋಡಿನಲ್ಲಿ ಬುಧವಾರ ನಡೆಯಿತು. ಬಿ.ಸಿ.ರೋಡಿನ ತಾಲೂಕು ಆಡಳಿತ ಸೌಧದ ಮುಂಭಾಗ ನಡೆದ ಸಭೆಯಲ್ಲಿ ಯಕ್ಷಗಾನ ಅರ್ಥಧಾರಿ ಉಜಿರೆ ಅಶೋಕ್ ಭಟ್ ಮಾತನಾಡಿ ದೇಶದ ಅಸ್ಮಿತೆ ಪುಣ್ಯ ಕ್ಷೇತ್ರಗಳಲ್ಲಿದೆ. ಅಂತಹ ಪುಣ್ಯಕ್ಷೇತ್ರಗಳಲ್ಲೊಂದಂತಹ ಧರ್ಮಸ್ಥಳ ಹಾಗೂ ಧರ್ಮಧಿಕಾರಿಯ ವಿರುದ್ರ ಅಪಪ್ರಚಾರ, ಅವಹೇಳನದ ಮೂಲಕ ದೇಶದ ಅಸ್ಮಿತೆಯನ್ನು ನಾಶ ಮಾಡುವ ಕಾರ್ಯ ನಡೆಯುತ್ತಿದೆ. ಕ್ಷೇತ್ರದ ದಾನ ಪರಂಪರೆಯ ಮೇಲೆ ಆಕ್ರಮಣವಾಗುತ್ತಿದೆ. ನಮ್ಮ ಧರ್ಮ ಕ್ಷೇತ್ರದ ವಿರುದ್ಧ ಅಪಚಾರ ಆಗುವಾಗ ನಾವೆಲ್ಲ ಒಟ್ಟಾಗಿ ಮೈ ಕೊಡವಿ ಎದ್ದು ನಿಲ್ಲಬೇಕು, ಧರ್ಮಸ್ಥಳ ಕ್ಷೇತ್ರದ ವಿರುದ್ದ ಅಪಪ್ರಚಾರ ಮಾಡುವವರಿಗೆ ಹಣ ಎಲ್ಲಿಂದ ಬರುತ್ತಿದೆ, ಅವರ ಹಿಂದೆ ಯಾರಿದ್ದಾರೆ ಎನ್ನುವುದು ತನಿಖೆಯಾಗಬೇಕು, ಕ್ಷೇತ್ರದ ಪರವಾದ ಹೋರಾಟ ಅಭಿಯಾನ ಆಗಬೇಕು, ಈ ಒಟ್ಟು ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು. ಬಿ.ಸಿ.ರೋಡಿನ…
ಬಂಟ್ವಾಳ: ಇಲ್ಲಿನ ಫರ್ಲಾ ವೆಲಂಕಣಿ ಮಾತೆಯ ದೇವಾಲಯದಲ್ಲಿ ಭಾರತೀಯ ಕಥೊಲಿಕ್ ಯುವ ಸಂಚಲನ ಫರ್ಲಾ ಘಟಕದ ಆಶ್ರಯದಲ್ಲಿ ಯುವ ಸಂಭ್ರಮ- ೨೦೨೫ ಹಾಗೂ ಭರತ ನಾಟ್ಯದಲ್ಲಿ ವಿಶ್ವ ದಾಖಲೆ ಮಾಡಿದ ರಿಮೊನಾ ಇವೆಟ್ ಪಿರೇರಾ ಇವರ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ದೇವಾಲಯದ ಧರ್ಮಗುರು ವಂದನೀಯ ಗುರು ಮಾರ್ಕ್ ಅರುಣ್ ಡಿಸೋಜ ಆಶೀರ್ವಚನ ನೀಡಿ ಯುವಕರು ದೇಶದ ಶಕ್ತಿ, ಅವರೆಲ್ಲಾ ಏಕತೆ ಮತ್ತು ಛಲದಿಂದ ಒಗ್ಗೂಡಿದರೆ ಮಾತ್ರ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ ಎಂದರು. ಬಳಿಕ ವಿಶ್ವದಾಖಲೆಯ ಸಾಧಕಿ ರಿಮೊನಾ ಇವೆಟ್ ಪಿರೇರಾ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ವಂದನೀಯ ಗುರು ಗಿಲ್ಬರ್ಟ್ ಮಸ್ಕರೇನಸ್, ವಂದನೀಯ ಗುರು ವಿಲ್ಫ್ರೆಡ್ ರೊಡ್ರಿಗಸ್ , ಧರ್ಮಪ್ರಾಂತ್ಯದ ಜೊತೆ ಕಾರ್ಯದರ್ಶಿ ಪ್ಲೋಯ್ಡ್ ವಿನ್ಸೆಂಟ್ ಪಿಂಟೊ, ಸಂಪನ್ಮೂಲ ವ್ಯಕ್ತಿ ಡಾ. ಸ್ಟೀವನ್ ಡಿಸೋಜ, ದೀಪ್ತಿ ಡಿಸೋಜ, ಘಟಕ ಅಧ್ಯಕ್ಷೆ ರೀಮಾ ಮಿನೇಜಸ್, ಚರ್ಚ್ ಪಾಲನಾ ಪರಿಷತ್ ಸದಸ್ಯರು, ಐಸಿಯಂ ಮತ್ತು ವೈಸಿಎಸ್ ಪದಾಧಿಕಾರಿಗಳು ಮತ್ತು ಸಚೇತಕರು…
ಬಂಟ್ವಾಳ: ವಿಶ್ವಕರ್ಮ ಸಮಾಜ ಸೇವಾ ಸಂಘ ಬಂಟ್ವಾಳ ಇದರ ಆಶ್ರಯದಲ್ಲಿ ಶ್ರಾವಣದಲ್ಲಿ ಒಂದು ದಿನ ವಿಶೇಷ ಕಾರ್ಯಕ್ರಮ ಬಂಟ್ವಾಳ ಅಜೆಕಲದ ವಿಶ್ವಕರ್ಮ ಸಭಾಭವನದಲ್ಲಿ ವಿಜ್ರಂಭಣೆಯಿಂದ ನಡೆಯಿತು. ದೀಪ ನಮಸ್ಕಾರ ಪೂಜೆ, ವಿವಿಧ ಮನೋರಂಜನಾ ಆಟಗಳು, ಶ್ರಾವಣ ಮಾಸದ ಪ್ರವಚನ, ಸಭಾ ಕಾರ್ಯಕ್ರಮ, ವಿವಿಧ ಖಾದ್ಯಗಳ ಸಜ ಭೋಜನ, ನೃತ್ಯ ಮೊದಲಾದ ವಿಶೇಷ ಕಾರ್ಯಕ್ರಮಗಳೊಂದಿಗೆ ಸಂಪನ್ನ ಗೊಂಡಿತು. ಸಭಾ ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕಿ ರತ್ನಾವತಿ ಜೆ. ಆಚಾರ್ಯ ಬೈಕಾಡಿ ಉದ್ಘಾಟಿಸಿದರು. ಬಳಿಕ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿ ಅವರು ತುಳುನಾಡಿನಲ್ಲಿ ನಾವು ನಮ್ಮ ಪರಂರಪೆರಯಿಂದ ಬಂದ ಆಚಾರ ವಿಚಾರಗಳನ್ನು ಪಾಲಿಸಿಕೊಂಡು ಅವುಗಳನ್ನು ನಮ್ಮ ಮುಂದಿನ ತಲೆಮಾರಿಗೆ ದಾಟಿಸುವ ಪ್ರಯತ್ನ ಮಾಡಬೇಕಾಗಿದೆ. ನಮ್ಮದೇಶದಲ್ಲಿ ಹಬ್ಬಗಳು ಪ್ರಧಾನ. ಶ್ರಾವಣ ಮಾಸದಲ್ಲಿ ಹಬ್ಬಗಳು ತುಂಬಾ ವಿಶೇಷವಾಗಿದೆ. ಶ್ರಾವಣವನ್ನು ಶಿವನ ಆರಾಧನೆಯ ತಿಂಗಳು ಎನ್ನುತ್ತಾರೆ, ಸಮುದ್ರ ಮಂಥನ ನಡೆದು ಶಿವ ವಿಷ ಸೇವಿಸಿದ್ದು ಶ್ರಾವಣ ಮಾಸದಲ್ಲಿ ಎನ್ನುವ ನಂಬಿಕೆ ಇದೆ. ಸಮುದಾಯದ ಸಂಘಟನೆ ಮಾಡಲು ಈ ಕಾರ್ಯಕ್ರಮ ಒಂದು…
ಬಂಟ್ವಾಳ: ಇಲ್ಲಿನ ಬಂಟ್ವಾಳ ಪೇಟೆಯಿಂದ ಮೂಡಬಿದಿರೆ, ವಾಮದಪದವು ಮತ್ತಿತರ ಭಾಗಗಳಿಗೆ ಹೋಗುವ ಖಾಸಗಿ ಬಸ್ಸುಗಳು ಕೊಟ್ರಮಣ ಗಂಡಿ ತರಕಾರಿ ಅಂಗಡಿ ಬಳಿ ರಸ್ತೆಯಲ್ಲಿಯೇ ನಿಲ್ಲುವುದರಿಂದ ಇತರ ವಾಹನಗಳ ಸಂಚಾರಕ್ಕೆ ಹಾಗೂ ಪಾದಾಚಾರಿಗಳಿಗೆ ತುಂಬಾ ತೊಂದರೆಯಾಗುತ್ತಿರುವ ಹಿನ್ನಲೆಯಲ್ಲಿ ಆ.18 ಸೋಮವಾರದಿಂದ ಕೊಟ್ರಮಣ ಗಂಡಿಯಲ್ಲಿರುವ ಬಸ್ಸು ನಿಲ್ದಾಣದಲ್ಲಿ ಕಡ್ಡಾಯವಾಗಿ ಬಸ್ಸು ನಿಲುಗಡೆ ಮಾಡಬೇಕು, ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆ ಹಾಗೂ ಬಂಟ್ವಾಳ ಪುರಸಭೆ ಜಂಟಿ ಪ್ರಕಟಣೆ ಹೊರಡಿಸಿದೆ. ಬಂಟ್ವಾಳ ಕೊಟ್ರಮಣ ಗಂಡಿಯಲಿ ವಿಶಾಲವಾದ ಬಸ್ಸು ತಂಗುದಾಣ, ಪ್ರಯಾಣಿಕರ ತಂಗುದಾಣ ಸಹಿತ ಸುಸಜ್ಜಿತ ಶೌಚಾಲಯ ವ್ಯವಸ್ಥೆ ಇದ್ದರೂ ಕೂಡ ಹಲವು ವರ್ಷಗಳಿಂದ ಮೂಡಬಿದಿರೆ, ವಾಮದಪದವು ಮತ್ತಿತರ ಭಾಗಗಳಿಗೆ ಹೋಗುವ ಖಾಸಗಿ ಬಸ್ಸುಗಳು ಬಸ್ಸು ನಿಲ್ದಾಣದಲ್ಲಿ ನಿಲುಗಡೆಯಾಗದೆ ಬಂಟ್ವಾಳ ಪೇಟೆಯಿಂದ ಬಂಟ್ವಾಳ ಬೈಪಾಸ್‌ಗೆ ತಿರುವು ಪಡೆಯುವ ರಸ್ತೆಯಲ್ಲಿಯೇ ನಿಲುಗಡೆಯಾಗುತ್ತಿದೆ. ಪ್ರಯಾಣಿಕರನ್ನು ಇಲ್ಲಿಯೇ ಹತ್ತಿಸಿಕೊಂಡು ತುಂಬಾ ಹೊತ್ತುಗಳ ಕಾಲ ರಸ್ತೆಯಲ್ಲಿಯೇ ನಿಲುಗಡೆಯಾಗುತ್ತಿರುವುದರಿಂದ ಈ ರಸ್ತೆಯ ಮೂಲಕ ಸಂಚರಿಸುವ ಇತರ ಎಲ್ಲಾ ವಾಹನಗಳಿಗೆ…
ಬಿ .ಸಿ .ರೋಡ್ _ಶ್ರೀ ಸಾಯಿ ಕಿಡ್ ಝೋನ್ ವಿದ್ಯಾ ಸಂಸ್ಥೆಯಲ್ಲಿ ಸ್ವಾತ್ರಂತ್ರ್ಯ ದಿನಾಚರಣೆ.ಬಂಟ್ವಾಳ: ಬಿ ಸಿ ರೋಡ್ ಶ್ರೀ ಸಾಯಿ ಕಿಡ್ ಝೋನ್ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ತೇಜಸ್ವಿನಿ ಪೂಜಾರಿ ಯವರು ಧ್ವಜಾರೋಹಣ ಗೈದರು. ನಂತರ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಿ.ಸಿ.ರೋಡ್ ಅಮರ್ ಗ್ರೂಪ್ ನ ಮಾಲಕ ಕೆ. ಸತೀಶ್ ಕುಮಾರ್ ರವರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವನ್ನು ವಿತರಿಸಿ,ನಂತರ ಶುಭವನ್ನು ಹಾರೈಸಿದರು. ಅತಿಥಿಗಳಾಗಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಾದ ತೇಜಸ್ವಿನಿ ಪೂಜಾರಿ, ಉಪಾಧ್ಯಕ್ಷ ರಾದ ಸುಂದರ್ ಎನ್, ಕೋಶಾಧ್ಯಕ್ಷ ರಾದ ಜಯಶ್ರೀ ರವರು ಭಾಗವಹಿಸಿದರು. ಆದಿತ್ಯವಾರ ದಂದು ಪೋಷಕರಿಗೆ ನಡೆದ ಬೆಂಕಿ ಬಳಸದೆ ಅಡುಗೆ ತಯಾರಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಐತಪ್ಪ ಪೂಜಾರಿ ಯವರು ವಹಿಸಿ ಸ್ವಾತ್ರಂತ್ರ್ಯ ದಿನಾಚರಣೆಯ ಬಗ್ಗೆ ಮಾತನಾಡಿದರು. ವಿದ್ಯಾರ್ಥಿ…
ಬಂಟ್ವಾಳ : ಕಲ್ಲಡ್ಕದ ವಜ್ರಕಾಯ ಫ್ರೆಂಡ್ಸ್ ಇದರ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವವನ್ನು ಕಲ್ಲಡ್ಕ ಸತ್ಯದೇವತಾ ಗುಡಿಯ ಬಳಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ನಿವೃತ್ತ ಶಿಕ್ಷಕ ರಾಧಾಕೃಷ್ಣ ಅಡ್ಡಂತಾಯ ರವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಧ್ವಜಾರೋಹಣವನ್ನು ನೆರವೇರಿಸಿದರು. ಅವರು ಮಾತನಾಡಿ ನಮ್ಮದೇಶದ ಸ್ವಾತಂತ್ರ್ಯದ ಹೋರಾಟಕ್ಕೆ ಕೇವಲ 62 ವರ್ಷದ ಇತಿಹಾಸ ವಿರುವುದಲ್ಲ.. ಬದಲಾಗಿ ಈ ದೇಶಕ್ಕೆ ಅಲೆಕ್ಸಾಂಡರ್ ಕ್ರಿ.ಪೂ.327 ದಾಳಿ ಮಾಡಿದಾಗ ಅವನನ್ನು ಎದುರಿಸಿದಂತಹ ಪುರೂರವನಿಂದ ಇಲ್ಲಿಯವರೆಗೆ ಸಾವಿರಾರು ವರ್ಷಗಳ ಕಾಲ ಅನೇಕ ಮಂದಿ ದೇಶಕ್ಕಾಗಿ ಹೋರಾಟ ಮಾಡಿದ್ದಾರೆ ಎಂದರು. ಅತಿಥಿಗಳಾಗಿ ರತ್ನಾಕರ ಶೆಟ್ಟಿ ಕಲ್ಲಡ್ಕ , ಕೃಷ್ಣಪ್ಪ ಕುಲಾಲ್ ಕಲ್ಲಡ್ಕ ಜನಾರ್ಧನ್, ಚೇತನ್ ಟೈಲರ್, ದಾಮೋದರ್ ಪಂಡಿತ್, ನಾರಾಯಣ ಬಂಡಾರಿ, ಪ್ರೇಮ, ಲೀಲಾವತಿ, ಲಕಿತಾ ಆರ್ ಶೆಟ್ಟಿ ಪಾಲ್ಗೊಂಡಿದ್ದರು. ವಜ್ರಕಾಯ ಫ್ರೆಂಡ್ಸ್ ನ ಪ್ರಮುಖರಾದ ವಿಜ್ಞೇಶ್ ಕುಲಾಲ್, ಸತೀಶ್, ಹೊನ್ನಪ್ಪ ದಯಾನಂದ, ಸದಾನಂದ, ತಿಲಕ್ ಕಿರಣ್, ಧನಂಜಯ ಮೊದಲಾದವರು ಉಪಸ್ಥಿತರಿದ್ದರು . ಜಗದೀಶ್ ರೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ್…
ಬಂಟ್ವಾಳ: ಇಲ್ಲಿನ ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 79ನೇ ಸ್ವಾತಂತ್ರ್ಯ ದಿನವನ್ನು ತಾಲೂಕು ಆಡಳಿತ ಸೌಧದ ಮುಂಭಾಗ ಆಚರಿಸಲಾಯಿತು. ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್ ಧ್ವಜಾರೋಹಣ ನೆರವೇರಿಸಿದರು. ಶಾಸಕ ರಾಜೇಶ್ ನಾಯ್ಕ್ ವಿವಿಧ ತುಕುಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಬಳಿಕ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅರ್ಚನಾ ಭಟ್ ಸಂದೇಶ ನೀಡಿ ನಮಗೆ ಸಿಕ್ಕಿರುವ ಸ್ವಾತಂತ್ರ್ಯ ವನ್ನು ದುರುಪಯೋಗ ಪಡಿಸದೆ ರಾಷ್ಟ್ರದ ಪ್ರಗತಿಗೆ ಕೈ ಜೋಡಿಸಬೇಕು ಎಂದರು. ಬಂಟ್ವಾಳ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷ ಸಂದರೂ ಇಂದಿಗೂ ಅನೇಕ ಮಂದಿ ಮೂಲಭೂತ ಸೌಲಭ್ಯದಿಂದ ವಂಚಿತರಾದ ಜನರಿದ್ದಾರೆ. ಅವರಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಮೂಲಭೂತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸ್ಪಂದನೆ ನೀಡುವ ಕಾರ್ಯ ಆಗಬೇಕಿದೆ ಎಂದರು. ಬೂಡ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ ಬಂಟ್ವಾಳದ ಸ್ವಾತಂತ್ರ್ಯ ಆಚರಣೆ ಉತ್ಸಾಹ…








