
ಬಂಟ್ವಾಳ: ಇಲ್ಲಿನ ಲಯನ್ಸ್ ಕ್ಲಬ್ ಬಂಟ್ವಾಳದ 2025-26 ನೇ ಸಾಲಿಗೆ ಅಧ್ಯಕ್ಷರಾಗಿ ಲಯನ್ ರೋಹಿತಾಶ್ವ ಬಂಗಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಲಯನ್ ಡಾ. ದಿವ್ಯ ವಸಂತ್ ಶೆಟ್ಟಿ. ಖಜಾಂಚಿಯಾಗಿ ರಾಮಕೃಷ್ಣ ರಾವ್, ಪ್ರಥಮ ಉಪಾಧ್ಯಕ್ಷರಾಗಿಲಯನ್ ಚಿತ್ರ ಯಡಪಾಡಿತ್ತಾಯ, ಸೇವಾ ಕಾರ್ಯಕ್ರಮ ಗಳ ಸಂಚಾಲಕರಾಗಿ ಲಯನ್ ಮಧ್ವರಾಜ್ ಕಲ್ಮಾಡಿ,
ಶಾಶ್ವತ ಕಾರ್ಯಕ್ರಮಗಳ ಸಂಚಾಲಕರಾಗಿ ಲಯನ್ ಪ್ರಶಾಂತ್ ಕೋಟ್ಯಾನ್ ಹಾಗೂ 11 ನಿರ್ದೇಶಕರು ಆಯ್ಕೆ ಯಾಗಿದ್ದಾರೆ.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರೋಹಿತಾಶ್ವ ಅವರು, ಮಂಗಳ ಪದವು ಹಾಲು ಉತ್ಪದಕಾರ ಸಂಘದ ನಿರ್ದೇಶಕರು, ಅಧ್ಯಕ್ಷರಾಗಿ, ಪಾಣೆ ಮಂಗಳೂರು ರೈತರ ಸೇವಾ ಸಹಕಾರಿ ಸಂಘ ದ ನಿರ್ದೇಶಕರಾಗಿ, ಮಂಗಳ ಪದವು ಭಜನಾ ಮಂದಿರ ದಸ್ಥಾಪಕ ಟ್ರಷ್ಟಿ ಯಾಗಿ ಸಮಾಜ ಮುಖಿ ಕೆಲಸದಲ್ಲಿ ತನ್ನನ್ನು ತಾನೇ ತೊಡಗಿಸಿ ಕೊಂಡಿದ್ದಾರೆ
Advertisement







