Author: admin

ಉಡುಪಿ : ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಓಪನ್ ಚಾಂಪಿಯನ್ ಶಿಪ್ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕಟ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದು ತನಿಷ್ಕ ಪವನ್ ಕುಮಾರ್ ಸಾಧನೆ ಮಾಡಿದ್ದಾಳೆ. ಉಡುಪಿ ಅಜ್ಜರಕಾಡು ಸೈಂಟ್ ಸಿಸಿಲಿಯ ಪ್ರೌಢಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಈಕೆ ಭಾರತೀಯ ರೈಲ್ವೆ ಇಲಾಖೆಯ ಪೊಲೀಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಂಟ್ವಾಳ ತಾಲೂಕಿನ ಕೂರಿಯಾಳದ ಪವನ್ ಕುಮಾರ್ ಮತ್ತು ಅಕ್ಷತಾ ಪವನ್ ಕುಮಾರ್ ದಂಪತಿಯ ಸುಪುತ್ರಿ ಹಾಗೂ ಜಗದೀಶ್ ಭಂಡಾರಿ ಕುರಿಯಾಳ ಮತ್ತು ಮೋಹಿನಿ ಜಗದೀಶ್ ಭಂಡಾರಿ ಅವರ ಮೊಮ್ಮಗಳು. ಇನ್ಸ್ಟಿಟ್ಯೂಟ್ ಆಫ್ ಬುಡಕಾನ್ ಕರಾಟೆ ಮಾರ್ಷಲ್ ಆರ್ಟ್ ನ ತರಬೇತುದಾರ ಸಂತೋಷ್ ಕುಮಾರ್ ಶೆಟ್ಟಿ ಅವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.

Read More

ಮಂಚಿ: ನಮ್ಮ ಆದಾಯದಲ್ಲಿ ಕನಿಷ್ಠ ಒಂದು ಭಾಗವನ್ನು ಸಮಾಜದಲ್ಲಿ ತೀರಾ ಬಡತನದಲ್ಲಿರುವವರಿಗೆ ದಾನ ಮಾಡಿದರೆ ಸಮಾಜದ ಋಣ ತೀರಿಸಿದಂತಗುತ್ತದೆ. ನಾನು ಕೂಡ ಚಿಕ್ಕವನಿದ್ದಾಗ ಬಡತನದ ರುಚಿಕಂಡವನು ನಿಮ್ಮ ಸ್ನೇಹಮಿಲನ ತಂಡದ ಸೇವಾ ಚಟುವಟಿಕೆ ಶ್ಲಾಘನೀಯ.ಪ್ರಸ್ತುತ ಕಾಲದಲ್ಲಿ ಪ್ರತಿಯೊಬ್ಬರೂ ಆರೋಗ್ಯ ವಿಮೆ ಮಾಡಿದರೆ ಆಪತ್ಕಾಲದಲ್ಲಿ ಅದು ನಮ್ಮ ಕೈ ಹಿಡಿಯುತ್ತದೆ ಎಂದು ಹಿರಿಯ ವಕೀಲ ಶ್ರೀಧರ ಶೆಟ್ಟಿ ಪುಳಿಂಚ ತಿಳಿಸಿದರು. ಅವರು ಮಂಚಿಯ ಲಯನ್ಸ್ ಸೇವಾ ಮಂದಿರದಲ್ಲಿ ಜರುಗಿದ ಸ್ನೇಹ ಮಿಲನ ಕಲ್ಲಡ್ಕ ಇದರ 11ನೇ ವರ್ಷದ ವಾರ್ಷಿಕ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ಪ್ರೌಢ ಶಾಲಾ ವಿಭಾಗದ ವಿಜ್ಞಾನ ಮಾದರಿಯಲ್ಲಿ ರಾಷ್ಟ್ರ ಮಟ್ಟದ ಪ್ರದರ್ಶನ ನೀಡಿದ ಜಗನ್ ಏಲ್ತಿಮಾರು ಇವರಿಗೆ ಸಾಧಕ ಸ್ನೇಹಿತ ಪುರಸ್ಕಾರ ನೀಡಲಾಯಿತು. ವರ್ಷಂಪ್ರತಿಯಂತೆ ಈ ವರ್ಷದ ಸಾಂತ್ವನ ನಿಧಿ ರೂ.50 ಸಾವಿರವನ್ನು ಮೂರು ಬಡ ಕುಟುಂಬಗಳಿಗೆ ಹಂಚಿಕೆ ಮಾಡಲಾಯಿತು. ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು ಇದರ ಅಧ್ಯಕ್ಷ ಉಮನಾಥ ರೈ ಮೇರಾವು, ಹಾಲು ಉತ್ಪಾದಕರ ಸಹಕಾರಿ…

Read More

ಬಂಟ್ವಾಳ: ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಇದರ ವಾರ್ಷಿಕ ಮಹಾಸಭೆಯು ನಿತೀಶ್ ಕುಲಾಲ್ ಪಲ್ಲಿಕಂಡ ಅಧ್ಯಕ್ಷತೆಯಲ್ಲಿ ಸ್ಪರ್ಶ ಕಲಾ ಮಂದಿರದಲ್ಲಿ ಭಾನುವಾರ ನಡೆಯಿತು. 2024-25 ಸಾಲಿನ ವರದಿಯನ್ನು ಕಾರ್ಯದರ್ಶಿ ಪುನೀತ್ ಕಾಮಾಜೆ ವಾಚಿಸಿದರು. ಕೋಶಾಧಿಕಾರಿ ಸಂತೋಷ್ ಮಯ್ಯರಬೈಲು ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆಯಲಾಯಿತು. ರಾಜ್ಯಾಧ್ಯಕ್ಷ ಸುಧಾಕರ್ ಸಾಲ್ಯಾನ್ ಉಪಸ್ಥಿತಿಯಲ್ಲಿ 2025- 26 ನೇ ಸಾಲಿಗೆ ಹೊಸ ಪದಾಧಿಕಾರಿಗಳ ಆಯ್ಕೆ ನಡೆದು ಸುಮಿತ್ ಸಾಲ್ಯಾನ್ ಅಧ್ಯಕ್ಷರಾಗಿ , ಜಯಗಣೇಶ್ ಬಂಗೇರ ದಾಸಕೋಡಿ ಪ್ರಧಾನ ಕಾರ್ಯದರ್ಶಿಯಾಗಿ, ಸಂತೋಷ್ ಮಯ್ಯರ ಬೈಲು ಕೋಶಾಧಿಕಾರಿಯಾಗಿ, ದುರ್ಗಾಶ್ರೀ ಪ್ರದೀಪ್ ಮಹಿಳಾ ಸಂಚಾಲಕಿಯಾಗಿ ಮತ್ತು ಎಚ್ಕೆ ನಯನಾಡು ಗೌರವ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಈ ಸಂಧರ್ಭದಲ್ಲಿ ಜಿಲ್ಲೆಯ,ವಿಭಾಗೀಯ ಹಾಗೂ ಬಂಟ್ವಾಳ ಯುವ ವೇದಿಕೆ ಪ್ರಮುಖಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Read More

ಬಂಟ್ವಾಳ: ಬಿ.ಸಿ.ರೋಡು- ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ಬದಿ ಲಯನ್ಸ್ ಕ್ಲಬ್ ಜಿಲ್ಲಾ ಯೋಜನೆಯಾಗಿ ಸಾಲುಮರಗಳನ್ನು ನೆಟ್ಟಿದ್ದು ಬಂಟ್ವಾಳ ಲಯನ್ಸ್ ಕ್ಲಬ್ ಕಳೆದ 4 ವರ್ಷಗಳಿಂದ ನಿರ್ವಹಣೆಯನ್ನು ನಡೆಸಿಕೊಂಡು ಬರುತ್ತಿದೆ. ಲಯನ್ಸ್ ಕ್ಲಬ್ ನ ಜಿಲ್ಲಾ ಗವರ್ನರ್ ಆಗಿದ್ದ ವಸಂತ್ ಕುಮಾರ್ ಶೆಟ್ಟಿಯವರ ಅವಧಿಯಲ್ಲಿ ಜಿಲ್ಲಾ ಯೋಜನೆಯಾಗಿ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಬಿ.ಸಿ.ರೋಡು- ಪುಂಜಾಲಕಟ್ಟೆಯ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲದಲ್ಲಿ ಗಿಡಗಳನ್ನು ನೆಟ್ಟು ಬೆಳೆಸಲಾಗಿತ್ತು. ಇದರ ನಿರ್ವಹಣೆಯ ಜವಾಬ್ದಾರಿಯನ್ನು ಬಂಟ್ವಾಳ ಲಯನ್ಸ್ ಕ್ಲಬ್ ನಡೆಸಿಕೊಂಡು ಬರುತ್ತಿದ್ದು ಬೇಸಿಗೆಯಲ್ಲಿ ಗಿಡಗಳಿಗೆ ನೀರುಣಿಸಿ, ಮಳೆಗಾಲದಲ್ಲಿ ಅಗಲವಾಗಿ ವಿಸ್ತರಿಸಿಕೊಂಡ ಗೆಲ್ಲುಗಳನ್ನು ತೆರವುಗೊಳಿಸಿ ನಿರ್ವಹಣೆ ಮಾಡುತ್ತಿದೆ. ಈ ವರ್ಷವೂ ಕ್ಲಬ್ ಅಧ್ಯಕ್ಷ ರೋಹಿತಾಶ್ವ ಬಂಗ ಅವರ ನೇತೃತ್ವದಲ್ಲಿ ಮರಗಳ ನಿರ್ವಹಣೆ ಕಾರ್ಯ ನಡೆಸಲಾಯಿತು. ಈ ಸಂದರ್ಭ ಮಾಜಿ ಗವರ್ನರ್ ವಸಂತ ಕುಮಾರ್ ಶೆಟ್ಟಿ, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ರೋಹಿತಾಶ್ವ ಬಂಗ, ಕೋಶಾಧಿಕಾರಿ ರಾಮಕೃಷ್ಣ ರಾವ್, ಮಾಜಿ ಅಧ್ಯಕ್ಷರಾದ ಶ್ರೀನಿವಾಸ ಪೂಜಾರಿ, ಪ್ರಶಾಂತ್ ಕೋಟ್ಯಾನ್, ಸದಸ್ಯರಾದ ಸತ್ಯನಾರಾಯಣ…

Read More

ಬಂಟ್ವಾಳ: ಜನರಿಗೆ ಆರೋಗ್ಯ ಭಾಗ್ಯ ಇದ್ದಾಗ ಸಕಲೈಶ್ವರ್ಯವೂ ದೊರೆತಂತೆ, ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನ ಬಡವರ ಪಾಲಿಗೆ ಸ್ವರ್ಗವಾಗಿದ್ದು ಸೇವಾ ಕಾರ್ಯದ ಮೂಲಕ ಜನರಿಗೆ ಸ್ಪಂದನೆಯನ್ನು ನೀಡುತ್ತಿದೆ. ದೀನ ದುರ್ಬಲರ, ರೋಗಿಗಳ ಸೇವೆ ಮಾಡುವ ಮೂಲಕ ಆದರ್ಶ ಕೆಲಸವನ್ನು ಮಾಡುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದ.ಕ.ಜಿಲ್ಲಾ ನಿರ್ದೇಶಕ ದಿನೇಶ್ ಡಿ. ಹೇಳಿದರು. ಕೇಂದ್ರ ಸರ್ಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ಕ್ಷಯರೋಗಿಗಳಿಗೆ ಪೌಷ್ಟಿಕಾಹಾರದ ಕಿಟ್ ವಿತರಿಸಿ ಮಾತನಾಡಿದರು. ಇಂದಿನ ದಿನದಲ್ಲಿ ನಾವು ಸೇವಿಸುವ ಆಹಾರ ವಿಷಯುಕ್ತವಾಗುತ್ತಿದೆ‌ ಯೋಗ, ಪ್ರಾಣಯಾಮದ ಮೂಲಕ ಆರೋಗ್ಯ ರಕ್ಷಣೆ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇಂದು ಕ್ಷಯ ರೋಗಿಗಳು ರೋಗದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಚಿಕಿತ್ಸೆಯ ಜೊತೆಗೆ ಪೌಷ್ಟಿಕಾಹಾರ ಸೇವನೆ ಮಾಡಿದಾಗ ರೋಗ ನಿವಾರಣೆ ಮಾಡಲು ಸಾಧ್ಯವಿದೆ ಎಂದು ತಿಳಿಸಿದರು. ಜನಜಾಗೃತಿ ವೇದಿಕೆ ಸದಸ್ಯ ಸದಾನಂದ ಆಳ್ವ ಕಂಪ ಮಾತನಾಡಿ ಹಿಂದೆ ಭಾರತದಲ್ಲಿ ಕ್ಷಯ ರೋಗಿಗಳ…

Read More

ಕರ್ನಾಟಕ ರಾಜ್ಯ ಟೈಲರ್ ಎಸೋಸಿಯೇಶನ್ ನ ಬಂಟ್ವಾಳ ಕ್ಷೇತ್ರ ಸಮಿತಿಯ ಮಹಾಸಭೆಬಂಟ್ವಾಳ: ಕರ್ನಾಟಕ ರಾಜ್ಯ ಟೈಲರ್ ಎಸೋಸಿಯೇಶನ್ ಬಂಟ್ವಾಳ ಕ್ಷೇತ್ರ ಸಮಿತಿಯ ಮಹಾಸಭೆ, ಟೈಲರ್ ವೃತ್ತಿ ಬಾಂಧವರಿಗೆ ಸನ್ಮಾನ ಮತ್ತು ಟೈಲರ್ ಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಬಿ.ಸಿ.ರೋಡಿನ ಅಂಬೇಡ್ಕರ್ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ನಾರಾಯಣ ಬಿ.ಎ. ಉದ್ಘಾಟಿಸಿದರು. ಅವರು ಮಾತನಾಡಿ ವಾರ್ಷಿಕ ಮಹಾಸಭೆ ಟೈಲರ್ ಗಳ ಹಬ್ಬವಾಗಿದೆ. ಇಂತಹ ಕಾರ್ಯಕ್ರಮದಲ್ಲಿ ಎಲ್ಲರೂ ಜೊತೆಗೂಡಿ ಸಂಘಟನೆಯನ್ನು ಬಲಪಡಿಸುವುದರೊಂದಿಗೆ ನಮ್ಮ ಮುಂದಿನ ಕಾರ್ಯಯೋಜನೆಗಳನ್ನು ರೂಪಿಸಲು ಇದು ವೇದಿಕೆಯಾಗಿದೆ ಎಂದು ತಿಳಿಸಿದರು.ಅಂಚೆ ಇಲಾಖೆಯ ಮಾರುಕಟ್ಟೆ ವಿಸ್ತರಣಾಧಿಕಾರಿ ಗುರುಪ್ರಸಾದ್ ಮಾಹಿತಿ ನೀಡಿ ಟೈಲರ್ ವೃತ್ತಿಯಲ್ಲಿ ತೊಡಗಿಸಿಕೊಂಡ ಬಹುತೇಕರು ಮದ್ಯಮ ವರ್ಗದವರು. ಭವಿಷ್ಯದ ಹಿತದೃಷ್ಟಿಯಿಂದ ಅಂಚೆ ಇಲಾಖೆಯಲ್ಲಿ ಕಡಿಮೆ ಪ್ರೀಮಿಯಂನ ಅಪಘಾತ ಹಾಗೂ ಆರೋಗ್ಯ ವಿಮೆಗಳಿದ್ದು ಮಾಡಿಸಿಕೊಳ್ಳುವಂತೆ ತಿಳಿಸಿದರು. ಕೆಎಸ್‌ಟಿಎ ಬಂಟ್ವಾಳ ಕ್ಷೇತ್ರ ಸಮಿತಿಯ ಅಧ್ಯಕ್ಷ ನಾಗೇಶ್ ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿ ಸದಸ್ಯರ ಸಹಕಾರದಿಂದಾಗಿ ತನ್ನ ಅಧಿಕಾರವಧಿಯಲ್ಲಿ…

Read More

ಬಂಟ್ವಾಳ: ಸ್ನೇಹ ಮಿಲನ ಕಲ್ಲಡ್ಕ ಇದರ 11ನೇ ವಾರ್ಷಿಕೋತ್ಸವ ಮಂಚಿ ಲಯನ್ಸ್ ಸೇವಾ ಮಂದಿರದಲ್ಲಿ ಭಾನುವಾರ ನಡೆಯಿತು. ಕೊಳ್ನಾಡು ಸಾಲೆತ್ತೂರು ಲಯನ್ಸ್ ಕ್ಲಬ್ ನ ಡಾ. ಗೋಪಾಲಕೃಷ್ಣ ಆಚಾರ್ ಮಂಚಿ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ ಅಂತರಾಷ್ಟ್ರೀಯ ಸ್ನೇಹ ದಿನದ ದಿನವೇ ಸ್ನೇಹಕೂಟ ಆಯೋಜನೆಗೊಂಡಿರುವುದು ವಿಶೇಷ. ಸ್ನೇಹ ಮಿಲನದ ಸದಸ್ಯರು ಸಮಾಜಕ್ಕೆ ತಮ್ಮಿಂದಾಗುವ ಸೇವೆ ನೀಡಿರುವುದು ಸಂತೋಷ ತಂದಿದೆ. ಈ ಸಂಸ್ಥೆ ಗಟ್ಟಿಯಾಗಿ ಬೆಳೆಯಲಿ. ಕೃಷ್ಣ ಸುಧಾಮರ ಸ್ನೇಹದಂತೆ ಉಳ್ಳವರು, ಬಡವರು ಎನ್ನುವ ಭೇದವಿಲ್ಲದೆ ಉತ್ತಮ ಬಾಂಧವ್ಯ ಇದ್ದಾಗ ಸಂಘಟನೆ ಇನ್ನಷ್ಟೂ ಬಲಗೊಳ್ಳಲಿದೆ ಎಂದರು. Advertisement ಕಲ್ಲಡ್ಕ ಮ್ಯೂಸಿಯಂನ ಸಂಸ್ಥಾಪಕ ಮಹಮ್ಮದ್ ಯಾಸೀರ್ ಕಲ್ಲಡ್ಕ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದ್ದು ಇಂತಹ ಸಂಘಟನೆಯ ಮೂಲಕ ಹೃದಯ ತಪಾಸಣ ಶಿಬಿರ ಹಮ್ಮಿಕೊಳ್ಳುವ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ತನ್ನಿಂದಾಗುವ ಸಹಕಾರ ನೀಡುವುದಾಗಿ ತಿಳಿಸಿದರು. ಸ್ನೇಹ ಮಿಲನದ ಅಧ್ಯಕ್ಷ ವಿಶ್ವನಾಥ ಅಂಚನ್ ಅಧ್ಯಕ್ಷತೆ ವಹಿಸಿದ್ದರು.ಕೇಶವ ಏಳ್ತಿಮಾರ್ ಅನಿಸಿಕೆ ವ್ಯಕ್ತಪಡಿಸಿದರು. ಸ್ಥಾಪಕ…

Read More

ಬಂಟ್ವಾಳ: ಕರ್ನಾಟಕ ರಾಜ್ಯ ಟೈಲರ್ ಎಸೋಸಿಯೇಷನ್ ಬಂಟ್ವಾಳ ಕ್ಷೇತ್ರ ಸಮಿತಿ ಇದರ ಮಹಾಸಭೆ ಹಾಗೂ ಟೈಲರ್ ವೃತ್ತಿ ಬಾಂಧವರಿಗೆ ಸನ್ಮಾನ ಮತ್ತು ಟೈಲರ್ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಆ. 3ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಬಿ.ಸಿ. ರೋಡಿನ ಅಂಬೇಡ್ಕರ್ ಸಭಾಭವನದಲ್ಲಿ ನಡೆಯಲಿದೆ. ಕೆಎಸ್‌ಟಿಎ ಬಂಟ್ವಾಳ ಕ್ಷೇತ್ರ ಸಮಿತಿಯ ಅಧ್ಯಕ್ಷ ನಾಗೇಶ್ ಎಂ. ಅಧ್ಯಕ್ಷತೆ ವಹಿಸುವರು. ಕೆಎಸ್‌ಟಿಎ ರಾಜ್ಯಾಧ್ಯಕ್ಷ ನಾರಾಯಣ ಬಿ.ಎ., ಪ್ರಧಾನ ಕಾರ್ಯದರ್ಶಿ ಎ. ಪ್ರಜ್ವಲ್ ಕುಮಾರ್, ಉಪಾಧ್ಯಕ್ಷ ಸುರೇಶ್ ಸಾಲ್ಯಾನ್, ಜಿಲ್ಲಾಧ್ಯಕ್ಷೆ ವಿದ್ಯಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮೋಹನ್ ಎಸ್. ಕೋಡಿ, ಕೋಶಾಧಿಕಾರಿ ಚಕ್ರೇಶ್ ಅಮೀನ್, ಉಪಾಧ್ಯಕ್ಷ ದೇಜಪ್ಪ ವಿ. ಪೂಜಾರಿ, ನಿಕಟಪೂರ್ವ ಕೋಶಾಧಿಕಾರಿ ಈಶ್ವರ್ ಕುಲಾಲ್, ಬಂಟ್ವಾಳ ಕ್ಷೇತ್ರ ಸಮಿತಿ ಕಾರ್ಯದರ್ಶಿ ಯಾದೇಶ್ ತುಂಬೆ, ಕೋಶಾಧಿಕಾರಿ ತುಳಸಿ ಆರ್ ಭಾಗವಹಿಸಲಿದ್ದಾರೆ.

Read More

ಬಂಟ್ಚಾಳ: ಮಡಂತ್ಯಾರಿಲ್ಲಿ ನಡೆದ ಜೆಸಿಐ ವಲಯ 15ರ ವ್ಯವಹಾರ ಸಮ್ಮೇಳನ ಮೃದಂಗ ಕಾರ್ಯಕ್ರಮದಲ್ಲಿ ಜೆಸಿಐ ಬಂಟ್ವಾಳದ ಸದಸ್ಯೆ, ಬಂಟ್ಚಾಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಶ್ವಿನಿ ಬಾಲಕೃಷ್ಣ ಅವರಿಗೆ ಸಾಧನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭ ವಲಯಾಧ್ಯಕ್ಷ ಅಭಿಲಾಷ್ ಬಿ.ಎ., ವಲಯ ಉಪಾಧ್ಯಕ್ಷರಾದ ರಂಜಿತ್ ಎಚ್.ಡಿ. , ಸಂತೋಷ್ ಕುಮಾರ್ ಶೆಟ್ಟಿ, ವಲಯಾಧಿಕಾರಿಗಳಾದ ಅಶೋಕ್ ಗುಂಡ್ಯಲ್ಕೆ, ರವಿಚಂದ್ರ ಪಾಟಾಳಿ, ಪೂರ್ವ ವಲಯಾಧಿಕಾರಿಗಳಾದ ರಾಧಕೃಷ್ಣ ಬಂಟ್ವಾಳ, ಡಾ. ಬಾಲಕೃಷ್ಣ ಕುಮಾರ್ ಉಪಸ್ಥಿತರಿದ್ದರು.

Read More

ಬಂಟ್ವಾಳ: ಶ್ರೀ ಸಾಯಿ ಕಿಡ್ ಝೋನ್ ವಿದ್ಯಾ ಸಂಸ್ಥೆ ಹಾಗೂ ರಕ್ಷಕ ಶಿಕ್ಷಕ ಸಂಘದ ಆಶ್ರಯದಲ್ಲಿ ಆಟಿದ ಕೂಟ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು.ಯೆನೆಪೋಯ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಸಹಾಯಕ ಪ್ರಾಧ್ಯಪಕ ಡಾ.ಬಾಲಕೃಷ್ಣ ಕುಮಾರ್ ಉದ್ಘಾಟಿಸಿದರು. ಆಟಿ ತಿಂಗಳ ಮಹತ್ವ ಮತ್ತು ಸಂಸ್ಕೃತಿ ,ಆಚಾರ ವಿಚಾರ ಗಳ ಬಗ್ಗೆ ತಿಳಿಸಿ ಶ್ರೀ ಸಾಯಿ ಕಿಡ್ ಝೋನ್ ಸಂಸ್ಥೆ ಹಲವಾರು ಹೊಸ ಹೊಸ ಕಾರ್ಯಕ್ರಮಗಳ ಮೂಲಕ ಮಾದರಿ ಸಂಸ್ಥೆ ಯಾಗಿ ಬೆಳೆದು ನಿಂತಿದೆ ಎಂದರು.ವೇದಿಕೆ ಯಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ತೇಜಸ್ವಿನಿ ಪೂಜಾರಿ ಹಾಗೂ ಉಪಾಧ್ಯಕ್ಷ ಸುಂದರ್ ಎನ್. ಕೋಶಾಧ್ಯಕ್ಷೆ ಜಯಶ್ರೀ,ಆಡಳಿತ ಮಂಡಳಿಯ ಸದಸ್ಯರಾದ ಆರತಿ ಅಮೀನ್, ರಾಜೇಶ್ ಅಮಿನ್ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಐತಪ್ಪ ಪೂಜಾರಿ ವಹಿಸಿದ್ದರು. ಆಟಿ ದ ಕೂಟ ಕಾರ್ಯಕ್ರಮ ದಲ್ಲಿ ಒಟ್ಟು 49 ಬಗೆ ಬಗೆಯ ತಿಂಡಿ ತಿನಿಸುಗಳನ್ನು ತಯಾರು ಮಾಡಿ ತಂದು ಆಟಿ ದ ಕೂಟ ವನ್ನು…

Read More