ಬಂಟ್ವಾಳ: ಬಿ.ಸಿ.ರೋಡಿನ ಪ್ರತಿಷ್ಠಿತ ಶ್ರೀ ಸಾಯಿ ಕಿಡ್ ಝೋನ್ ವಿದ್ಯಾಸಂಸ್ಥೆಗಳ ರಕ್ಷಕ ಶಿಕ್ಷಕ ಸಂಘದ ವಾರ್ಷಿಕ ಮಹಾ ಸಭೆ ಶನಿವಾರ ಶಾಲೆಯಲ್ಲಿ ನಡೆಯಿತು.ಲೈಫ್ ಸ್ಕಿಲ್ ಟ್ರೈನರ್ ಜೆಸ್ಟಾಲಕ್ಷ್ಮಿ ಇವರು ಪೋಷಕರಿಗೆ ಉಪಯುಕ್ತ ಮಾಹಿತಿ ಗಳನ್ನು ನೀಡಿದರು. ಬಳಿಕ 2024 ರ ಸಾಲಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಅತ್ತ್ಯುತ್ತಮ ಸೇವೆ ಸಲ್ಲಿಸಿ ಮುಖ್ಯಮಂತ್ರಿಯಿಂದ ಚಿನ್ನದ ಪದಕ ಪಡೆದ ಸಂಸ್ಥೆಯ ಪೋಷಕ ಸಿಟಿ ಕ್ರೈಂ ಬ್ರಾಂಚ್ ನ ಸಿಎಚ್ ಸಿ ಸುಧೀರ್ ಕುಮಾರ್ ಜಾರಂದಗುಡ್ಡೆ ಅವರನ್ನು ರಕ್ಷಕ ಶಿಕ್ಷಕ ಸಂಘದ ವತಿಯಿಂದ ಸನ್ಮಾನಿಸಲಾಯಿತು.


ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಐತಪ್ಪ ಪೂಜಾರಿ ,ಸಂಘದ ಅಧ್ಯಕ್ಷ ಜ್ಞಾನೇಶ್ ರಾವ್,ಉಪಾಧ್ಯಕ್ಷೆ ಸುಪ್ರೀತ, ಕೋಶಾಧ್ಯಕ್ಷ ದೇವೇಂದ್ರಪ್ಪ ,ಆಡಳಿತ ಮಂಡಳಿ ಯ ಸದಸ್ಯರಾದ ರಾಜೇಶ್ ಅಮೀನ್, ಆರತಿ ಅಮೀನ್, ಸಮಿತಿ ಸದಸ್ಯರಾದ ಸುಂದರ್ , ಮಹೇಶ್, ಶೇಖರ್ ಮತ್ತು ಶಾಲಾ ಶಿಕ್ಷಕ ವರ್ಗ ದವರು , ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಶಿಕ್ಷಕಿ ಪೂರ್ಣಿಮಾ ವರದಿ ವಾಚಿಸಿ, ಚೈತ್ರ ವಂದಿಸಿದರು. ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ 2025-26 ನೇ ಸಾಲಿಗೆ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ತೇಜಸ್ವಿನಿ ಪೂಜಾರಿ ಉಪಾಧ್ಯಕ್ಷರಾಗಿ ಸುಂದರ್ ,ಕೋಶಾಧ್ಯಕ್ಷ ರಾಗಿ ಜಯಶ್ರೀ ಮತ್ತು 15 ಜನ ಪೋಷಕರನ್ನು ಕಾರ್ಯಕಾರಿ ಸಮಿತಿ ಗೆ ಆರಿಸಲಾಯಿತು.
