Author: admin

ಪಣಜಿ:ಶ್ರೀ ನಾರಾಯಣ ಗುರು ಚಾರಿಟೇಬಲ್ ಟ್ರಸ್ಟ್ ಗೋವಾ ಮತ್ತು ಬಿಲ್ಲವರ ಎಸೋಸಿಯೇಷನ್ ಗೋವಾ ಇದರ ಆಶ್ರಯದಲ್ಲಿ ಸಾಮೂಹಿಕ ಸತ್ಯ ನಾರಾಯಣ ಪೂಜೆ ಹಾಗೂ ಶ್ರೀ ನಾರಾಯಣ ಗುರು ಜಯಂತಿ ಸೆ.7 ರಂದು ಬೆಳಿಗ್ಗೆ 9ರಿಂದ ಗೋವಾ ಪಣಜಿಯ ಶ್ರೀ ಮಹಾಲಕ್ಷ್ಮೀ ದೇವಾಲಯದ ಸಭಾಂಗಣದಲ್ಲಿ ನಡೆಯಲಿದ್ದು ತುಳುನಾಡಿನ ಬಂಧುಗಳು ಈ. ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಜಂಟಿ ಸಂಘಟನೆ ಪ್ರಕಟಣೆಯಲ್ಲಿ ತಿಳಿಸಿದೆ.

Read More

ಬಂಟ್ವಾಳ: ದ.ಕ. ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲ ಇದರ ನೂತನ ಸ್ಥಳಾಂತರಿತ ಕೇಂದ್ರ ಕಚೇರಿಯು ಸೆ.೫ರಂದು ಶುಕ್ರವಾರ ಬಿ.ಸಿ.ರೋಡಿನ ಕೃಷಿಕ ಸಮಾಜದ ಕಟ್ಟಡದಲ್ಲಿ ಬೆಳಿಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ನೂತನ ಕೇಂದ್ರ ಕಚೇರಿ ಉದ್ಘಾಟಿಸುವರು. ದ.ಕ. ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಭದ್ರತಾ ಕೋಶ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮಾಜಿ ಸಚಿವ ಬಿ.ರಮಾನಾಥ ರೈ, ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ, ದ.ಕ.ಜಿಲ್ಲಾ ಸಹಕಾರ ಸಂಗಗಳ ಉಪನಿಬಂಧಕ ಎಚ್.ಎನ್. ರಮೇಶ್, ಬಂಟ್ವಾಳ ಪುರಸಭೆಯ ಅಧ್ಯಕ್ಷ ವಾಸುಪೂಜಾರಿ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ…

Read More

ಬಂಟ್ವಾಳ: ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳವು 2024-25 ನೇ ಸಾಲಿನಲ್ಲಿ ಸಾಧಿಸಿದ ಸರ್ವತೋಮುಖ ಅಭಿವೃಧಿಗಾಗಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಮಹಾಸಭೆಯಲ್ಲಿ ಸಾಧಾನ ಪುರಸ್ಕಾರ ಪ್ರಶಸ್ತಿ ಸ್ವೀಕರಿತು. ಸಮಾಜ ಸೇವಾ ಸಹಕಾರಿ ಸಂಘವು 2024-25 ನೇ ಸಾಲಿನಲ್ಲಿ ದಾಖಲೆಯ 1158.43 ಕೋಟಿ ವ್ಯವಹಾರ ನಡೆಸಿ 5.04 ಕೋಟಿ ಲಾಭ ಗಳಿಸಿರುತ್ತದೆ. ಸಂಘದ ದುಡಿಯುವ ಬಂಡವಾಳವು 259.66 ಕೋಟಿ ಆಗಿರುತ್ತದೆ ಮತ್ತು ಆಡಿಟ್ ವರ್ಗಿಕರಣದಲ್ಲಿ ಸತತ ‘ಎ’ ಶ್ರೇಣಿಯನ್ನು ಪಡೆದಿರುತ್ತದೆ. ಸಂಘವು ಸಾಧಿಸಿದ ಈ ಎಲ್ಲಾ ಸಾಧನೆಯನ್ನು ಗುರುತಿಸಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರು ಸತತ ನಾಲ್ಕನೇ ಬಾರಿ ಸಾಧಾನ ಪುರಸ್ಕಾರ ನೀಡಿ ಗೌರವಿಸಿದರು. ಸಂಘದ ಅಧ್ಯಕ್ಷ ಸುರೇಶ್ ಕುಲಾಲ್, ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಡಾ. ಎಮ್.ಎನ್. ರಾಜೇಂದ್ರ ಕುಮಾರ್ ಅವರಿಂದ ಪ್ರಶಸ್ತಿ ಸ್ವಿಕರಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಜನಾರ್ದನ ಬೊಂಡಾಲ,…

Read More

ಬಂಟ್ವಾಳ: ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮಹಾಸಭೆಯಲ್ಲಿ 2024-2025ನೇ ಸಾಲಿನ ಸಾಧನಾ ಶ್ರೇಷ್ಠ ಪ್ರಶಸ್ತಿಯನ್ನು ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘಕ್ಕೆ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ ಎನ್ ರಾಜೇಂದ್ರ ಕುಮಾರ್ ನೀಡಿ ಗೌರವಿಸಿದರು. ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಮತಾ ಜಿ. ಸ್ವೀಕರಿಸಿದರು. ನಿರ್ದೇಶಕರಾದ ಅರುಣ್ ಕುಮಾರ್ ಎಂ. ಆಶೀಶ್ ಪೂಜಾರಿ, ಕೆ.ಸುಜಾತಾ ಎಂ. ಹಾಗೂ ಎಜಿಎಂ ಶಿಲ್ಪಾ ಬಿ. ಹಾಗೂ ಶಾಖಾ ವ್ಯವಸ್ಥಾಪಕಿ ಅಶ್ವಿನಿ ಕಿರಣ್ ಹಾಗೂ ಮನೀಶಾ ಹಾಗೂ ಮಹಾಮಂಡಲದ ಸಿ ಇ ಒ ಕಿಶೋರ್ ಉಪಸ್ಥಿತರಿದ್ದರು. ಸಹಕಾರ ಸಂಘಗಳ ಉಪನಿಬಂಧಕ ಹೆಚ್ ಎನ್ ರಮೇಶ್,ಡಿ ಸಿ ಸಿ ಬ್ಯಾಂಕಿನ ನಿರ್ದೇಶಕರಾದ ಶಶಿಕುಮಾರ್ ರೈ, ಭಾಸ್ಕರ್ ಎಸ್ ಕೋಟ್ಯಾನ್, ಸದಾಶಿವ ಉಳ್ಳಾಲ,ಎಸ್ ಎನ್ ಮನ್ಮಥ,ಅಶೋಕ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು

Read More

ಬಂಟ್ವಾಳ: ಸೌತ್ ಕೆನರಾ ಫೋಟೊಗ್ರಾಫರ್ ಅಸೋಸಿಯೇಶನ್(ರಿ) ಇದರ ಬಂಟ್ವಾಳ ವಲಯದ ರಜತ ಸಂಭ್ರಮದ ಪ್ರಯುಕ್ತ ಬಂಟ್ವಾಳ ತಾಲೂಕಿನ ಮಕ್ಕಳಿಗೆ ಆನ್ ಲೈನ್ ಚಿತ್ರ ಬಿಡಿಸುವ ಸ್ಪರ್ಧೆ ( 8 ರಿಂದ 10 ನೇ ತರಗತಿಯ ಮಕ್ಕಳಿಗೆ ) ಆಯೋಜಿಸಲಾಗಿದೆ. ಚಿತ್ರದ ವಿಷಯ ಚೌತಿಯ ಸಂಭ್ರಮವಾಗಿದ್ದು ತಾವು ಬಿಡಿಸಿದ ಚಿತ್ರವನ್ನು ಸೆ.3 ಬುಧವಾರದೊಳಗಾಗಿ 9741480614 ಈ ನಂಬರಿನ ವಾಟ್ಸಫ್ ಮೂಲಕ ಕಳುಹಿಸಲು ಕೋರಲಾಗಿದೆ. ಸೂಚನೆಗಳು : *ಎ4 ಅಳತೆಯ ಕಾಗದದ ಮೇಲೆ ಚಿತ್ರ ಬಿಡಿಸಿ ಕಳುಹಿಸುವುದು. * ಚಿತ್ರದ ಕೆಳಗೆ ಮೊಬೈಲ್ ಸಂಖ್ಯೆಯನ್ನು ನಮೂದಿಸುವುದು. * ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಿರುವುದು. * ವಿಜೇತರಿಗೆ ಗೌರವ ಧನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. * ಸಂಘಟಕರ ತೀರ್ಮಾನವೇ ಅಂತಿಮ. * ವಿಜೇತರಾದ ಮಕ್ಕಳು ಸಮಾರಂಭದ ದಿನ ತಾವು ಬಿಡಿಸಿದ ಚಿತ್ರವನ್ನು ಸಂಘಟಕರ ಸಮಕ್ಷಮದಲ್ಲಿ ಮತ್ತೊಮ್ಮೆ ಬಿಡಿಸಬೇಕು. * ವಿಜೇತರಾದ ಮಕ್ಕಳಿಗೆ 05-09-2025 ರಂದು ನಡೆಯುವ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ…

Read More

ಬಂಟ್ವಾಳ: ಇಲ್ಲಿನ ಶ್ರೀ ಇರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ತಾಳಮದ್ದಲೆ ಸೇವೆ ಒಂದು ತಿಂಗಳ ಪರ್ಯಂತ ನಡೆಯಿತು. ಭಾನುವಾರ ದೇವಳದಲ್ಲಿ ಹಿರಿಯ ಅರ್ಥಧಾರಿ ಸಾಹಿತಿ ಪ್ರೋ. ಎಂ.ಎಲ್. ಸಾಮಗ, ಹವ್ಯಾಸಿ ಭಾಗವತ ಶ್ರೀಧರ ಪೂಜಾರಿ ಬಂಟ್ವಾಳ ಅವರನ್ನು ಸನ್ಮಾನಿಸಲಾಯಿತು. ದೇವಳದ ಆಡಳಿತ ಮೋಕ್ತೇಸರ ಅಶೋಕ್ ಶೆಣೈ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಮುರಳೀಧರ ನೇರಂಕಿ ಸ್ವಾಗತಿಸಿದರು. ನಾಗೇಂದ್ರ ಪೈ ವರದಿ ವಾಚಿಸಿದರು. ದೇವದಾಸ ಅರ್ಕುಳ ಹಾಗೂ ವಾಮನ ಪಾಣೆಮಂಗಳೂರು ಸನ್ಮಾನ ಪತ್ರ ವಾಚಿಸಿದರು. ಪಿ. ವಸಂತ ಪ್ರಭು ವಂದಿಸಿದರು. ಸಂಕಪ್ಪ ಶೆಟ್ಟಿ ಸಂಚಯಗಿರಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಸೀತಾ ಪರಿತ್ಯಾಗ ಮತ್ತು ಗಂಗಾ ಸಾರಥ್ಯ ತಾಳಮದ್ದಲೆ ನಡೆಯಿತು.

Read More

ಬಂಟ್ವಾಳ: ಸಾಹಿತ್ಯ, ಸಂಸ್ಕತಿ, ಸಂಘಟನೆ, ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಆಳ್ವರ ಬರೆದದ್ದು ಕಡಿಮೆ ಓದಿದ್ದು ಹೆಚ್ಚು. ಅವರು ಭಾವನಾತ್ಮಕ ಜೀವಿ, ಕವಿ ಹೃದಯಿ. ಅವರ ಬಗ್ಹೆ ಬರೆದಿರುವ ಪುಸ್ತಕ ದ ತೋರಣ ಹಾಗೂ ಹೂರಣ ಅದ್ಭುತವಾಗಿದೆ ಎಂದು ಎಂದು ಜಾನಪದ ವಿದ್ವಾಂಸ, ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ್ ರೈ ಹೇಳಿದರು. ಏರ್ಯ ಲಕ್ಷ್ಮೀನಾರಾಯಣ ಆಳ್ವ ಶತಮಾನೋತ್ಸವ ಪ್ರಯುಕ್ತ ಬಂಟ್ವಾಳದ ಅಮ್ಟಾಡಿಯ ಏರ್ಯಬೀಡಿನಲ್ಲಿ ಡಾ.ನಾ. ದಾಮೋದರ ಶೆಟ್ಟಿ ಸಂಪಾದಿತ ಏರ್ಯ ಸಾಹಿತ್ಯ ಮರುಚಿಂತನ ಕೃತಿ ಅನಾವರಣಗೊಳಿಸಿ ಅವರು ಮಾತನಾಡಿದರು. ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರ ಪತ್ನಿ. ಆನಂದಿ ಎಲ್.ಆಳ್ವ ಕಾರ್ಯಕ್ರಮ ಉದ್ಘಾಟಿಸಿದರು.ನಾಡೋಜ ಪ್ರೊ.ಹಂಪ ನಾಗರಾಜಯ್ಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿಗಳಾದ ಡಾ. ಕೆ. ಚಿನ್ನಪ್ಪ ಗೌಡ ಹಾಗೂ ಡಾ. ನಾ. ದಾಮೋದರ ಶೆಟ್ಟಿಯವರಿಗೆ ಏರ್ಯ ಡಾ. ಲಕ್ಷ್ಮೀನಾರಾಯಣ ಆಳ್ವ ಶತಮಾನೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಏರ್ಯಬಾಲಕೃಷ್ಣ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಮರ್ ಟೀಕೆ ಸ್ವಾಗತಿಸಿದರು, ಆರ್. ನರಸಿಂಹ ಮೂರ್ತಿ ವಂದಿಸಿದರು.ಮೈಮ್ ರಾಮ್…

Read More

ಬಂಟ್ವಾಳ: ಭಾರೀ ಮಳೆಯ ಹಿನ್ನೆಲೆಯಲ್ಲಿ ಆ. 28 ಗುರುವಾರದಂದು ಬಂಟ್ವಾಳ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು ಮತ್ತು ಸರಕಾರಿ, ಖಾಸಗಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜಿಗೆ ರಜೆ ನೀಡಿ ಬಂಟ್ವಾಳ ತಹಶಿಲ್ದಾರ್ ಆದೇಶ ಹೊರಡಿಸಿದ್ದಾರೆ.

Read More

ಬಂಟ್ವಾಳ: ಮಂಚಿ ವಲಯ ಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾಟ ಗುರುವಾರ ಸಜೀಪಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಶಾಲಾ ಎಸ್ ಡಿಎಂಸಿ ಕಾರ್ಯಧ್ಯಕ್ಷ ಜಯಪ್ರಕಾಶ್ ಪೆರ್ವ ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ‌ಸದಸ್ಯರಾದ ಸೀತಾರಾಮ ಅಗೋಳಿಬೆಟ್ಟು ಹಾಗೂ ಶಾಲಾ ಹಿರಿಯ ವಿದ್ಯಾರ್ಥಿ ಸಂದೀಪ್ ಸಾಲ್ಯಾನ್ ಶುಭ ಹಾರೈಸಿದರು. ‌ ಪಂಚಾಯತಿ ಸದಸ್ಯ ವಿಶ್ವನಾಥ ಬೆಳ್ಚಾಡ, ಎಸ್ಡಿಎಂಸಿ ಸದಸ್ಯರಾದ ದಾಮೋದರ ಮಡಿವಾಳ ಪಡ್ಪು, ನಳಿನಾಕ್ಷಿ, ಆಯುಷ್ ವೈದ್ಯಾಧಿಕಾರಿ ಡಾ.ಮಣಿಕರ್ಣಿಕಾ, ಪೋಷಕರಾದ ಸಂಜೀವ ಪೂಜಾರಿ , ಅಶೋಕ , ಚಂದ್ರಶೇಖರ, ಸಿಆರ್ ಪಿ ಇಂದಿರಾ ವಲಯ ನೋಡಲ್ ರಫೀಕ್, ರಾಘವೇಂದ್ರ ಉಪಸ್ಥಿತರಿದ್ದರು. ಶಾಲಾ ಉಪಪ್ರಾಂಶುಪಾಲೆ ಜ್ಯೋತಿ ಕುಮಾರಿ ಸ್ವಾಗತಿಸಿದರು,ಶಿಕ್ಷಕಿ ಮೋಕ್ಷಿತಾ ವಂದಿಸಿದರು, ಸಹಶಿಕ್ಷಕ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Read More

ಬಂಟ್ವಾಳ: ಸಿದ್ದಕಟ್ಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ಸದಸ್ಯರಾಗಿ ಬೆಳೆಸಾಲ ಪಡೆದು ಮೃತರಾದ ಸದಸ್ಯರಿಗೆ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ರೈತ ಕಲ್ಯಾಣ ನಿಧಿ ಯೋಜನೆಯಡಿಯಲ್ಲಿ ಮರಣ ಹೊಂದಿದ ಕುಟುಂಬದ ನಾಮಿನಿ 22 ಸದಸ್ಯರುಗಳಿಗೆ ತಲಾ ರೂ.10 ಸಾವಿರದಂತೆ ರೂ.2.20 ಲಕ್ಷ ರೈತ ಕಲ್ಯಾಣ ನಿಧಿಯನ್ನು ಇತ್ತೀಚಿಗೆ ಸಂಘದ ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ ವಿತರಿಸಲಾಯಿತು . ಸಿದ್ದಕಟ್ಟೆ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ರತ್ನಕುಮಾರ್ ಚೌಟ ಮುಖ್ಯಅತಿಥಿಯಾಗಿ ಭಾಗವಹಿಸಿ ರೈತ ಕಲ್ಯಾಣ ನಿಧಿಯನ್ನು ಫಲಾನುಭವಿಗಳಿಗೆ ವಿತರಿಸಿದರು . ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಮಾತಾನಾಡಿ , ಬೆಳೆ ಸಾಲ ಪಡೆದುಕೊಂಡು ಸಂಘದಲ್ಲಿ ವ್ಯವಹಾರ ಮಾಡಿಕೊಂಡು ಬರುತ್ತಿದ್ದ ರೈತ ಸದಸ್ಯರು ಮರಣ ಹೊಂದಿದಾಗ ಕುಟುಂಬಕ್ಕೆ ಆರ್ಥಿಕ ಸಹಕಾರ ನೀಡುವ ಉದ್ದೇಶದಿಂದ ಸಂಘವು ರೈತ ಕಲ್ಯಾಣ ನಿಧಿ ಯೋಜನೆಯನ್ನು ಸ್ಥಾಪಿಸಿ , ಸದ್ರಿ ಯೋಜನೆಯಡಿಯಲ್ಲಿ ಮೃತ ಸದಸ್ಯರ ಕುಟುಂಬಕ್ಕೆ ಸಹಾಯ ಮಾಡುತ್ತಿದೆ ಎಂದು ತಿಳಿಸಿದರು. ಸಂಘದ ಉಪಾಧ್ಯಕ್ಷ…

Read More