Author: admin
ಬಂಟ್ವಾಳ: ಇಲ್ಲಿನ ಸಂಚಯಗಿರಿಯಲ್ಲಿರುವ ನಾಗರಿಕ ಕ್ರಿಯಾ ಸಮಿತಿ ಆಶ್ರಯದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಕ್ರಿಯಾ ಸಮಿತಿಯ ಅಧ್ಯಕ್ಷ ಸುರೇಶ್ ಬಂಗೇರ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿ ಪರಿಸರದ ಸ್ವಚ್ಚತೆಯನ್ನು ಕಾಪಾಡುವ ಸಂಕಲ್ಪ ಕೈಗೊಳ್ಳಬೇಕು ಎಂದರು. ಸಮಿತಿಯ ಮಾಜಿ ಅಧ್ಯಕ್ಷ ಸುಧಾಕರ ಸಾಲ್ಯಾನ್ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿ ಸ್ವಾತಂತ್ರ್ಯ ಸಂಭ್ರಮ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ದೇಶಕ್ಕಾಗಿ ಹೋರಾಡಿದವರನ್ನು ಅನುದಿನವೂ ನೆನೆಪಿಸಿಕೊಳ್ಳಬೇಕು ಎಂದರು. ಸಮಿತಿಯ ಪ್ರಮುಖರಾದ ನರಸಿಂಹ ರಾಜ ಹೊಳ್ಳ, ಹರೀಶ್ ಶೆಣೈ ತಾಯಮ್ಮ, ಎ. ದಾಮೋದರ್ ಸಂಚಯಗಿರಿ, ಧನಂಜಯ ಬಾಳಿಗ ಹಾಗೂ ಸದಸ್ಯರು ಹಾಗೂ ಸಂಚಯಗಿರಿ ನಿವಾಸಿಗಳು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಸಂಕಪ್ಪ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಬಂಟ್ವಾಳ: ಆಲದಪದವು ನೂರುಲ್ ಇಸ್ಲಾಂ ಮದರಸ ಹಾಗೂ ಮಸ್ಜಿದ್ ನಲ್ಲಿ 79 ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಹಿರಿಯರಾದ ಪುತುಮೋನು ಬಸ್ತಿಕೋಡಿ ಧ್ವಜರೋಹಣ ನೆರವೇರಿಸಿದರು. ಮಸೀದಿ ಅಧ್ಯಕ್ಷ ಹಂಝ ಬಸ್ತಿಕೋಡಿ ಮತ್ತು ಇಮಾಮ್ ರಾದ ಅಬೂಬಕ್ಕರ್ ಸಿದ್ದೀಕ್ ಮಹ್ದಾನಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಸಿರಾಜ್ ಬಸ್ತಿಕೋಡಿ, ಕೊಶಾಧಿಕಾರಿ ಇಮ್ರಾನ್ ಬಸ್ತಿಕೋಡಿ ಹಾಗೊ ಹಾಜಿ ಅಬ್ದುಲ್ ರಹಿಮಾನ್ ಬಸೀರ್ ಪಾಲ್ಕೆ ಅಬ್ಬು ನಡಾಯಿ ಹಾಗೊ ಜಮಾತರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.
ಬಂಟ್ವಾಳ: ತಾಲೂಕಿನಲ್ಲಿ ಗರಿಷ್ಠ ಸಂಖ್ಯೆಯ ರೋಟರಿ ಕ್ಲಬ್ ಸಂಸ್ಥೆಗಳು ಸಾಮಾಜಿಕ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ಈ ಪೈಕಿ ಕಡಿಮೆ ಅವಧಿಯಲ್ಲಿ ಗರಿಷ್ಠ ಮಟ್ಟದ ಸಾಧನೆ ಮಾಡಿರುವ ಹೆಗ್ಗಳಿಕೆ ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್‌ಗೆ ಸಲ್ಲುತ್ತದೆ ಎಂದು ಇಂಟರ್‍ಯಾಕ್ಟ್ ಕ್ಲಬ್ ಜಿಲ್ಲಾ ಉಪಾಧ್ಯಕ್ಷ ಬೊಂಡಾಲ ಚಿತ್ತರಂಜನ್ ಶೆಟ್ಟಿ ಹೇಳಿದರು. ಇಲ್ಲಿನ ಅಗ್ರಾರ್ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಇಂಟರ್‍ಯಾಕ್ಟ್ ಕ್ಲಬ್ ಪದಗ್ರಹಣದಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು. ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷ ವಿಜಯ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಅವರು ರೂ.40 ಸಾವಿರ ವೆಚ್ಚದ 11 ಸೂಚನಾ ಫಲಕಗಳನ್ನು ಶಾಲೆಗೆ ಹಸ್ತಾಂತರಿಸಿದರು. ಮುಖ್ಯಶಿಕ್ಷಕಿ ಪ್ರಶಾಂತಿ ಮೋನಿಸ್ ಮಾತನಾಡಿದರು. ವಲಯ ಸೇನಾನಿ ರಾಮಚಂದ್ರ ಶೆಟ್ಟಿಗಾರ್, ಕ್ಲಬ್‌ನ ಕಾರ್ಯದರ್ಶಿ ಮೋಹನ್ ಕೆ. ಶ್ರೀಯಾನ್ ರಾಯಿ, ಮಾಜಿ ಅಧ್ಯಕ್ಷೆ ಶ್ರುತಿ ಮಾಡ್ತಾ, ಆಂಟೋನಿ ಸಿಕ್ವೇರಾ, ಸುರೇಶ ಶೆಟ್ಟಿ, ಅರುಣ್ ಮಾಡ್ತ ಪ್ರಮುಖರಾದ ಪಿ.ಜೆ.ರೋಡ್ರಿಗಸ್, ರಾಜೇಶ ಶೆಟ್ಟಿ ಸೀತಾಳ, ಸದಾನಂದ…
ಬಂಟ್ವಾಳ: ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ನೇತ್ರಾವತಿ ಸಂಗಮ ಲೀಜನ್ ಇದರ ವತಿಯಿಂದ ೭೮ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬುಧವಾರ ಬಂಟ್ವಾಳ ಸರಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಬಂಟ್ವಾಳ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ಸಂದೀಪ್ ಕೆ.ಎಸ್. ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪುಷ್ಪಲತಾ, ಎಸ್‌ಸಿಐ ಅಧ್ಯಕ್ಷ ತಾರಾನಾಥ ಕೊಟ್ಟಾರಿ, ಸ್ಥಾಪಕಾಧ್ಯಕ್ಷ ಜಯಾನಂದ ಪೆರಾಜೆ, ಕಾರ್ಯದರ್ಶಿ ಶೈಲಜಾ ರಾಜೇಶ್, ಸದಸ್ಯರಾದ ರವೀಂದ್ರ ಕುಕ್ಕಾಜೆ, ರೇಖಾರಾವ್, ಸನ್ಮತಿಜಯಕೀರ್ತಿ, ಸಂದೀಪ್ ಸಾಲ್ಯಾನ್, ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಅಧ್ಯಕ್ಷ ಸುಮಿತ್ ಕುಲಾಲ್ ಸೊರ್ನಾಡು ಉಪಸ್ಥಿತರಿದ್ದರು.
ಬಂಟ್ವಾಳ: ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ 2024-25ನೇ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮ ಆಗತ-ಸ್ವಾಗತ ೨೦೨೫ ಬುಧವಾರ ಆಜಾದ್ ಭವನದಲ್ಲಿ ನಡೆಯಿತು. ಗಣ್ಯರಿಂದ ದೀಪ ಪ್ರಜ್ವಲನ, ವಿದ್ಯಾರ್ಥಿಗಳಿಂದ ಸರಸ್ವತಿ ವಂದನೆ, ಬಳಿಕ ಗಣ್ಯ ಅತಿಥಿಗಳು ಅಗ್ನಿಹೋತ್ರಕ್ಕೆ ಹವಿಸ್ಸನ್ನು ಅರ್ಪಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಆರತಿ ಬೆಳಗಿ, ಕುಂಕುಮ ಹಚ್ಚಿ ಸ್ವಾಗತಿಸಲಾಯಿತು. ವಿದ್ಯಾರ್ಥಿಗಳು ಹಿರಿಯರ ಆಶೀರ್ವಾದ ಪಡೆದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಸಂಸ್ಕೃತಿ ಆಧಾರಿತ ಮಹರ್ಷಿ ಶಿಕ್ಷಣದ ಅಗತ್ಯತೆ ಮತ್ತು ಅನಿವಾರ್ಯತೆಯನ್ನು ತಿಳಿಸಿದರು. ವಿದ್ಯಾಕೇಂದ್ರದಲ್ಲಿ ಮಾನವೀಯ ಮೌಲ್ಯಗಳನ್ನೊಳಗೊಂಡ ಶಿಕ್ಷಣ ನೀಡುತ್ತಿರುವುದಾಗಿ ಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಪಿ. ಎಲ್ ಧರ್ಮ, ಭಾಜಪಾ ಕಾಸರಗೋಡು ಇದರ ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ, ಉದ್ಯಮಿ ಬಲರಾಮ ಆಚಾರ್ಯ, ರಾಜಿ ಬಲರಾಮ ಆಚಾರ್ಯ, ಮುರಳೀಧರ, ಮೀರಾ ಮುರಳಿ ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದರು. …
ಬಂಟ್ವಾಳ: ಸೌತ್‌ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬಂಟ್ವಾಳ ವಲಯದ ವಾರ್ಷಿಕ ಸಭೆ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ವಲಯದ ಅಧ್ಯಕ್ಷ ಕಿಶೋರ್ ಎಸ್. ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಅವರು ಮಾತನಾಡಿ ವಲಯವು ರಜತ ಸಂಭ್ರಮವನ್ನು ಆಚರಿಸುತಿದ್ದು, ಈ ಸಂದರ್ಭದಲ್ಲಿ ಸಂಘದ ಸದಸ್ಯರಿಗೆ ಅಂಚೆ ಜೀವ ವಿಮೆಯನ್ನು ಮಾಡಿಸಿದ್ದು, ಮಾತ್ರವಲ್ಲದೆ, ಮುಂದಿನ ದಿನಗಳಲ್ಲಿ ಸಂಘದ ಸದಸ್ಯತ್ವನ್ನು ನವೀಕರಿಸಿದ ಸದಸ್ಯರಿಗೆ ತುರ್ತು ವೈದ್ಯಕೀಯ ಚಿಕಿತ್ಸೆಗೆ ಸಂಘದಿಂದ ಆರ್ಥಿಕ ನೆರವನ್ನು ನೀಡಲಾಗುವುದು ಎಂದು ಹೇಳಿದರು. ಜಿಲ್ಲಾ ಅಧ್ಯಕ್ಷ ಪದ್ಮಪ್ರಸಾದ್ ಜೈನ್ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ, ಜಿಲ್ಲಾ ಕೋಶಾಧಿಕಾರಿ ನವೀನ ರೈ, ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ಆನಂದ್ ಎನ್., ಜಿಲ್ಲಾ ಸಂಚಾಲಕ ಕರುಣಾಕರ ಕಾಣಂಗಿ, ಎಸ್‌ಕೆಪಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷ ಹರೀಶ್ ರಾವ್, ವಲಯದ ಗೌರವಾಧ್ಯಕ್ಷ ಹರೀಶ್ ಕುಂದರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರಶಾಂತ್ ಕಲ್ಲಡ್ಕ ವರದಿಯನ್ನು ವಾಚಿಸಿದರು, ಕೋಶಾಧಿಕಾರಿ ವರುಣ್ ಕಲ್ಲಡ್ಕ ೨೪-೨೫…
ಬಂಟ್ವಾಳ: ದ.ಕ. ಜಿಲ್ಲೆಯ ಕಾರಣಿಕ ದೈವ ಸ್ಥಾನ ಸಜೀಪ ಮೂಡ ಗ್ರಾಮದ ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದಲ್ಲಿ ಆ. 15 ರಂದು ಶುಕ್ರವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅಗೇಲು ಸೇವೆ ನಡೆಯುವುದಿಲ್ಲ ಆ.17 ರಂದು ಆದಿತ್ಯವಾರದಿಂದ ಎಂದಿನಂತೆ ಅಗೇಲು ಸೇವೆ ಮತ್ತು ಕೋಲ ಸೇವೆ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.
ಬಂಟ್ವಾಳ: ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾದ ಬಳಿಕ, ಯುವ ಸಮುದಾಯ ಉದ್ಯೋಗ ಹರಸುತ್ತಾ ನಗರಗಳತ್ತ ಮುಖಮಾಡಿದ್ದು ತುಳುನಾಡಿನ ತರವಾಡು ಮನೆಗಳಲ್ಲಿ ಸೇರುವ ಕುಟುಂಬಿಕರ ಸಂಖ್ಯೆ ಕಡಿಮೆಯಾಗಿತ್ತು. ಬದಲಾವಣೆಯ ಕಾಲಘಟ್ಟದಲ್ಲಿ ಇತ್ತೀಚಿನ ದಿನಗಳಲ್ಲಿ ಕುಟುಂಬಿಕರು, ಯುವ ಸಮುದಾಯ ಮತ್ತೆ ತಮ್ಮ ತರವಾಡು ಮನೆಗಳತ್ತ ಆಗಮಿಸಿ, ಕುಟುಂಬದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಪ್ರವೃತ್ತಿಯನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ. ಇದಕ್ಕೆ ಉದಾಹರಣೆ ಎನ್ನುವಂತೆ ಸಜೀಪಪಡು ಗ್ರಾಮದ ಕೋಟೆಕಣಿಯ ಮುಗ ಮನೆ ಅಂಚನ್ ಕುಟುಂಬಸ್ಥರ ತರವಾಡು ಮನೆಯಲ್ಲಿ ನಡೆದ ಆಟಿಡೊಂಜಿ ಅಂಚನ್ ಕೂಟ ಕುಟುಂಬಿಕರಲ್ಲಿ ಸಂಭ್ರಮದ ವಾತವರಣವನ್ನು ಸೃಷ್ಟಿಸಿದೆ. ಮುಗ ಮನೆಯಲ್ಲಿ ದಿನವಿಡಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ, ಆಟೋಟಗಳಲ್ಲಿ ಕುಟುಂಬ ಸದಸ್ಯರು ಭಾಗವಹಿಸಿ ಸಂಭ್ರಮಿಸಿದರು. ಬೆಳಿಗ್ಗೆ ಆಟಿಡೊಂಜಿ ಅಂಚನ್ ಕೂಟವನ್ನು ಕುಟುಂಬದ ಹಿರಿಯರು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಗಮನೆ ಅಂಚನ್ ಕುಟುಂಬಸ್ಥರ ಸೇವಾ ಟ್ರಸ್ಟ್ ನ ಅಧ್ಯಕ್ಷ ಪ್ರಕಾಶ್ ಅಂಚನ್ ತೆಂಗಿನ ಹೂ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿ ಕುಟುಂಬದಲ್ಲಿ…
ಬಂಟ್ವಾಳ: ಬಿ ಸಿ ರೋಡ್ ಶ್ರೀಸಾಯಿ ಕಿಡ್ ಝೋನ್ ವಿದ್ಯಾ ಸಂಸ್ಥೆಯಲ್ಲಿ ಪೋಷಕರಿಗೆ ಬೆಂಕಿ ಬಳಸದೆ ಅಡುಗೆ ತಯಾರಿ ಮಾಡುವ ಸ್ಪರ್ಧೆ ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಬಿ.ಸಿ.ರೋಡಿನ ಹೋಟೆಲ್ ಪ್ರಿಯದರ್ಶಿನಿ ಮಾಲಕ ಸಂತೋಷ್ ಕುಮಾರ್ ರೈ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಸ್ವಾತಿ ಶೆಟ್ಟಿ ಮಂಗಳೂರು, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ತೇಜಸ್ವಿನಿ ಪೂಜಾರಿ ,ಉಪಾಧ್ಯಕ್ಷ ಸುಂದರ್ ಎನ್, ಕೋಶಾಧ್ಯಕ್ಷೆ ಜಯಶ್ರೀ, ಆಡಳಿತ ಮಂಡಳಿ ಸದಸ್ಯೆ ಆರತಿ ಅಮೀನ್,ಭಾಗವಹಿಸಿದರು. ಸಂಸ್ಥೆಯ ಸಂಚಾಲಕ ಐತಪ್ಪ ಪೂಜಾರಿ ಸ್ವಾಗತಿಸಿ. ಶಿಕ್ಷಕಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು. ಸ್ಪರ್ಧೆಯ ನಿರ್ಣಾಯಕರಾಗಿ ಸ್ವಾತಿ ಶೆಟ್ಟಿ ಮಂಗಳೂರು , ಶಿಕ್ಷಕಿಯರಾದ ಚೈತ್ರ, ಪುಷ್ಪಲತಾ, ಗೀತಾ, ರಂಜಿನಿ, ಶಮ ದಿವ್ಯಾ ಸಹಕರಿಸಿದರು. ರಕ್ಷಕ ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ವೀರಕಂಭ ಗ್ರಾಮದ ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ “ನವಫಲ” ಹಣ್ಣಿನ ತೋಟ ನಿರ್ಮಾಣ ಮಾಡಲಾಯಿತು. ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ವಚನ್ ಶೆಟ್ಟಿ ಹಾಗೂ ಝೋನಲ್ ಲೆಪ್ಟಿನೆಂಟ್ ಸುರೇಶ್ ಸಾಲ್ಯಾನ್ ಹಣ್ಣಿನ ಗಿಡ ನೆಡುವ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಉದ್ದೇಶ ಹಾಗೂ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ಈ ಸಂದರ್ಭ ರೋಟರಿ ಕ್ಲಬ್ ಬಂಟ್ವಾಳ ಟೌನ್ ಕಾರ್ಯದರ್ಶಿ ನಾಗೇಶ್ ಎಂ. ಕೋಶಾಧಿಕಾರಿ ಸೀತಾರಾಮಶೆಟ್ಟಿ ಕಾಂತಾಡಿ, ನಿಕಟಪೂರ್ವ ಕಾರ್ಯದರ್ಶಿ ನಾರಾಯಣ ಸಿ. ಪೆರ್ನೆ, ಸದಸ್ಯರಾದ ಉಮೇಶ್ ಶೆಟ್ಟಿ, ಭಾಸ್ಕರ್, ಶಾಲಾ ಹಿರಿಯ ವಿದ್ಯಾರ್ಥಿ ಚಿನ್ನ ಕಲ್ಲಡ್ಕ ಹಾಗೂ ಶಿಕ್ಷಕರು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕ್ಷಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ ಸ್ವಾಗತಿಸಿದರು, ಸಹಶಿಕ್ಷಕಿ ಸಂಗೀತ ಶರ್ಮ ಕಾರ್ಯಕ್ರಮ ನಿರೂಪಿಸಿದರು.








