
ಬಂಟ್ವಾಳ: ಲಯನ್ಸ್ ಕ್ಲಬ್ ಬಂಟ್ವಾಳದ ವರ್ಷದ ಕೊನೆಯ ಸಭೆ “ವಂದನಾರ್ಪಣೆ” ಕಾರ್ಯಕ್ರಮವು ಇತ್ತೀಚಿಗೆ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ಕ್ಲಬ್ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ರವರು ವರ್ಷದ ಒಟ್ಟು ಚಟುವಟಿಕೆಗಳ ವಿವರಗಳನ್ನು ಸಭೆಯ ಮುಂದಿಟ್ಟು, ನಂತರ ವರ್ಷದ ಪ್ರತೀ ಕಾರ್ಯಕ್ರಮಗಳಿಗೆ ಸಹಕರಿಸಿದ, ಬೆಂಬಲಿಸಿದ ಎಲ್ಲಾ ಸದಸ್ಯರಿಗೆ ಕೃತಜ್ಞತಾಪೂರ್ವಕವಾಗಿ ಮನದಾಳದ ಮಾತುಗಳೊಂದಿಗೆ ಗೌರವಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸ್ಥಾಪಕಾಧ್ಯಕ್ಷ ಲಯನ್ ಡಾ.ಬಿ. ವಸಂತ ಬಾಳಿಗಾ ಮತ್ತು ಪೂರ್ವ ರಾಜ್ಯಪಾಲಮತ್ತು ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷ ಲಯನ್ ವಸಂತ ಕುಮಾರ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದು, ವರ್ಷದ ಚಟುವಟಿಕೆ ಮತ್ತು ಸದಸ್ಯರೆಲ್ಲರ ಬಗೆಗಿನ ಅಧ್ಯಕ್ಷರ ಮನದಾಳದ ಮಾತುಗಳನ್ನೊಳಗೊಂಡ “ಮೆಲುಕು” ಸಂಚಿಕೆ ಬಿಡುಗಡೆ ಗೊಳಿಸಿ, ವರ್ಷದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು.


ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಲಯನ್ ದೇವಿಕಾ ದಾಮೋದರ್, ಕೋಶಾಧಿಕಾರಿ ಲಯನ್ ದೇವಪ್ಪ ಪೂಜಾರಿ, ಲಿಯೋ ಅಧ್ಯಕ್ಷೆ ಖುಷಿ ಟಿ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲೆಯ ನಾಯಕರುಗಳು, ಸಂಸ್ಥೆಯ ಪೂರ್ವಾಧ್ಯಕ್ಷರುಗಳು, ಕುಟುಂಬ ಸದಸ್ಯರು, ಸಂಸ್ಥೆಯ ಹಿತೈಷಿಗಳು ಮತ್ತಿತರರು ಬಾಗವಹಿಸಿದ್ದರು.
Advertisement







