Author: admin

ಬಂಟ್ವಾಳ: ಅಂಕ ಪ್ರಗತಿಯ ಧ್ಯೋತಕವಲ್ಲ. ಸಾಧನೆ ಮಾಡುವವನಿಗೆ ಸುಖ ಸಿಗುವುದಿಲ್ಲ, ಸುಖ ಬಯಸುವವನಿಗೆ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆಯೇ ಗುರಿಯಾಗಿರಬೇಕು ಎಂದು ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ ಹೇಳಿದರು. ಸಜೀಪಮೂಡ ಗ್ರಾಮದ ಸುಭಾಷ್ ನಗರದಲ್ಲಿರುವ ಶ್ರೀ ಗುರು ಕಲ್ಯಾಣ ಮಂಟಪದಲ್ಲಿ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಬ್ರಹ್ಮಶ್ರೀ ನಾರಾಯಣ ಗುರುಗಳು ಬದುಕಿಗೆ ಬೆಳಕು ತೋರಿದವರು. ಸಮಾಜದ ಸ್ಪರ್ಶ, ಅಸ್ಪರ್ಶ್ಯತೆಯನ್ನು ನೀಗಿದವರು.‌ಅವರಿಗೆ ಕೈ ಮುಗಿದಲ್ಲಿ ನಮ್ಮೊಳಗಿನ ಪ್ರತಿಭೆ ಹೊರ ಬರಲು ಸಾಧ್ಯವಿದೆ ಎಂದು ತಿಳಿಸಿದರು. ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ, ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದೆ. ಹಳ್ಳಿಯ ಜನರಿಗೆ ಆರ್ಥಿಕ ಚೈತನ್ಯ ನೀಡಿದೆ ಎಂದು ತಿಳಿಸಿದರು. ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಮಂಚಿ ಕೊಳ್ನಾಡು ಸರಕಾರಿ ಶಾಲೆಯ ಶಿಕ್ಷಕಿ ವಿಜಯ ಲಕ್ಷ್ಮೀ ಕಟೀಲು ಮಾತನಾಡಿ ಶಿಕ್ಷಣ ಇದ್ದಲ್ಲಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಬಹುದು. ಇಂದು ವಿದ್ಯಾರ್ಥಿ ವೇತನ ಪಡೆದಂತೆ ಮುಂದೆ…

Read More

ಬಂಟ್ವಾಳ:ವಿಶ್ವಕರ್ಮ ಸಮಾಜ ಸೇವಾ ಸಂಘ ಬಂಟ್ವಾಳ ಇದರ ಆಶ್ರಯದಲ್ಲಿ ಬಂಟ್ವಾಳದ ಅಜೆಕಲದಲ್ಲಿರುವ ವಿಶ್ವಕರ್ಮ ಸಭಾಭವನದಲ್ಲಿ  32 ನೇ ವರ್ಷದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ನಡೆಯಿತು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ  ಸಮುದಾಯದ ಸಾಧಕರನ್ನು ಗುರುತಿಸುವ ಕಾರ್ಯ ಅಭಿನಂದನೀಯ.  ಸಮಾಜಮುಖಿ ಕಾರ್ಯದಲ್ಲಿ ವಿಶ್ವಕರ್ಮ ಸಂಘ ಸದಾ ತೊಡಗಿಸಿಕೊಳ್ಳಲಿ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು. ಮಾಜಿ ಸಚಿವ ಬಿ.ರಮನಾಥ ರೈ ಮುಖ್ಯ ಅತಿಥಿಯಾಗಿ ಮಾತನಾಡಿ ವಿಶ್ವಕರ್ಮ ಸಮಾಜ ಜಗತ್ತಿನ ಶ್ರೇಷ್ಠ ಸಮಾಜ . ಸಂಖ್ಯಾಬಲದಲ್ಲಿ ಕಡಿಮೆ ಇದ್ದರೂ ಕೂಡ ಕಾರ್ಯವೈಖರಿಯಲ್ಲಿ ಪ್ರಗತಿಪರ ದೃಷ್ಟಿಕೋನ ಇಟ್ಟುಕೊಂಡು ಹೆಚ್ಚಿನ ಕೆಲಸ ಮಾಡಿಕೊಂಡು  ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ತಿಳಿಸಿದರು.  ಎಸ್ ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ ಅಪರೇಟಿವ್ ಸೊಸೈಟಿ ಲಿ. ನ ಅಧ್ಯಕ್ಷ  ಪಿ. ಉಪೇಂದ್ರ ಆಚಾರ್ಯ ಮಾತನಾಡಿ ಸಮಾಜಕ್ಕಾಗಿ ಬದುಕಿದವರನ್ನು ಜಗತ್ತು ಎಂದೂ ಮರೆಯುವುದಿಲ್ಲ. ವೈ…

Read More

ಬಂಟ್ವಾಳ: ಜೆಸಿಐ ಬಂಟ್ವಾಳದ ಜೆಸಿ ಸ್ಪಾಹದ ಸಮಾರೋಪ ಸಮಾರಂಭ ಭಾನುವಾರ ಸಂಜೆ ಬಿ.ಸಿ.ರೋಡಿನ ಅಂಬೇಡ್ಕರ್ ಸಭಾಭವನದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಂಟ್ವಾಳ ತಾಲೂಕು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಮಾತನಾಡಿ ಯುವಕರಿಗೆ ತರಬೇತಿ ನೀಡುವ ಸಂಸ್ಥೆಯಾಗಿರುವ ಜೆಸಿಐ ಬಂಟ್ವಾಳ ಸೇವಾ ಕಾರ್ಯಗಳಲ್ಲೂ ತೊಡಗಿಸಿಕೊಂಡಿರುವುದು ಅಭಿನಂದನೀಯ. ಸಮಾಜದಲ್ಲಿ ಎಲೆಮರೆಯ ಕಾಯಿಯಂತೆ ಸೇವೆ ಮಾಡುವ ಯುವಕರನ್ನು ಗುರುತಿಸಿ ಗೌರವಿಸಿರುವುದು ಶ್ಲಾಘನೀಯ ಎಂದರು. ಜೆಸಿಐ ಬಂಟ್ವಾಳದ ಅಧ್ಯಕ್ಷ ಗಣೇಶ್ ಕೆ. ಕುಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜೇಸಿ ಸಪ್ತಾಹದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳ ವಿವರ ನೀಡಿದರು. ವಿವಿಧ ಕ್ಷೇತ್ರಗಳ ಸಮಾಜ ಸೇವಕರಾದ ವಸಂತ ಮುದಿಮಾರು, ಚಿನ್ನಕಲ್ಲಡ್ಕ, ದೇವದಾಸ್ ನೀರೊಲ್ಬೆ, ಮಹೇಶ್ ಕುಲಾಲ್ ಕಡೇಶಿವಾಲಯ ಅವರಿಗೆ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ನಿಕಟಪೂರ್ವಾಧ್ಯಕ್ಷೆ ರಶ್ಮಿ ಶೆಟ್ಟಿ, ಕಾರ್ಯದರ್ಶಿ ಕಿಶೋರ್ ಕುಮಾರ್ ಆಚಾರ್ಯ, ಕಾರ್ಯಕ್ರಮ ನಿರ್ದೇಶಕ ಸದಾನಂದ ಡಿ. ಬಂಗೇರ, ಲೇಡಿ ಜೆಸಿ ಅಧ್ಯಕ್ಷೆ ಬಬಿತಾ ಗಣೇಶ್ ಉಪಸ್ಥಿತರಿದ್ದರು.

Read More

ಬಂಟ್ವಾಳ: ಸಿದ್ಧಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2024-25 ಸಾಲಿನಲ್ಲಿ ರೂ.545 ಕೋಟಿ ವ್ಯವಹಾರ ನಡೆಸಿ ರೂ.1.93 ಕೋಟಿ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ತಿಳಿಸಿದರು.‌ ಸಿದ್ಧಕಟ್ಟೆಯಲ್ಲಿ ಸಂಘದ ಪ್ರಧಾನ ಕಚೇರಿಯ ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ ಶನಿವಾರ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾಹಿತಿ ನೀಡಿದರು. 2024-25 ನೇ ವರ್ಷದಲ್ಲಿ ವಿವಿಧ ಉದ್ದೇಶಗಳಿಗೆ ಒಟ್ಟು ರೂ.122.33 ಕೋಟಿ ಸಾಲ ವಿತರಿಸಲಾಗಿದ್ದು ಹೊರ ಬಾಕಿ ಸಾಲವು ರೂ.112.32 ಕೋಟಿ ಆಗಿದ್ದು, ವಿತರಿಸಿದ ಸಾಲದಲ್ಲಿ ಶೇ 97ರಷ್ಟು ವಸೂಲಾತಿಯಾಗಿರುತ್ತದೆ. 2024-25 ನೇ ಸಾಲಿನ ವರ್ಷಾಂತ್ಯಕ್ಕೆ ರೂ. 62.19 ಕೋಟಿ ಠೇವಣಿ ಹೊಂದಿದ್ದು, ಸಂಘವು ಕಳೆದ ಹಲವಾರು ವರ್ಷಗಳಿಂದ ಆಡಿಟ್ ವರದಿಯಲ್ಲಿ ಎ ಗ್ರೇಡ್ ನ್ನು ನಿರಂತರವಾಗಿ ಕಾಯ್ದುಕೊಂಡು ಬರಲಾಗಿ ಎಂದರು. ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಲ್ಲಿ ಜಿಲ್ಲಾ ಮಟ್ಟದಲ್ಲಿಯೇ ಗರಿಷ್ಠ ಸಾಧನೆ ಮಾಡಲಾಗಿದೆ ಎಂದು ಹೇಳಿದ ಪ್ರಭು, ಜಿಲ್ಲೆಯಲ್ಲಿ ಮುಂಚೂಣಿಯಲ್ಲಿರುವ ಬೆರಳೆಣಿಕೆಯ ಸಹಕಾರಿ ಸಂಘಗಳಲ್ಲಿ ನಮ್ಮ…

Read More

ಉಡುಪಿ : ಉಡುಪಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಓಪನ್ ಚಾಂಪಿಯನ್ ಕಟ ಮತ್ತು ಕಮಿಟೆ ವಿಭಾಗದಲ್ಲಿ ತನಿಷ್ಕ ಪವನ್ ಕುಮಾರ್2 ಚಿನ್ನದ ಪದಕಗಳನ್ನು ಪಡೆದು ವಿಜಯ ಶಾಲಿಯಾಗಿದ್ದಾರೆ . ಉಡುಪಿ ಅಜ್ಜರಕಾಡು ಸೈಂಟ್ ಸಿಸಿಲಿಯ ಪ್ರೌಢಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ. ಈಕೆ ಭಾರತೀಯ ರೈಲ್ವೆ ಇಲಾಖೆಯ ಪೊಲೀಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಂಟ್ವಾಳ ತಾಲೂಕಿನ ಕೂರಿಯಾಳದ ಪವನ್ ಕುಮಾರ್ ಮತ್ತು ಅಕ್ಷತಾ ಪವನ್ ಕುಮಾರ್ ದಂಪತಿಯ ಸುಪುತ್ರಿ ಹಾಗೂ ಜಗದೀಶ್ ಭಂಡಾರಿ ಕುರಿಯಾಳ ಮತ್ತು ಮೋಹಿನಿ ಜಗದೀಶ್ ಭಂಡಾರಿ ಅವರ ಮೊಮ್ಮಗಳು. ಇನ್ಸ್ಟಿಟ್ಯೂಟ್ ಆಫ್ ಬುಡಕೊನ್ ಕರಾಟೆ ಮಾರ್ಷಯಲ್ ಆರ್ಟ್ ನ ಕೋಚ್ ಸಂತೋಷ್ ಕುಮಾರ್ ಶೆಟ್ಟಿ ಅವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.

Read More

ಬಂಟ್ವಾಳ: ಸಂಘದ ಸದಸ್ಯರು ತಮ್ಮ ಕ್ಯಾಟರಿಂಗ್ ವೃತ್ತಿಯ ಬಗ್ಗೆ ಕೀಳರಿಮೆ‌ ಬಿಟ್ಟು ಗೌರವದ ಭಾವನೆ ಬೆಳೆಸಿಕೊಳ್ಳಬೇಕು ಎಂದು ದ.ಕ. ಕ್ಯಾಟರಿಂಗ್ ಮಾಲಕರ ಸಂಘದ ಪ್ರಥಮ ಅಧ್ಯಕ್ಷ , ನಿಯೋಜಿತ ರೋಟರಿ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್ ಹೇಳಿದರು. ಬಿ.ಸಿ.ರೋಡಿನ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ಅಧ್ಯಕ್ಷ ನಾರಾಯಣ ಸುವರ್ಣ ಅಧ್ಯಕ್ಷತೆಯಲ್ಲಿ ನಡೆದ ದಕ್ಷಿಣ ಕನ್ನಡ ಕ್ಯಾಟರಿಂಗ್ ಮಾಲಕರ ಸಂಘ ಬಂಟ್ವಾಳ ವಲಯದ ನೂತನ ಸಾಲಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಇಂದು ಕ್ಯಾಟರಿಂಗ್ ವೃತ್ತಿನಿರತರ ಮಕ್ಕಳು ಉನ್ನತ ಶಿಕ್ಷಣ ಪಡೆದು ಉತ್ತಮ ಸ್ಥಾನದಲ್ಲಿದ್ದಾರೆ, ನಮ್ಮೊಳಗೆ ಯಾವುದೇ ಸ್ಪರ್ಧೆ ಬೇಡ. ನಾವೇ ಕಚ್ಚಾಟ ಮಾಡಿದ್ದಲ್ಲಿ ಮೂರನೇ ವ್ಯಕ್ತಿ ಲಾಭ ಪಡೆಯುತ್ತಾನೆ. ಗ್ರಾಕರಿಗೆ ಉತ್ತಮ ಆಹಾರ ಕೊಡಬೇಕು, ಸಮಯಕ್ಕೆ ಸರಿಯಾಗಿ ಮುಟ್ಟಿಸಬೇಕು. ಆದರೆ ದರ ಪೈಪೋಟಿ ಮಾಡಿ ಉದ್ಯಮದಲ್ಲಿ ನಷ್ಟ ಅನುಭವಿಸುವುದು ಬೇಡ ಎಂದು ಸದಸ್ಯರಿಗೆ ಸಲಹೆ ನೀಡಿದ ಅವರು ಸಂಪಾದನೆಯ ಒಂದಂಶವನ್ನು ಸಮಾಜಕ್ಕೆ ನೀಡೋಣ ಎಂದು ತಿಳಿಸಿದರು. ದ.ಕ. ಜಿಲ್ಲಾ…

Read More

ಬಂಟ್ವಾಳ: ದಕ್ಷಿಣ ಕನ್ನಡ ಕ್ಯಾಟರಿಂಗ್ ಮಾಲಕರ ಸಂಘ ಮಂಗಳೂರು ಇದರ ಬಂಟ್ವಾಳ ವಲಯದ ನೂತನ ಅಧ್ಯಕ್ಷರಾಗಿ ವಲೇರಿಯನ್ ಲೋಬೋ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಸದಾನಂದ ಬಿ. ಬಂಗೇರ, ಕೊಶಾಧಿಕಾರಿಯಾಗಿ ಸಿಲ್ವೆಸ್ಟರ್ ಲಸ್ರಾದೋ, ಸಂಘಟನಾ ಕಾರ್ಯದರ್ಶಿಯಾಗಿ ಆ್ಯಂಟನಿ ಸಿಕ್ವೇರಾ ಆಯ್ಕೆಯಾಗಿದ್ದಾರೆ. ಸೆ.9 ರಂದು ಪದಗ್ರಹಣ: ನೂತನ ಸಾಲಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸೆ.9 ರಂದು ಮಂಗಳವಾರ ಸಂಜೆ 6.30ಕ್ಕೆ ಬಿ.ಸಿ.ರೋಡಿನ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ನಡೆಯಲಿದೆ. ದಕ್ಷಿಣ ಕನ್ನಡ ಕ್ಯಾಟರಿಂಗ್ ಮಾಲಕರ ಸಂಘ ಬಂಟ್ವಾಳ ವಲಯದ ಅಧ್ಯಕ್ಷ ನಾರಾಯಣ ಸುವರ್ಣ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಉದ್ಯಮಿ ರೊ. ಸತೀಶ್ ಬೋಳಾರ್, ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚ್ಚರ್ಡ್ ಡಿಕೋಸ್ತ, ದ.ಕ. ಕ್ಯಾಟರಿಂಗ್ ಮಾಲಕರ ಸಂಘದ ಅಧ್ಯಕ್ಷ ರಾಜೇಶ್ ಕೊಂಚಾಡಿ, ಹೊಟೇಲ್ ಉದ್ಯಮಿ ಸದಾನಂದ ಡಿ.ಶೆಟ್ಟಿ ಭಾಗವಹಿಸುವರು

Read More

ಬಂಟ್ವಾಳ: ಮಾನವೀಯತೆಗಿಂತ ಮಿಗಿಲಾದ ಧರ್ಮ ಮತ್ತೊಂದಿಲ್ಲ. ಮಾನವೀಯತೆಗೆ ಪೂರಕವಾದ ಕಾರ್ಯವನ್ನು ಸೇವಾಂಜಲಿ ಸಂಸ್ಥೆ ನಡೆಸಿಕೊಂಡು ಬರುತ್ತಿದೆ ಎಂದು ರೋಟರಿ ಕ್ಲಬ್ ಪೂರ್ವ ಜಿಲ್ಲಾ ಗವರ್ನರ್ ಎನ್. ಪ್ರಕಾಶ್ ಕಾರಂತ್ ತಿಳಿಸಿದರು. ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ನಡೆದ 132ನೇ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಕ್ತಕ್ಕೆ ರಕ್ತವೇ ಪರ್ಯಯವಾಗಿದ್ದು ರಕ್ತದಾನ ಅತ್ಯಂತ ಪುಣ್ಯದ ಕಾರ್ಯವಾಗಿದೆ. ನಾವು ದಾನವಾಗಿ ನೀಡುವ 1 ಯುನಿಟ್ ರಕ್ತ ನಾಲ್ಕು ಮಂದಿಯ ಪ್ರಾಣ ಉಳಿಸುತ್ತದೆ ಎಂದರು. ಕೃಷ್ಣಕುಮಾರ್ ಪೂಂಜ ಅವರ ನೇತೃತ್ವದಲ್ಲಿ ಸೇವಾಂಜಲಿ ಸಂಸ್ಥೆ ಹಮ್ಮಿಕೊಳ್ಳುವ ರಕ್ತದಾನ ಶಿಬಿರದಲ್ಲಿ ಸಂಗ್ರಹಣೆಯ ಉದ್ದೇಶವಿಲ್ಲ, ಬದಲಿಗೆ ವಿವಿಧ ಆಸ್ಪತ್ರೆಗಳ ರಕ್ತನಿಧಿಗೆ ಅವಶ್ಯಕತೆಗನುಗುಣವಾಗಿ ರಕ್ತದಾನ ಶಿಬಿರ ನಡೆಸಲಾಗುತ್ತಿದೆ. ಇದು ಜನರಿಗೆ ಅರಿವು ಮೂಡಿಸುವುದರ ಜೊತೆಗೆ ಇತರ ಸಂಘ ಸಂಸ್ಥೆಗಳಿಗೂ ಪ್ರೇರಣೆ ನೀಡುವ ಕಾರ್ಯ ಎಂದು ತಿಳಿಸಿದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ. ಕೃಷ್ಣಕುಮಾರ್ ಪೂಂಜ ಪ್ರಾಸ್ತಾವಿಕ…

Read More

ಸಜೀಪ: ಇಲ್ಲಿನ ಸಜೀಪಮುನ್ನೂರು ಗ್ರಾಮದ ಮರ್ತಾಜೆ ಶ್ರೀ ಮಲರಾಯ ಗ್ರಾಮ ಸಮಿತಿ ವತಿಯಿಂದ‌ ಮರ್ತಾಜೆದ ಮಣ್ಣ್ ಡ್ ಕೆಸರ್ದ ಗೊಬ್ಬು ಕಾರ್ಯಕ್ರಮ‌ ಸೆ.7 ರಂದು ಭಾನುವಾರ ಬೆಳಿಗ್ಗೆ 8.30 ರಿಂದ ಮರ್ತಾಜೆಯ ಮಲರಾಯ ದೈವಸ್ಥಾನದ ವಠಾರದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ ಸಜೀಪ ಮುನ್ನೂರಿನ ತಂತ್ರಿ ಸೂರ್ಯನಾರಾಯಣ ಭಟ್ ಉದ್ಘಾಟಿಸುವರು, ಮಲರಾಯ ಗ್ರಾಮ ಸಮಿತಿ ಅಧ್ಯಕ್ಷ ರಘುನಾಥ ಕುಲಾಲ್ ಅಧ್ಯಕ್ಷತೆ ವಹಿಸುವರು, ಆಳ್ವರ ಪಾಲು ಗಡಿಪ್ರಧಾನರಾದ ದುಗ್ಗಪ್ಪ ಶೆಟ್ಟಿ ಯಾನೆ ಗಂಗಾಧರ್ ಭಂಡಾರಿ ಕೆಸರು ಗದ್ದೆ ಉದ್ಘಾಟಿಸುವರು. ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಬಳಿಕ ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡಾಕೂಟಗಳು ನಡೆಯಲಿದೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ಬಹುಮಾನ ವಿತರಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Read More

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲ ನಿಯಮಿತ ಬಿ.ಸಿ.ರೋಡ್ ಇದರ ಕೇಂದ್ರ ಕಚೇರಿ ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ತಾಲೂಕು ಕೃಷಿಕ ಸಮಾಜದ ಕೃಷಿ ಕಚೇರಿ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು, ಶುಕ್ರವಾರ ಉದ್ಘಾಟನಾ ಸಮಾರಂಭ ನಡೆಯಿತು. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ನೂತನ ಕೇಂದ್ರ ಕಚೇರಿ ಉದ್ಘಾಟಿಸಿದರು. ಅವರು ಮಾತನಾಡಿ, ನಷ್ಟದಲ್ಲಿದ್ದ ಸಂಸ್ಥೆ ಇಂದು 13 ಲಕ್ಷ ರೂ. ಲಾಭಕ್ಕೆ ಬರಲು ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅವರ ಪರಿಶ್ರಮ ಕಾರಣವಾಗಿದ್ದು, ಈ ಸಂಸ್ಥೆ ಸ್ವಂತ ಕಟ್ಟಡವನ್ನು ಹೊಂದಬೇಕಾಗಿದೆ. ಅದಕ್ಕೆ ಸಹಕಾರವನ್ನು ನೀಡುತ್ತೇವೆ, ಕಚೇರಿ ಪೀಠೋಪಕರಣಕ್ಕೆ ಎರಡು ಲಕ್ಷ ರೂ. ಗಳ ಆರ್ಥಿಕ ಸಹಕಾರ ನೀಡುವುದಾಗಿ ತಿಳಿಸಿದರು. ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ವಿಶೇಷ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿ ಸಮಾಜದ ಅಭಿವೃದ್ಧಿಗೆ ಮೂರ್ತೆದಾರರ ಕೊಡುಗೆ ಅಪಾರವಾಗಿದ್ದು, ಹಿರಿಯರ ದೂರದೃಷ್ಟಿ ಫಲವಾಗಿ ಮುನ್ನಡೆದಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ನಿವೇಶನ ಗುರುತಿಸಿದರೆ, ಕಂದಾಯ ಸಚಿವರು ಹಾಗೂ ಮುಖ್ಯಮಂತ್ರಿ ಜೊತೆ ಮಾತನಾಡಿ ಸಹಕರಿಸುವುದಾಗಿ…

Read More