Author: admin

ಬಂಟ್ವಾಳ: ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ನೇತೃತ್ವದಲ್ಲಿ ಜ. 14ರಿಂದ 26ರ ವರೆಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರದಾದ್ಯಂತ ನಡೆಯಲಿರುವ ಗ್ರಾಮ ವಿಕಾಸ ಯಾತ್ರೆ, ಗ್ರಾಮದೆಡೆಗೆ ಶಾಸಕರ ನಡಿಗೆ ಪಾದಯಾತ್ರೆಯ ಸಮಾಲೋಚನಾ ಸಭೆ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆಯಿತು.ಸಭೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಕ್ ಅವರು ಮಾತನಾಡಿ, ಬಂಟ್ವಾಳ ಕ್ಷೇತ್ರದಲ್ಲಿ ನಡೆಯುವ 3ನೇ ಪಾದಯಾತ್ರೆ ಇದಾಗಿದ್ದು, ಈ ಹಿಂದೆ ಶಾಸಕನಾಗುವ ಮೊದಲು 2ಪಾದಯಾತ್ರೆಗಳನ್ನು ನಡೆಸಿ ಕ್ಷೇತ್ರದ ಪ್ರತಿ ಗ್ರಾಮಗಳ ಜನತೆಯ ನಾಡಿಮಿಡಿತವನ್ನು ಅರಿತು ಅದಕ್ಕೆ ಪೂರಕವಾಗಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಲಾಗಿದೆ.ಈ ಬಾರಿ 13 ದಿನಗಳ ಪಾದಯಾತ್ರೆ ನಡೆಸಲಿದ್ದು, ಮುಖ್ಯವಾಗಿ ಪ್ರತಿದಿನ ಕ್ಷೇತ್ರದ ಒಂದು ದೇವಸ್ಥಾನದಿಂದ ಮತ್ತೊಂದು ದೇವಸ್ಥಾನವನ್ನು ಸಂಪರ್ಕಿಸಲಿದ್ದು, ಪ್ರತಿದಿನ ಸಂಜೆ ಸಮಾರೋಪ ಕಾರ್ಯಕ್ರಮ ನಡೆಸಲಿದ್ದೇವೆ. ಜ. 14ರಂದು ಮಧ್ಯಾಹ್ನ 2ಕ್ಕೆ ಪೊಳಲಿ ದೇವಸ್ಥಾನದಿಂದ ಪಾದಯಾತ್ರೆ ಆರಂಭಗೊಂಡು, ಜ. 26ರಂದು ಬಿ.ಸಿ.ರೋಡಿನಲ್ಲಿ ಸಮಾರೋಪ ನಡೆಯಲಿದ್ದು, ಉಳಿದಂತೆ ಪ್ರತಿದಿನ ಬೆಳಗ್ಗೆ 8ಕ್ಕೆ ಪಾದಯಾತ್ರೆ ಆರಂಭಗೊಳ್ಳಲಿದೆ.…

Read More

ಬಂಟ್ವಾಳ: ತಾಲೂಕಿನ ಅಮ್ಟಾಡಿ ಗ್ರಾಮದ ಕೆಂಪುಗುಡ್ಡೆ ಶ್ರೀ ಬ್ರಹ್ಮ ಮುಗೇರ್ಕಳ ಕೊರಗತನಿಯ ಮತ್ತು ಪರಿವಾರ ದೈವಗಳ ದೈವಸ್ಥಾನದ ಪುನರ್ ನವೀಕರಣಕ್ಕೆ ಶಿಲಾನ್ಯಾಸ ಹಾಗೂ ವಿಜ್ಞಾಪನಾ ಪತ್ರದ ಬಿಡುಗಡೆ ಸಮಾರಂಭ ಕ್ಷೇತ್ರದ ವಠಾರದಲ್ಲಿ ಬುಧವಾರ ನಡೆಯಿತು.ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ದೈವಸ್ಥಾನದ ಪುನರ್ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಿ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು.ನಂತರ ಆಶೀರ್ವಚನಗೈದ ಮಾಣಿಲ ಶ್ರೀಗಳು ತುಳುನಾಡಿನಲ್ಲಿ ಅನಾದಿಕಾಲದಲ್ಲಿ ದೈವರಾಧನೆಗಳು ಅತ್ಯಂತ ಶೃದ್ದಾ ಭಕ್ತಿಯಿಂದ ಮತ್ತು ಪ್ರಭಾವಯುತವಾಗಿ ನಡೆಯುತ್ತಿದ್ದು ಸತ್ಯದ ಮಹಿಮೆಗೆ ಕೊರತೆ ಇರಲಿಲ್ಲ,ವಿದ್ಯೆಯ ಜೊತೆಗೆ ಅನುಭವದ ಪಾಂಡಿತ್ಯವು ಇದ್ದಾಗ ಕೆಲ ದೋಷ ಪರಿಹರಿಸಲು ಸಾಧ್ಯವಾಗುತ್ತದೆ ಎಂದು ನುಡಿದರು. ದೈವಸ್ಥಾನದ ನಿರ್ಮಾಣ ಕಾರ್ಯದಲ್ಲಿ ಆರಂಭ ಶೂರರಾಗದೆ ಎಲ್ಲರು ಒಗ್ಗಟ್ಟಿನಲ್ಲಿ ಕೆಲಸ ಮಾಡಿದಾಗ ಯಶಸ್ಸು ಸಿಗುವುದು ಎಂದ ಶ್ರೀಗಳು ಭಗವಂತನ ಸಾಮ್ರಾಜ್ಯದಲ್ಲಿ ಜಾತಿ,ಮತ,ಬೇಧ ಮರೆತು ಎಲ್ಲರು ಸಾಮರಸ್ಯದಿಂದ ಬದುಕಿದಾಗ ದೇಶ ಸುಭದ್ರವಾಗಿರಲು ಸಾಧ್ಯ ಎಂದರು. ಸಭಾಧ್ಯಕ್ಷತೆ ವಹಿಸಿದ್ದ ಕಿಯೋನಿಕ್ಸ್ ನಿಗಮದ ಅಧ್ಯಕ್ಷ ಹರಿಕೃಷ್ಣ…

Read More

ಬಂಟ್ವಾಳ: ಅಮ್ಮ ಸ್ವೀಟ್ಸ್ ಸೇವಾ ಟ್ರಸ್ಟ್ ಬೋಳಂಗಡಿ ಇದರ ಆಶ್ರಯದಲ್ಲಿ ಅಮ್ಮ ಚೇತೋಹಾರ ಎನ್ನುವ ವಿಶೇಷ ಕಾರ್ಯಕ್ರಮ ಭಾನುವಾರ ಬೋಳಂಗಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ನಡೆಯಿತು.ಎಂ.ಎನ್.ಕುಮಾರ್ ಮೆಲ್ಕಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ನಗರ ಪೊಲೀಸ್ ಠಾಣೆಯ ಎಎಸೈ ಜಿನ್ನಪ್ಪ ಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಸುರೇಖ ಯಳವಾರ, ಪ್ರಕಾಶ್ ಎಂ., ಜನಾರ್ದನ ಕುಲಾಲ್ ಬೊಂಡಾಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬೊಂಡಾಲ ಶಾಲೆಯಲ್ಲಿ ಕೈಗೊಂಡ ಅಭಿವೃದ್ಧಿ ಚಟುವಟಿಕೆಗಳಿಗಾಗಿ ಶಿಕ್ಷಕಿ ರೇಖಾ ಸಿ. ಎಚ್. ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ವಿಶೇಷ ಚೇತನ ಮಕ್ಕಳಿಗೆ ಸಹಾಯಧನ ಹಾಗೂ ಫಲಾನುಭವಿಗಳಿಗೆ ಗಾಲಿ ಕುರ್ಚಿಯನ್ನು ವಿತರಿಸಲಾಯಿತು.ಪುರಸಭೆ ಮಾಜಿ ಸದಸ್ಯೆ ವಸಂತಿ ಗಂಗಾಧರ ಸ್ವಾಗತಿಸಿ, ಎಂ.ಎಚ್. ಮುಸ್ತಾಪ ಪ್ರಾಸ್ತವಿಕ ಮಾತುಗಳನ್ನಾಡಿದರು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸಲೀಂ ಬೋಳಂಗಡಿ ವಂದಿಸಿದರು. ಮನೋಜ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು. ಅಮ್ಮಾ ಸ್ವೀಟ್ಸ್ ಸೇವಾ ಟ್ರಸ್ಟ್ ಸಂಸ್ಥೆಯ ಜನಾರ್ದನ ಅವರು ತನ್ನ ಸಹಪಾಠಿಗಳೊಂದಿಗೆ ತನ್ನ ದುಡಿಮೆಯ…

Read More

ಬಂಟ್ವಾಳ: ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಕಾರದೊಂದಿಗೆ ಜೆಸಿಐ ಬಂಟ್ವಾಳ ಪ್ರತೀ ವರ್ಷವೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ತಾಲೂಕಿನ ವಿವಿಧೆಡೆಗಳಲ್ಲಿ ನಡೆಸಿಕೊಂಡು ಬರುತ್ತಿದ್ದು ಉಚಿತವಾಗಿ ನೀಡುವ ಆರೋಗ್ಯ ಸೇವೆಯ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ಕಾಲಕಾಲಕ್ಕೆ ನಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳುವುದರಿಂದ ರೋಗ ಮುಕ್ತವಾದ ಜೀವನ ನಡೆಸಲು ಸಾಧ್ಯವಿದೆ ಎಂದು ಜೆಸಿಐ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ. ಹೇಳಿದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಂಟ್ವಾಳ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಬಂಟ್ವಾಳ, ಜೆಸಿಐ ಬಂಟ್ವಾಳ, ಎ.ಜೆ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ಬಂಟ್ವಾಳದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಸೇಸಪ್ಪ ಕೋಟ್ಯಾನ್ ಉದ್ಘಾಟಿಸಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿನ್ನಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ. ಪ್ರಕಾಶ್ಚಂದ್ರ ಬಿ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರ…

Read More

ಬಂಟ್ವಾಳ: ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಬಗ್ಗೆ ಸಜೀಪನಡು ಮತ್ತು ಸಜೀಪಪಡು ಗ್ರಾಮಗಳ ಭಕ್ತರ ಪೂರ್ವಭಾವಿ ಸಮಾಲೋಚನಾ ಸಭೆಯು ಸಜೀಪನಡು ಶ್ರೀ ಷಣ್ಮುಖಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಿತು. ಮಾಗಣೆ ತಂತ್ರಿಗಳಾದ ಎಂ. ಸುಬ್ರಹ್ಮಣ್ಯ ಭಟ್ ದೇವಳದ ಅಭಿವೃದ್ಧಿ, ಬ್ರಹ್ಮಕಲಶೋತ್ಸವದದಲ್ಲಿ ಎಲ್ಲರ ಅಳಿಲ ಸೇವೆಯೊಂದಿಗೆ ನಡೆಸಬೇಕಾಗಿದೆ. ಅದಕ್ಕಾಗಿ ನಮ್ಮೆಲ್ಲರ ಸೌಭಾಗ್ಯ ಎನ್ನುವ ನಿಟ್ಟಿನಲ್ಲಿ ಸಹಭಾಗಿಗಳಾಗೋಣ ಎಂದು ಶುಭ ಹಾರೈಸಿದರು.ಅಭಿವೃದ್ಧಿ ಸಮಿತಿ ಸದಸ್ಯ ದಾಮೋದರ ಬಿ.ಎಂ. ಪ್ರಸ್ತಾವನೆ ಮಾಡುತ್ತಾ, ಮನೆ ಮನೆಗಳಿಗೆ ಆಮಂತ್ರಣ ಪತ್ರ ವಿತರಣೆ ಕಾರ್ಯ ಶೀಘ್ರವಾಗಿ ನಡೆಯಬೇಕಿದ್ದು, ಎಲ್ಲರೂ ಸಹಕರಿಸುವಂತೆಯೂ, ಎಲ್ಲಾ ಮನೆಗಳಿಗೆ ಬ್ರಹ್ಮಕಲಶೋತ್ಸವದ ಆಮಂತ್ರಣ ನೀಡಿಕೆಯ ಕ್ರಮವನ್ನು ವಿವರಿಸಿದರು.ವ್ಯವಸ್ಥಾಪನಾ ಸಮಿತಿ ಸದಸ್ಯರೂ, ಹೊರೆಕಾಣಿಕೆ ಸಮಿತಿ ಸಂಚಾಲಕರಾದ ಯಶವಂತ ದೇರಾಜೆಗುತ್ತು ಮಾತನಾಡಿ ಸಜೀಪಮಾಗಣೆಯ ಎಲ್ಲಾ ಭಕ್ತರು ಆಮಂತ್ರಣ ಪತ್ರಿಕೆ ಎಲ್ಲಾ ಮನೆಗಳಿಗೆ ತಲುಪಿಸುವ ಜೊತೆಗೆ ಪ್ರತಿಯೊಂದು ಮಠ ಮಂದಿರಗಳಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಮಾಡುವಂತಹ ಕಾರ್ಯಗಳಿಗೆ ಈಗಿಂದಲೇ ಸನ್ನದ್ಧರಾಗಬೇಕಿದೆ ಎಂದರು.ಅಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಅರವಿಂದ ಭಟ್…

Read More

ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ದ.ಕ. ಕೃಷಿ ಅಭಿವೃದ್ಧಿ ಸಹಕಾರಿ ಸ‌ಂಘ ಮಂಗಳೂರು, ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ಇದರ ಆಶ್ರಯದಲ್ಲಿ ಜ ಕೆ.ಎಸ್‌ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಇವರಿಂದ ಕಣ್ಣು, ದಂತ, ವೈದ್ಯಕೀಯ ಶಿಬಿರ ಹಾಗೂ ಕೇಂದ್ರ ಸರ್ಕಾರದ ನಿಕ್ಷಯ ಮಿತ್ರ ಯೋಜನೆಯಡಿ ಕ್ಷಯ ರೋಗಿಗಳಿಗೆ ಆಹಾರ ಧಾನ್ಯ ವಿತರಣಾ ಕಾರ್ಯಕ್ರಮ ಮಂಗಳವಾರ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ನಡೆಯಿತು. ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿಮುಖ್ಯ ಅತಿಥಿ ಮೇರಮಜಲು ಗ್ರಾ.ಪಂ‌. ಅಧ್ಯಕ್ಷೆ ಜಯಶ್ರೀ ಕರ್ಕೆರಾ ಮಾತನಾಡಿಮಂಗಳೂರಿನ ಅಂಬಾ ಭವಾನಿ ಭಜನಾ ಮಂದಿರದ ಅಧ್ಯಕ್ಷ ಸೀತಾರಾಮ ಎ., ದ.ಕ. ಕೃಷಿ ಅಭಿವೃದ್ಧಿ ಸಹಕಾರಿ ಸ‌ಂಘ ಮಂಗಳೂರು ಇದರ ಕಾರ್ಯನಿರ್ವಾಹಣಾಧಿಕಾರಿ ಪ್ರೇಮರಾಜ್ ಭಂಡಾರಿ, ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ಇದರ ಕಾರ್ಯ ನಿರ್ವಾಹಣಾಧಿಕಾರಿ ಧರ್ಮಪಾಲ್ ಭಂಡಾರಿ, ತಾ.ಪಂ‌. ಮಾಜಿ ಸದಸ್ಯ ಗಣೇಶ್ ಸುವರ್ಣ ತುಂಬೆ, ರೋಟರಿ ಕ್ಲಬ್ ಫರಂಗಿಪೇಟೆ…

Read More

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ಸಾಧಕರಿಗೆ ಸನ್ಮಾನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಹಾಗೂ ಹೊಸವರ್ಷಾಚರಣೆ ಕಾರ್ಯಕ್ರಮ ಶನಿವಾರ ರಾತ್ರಿ ಬಿ.ಸಿ ರೋಡಿನ ಕುಲಾಲ ಭವನದಲ್ಲಿ ನಡೆಯಿತು. ರಾಜ್ಯಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ,ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಪತ್ರಕರ್ತ ವೆಂಕಟೇಶ್ ಬಂಟ್ವಾಳ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಚಿತ್ರ ಕಲಾವಿದ ಮನೋಜ್ ಕನಪ್ಪ್ಪಾಡಿ ಮತ್ತು ಹೆಣ್ಣು,ಗಂಡು ಸ್ವರದಲ್ಲಿ ಏಕ ಕಾಲದಲ್ಲಿ ಹಾಡುವ ಕಲಾವಿದ ರಾಜೇಶ್ ಸಜೀಪ ರವರನ್ನು ಸನ್ಮಾನಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷರಾದ ಚಿತ್ತರಂಜನ್ ಶೆಟ್ಟಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ರೋಟರಿ ಜಿಲ್ಲಾ ಪ್ರಕಾಶ್ ಕಾರಂತ್, ಉಪ ಗವರ್ನರ್ ಮಂಜುನಾಥ್ ಆಚಾರ್ಯ ಅವರನ್ನು ಕ್ಲಬ್ ವತಿಯಿಂದ ಗೌರವಿಸಲಾಯಿತು. ಇದೇ ವೇಳೆ ೨೦೨೪-೨೫ನೆ ಸಾಲಿನ ನೂತನ ಅಧ್ಯಕ್ಷರಾಗಿ ಕಿಶೋರ್ ಕುಮಾರ್ ಸರ್ವಾನುಮತದ ಆಯ್ಕೆಯನ್ನು ಪ್ರಕಟಿಸಲಾಯಿತು, ಕಾರ್ಯದರ್ಶಿ ಉಮೇಶ್ ಆರ್ ಮೂಲ್ಯ ಅವರು ತಿಂಗಳ ವರದಿ ವಾಚಿಸಿ, ವಂದಿಸಿದರು ಬಳಿಕ ರೋಟರಿ ಅನೆಟ್ಸ್…

Read More

ಬಂಟ್ವಾಳ: ಕ್ಷೇತ್ರದ ಜನರ ಪ್ರೀತಿ, ವಿಶ್ವಾಸವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ, ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ತೊಡಗಿಸಿಕೊಂಡಿದ್ದು, ಮುಂದಿನ ದಿನದಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸುವುದು ನಿಶ್ಚಿತ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪಾಡಿ ಅವರು ವಿಶ್ವಾಸ ವ್ಯಕ್ತಪಡಿಸಿದರು.ಭಾನುವಾರ ಸಂಜೆ ಕಡೇಶ್ವಾಲ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ೫.೫೦ ಕೋ.ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ಬಳಿಕ ಪೆರ್ಲಾಪು ವಠಾರದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ೨೦ ಕೋಟಿ ಸದಸ್ಯರನ್ನು ಹೊಂದಿರುವ ಜಗತ್ತಿನ ಅತೀ ದೊಡ್ಡ ಪಕ್ಷ ಬಿಜೆಪಿಯಾಗಿದ್ದು ಅಭಿವೃದ್ಧಿ ನಿರಂತರವಾಗಿ ನಡೆಯುವ ಕಾರ್ಯವಾಗಿದೆ, ವಯಕ್ತಿಕ ವರ್ಚಸ್ಸಿಗಾಗಿ ಯಾವತ್ತು ಕೆಲಸ ಮಾಡಿಲ್ಲ, ಪಕ್ಷದ ಸಂಘಟನೆಯ ದೆಸೆಯಲ್ಲಿ ಮುಂದಿನ ದಿನಗಳಲ್ಲೂ ಕೆಲಸ ಮಾಡುವುದಾಗಿ ಶಾಸಕ ರಾಜೇಶ್ ನಾಕ್ ಹೇಳಿದರು.ಕಳೆದ ಐದೂವರೆ ವರ್ಷದ ಅವಧಿಯಲ್ಲಿ ಕಡೇಶ್ವಾಲ್ಯ ಗ್ರಾ.ಪಂ.ವ್ತಾಪ್ತಿಯಲ್ಲಿ ೧೦ ಕೋ.ರೂ.ವಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರಲಾಗಿದೆ…

Read More

ಬಂಟ್ವಾಳ: ನಾಗರಿಕ ಕ್ರಿಯಾ ಸಮಿತಿ ಸಂಚಯಗಿರಿ ಇದರ ವಾರ್ಷಿಕ ಸಹಮಿಲನ ಕಾರ್ಯಕ್ರಮ ಸಂಚಯಗಿರಿಯಲ್ಲಿ ಭಾನುವಾರ ಸಂಜೆ ನಡೆಯಿತು. ಸ್ಥಳೀಯ ಹಿರಿಯ ನಾಗರಿಕ, ಪರಿಸರವಾದಿ ಎ. ದಾಮೋದರ ದೀಪ ಪ್ರಜ್ವಲಿಸಿದರು. ಅವರು ಮಾತನಾಡಿ ಸಂಚಯಗಿರಿ ಪ್ರದೇಶ ಇಂದು ಕೇವಲ ಬಂಟ್ವಾಳಕ್ಕೆ ಮಾತ್ರ ಪರಿಚಿತವಾಗಿ ಉಳಿದಿಲ್ಲ. ಇಲ್ಲಿನ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಮೂಲಕ ದೇಶ ವಿದೇಶಗಳಲ್ಲೂ ಪರಿಚಿತವಾಗಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ ಎಂದರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ರಮಾಶಂಕರ್ ಮಾತನಾಡಿ ಸಂಚಯ ಎಂದರೆ ಸಂಗ್ರಹ, ಸಂಗ್ರಹವಾದಾಗ ಒಗ್ಗಟ್ಟಾಗುತ್ತದೆ. ಒಗ್ಗಟ್ಟು ಐಕ್ಯತೆ ಇರಬೇಕಾದರೆ ಸಹಯೋಗವೂ ಬೇಕು ಎಂದು ತಿಳಿಸಿದರು. ನಾಗರಿಕ ಕ್ರಿಯಾ ಸಮಿತಿಯ ಅಧ್ಯಕ್ಷ ಸುರೇಶ್ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಚಯಗಿರಿ ಬಡವಾಣೆಯ ನಾಗರಿಕರು ಹೃದಯವಂತರು. ನಾಗರಿಕ ಕ್ರಿಯಾ ಸಮಿತಿಯ ಮೂಲಕ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗ ಸಹಕಾರ ಹಾಗೂ ಪ್ರೋತ್ಸಾಹವನ್ನು ನೀಡುತ್ತಾರೆ ಎಂದರು.ಕಾರ್ಯಕ್ರಮದಲ್ಲಿ ಪೊಳಲಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಧಕೃಷ್ಣ ಭಟ್ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ…

Read More

ಬಂಟ್ವಾಳ: ಅಡಿಕೆ ಬೆಳೆ ಹಾಗೂ ಬೆಳೆಗಾರರ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಸದನದಲ್ಲಿ ಹಗುರವಾಗಿ ಮಾತನಾಡಿದರೂ ಖಂಡನೆ ವ್ಯಕ್ತಪಡಿಸದೆ ಮೌನವಾಗಿರುವ ಕರಾವಳಿಯ ಶಾಸಕರು ರಾಜೀನಾಮೆ ನೀಡಿ ಮನೆಗೆ ಹೋಗುವುದು ಸೂಕ್ತ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು. ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಿಸಾನ್ ಕಾಂಗ್ರೆಸ್ ಸಮಿತಿಯಿಂದ ಶನಿವಾರ ಬಿ.ಸಿ.ರೋಡಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಭೂ ಮಸೂದೆ ಬಳಿಕ ಕರಾವಳಿಯಲ್ಲಿ ಅಡಿಕೆ ಬೆಳೆಗಾರರ ಸಂಖ್ಯೆ ಹೆಚ್ಚಾಗಿದ್ದು, ಅಡಿಕೆ ಬೆಳೆಗಾರರು ನಿರಂತರ ಒಂದಿಲ್ಲ ಒಂದು ಸಂಕಷ್ಟವನ್ನು ಎದುರಿಸುತ್ತಾ ಬಂದಿದ್ದಾರೆ. ಪ್ರತಿ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್ ಸರಕಾರ ಅಡಿಕೆ ಬೆಳೆಗಾರರಿಗೆ ನೆರವು ನೀಡುತ್ತಾ ಬಂದಿದೆ. ಹೀಗಾಗಿ ಈ ಬೆಳೆ ಇಂದಿಗೂ ಉತ್ತಮ ರೀತಿಯಲ್ಲಿ ಮುಂದುವರಿದಿದೆ ಎಂದರು. ರಾಜ ವ್ಯಾಪಾರಿ ಆದರೆ ಪ್ರಜೆಗಳು ಬಿಕಾರಿ ಆಗಲಿದ್ದಾರೆ. ಅದನ್ನು ಇಂದು ನಾವು ದೇಶದಲ್ಲಿ ಕಾಣುತ್ತಿದ್ದೇವೆ. ಮಾರ್ವಾಡಿಗಳಿಗೆ ನೆರವಾಗಲು ದೇಶದ ರೈತರನ್ನು ಬಲಿ ಕೊಡುವ ಕೆಲಸವನ್ನು ಕೇಂದ್ರ, ರಾಜ್ಯದ ಬಿಜೆಪಿ ಸರಕಾರ ಮಾಡುತ್ತಿದೆ. ಇಡೀ…

Read More