ಬಂಟ್ವಾಳ: ಅಭಿವೃದ್ದಿ ಕಾರ್ಯದ ಸ್ಪಷ್ಟತೆ ಇಲ್ಲದೆ ತುಷ್ಟೀಕರಣದ ರಾಜಕಾರಣದ ಮೂಲಕ ಸಮಾಜದಲ್ಲಿ ಗೊಂದಲ, ಸಮಸ್ಯೆ ಉಂಟು ಮಾಡಿದ ಕಾಂಗ್ರೆಸ್ ಜಾತಿ, ಧರ್ಮ ಆಧಾರದಲ್ಲಿ ಸಮಾಜವನ್ನು ಇಬ್ಬಾಗ ಮಾಡಿ ತಮ್ಮಸ್ವಾರ್ಥಕ್ಕಾಗಿ ದೇಶದ ಹಿತವನ್ನು ಕಡೆಗಣಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಹೇಳಿದರು.
ಅವರು ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ನಡೆದ ಗ್ರಾಮವಿಕಾಸ ಯಾತ್ರೆ- ಗ್ರಾಮದೆಡೆಗೆ ಶಾಸಕರ ನಡಿಗೆಯ 5ನೇ ದಿನದ ಪಾದಯಾತ್ರೆಯ ಸಮಾರೋಪವಾಗಿ ಗೋಳ್ತಮಜಲು ಗ್ರಾಮದ ಕಲ್ಲಡ್ಕ ಶ್ರೀರಾಮ ಮಂದಿರದ ಮಾಧವ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಕೋವಿಡ್, ಅತಿವೃಷ್ಟಿ ಅನಾವೃಷ್ಟಿ ಯಿಂದ ದೇಶ ಸಮಸ್ಯೆಯನ್ನು ಎದುರುಸಿದರೂ , ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸಶಕ್ತ ರಾಷ್ಟ್ರವಾಗಿ ಇಡೀ ವಿಶ್ವಕ್ಕೆ ನಾಯಕತ್ವ ಕೊಡುವ ಮೂಲಕ ದೇಶದ ಐಕ್ಯತೆ, ಸಮಗ್ರತೆಯ ನ್ನು ಕಾಪಾಡಿದೆ ಎಂದು ತಿಳಿಸಿದರು. ಬಿಜೆಪಿ ಪಕ್ಷ ಒಳ್ಳೆಯ ನಾಯಕತ್ವ, ಒಳ್ಳೆಯ ಸರಕಾರ ನೀಡಿದೆ ಎಂದು ತಿಳಿಸಿದರು.ಪ್ರತಿಭೆ ಆಧಾರಿತವಾಗಿ ಪ್ರತಿಯೊಬ್ಬರಿಗೆ ಉದ್ಯೋಗವಕಾಶ ಕೊಡುವ ಕಾರ್ಯ ಆಗುತ್ತಿದ್ದು
ರಾಜ್ಯ ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ಧಿ ಕಾಣುತ್ತಿದೆ ಎಂದು ತಿಳಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಚಾರದ ಬಗ್ಗೆ ಮಾತಮಾಡುತ್ತಾರೆ. ಆದರೆ ಕಾಂಗ್ರೆಸ್ ಸರಕಾರವೇ ಭ್ರಷ್ಟವಾರವನ್ನುವ ಬೆಳೆಸಿ ಪೋಷಿಸಿದೆ ಎಂದು ಆರೋಪಿಸಿದರು.
ರಾಜೇಶ್ ನಾಯ್ಕ್ ಅವರ ಸರಳತೆ,ಪ್ರೀತಿಗೆ ನಾನು ಸೋತಿದ್ದೇನೆ. ಅವರು ಶಾಶ್ವತವಾಗಿ ಜನರ ಪ್ರೀತಿ, ವಿಶ್ವಾಸ ಗಳಿಸಿದ್ದಾರೆ ಎಂದರು.
ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾತನಾಡಿ ಸಚಿವರಾಗಿ ನಾವು ತರಲಾಗದಷ್ಟು ಅನುದಾನವನ್ನು ಶಾಸಕರಾಗಿ ರಾಜೇಶ್ ನಾಯ್ಕ್ ತನ್ನ ಕ್ಷೇತ್ರಕ್ಕೆ ತಂದು ಅಭಿವೃದ್ಧಿ ಕಾರ್ಯ ಮಾಡಿರುವುದು ಅಭಿನಂದನೀಯ ಎಂದರು. ರಾಜೇಶ್ ನಾಯ್ಕ್ ಮಾಡಿದ ಸಾಧನೆಯನ್ನು ಪ್ರತೀ ಮನೆಗೂ ತಿಳಿಸುವ ಕಾರ್ಯ ಕಾರ್ಯಕರ್ತರು ಮಾಡಬೇಕಾಗಿದೆ. ಮತ್ತೊಮ್ಮೆ ಬಿಜೆಪಿ ರಾಜ್ಯದಲ್ಲಿ ಬಿಜೆಪು ಅಧಿಕಾರಕ್ಕೆ ಬರಬೇಕಾದರೆ ಈಗಿಂದಲೇ ನಾವು ಕೆಲಸ ಮಾಡಬೇಕು ಎಂದರು.
ಬಂದರು ಮತ್ತು ಮೀನುಗಾರಿಕೆ ಖಾತೆ ಸಚಿವ ಎಸ್. ಅಂಗಾರ ಮಾತನಾಡಿ ಜನರು ನಮಗೆ ನೀಡಿರುವ ಅವಕಾಶವನ್ನು ನಿರಂತರವಾಗಿ ಉಳಿಸುವ ಕಾರ್ಯ ಆಗಬೇಕಾಗಿದೆ. ವಿರೋಧಿಗಳ ಅಪಪ್ರಚಾರ ಹಾಗೂ ನಾವು ಮಾಡಿದ ಸಾಧನೆಯನ್ನು ಜನರಿಗೆ ತಿಳಿಸುವಲ್ಲಿ ವಿಫಲವಾದ ಕಾರಣ ಬಿಜೆಪಿಯ ಕೈಯಲ್ಲಿದ್ದ ಅಧಿಕಾರ ಕಾಂಗ್ರೆಸ್ ಗೆ ಹೋಗಿ 10 ವರ್ಷಗಳ ಕಾಲ ಕಾಂಗ್ರೆಸ್ ನ ದುರಾಡಳಿತವನ್ನು ಕಾಣಬೇಕಾಯಿತು. ಮತ್ತೆ ಅಂತಹ ಪರಿಸ್ಥಿತಿ ಬಾರದಂತೆ ಎಚ್ಚರ ವಹಿಸಬೇಕಾಗಿದೆ ಎಂದರು. ಮುಂದಿನ ದಿನಗಳಲ್ಲಿ ವಿರೋಧಿಗಳು ನಮ್ಮ ಮುಂದೆ ಸ್ಪರ್ಧಿಸಲು ಅಸಾಧ್ಯ ಎನ್ನುವಂತಹ ಪರಿಸ್ಥಿತಿ ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಶಾಸಕ ರಾಜೇಶ್ಕ್ ನಾಯ್ಕ್ ಮಾತನಾಡಿದರು.
ಬಿಜೆಪಿ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಕ.ನ.ನೀ.ಸ.ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನಾ ಭಟ್, ಗ್ರಾಮೀಣ ವಿಕಾಸ ಯಾತ್ರೆಯ ಸಹ ಸಂಚಾಲಕ ಮಾಧವ ಮಾವೆ, ಗೋಳ್ತಮಜಲು ಗ್ರಾ.ಪಂ. ಅಧ್ಯಕ್ಷ ಅಭಿಷೇಕ್ ಶೆಟ್ಟಿ, ಬರಿಮಾರು ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ, ಬಾಳ್ತಿಲ ಗ್ರಾ.ಪಂ. ಅಧ್ಯಕ್ಷೆ ಹಿರಣ್ಮಯಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಗಳಾದ ಡೊಂಬಯ ಅರಳ, ರವೀಶ್ ಶೆಟ್ಟಿ ಕರ್ಕಳ, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಪಿ.ಎಸ್. ಮೋಹನ್, ಯಶೋಧರ ಕರ್ಬೆಟ್ಟು , ಜಿಲ್ಲಾ ಮಾಧ್ಯಮ ಸಂಚಾಲಕ ಸತೀಶ್ ಶೆಟ್ಟಿ, ಮೋನಪ್ಪ ದೇವಸ್ಯ ವೇದಿಕೆಯಲ್ಲಿದ್ದರು.
ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಸ್ವಾಗತಿಸಿದರು. ಗ್ರಾಮ ವಿಕಾಸ ಯಾತ್ರೆಯ ಸಂಚಾಲಕ ದೇವದಾಸ್ ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು
ರಾಜೇಶ್ ಕೊಟ್ಟಾರಿ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು. ಮಂಡಲ ಉಪಾಧ್ಯಕ್ಷ ವಜ್ರನಾಥ ಕಲ್ಲಡ್ಕ ವಂದಿಸಿದರು.
ಗ್ರಾಮವಿಕಾಸ ಯಾತ್ರೆ ಗ್ರಾಮದೆಡೆಗೆ ಶಾಸಕರ ನಡಿಗೆ ಐದನೇ ದಿನದ ಪಾದಯಾತ್ರೆ ಕಡೇಶಿವಾಲಯದ ಚಿಂತಾಮಣಿ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಿಂದ ಹೊರಟು ಕಲ್ಲಡ್ಕ ಶ್ರೀ ರಾಮ ಮಂದಿರದಲ್ಲಿ ಸಮಾಪನಗೊಂಡಿತು.