Author: admin
ಬಂಟ್ವಾಳ: ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಪ್ರಯುಕ್ತ ಸಮಾಜ ಸೇವೆಯೊಂದಿಗೆ ವಿಕಸನದ ಬೆಳಕ ಬೆಳಗಿಸಿ ಉದ್ಯೋಗ ಕ್ಷೇತ್ರದಲ್ಲಿ ಹೊಸ ಆಯಾಮ ಸೃಷ್ಟಿಸಿದ ಆದರ್ಶ ಯುವ ನಾಯಕ ಪುರಂದರ ಕುಕ್ಕಾಜೆ ಯವರಿಗೆ ಜೇಸಿ ಆದರ್ಶ ನಾಯಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭ ಜೆಸಿಐ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ. ವಲಯ ಸಂಯೋಜಕ ಉಮೇಶ್ ಆರ್.ಮೂಲ್ಯ, ನಿಕಟಪೂರ್ವಾಧ್ಯಕ್ಷ ರೋಷನ್ ರೈ, ಕಾರ್ಯದರ್ಶಿ ರಶ್ಮಿ ಶೆಟ್ಟಿ, ಕೋಶಾಧಿಕಾರಿ ಶ್ರೀನಿವಾಸ ಅರ್ಬಿಗುಡ್ಡೆ, ಪೂರ್ವಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಬಂಟ್ವಾಳ: ಪಾಣೆಮಂಗಳೂರು ಸೇತುವೆ ಸಮೀಪ ನೇತ್ರಾವತಿ ನದಿಯಲ್ಲಿ ಹಿಂದು ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ರಾಜೇಶ್ ಸುವರ್ಣ ಸಾನದ ಮನೆ ಎಂಬವರ ಶವ ಗುರುವಾರ ಬೆಳಗ್ಗೆ ಪತ್ತೆಯಾಗಿದ್ದು, ಈ ಕುರಿತು ಬಂಟ್ವಾಳ ನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ.ಸಜಿಪನಡು ಸಾನದಮನೆ ನಿವಾಸಿ ಹಿಂದುಪರ ಸಂಘಟನೆಗಳ ಮುಖಂಡ ರಾಜೇಶ್ ಸುವರ್ಣ ಎಂಬವರ ಶವ ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಸೇತುವೆ ಬಳಿ ರಾತ್ರಿ ದ್ವಿಚಕ್ರ ವಾಹನವೊಂದು ಕಂಡುಬಂದಿದ್ದು, ಅದನ್ನು ಗಮನಿಸಿದ ಪೊಲೀಸರು ಅಗ್ನಿಶಾಮಕದಳದ ಹಾಗೂ ಸ್ಥಳೀಯರ ಸಹಾಯದಿಂದ ಹುಡುಕಾಟ ನಡೆಸಿದರು. ಈ ಸಂದರ್ಭ ನದಿಯಲ್ಲಿ ಶವ ಪತ್ತೆಯಾಗಿದೆ. ಘಟನೆಗೆ ಕಾರಣವಿನ್ನೂ ಗೊತ್ತಾಗಬೇಕಿದ್ದು, ತನಿಖೆ ಸಾಗಿದೆ. ಸಾವಿನ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವಾರು ಊಹಾಪೋಹಗಳು ಹರಿಡಾಡುತ್ತಿದು ಸಂಶಯ ವ್ಯಕ್ತವಾಗಿದೆ. ಪೊಲೀಸರ ತನಿಖೆಯಿಂದ ನಿಜಾಂಶ ತಿಳಿದು ಬರಬೇಕಾಗಿದೆ.
ಬಂಟ್ವಾಳ: ಮುಯ್ಹುದ್ದಿನ್ ಜುಮ್ಮಾ ಮಸೀದಿ ಮಂಚಿ ಕುಕ್ಕಾಜೆಗೆ ಹೈಕೋರ್ಟ್ ಆದೇಶದಂತೆ ಚುನಾವಣೆಯ ಉಸ್ತುವಾರಿ ಹಾಗೂ ಆಡಳಿತಾಧಿಕಾರಿಗಳಾಗಿ ಕರ್ನಾಟಕ ರಾಜ್ಯ ವಖ್ಫ್ ಬೋರ್ಡ್ ನೇಮಕಾತಿಯಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಆದೇಶದಂತೆ ಜಮಾತಿನವರ ಉಪಸ್ಥಿತಿ ಯಲ್ಲಿ ಬುಧವಾರ ಉಳ್ಳಾಲ ತಾಲೂಕು ಕಚೇರಿ ಸಿಬ್ಬಂದಿಯಾಗಿರುವ ಮೊಹಮ್ಮದ್ ರಫೀಕ್ ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿದ ಬಳಿಕ ಮೊಹಮ್ಮದ್ ರಫೀಕ್ ರವರು ಜಮಾತಿನ ಹಿತದೃಷ್ಟಿಯಿಂದ ಎಲ್ಲರ ಸಹಕಾರ ಕೋರಿದರು. ಮಸೀದಿಯ ಖತೀಬ್ ಮೊಹಮ್ಮದಲಿ ಮುಸ್ಲಿಯಾರ್ ದುಆಗೈದು ಮಾರ್ಗದರ್ಶನ ಮಾಡಿದರು. ಬಂಟ್ವಾಳ ಗ್ರಾಮಾಂತರ ಠಾಣಾ ಉಪನಿರೀಕ್ಷಕರಾದ ಹರೀಶ್ ಹಾಗೂ ಸಿಬ್ಬಂದಿವರ್ಗ ಮಸೀದಿ ಪರಿಸರದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಿದರು.
ಬಂಟ್ವಾಳ: ತಾಲೂಕಿನ ಗ್ರಾಮೀಣ ಪ್ರದೇಶವಾದ ಕಡೇಶ್ವಾಲ್ಯ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯೊಬ್ಬನ ವಿಜ್ಞಾನ ಮಾದರಿಯು ಇದೀಗ ದಕ್ಷಿಣ ಭಾರತ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆಯಾಗಿದ್ದು, ಸರಕಾರಿ ಶಾಲೆಯ ವಿದ್ಯಾರ್ಥಿಯ ಈ ಸಾಧನೆ ಪ್ರಶಂಸೆಗೆ ಪಾತ್ರವಾಗಿದೆ. ಕಡೇಶ್ವಾಲ್ಯ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಯಶವಂತ ಸಾಧಕ ವಿದ್ಯಾರ್ಥಿಯಾಗಿದ್ದು, ಆತನ ಬಹು ಉಪಯೋಗಿ ಕೃಷಿ ಯಂತ್ರದ ಅನ್ವೇಷಣೆಯು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಧಾರವಾಡದ ರಾಯಪುರದಲ್ಲಿ ನಡೆಸಿದ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಬಹುಮಾನ ಪಡೆದು ಕೇರಳದ ತ್ರಿಶೂರ್‌ನಲ್ಲಿ ಜ. ೨೭ರಿಂದ ೩೧ರವರೆಗೆ ನಡೆಯುವ ದಕ್ಷಿಣ ಭಾರತ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆಯಾಗಿದೆ.ರಾಜ್ಯದಿಂದ ದಕ್ಷಿಣ ಭಾರತ ಮಟ್ಟಕ್ಕೆ ಒಟ್ಟು ೨೦ ಮಾದರಿಗಳು ಆಯ್ಕೆಯಾಗಿದ್ದು, ವೈಯಕ್ತಿಕ ವಿಭಾಗದಲ್ಲಿ ದ.ಕ.ಜಿಲ್ಲೆಯಿಂದ ಈ ವಿದ್ಯಾರ್ಥಿಯ ಮಾದರಿ ಮಾತ್ರ ಆಯ್ಕೆಯಾಗಿದೆ. ಕಡೇಶ್ವಾಲ್ಯ ಕೆಮ್ಮಾನು ನಿವಾಸಿ ಲೋಕೇಶ- ಪವಿತ್ರ ದಂಪತಿಯ ಪುತ್ರನಾಗಿರುವ ಯಶವಂತನಿಗೆ ಶಾಲೆಯ ಗಣಿತ ಶಿಕ್ಷಕಿ ಗೀತಾಕುಮಾರಿ ಮಾರ್ಗದರ್ಶನ ನೀಡಿದ್ದರು. ಈ ವಿದ್ಯಾರ್ಥಿಯ ಮಾದರಿಯು ತಾಲೂಕು ಮಟ್ಟದ…
ಬಂಟ್ವಾಳ: ಜೀವನದಲ್ಲಿ ಸ್ವಾವಲಂಬಿಯಾಗಿ ಬದುಕಬೇಕು ಎನ್ನುವ ಧ್ಯೇಯ ಇಟ್ಟುಕೊಂಡು ವ್ಯವಹಾರ ಕ್ಷೇತ್ರಕ್ಕೆ ಕಾಲಿಟ್ಟ ಮಹಿಳೆಯೋರ್ವರು ತನ್ನ ವ್ಯಾಪರ ನಡೆಸುವ ಅಂಗಡಿಯನ್ನು ಸೌರಚಾಲಿತ ವ್ಯವಸ್ಥೆಯಡಿ ಆರಂಭಿಸಿದ್ದಾರೆ. ಕಬ್ಬಿನ ರಸ ತೆಗೆಯುವ ಯಂತ್ರ, ರೆಫ್ರಿಜರೇಟರ್, ಬೆಳಕಿನ ವ್ಯವಸ್ಥೆ ಎಲ್ಲವೂ ಸಂಪೂರ್ಣವಾಗಿ ಸೋಲಾರ್‌ನಿಂದ ಕಾರ್ಯಚರಿಸುತ್ತಿದೆ. ಮಹಿಳೆಯ ಸ್ವಾವಲಂಬಿ ಬದುಕಿಗೆ ಸೆಲ್ಕೋ ಸೋಲಾರ್ ಸಂಸ್ಥೆ ದಾರಿ ದೀಪವಾಗಿದೆ. ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಶಿವಪ್ಪ ಕುಲಾಲ್ ಎಂಬವರ ಪತ್ನಿ ಇಂದಿರಾ ಈ ಹಿಂದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಅಗರ್ ಬತ್ತಿ ತಯಾರಿಕಾ ಘಟಕದಲ್ಲಿ ಹಲವು ವಷರ್ಷಗಳ ಕಾಲ ಕಾರ್ಯ ನಿರ್ವಹಿಸುತಿದ್ದರು. ಇದರಿಂದ ಸ್ಪೂರ್ತಿ ಪಡೆದು ಏನಾದರೂ ಸ್ವ ಉದ್ಯೋಗ ಮಾಡಬೇಕೆಂದು ಯೋಚಿಸುತ್ತಿದ್ದಾಗ ಅವರ ನೆರೆವಿಗೆ ಬಂದದ್ದು ಸೆಲ್ಕೋ ಸೋಲಾರ್ ಸಂಸ್ಥೆ. ಮಣಿಹಳ್ಳ ಬಳಿ ರಾಷ್ಟ್ರೀಯ ಹೆದ್ದಾರಿ ಬದಿ ಸೋಲಾರ್ ಆಧಾರಿತ ಅಂಗಡಿ ವ್ಯವಹಾರವನ್ನು ಆರಂಭಿಸಿದ್ದಾರೆ. ಸಬ್ಸಿಡಿ ಆಧಾರದಲ್ಲಿ ಸಾಲಸೌಲಭ್ಯವನ್ನು ಒದಗಿಸಿ ಮಹಿಳೆಯ ಸ್ವಾವಲಂಬಿ ಉದ್ಯಮಕ್ಕೆ ಸೆಲ್ಕೋ ಸಂಸ್ಥೆ ನೆರವಾಗಿದೆ. ಇವರ ಅಂಗಡಿಯಲ್ಲಿ ತಂಪು ಪಾನೀಯಗಳು ಹಾಗೂ…
ಬಂಟ್ವಾಳ: ಇತಿಹಾಸ ಪ್ರಸಿದ್ಧ ಕಾರಿಂಜೇಶ್ವರ ದೇವಾಲಯವನ್ನು ಸೂಕ್ಷ್ಮ ವಲಯವನ್ನಾಗಿ ಘೋಷಣೆ ಮಾಡುವ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿದ್ದು, ಜಿಲ್ಲಾಧಿಕಾರಿ ವರದಿ ಬಳಿಕ ಸರಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಉಸ್ತವಾರಿ ಸಚಿವ ಸುನಿಲ್ ಕುಮಾರ್ ಕಾರ್ಕಳ ತಿಳಿಸಿದರು.ಅವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಜೊತೆಗೆ ಕಾರಿಂಜೇಶ್ವರ ದೇವಸ್ಥಾನಕ್ಕೆ ಬೇಟಿ ನೀಡಿದ ಬಳಿಕ ಪತ್ರ ಕರ್ತರ ಜೊತೆ ಮಾತನಾಡಿದರು. ಅಕ್ರಮ ಕಲ್ಲು ಗಣಿಗಾರಿಕೆಯಿಂದ ಸಾನಿಧ್ಯಕ್ಕೆ ಅಪಾಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ಭಕ್ತರು ಮತ್ತು ಸಂಘಟನೆಯರ ಈ ಬಗ್ಗೆ ಸ್ಥಳೀಯ ಶಾಸಕ ಹಾಗೂ ನನ್ನ ಗಮನ ಕ್ಕೆ ತಂದಿದ್ದರು. ಈ ಹಿನ್ನೆಲೆ ಯಲ್ಲಿ ಈಗಾಗಲೇ ಸಾಕಷ್ಟು ಸುತ್ತಿನ ಮಾತುಕತೆಗಳನ್ನು ನಡೆಸಲಾಗಿದ್ದು, ಧಾರ್ಮಿಕ ಸೂಕ್ಮ ಪ್ರದೇಶ ಘೋಷಣೆ ಯ ನಿರ್ಧಾರ ಕ್ಕೆ ಬರಲಾಗಿದೆ ಎಂದು ಅವರು ತಿಳಿಸಿದರು.ಕಾರಿಂಜ ಕ್ಷೇತ್ರವನ್ನು ಪ್ರವಾಸೋದ್ಯಮ ಇಲಾಖೆಯ ಮೂಲಕ ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣವಾಗಿ ಮಾರ್ಪಾಡು ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್…
ಬಂಟ್ವಾಳ: ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಪ್ರತಿಭಾಕಾರಂಜಿ ಮತ್ತು ಕಲೋತ್ಸವದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ ಶಾಲೆ ಹಾಗೂ ಊರಿಗೆ ಕೀರ್ತಿ ತಂದ ಬಂಟ್ವಾಳ ಎಸ್.ವಿ.ಎಸ್.ದೇವಳ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಮಂಗಳವಾರ ಬಂಟ್ವಾಳ ಪೇಟೆಯಲ್ಲಿ ಸಂಭ್ರಮದ ಮೆರವಣಿಗೆ ನಡೆಸಿ ಅಭಿನಂದಿಸಲಾಯಿತು. ವಿದ್ಯಾರ್ಥಿಗಳಾದ ವೈಷ್ಣವಿ ಜಿ, ಆಯಿಶಾತುಲ್ ಅಸೀಬಾ, ಸಿ.ಪ್ರತೀಕ್ಷಾಪೈ, ಧನ್ಯತಾ ಬಾಳಿಗಾ, ರಿಕ್ ಪೋವೆಲ್ ಡಿಸೋಜಾ, ಗಗನ್ ಪಿ. ಅಮೀನ್ ಅವರು ಕವ್ವಾಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಹಾಗೂ ಶ್ರೀನಿಧಿ ಪಿ.ಎಸ್. ಸಾಮಾನ್ಯ ಕನ್ನಡ ಭಾಷಣದಲ್ಲಿ ಸಮಾಧಾನಕರ ಬಹುಮಾನವನ್ನು ಪಡೆದಿರುತ್ತಾರೆ. ಶಾಲಾ ವಿದ್ಯಾರ್ಥಿಗಳ ವಾದ್ಯಗೋಷ್ಠಿ ಮೆರವಣಿಗೆಗೆ ವಿಶೇಷ ಮೆರಗು ನೀಡಿತು. ಶಾಲೆಯ ಎಲ್ಲಾ ವಿದ್ಯಾರ್ಥಿಗಳು,ಶಿಕ್ಷಕ-ಶಿಕ್ಷಕಿಯರು ಹಾಗೂ ಆಡಳಿತ ಸಮಿತಿ ಸದಸ್ಯರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಶಾಲಾ ವಠಾರದಿಂದ ಹೊರಟ ಮೆರವಣಿಗೆ ಬಂಟ್ವಾಳ ರಥಬೀದಿ, ಬಡ್ಡಕಟ್ಟೆಯವರೆಗೆ ಸಾಗಿ ಅಲ್ಲಿಂದ ವಾಪಾಸ್ ಬಂದು ತ್ಯಾಗರಾಜ ರಸ್ತೆಯ ಮೂಲಕ ತೆರಳಿ ಶಾಲೆಯಲ್ಲಿ ಸಂಪನ್ನಗೊಂಡಿತು. ಬಳಿಕ ಬಹುಮಾನ ವಿಜೇತ ವಿದ್ಯಾರ್ಥಿಗಳನ್ನು…
ಬಂಟ್ವಾಳ: ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಕಂಪೆನಿ ಲಿಮಿಟೆಡ್ ಇದರ ಬಂಟ್ವಾಳ ಶಾಖಾ ವತಿಯಿಂದ ಬಂಟ್ವಾಳ ತಾಲೂಕಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಧಿ ವಿತರಣಾ ಕಾರ್ಯಕ್ರಮ ಜನವರಿ ೧೨ ರಂದು ಗುರುವಾರ ಬೆಳಿಗ್ಗೆ ೧೦ ಗಂಟೆಗೆ ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ನಡೆಯಲಿದೆ. ಕಂಪೆನಿಯ ಝೋನಲ್ ಬಿಝಿನೆಸ್ ಹೆಡ್ ಶರಶ್ಚಂದ್ರ ಭಟ್ ಕಾಕುಂಜೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಬಂಟ್ವಾಳ ಶಾಸಕ ಯು. ರಾಜೇಶ್ ನಾಕ್ ವಿದ್ಯಾರ್ಥಿ ನಿಧಿ ವಿತರಣೆ ಮಾಡುವರು. ಮುಖ್ಯ ಅತಿಥಿಗಳಾಗಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ, ಹಿರಿಯ ಸಾಹಿತಿ ನೇಮು ಪೂಜಾರಿ, ನಿವೃತ್ತ ಅಧ್ಯಾಪಕ ನಾರಾಯಣ ನಾಯ್ಕ, ಪೊಲೀಸ್ ಅಧಿಕಾರಿ ಪರಮೇಶ್ವರ, ನ್ಯಾಯವಾದಿಗಳಾದ ಪ್ರಸಾದ್ ಕುಮಾರ್ ರೈ, ಉಮೇಶ್ ಕುಮಾರ್ ವೈ, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಆಚಾರ್ಯ, ಸಂಸ್ಥೆಯ ಝೋನಲ್ ರಿಕವರಿ ಹೆಡ್ ನಾಗರಾಜ ಬಿ, ಸ್ಟೇಟ್ ಹೆಡ್ ಸದಾಶಿವ, ರೀಜನಲ್ ಬಿಝಿನೆಸ್ ಹೆಡ್ ಚೇತನ್ ಅರಸ್, ರೀಜನಲ್…
ಮಂಗಳೂರು: ಹಿರಿಯ ಸಾಹಿತಿ, ಲೇಖಕಿ ಡಾ.ಸಾರಾ ಅಬೂಬಕರ್(87) ಮಂಗಳವಾರ ಮಧ್ಯಾಹ್ನ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ನಾಲ್ವರು ಪುತ್ರರು ಹಾಗೂ ಅಪಾರ ಬಂಧುಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ. ಮೂಲತಃ ಕಾಸರಗೋಡಿನ ಚಂದ್ರಗಿರಿ ತೀರದವರಾದ ಸಾರಾ ವಿವಾಹವಾದ ಬಳಿಕ ಮಂಗಳೂರಿನ ಹ್ಯಾಟ್ ಹಿಲ್ ಬಳಿ ವಾಸವಾಗಿದ್ದರು. ‘ಚಂದ್ರಗಿರಿ ತೀರದಲ್ಲಿ’ ಕಾದಂಬರಿಯ ಮೂಲಕ ಪ್ರಸಿದ್ಧಿಗೆ ಬಂದಿದ್ದ ಸಾರಾ ಅಬೂಬಕರ್ ಅನೇಕ ಕೃತಿಗಳನ್ನು ರಚಿಸಿ ಖ್ಯಾತರಾಗಿದ್ದರು. ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಮಂಗಳೂರಿನ ಬಂದರ್ ಝೀನತ್ ಬಕ್ಷ್ ಮಸೀದಿ ಆವರಣದ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮಹಿಳಾ ಧ್ವನಿಯಾಗಿದ್ದ ಸಾರಾ ಅಬೂಬಕರ್ ಅವರು 1936ರ ಜೂನ್ 30ರಂದು ಕಾಸರಗೋಡಿನ ಚಂದ್ರಗಿರಿ ತೀರದ ಗ್ರಾಮವೊಂದರಲ್ಲಿ ಜನಿಸಿದರು. ನ್ಯಾಯವಾದಿ ಪಿ.ಅಹ್ಮದ್ ಮತ್ತು ಜೈನಾಬಿ ದಂಪತಿಯ ಪುತ್ರಿಯಾಗಿರುವ ಅವರು ಹುಟ್ಟೂರಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ್ದರು. ಕಾಸರಗೋಡಿನಲ್ಲಿ ಹೈಸ್ಕೂಲ್ ಪೂರೈಸಿದ ಸಾರಾ ತನ್ನ ಅಜ್ಜಿ ಹೇಳುತ್ತಿದ್ದ ಕಥೆಗಳಿಂದಾಗಿ ಅವರು ಎಳೆಯದರಲ್ಲೇ…
ಬಂಟ್ವಾಳ: ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ,ಬಂಟ್ವಾಳ ಇದರ 15 ನೇಉಪ್ಪಿನಂಗಡಿ ಶಾಖೆಯು ಬ್ಯಾಂಕ್ ರಸ್ತೆಯಲ್ಲಿರುವ ಕೋಟೆ ಕೆಂಪಿನಮಜಲು “ಗೌರಿಕಾಂಪ್ಲೆಕ್ಸ್” ನ ಒಂದನೇ ಮಹಡಿಯಲ್ಲಿ ಜನವರಿ14 ರಂದು ಶುಭಾರಂಭಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಸುರೇಶ್ ಕುಲಾಲ್‌ತಿಳಿಸಿದ್ದಾರೆ. ಸೋಮವಾರ ಬಂಟ್ವಾಳ ಬೈಪಾಸ್ ನಲ್ಲಿರುವ ಸಂಘದ ಕೇಂದ್ರ ಕಚೇರಿಯಲ್ಲಿಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ದೀಪ ಪ್ರಜ್ವಲನಗೈದು ಆಶೀರ್ವಚನ ನೀಡಲಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ನೂತನ ಶಾಖೆಯನ್ನು ಉದ್ಘಾಟಿಸುವರು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಭದ್ರತಾಕೊಠಡಿ,ಮಾಜಿ ಸಚಿವ ರಮಾನಾಥ ರೈ ಅವರು ಕಂಪ್ಯೂಟರ್,ಮೈಸೂರು ಸಹಕಾರ ಸಂಘಗಳ ಜಂಟಿ ನಿಬಂಧಕರಾದ ಡಾ.ಜಿ.ಉಮೇಶ್ ಸೇಪ್ ಲಾಕರನ್ನು ಉದ್ಘಾಟಿಸುವರು, ಮಂಗಳೂರು ಸಹಕಾರ ಸಂಘಗಳ ಉಪನಿಬಂಧಕರಾದ ಎಚ್.ಎನ್.ರಮೇಶ್ ಠೇವಣಿಪತ್ರ ಬಿಡುಗಡೆಗೊಳಿಸಲಿದ್ದಾರೆ. ಸ್ಥಳೀಯ ಗಣ್ಯರು ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.ಸ್ವಾತಂತ್ರ್ಯ ಯೋಧ ದಿ.ಡಾ.ಅಮ್ಮೆಂಬಳ ಬಾಳಪ್ಪ ಹಾಗೂ ಸಹಕಾರಿ ಧುರೀಣ ಹೂವಯ್ಯ ಮೂಲ್ಯ ಅವರ ಸಾರಥ್ಯದಲ್ಲಿ 131…








