ಬಂಟ್ವಾಳ: ತಲೆಬತಗ್ಗಿಸಿ ಮತ ಕೇಳುವ ಪರಿಸ್ಥಿತಿ ಬಿಜೆಪಿಯ ಅಭ್ಯರ್ಥಿಗಳಿಗೆ ಬಂದಿಲ್ಲ ಎನ್ನುವುದೇ ಬಿಜೆಪಿ ಕಾರ್ಯಕರ್ತರ ಹೆಮ್ಮೆ. ಚುನಾವಣೆಯ ಯುದ್ದಕ್ಕೆ ನಾವೆಲ್ಲ ಪಕ್ಷದ ಸೈನಿಕರಂತೆ ಸಿದ್ದರಾಗಬೇಕು ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ನಡೆದ ಗ್ರಾಮ ವಿಕಾಸ ಯಾತ್ರೆ- ಗ್ರಾಮದೆಡೆಗೆ ಶಾಸಕರ ನಡಿಗೆಯ 8ನೇ ದಿನದ ಪಾದಯಾತ್ರೆಯ ಸಮಾರೋಪವಾಗಿ ಪಿಲಾತಬೆಟ್ಟು ಗ್ರಾಮದ ಶ್ರೀ ಬ್ರಹ್ಮಬೈದರ್ಕಳ ಗರಡಿ ಬಳಿನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಬಹುಮತ ಪಡೆದ ಕಾಗ್ರೆಸ್ ಸರಕಾರ ಅಧಿಕಾರದಲ್ಲಿ ಇದ್ದಾಗ ಅವರಿಗೆ ಯಾಕೆ ಅನುದಾನ ತರಲು ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಗೆ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ, ಮುಖ್ಯಮಂತ್ರಿ ಆದವರ ಕ್ಷೇತ್ರವೂ ಅಭಿವೃದ್ಧಿ ಆಗಿಲ್ಲ ಎಂದು ಟೀಕಿಸಿದರು. ಬಿಜೆಪಿ ಶಾಸಕರು ಬಹುಮತ ಪಡೆದು ಅಧಿಕಾರಕ್ಕೆ ಬಂದು 5 ವರ್ಷ ದ ಪೂರ್ಣ ಅವಕಾಶ ಸಿಕ್ಕಲ್ಲಿ ನಮ್ಮ ಊರಿನ ಅಭಿವೃದ್ಧಿ ಹೇಗಾಗ ಬಹುದು ಊಹಿಸಿ ಎಂದರು.
ಅಯೋಧ್ಯೆ ವಿಚಾರವಾಗಿ ಯಾವುದೇ ವರದಿಯನ್ನು ಕಾಂಗ್ರೆಸ್ ನೀಡಿಲ್ಲ. ಇಂದು ನ್ಯಾಯಾಲಯಲ್ಲಿ ಸಮಸ್ಯೆ ಇತ್ಯರ್ಥಗೊಂಡು ಒಂದು ರಕ್ತ ಬಿಂದು ರಕ್ತಪಾತವಾಗದೆ ರಾಮ ಮಂದಿರ ನಿರ್ಮಾಣವಾಗುತ್ತಿದೆ ಎಂದರು. ಕಾಶ್ಮೀರವನ್ನು ಭಾರತದ ಜೊತೆ ಜೋಡಿಸುವ ಕೆಲಸವನ್ನು ಪ್ರಧಾನಿ ಮೋದಿ ಮಾಡಿದ್ದಾರೆ. ಭಾರತ ಬಾಂಗ್ಲ ಗಡಿಯನ್ನು ಗುರುತಿಸಿ ಅಕ್ರಮ ವಲಸಿಗರನ್ನು ವಾಪಸ್ಸು ಕಳುಹಿಸಿ ಮೋದಿ ಹೇಳಿದ್ದೆಲ್ಲವನ್ನು ಮಾಡಿದ್ದಾರೆ ಎಂದರು.
ಹಿಂದೆ ನಮ್ಮ ದೇಶದಲ್ಲಿ 10 ದಿನಕ್ಕೆ ಬೇಕಾದಷ್ಟು ಮಾತ್ರ ಶಸ್ತ್ರಾಸ್ತ್ರ ಹೊಂದಿತ್ತು. ಆತ್ಮ ನಿರ್ಭರತೆ ನಮ್ಮಲ್ಲಿರಲಿಲ್ಲ. ಆದರೆ ದೇಶದ ಯೋಧರಿಗೆ ಶಕ್ತಿ ತುಂಬುವ ಕೆಲಸವನ್ನು ಕೇಂದ್ರ ಸರಕಾರ ಮಾಡಿದೆ. ಮೊದಲ ಭಾರಿಗೆ ನಮ್ಮ ಯೋಧರಿಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ತಿಳಿಸಿದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತನಾಡಿ ಕ್ಷೇತ್ರಕ್ಕೆ ಅನುದಾನ ತರುವ ಪ್ರಾಮಾಣಿಕ ಪ್ರಯತ್ನ ರಾಜೇಶ್ ನಾಯ್ಕ್ ಮಾಡಿದ್ದಾರೆ. 2ಸಾವಿರ ಕೋಟಿ ಅನುದಾನ ತರುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಪಶ್ವಿಮವಾಹಿನಿ ಯೋಜನೆಯ ಮೂಲಕ 38 ಕಿಂಡಿ ಅಣೆಕಟ್ಟು ನಿರ್ಮಾಣಗೊಂಡು ಸುತ್ತಮುತ್ತ ಅಂತರ್ಜಲ ಹೆಚ್ಚಿಸಿ ರೈತರಿಗೆ ಅನುಕೂಲವಾಗುವ ಕಾರ್ಯ ವನ್ನು ರಾಜೇಶ್ ನಾಯ್ಕ್ ಮಾಡಿದ್ದಾರೆ. ಬಿ.ಸಿ.ರೋಡಿನಿಂದ ಪುಂಜಲಕಟ್ಟೆವರೆಗೆ ನಿರ್ಮಾಣಗೊಂಡ ಸರ್ವ ಋತು ರಸ್ತೆಯಿಂದ ಬೆಳ್ತಂಗಡಿ ತಾಲೂಕಿನ ಜನರಿಗೆ ಹೆಚ್ಚಿನ ಪ್ರಯೋಜನ ಆಗಿದೆ. ಪುಂಜಾಲಕಟ್ಟೆ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೇಗೇರಿರುವುದರಿಂದ ಈ ಭಾಗದ ಎಲ್ಲಾ ಜನರಿಗೂ ಪ್ರಯೋಜನವಾಗಲಿದೆ. ಅವರೋರ್ವ ಆಪತ್ಭಾಂದವ ಶಾಸಕ. ಮುಂದಿನ ಚುನಾವಣೆಯಲ್ಲಿ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲಬೇಕು ಎಂದರು.
ಶಾಸಕ ರಾಜೇಶ್ ನಾಯ್ಕ್ ಮಾತನಾಡಿ ಕಳೆದ 8 ದಿನದಲ್ಲಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಕಾರ್ಯಕರ್ತರ ಪ್ರೀತಿ ವಿಶ್ವಾಸ ಸಿಕ್ಕಿದೆ. ರಾಜ್ಯವೇ ನಮ್ಮತ್ತ ನೋಡುತ್ತಿದೆ. ಶಿಸ್ತಿನಿಂದ ನಡೆಯುವ ಈ ಪಾದಾಯಾತ್ರೆ ಪಕ್ಷ ಸಂಘಟನೆಗೆ ಸಹಕರಿಯಾಗಲಿದೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ, ಕ.ನ.ನೀ.ಸ.ಒ. ಮಂಡಳಿ ಸದಸ್ಯೆ ಸುಲೋಚನಾ ಜಿ.ಕೆ.ಭಟ್, ಜಿ.ಪಂ. ಮಾಜಿ ಸದಸ್ಯ ಎಂ. ತುಂಗಪ್ಪ ಬಂಗೇರ, ಗ್ರಾಮ ವಿಕಾಸ ಯಾತ್ರೆಯ ಸಹ ಸಂಚಾಲಕ ಸುದರ್ಶನ ಬಜ, ಉಳಿ ಗ್ರಾ.ಪಂ. ಅಧ್ಯಕ್ಷ ಸುರೇಶ್ ಮೈರ, ಚಿದಾನಂದ ರೈ ಕಕ್ಯ ಉಪಸ್ಥಿತರಿದ್ದರು.
ಮಂಡಲ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಸ್ವಾಗತಿಸಿದರು. ಗ್ರಾಮ ವಿಕಾಸ ಯಾತ್ರೆಯ ಸಂಚಾಲಕ ದೇವದಾಸ್ ಶೆಟ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ವಿವರ ನೀಡಿದರು. ದೇವದಾಸ್ ಕಜೆಕಾರ್ ನಿರೂಪಿಸಿದರು ಸಹಸಂಚಾಲಕ ಸುದರ್ಶನ ಬಜ ವಂದಿಸಿದರು.
ಇಳಿಯೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಆರಂಭಗೊಂಡ ಗ್ರಾಮ ವಿಕಾಸ ಪಾದಯಾತ್ರೆ ಪಾಂಡವರಕಲ್ಲು ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರವನ್ನು ತಲುಪಿತು.
ಮುಖಪುಟ
ಸುದ್ದಿ
ಬಂಟ್ವಾಳ ಫರಂಗಿಪೇಟೆ
ವಾಮದಪದವು
ವಿಟ್ಲ
ಮಾಣಿ
ಕಲ್ಲಡ್ಕ
ವಿಶೇಷ-ವೈವಿಧ್ಯ
ಸಮಾಜಮುಖಿ
ಯೂಟ್ಯೂಬ್ ಚಾನೆಲ್/ವಿಡಿಯೋ
ತಲೆಬತಗ್ಗಿಸಿ ಮತ ಕೇಳುವ ಪರಿಸ್ಥಿತಿ ಬಿಜೆಪಿಯ ಅಭ್ಯರ್ಥಿಗಳಿಗೆ ಬಂದಿಲ್ಲ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Advertisement
Advertisement
Related Posts
Add A Comment