ಬಂಟ್ವಾಳ: ದೇಶಕ್ಕೆ ಭ್ರಷ್ಠಾಚಾರದ ಕೊಡುಗೆಯನ್ನು ನೀಡಿದ ಕಾಂಗ್ರೆಸಿಗರು. ಭಾರತ್ ಜೋಡೋ, ನಾ ನಾಯಕಿ ಕಾರ್ಯಕ್ರಮವನ್ನು ಆಯೋಜಸಿತ್ತಿರುವುದು ನಾಚಿಗೇಡು ಎಂದು ಮಾಜಿ ಶಾಸಕ ರುಕ್ಮಯ ಪೂಜಾರಿ ಹೇಳಿದರು.
ಅವರು ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ನಡೆದ ಗ್ರಾಮವಿಕಾಸ ಯಾತ್ರೆ- ಗ್ರಾಮದೆಡೆಗೆ ಶಾಸಕರ ನಡಿಗೆಯ 6ನೇ ದಿನದ ಪಾದಯಾತ್ರೆಯ ಸಮಾರೋಪವಾಗಿ ಬಾಳ್ತಿಲ ಗ್ರಾಮದ ನೀರಪಾದೆ ಶ್ರೀ ಕುಂದಾಯ ರಕ್ತೇಶ್ವರೀ ಮಹಮ್ಮಾಯಿ ದೇವಸ್ಥಾನದ ವಠಾರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ಅಲ್ಪಸಂಖ್ಯಾತರನ್ನು ತುಷ್ಠೀಕರಣ ಮಾಡುವುದು ಜಾತ್ಯತೀತಯೇ? ಎಂದು ಪ್ರಶ್ನಿಸಿದ ಅವರು
ಬಿಜೆಪಿ ಸರ್ಕಾರದ ಸಾಧನೆ ಸಣ್ಣದೇನಲ್ಲ. ಆದರೆ ಕಾಂಗ್ರೆಸ್ಸಿಗರು ಅಪ್ರಚಾರ ಮಾಡಿತ್ತಿದ್ದಾರೆ. ಈ ಬಗ್ಗೆ ಬಿಜೆಪಿ ಕಾರ್ಯಕರ್ತರು ಎಚ್ಚೆತ್ತುಕೊಳ್ಳಬೇಕು ಎಂದರು.
ಜನರಿಗೆ ಸಮಸ್ಯೆ ಬಂದಾಗ ತಕ್ಷಣ ಸ್ಪಂದಿಸುವ ಕಾರ್ಯವನ್ನು ರಾಜೇಶ್ ನಾಯ್ಕ್ ಮಾಡುತ್ತಿದ್ದಾರೆ.
ವೈಯಕ್ತಿಕ ಅಸಮಾಧಾನವನ್ನೇ ಮುಂದಿಟ್ಟುಕೊಂಡು ಬೇರೆ ಪಕ್ಷಗಳು ಅಧಿಕಾರಕ್ಕೆ ಬಂದರೆ ನಾವು ಬದುಕಲು ಸಾಧ್ಯವಿಲ್ಲ. ಅದನ್ನು ನಾವು ಅರ್ಥೈಸಿಕೊಂಡು ಪಕ್ಷಕ್ಕಾಗಿ ದುಡಿಯಬೇಕಾಗಿದೆ ಎಂದರು.
ಶಾಸಕ ರಾಜೇಶ್ ನಾಯ್ಕ್ ಮಾತನಾಡಿ ಕ್ಷೇತ್ರದ ಅಭಿವೃದ್ದಿ ಕಾರ್ಯಗಳು ನಮ್ಮ ಕಣ್ಣ ಮುಂದೆಯೇ ಇದೆ. ಪಕ್ಷಕ್ಕಾಗಿ ನಾವು ಜೊತೆಯಾಗಿ ದುಡಿಯೋಣ ಎಂದು ತಿಳಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ನಿಗಮ ಸದಸ್ಯೆ ಸುಲೋಚನಾ ಜಿ.ಕೆ. ಭಟ್, ಗ್ರಾಮ ವಿಕಾಸ ಯಾತ್ರೆಯ ಸಹ ಸಂಚಾಲಕ ಮಾಧವ ಮಾವೆ, ನರಿಕೊಂಬು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಬಾಳ್ತಿಲ ಗ್ರಾ.ಪಂ. ಅಧ್ಯಕ್ಷೆ ಹಿರಣ್ಮಯಿ, ನರಿಕೊಂಬು ಗ್ರಾ.ಪಂ.ಪಂಚಾಯತಿ ಅಧ್ಯಕ್ಷೆ ವಿನುತಾ ಪುರುಷೋತ್ತಮ, ಉಪಾಧ್ಯಕ್ಷ ಪ್ರಕಾಶ್ ಮಡಿಮುಗೇರ್ ಉಪಸ್ಥಿತರಿದ್ದರು.
ಬಾಳ್ತಿಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮೋಹನ್ ಪಿ.ಎಸ್. ಸ್ವಾಗತಿಸಿದರು. ಗ್ರಾಮ ವಿಕಾಸ ಯಾತ್ರೆಯ ಸಂಚಾಲಕ ದೇವದಾಸ್ ಶೆಟ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ವಿವರ ನೀಡಿದರು. ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಮುಖಪುಟ
ಸುದ್ದಿ
ಬಂಟ್ವಾಳ ಫರಂಗಿಪೇಟೆ
ವಾಮದಪದವು
ವಿಟ್ಲ
ಮಾಣಿ
ಕಲ್ಲಡ್ಕ
ವಿಶೇಷ-ವೈವಿಧ್ಯ
ಸಮಾಜಮುಖಿ
ಯೂಟ್ಯೂಬ್ ಚಾನೆಲ್/ವಿಡಿಯೋ
ವೈಯಕ್ತಿಕ ಅಸಮಧಾನವನ್ನು ಮರೆತು ಪಕ್ಷಕಾಗಿ ಕೆಲಸ ಮಾಡಿ: ಮಾಜಿ ಶಾಸಕ ಎ. ರುಕ್ಮಯ ಪೂಜಾರಿ
Advertisement
Advertisement
Previous Articleಸಂಚಯಗಿರಿ ನಾಗರಿಕ ಕ್ರಿಯಾ ಸಮಿತಿ ಅಧ್ಯಕ್ಷರಾಗಿ ಸುರೇಶ ಬಂಗೇರ ಪುನರಾಯ್ಕೆ
Related Posts
Add A Comment