ಬಂಟ್ವಾಳ: ಇಲ್ಲಿಗೆ ಬೈಪಾಸ್ ನಿತ್ಯಾನಂದ ನಗರದಲ್ಲಿ ವಿನೂತನ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಶ್ರೀ ಸದ್ಗುರು ನಿತ್ಯಾನಂದ, ಗೋವಿಂದ ಸ್ವಾಮಿ ಮಂದಿರದ ಲೋಕಾರ್ಪಣೆ ಹಾಗೂ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಪ್ರಯುಕ್ತ ಹಸಿರುವಾಣಿ ಹೊರೆಕಾಣಿಕೆ ಹಾಗೂ ಶ್ರೀ ನಿತ್ಯಾನಂದ ಸ್ವಾಮಿ ಮತ್ತು ಶ್ರೀಗೋವಿಂದ ಸ್ವಾಮಿಗಳ ಪಂಚಲೋಹದ ವಿಗ್ರಹಗಳ ವೈಭವಪೂರ್ಣವಾದ ಮೆರವಣಿಗೆ ಭಾನುವಾರ ಮಧ್ಯಾಹ್ನ ನಡೆಯಿತು.
ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಸ್ಥಾನದ ವಠಾರದಿಂದ ಹೊರಟ ಶ್ರೀ ಗುರುದ್ವಯರ ವಿಗ್ರಹ ಮತ್ತು ಹಸಿರುವಾಣಿ ಮೆರವಣಿಗೆಯು ಬಂಟ್ವಾಳ ರಥಬೀದಿ,ಮಾರ್ಕೆಟ್ ರಸ್ತೆಯಾಗಿ , ಜಕ್ರಿಬೆಟ್ಟು,ಬೈಪಾಸ್ ರಸ್ತೆಯ ಮೂಲಕ ನಿತ್ಯಾನಂದನಗರದಲ್ಲಿರುವ ಮಂದಿರದಲ್ಲಿ ಸಂಪನ್ನಗೊಂಡಿತು.
ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಮೆರವಣಿಗೆಗೆ ಚಾಲನೆ ನೀಡಿದರು.
ಕಾಂಞಗಾಂಡ್ ನಿತ್ಯಾನಂದ ಆಶ್ರಮದ ಶ್ರೀ ಗಣಪತಿ ಸ್ವಾಮೀಜಿ, ಹಿಮಾಚಲ ಪ್ರದೇಶದ ಮಹಾಂತ್ ವಿದ್ಯಾನಂದ ಸರಸ್ವತಿ ಸ್ವಾಮೀಜಿ,
ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ದಿನೇಶ್ ಭಂಡಾರಿ,ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ, ಗೌರವಾಧ್ಯಕ್ಷ ಸುರೇಶ್ ಕುಲಾಲ್, ಪುರಸಭಾ ಸದಸ್ಯರಾದ ಗೋವಿಂದಪ್ರಭು,ಗಂಗಾಧರ ಪೂಜಾರಿ,ದೇವಕಿ, ಸಮಿತಿ ಪದಾಧಿಕಾರಿಗಳಾದ ಉದಯಕುಮಾರ್ ರಾವ್ ಬಂಟ್ವಾಳ, ಚೆನ್ನಕೇಶವ ಡಿ.ಆರ್., ಹರೀಶ್ ಎಂ.,ಸೋಮಪ್ಪ ಪೂಜಾರಿ ಹೊಸ್ಮಾರ್,ನಾಗೇಶ್ ಕುಲಾಲ್,ರಾಮದಾಸ್ ಬಂಟ್ವಾಳ,ಪದ್ಮನಾಭ ಬಿ.,ಗೋಪಾಲ್,ಜನಾರ್ದನ ಬೊಂಡಾಲ,ಜಯಪ್ರಕಾಶ್ ಜಕ್ರಿಬೆಟ್ಟು,ಕುಣಿತ ಭಜನೆ ,ಚೆಂಡೆ ಮೆರವಣಿಗೆಗೆ ವಿಶೇಷ ಮೆರಗು ನೀಡಿತು.ನೂರಾರು ಸಂಖ್ಯೆಯಲ್ಲಿ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು.
ಮಧ್ಯಾಹ್ನ ಶಾಸಕ ರಾಜೇಶ್ ನಾಯ್ಕ್ ಅವರು ಶ್ರೀ ನಿತ್ಯಾನಂದ,ಗೋವಿಂದ ಸ್ವಾಮಿ ಮಂದಿರದ ಪಾಕಶಾಲಾ ಕೇಂದ್ರವನ್ನು ದೀಪಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ಜ.23 ರಿಂದ ವಿವಿಧ ವೈಧಿಕ ವಿಧಿ ವಿಧಾನಗಳು,
ಜ.26 ರಂದು ಶ್ರೀಗುರುದ್ವಯರ ಪ್ರತಿಷ್ಠೆ ,ಮಂದಿರದ ಲೋಕಾರ್ಪಣೆ ಹಾಗೂ 27 ರಂದು ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದೆ.