
ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಕಚೇರಿ ಹಿಂದಿರುವ ಸೆಕ್ಯೂರ್ ಇನ್ಸೂರೆನ್ಸ್ ಕನ್ಸಲ್ಟೆನ್ಸಿ ಇದರ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಸೇವಾಂಜಲಿ ಪ್ರತಿಷ್ಠಾನ ಹಾಗೂ ಜೆಸಿಐ ಬಂಟ್ವಾಳದ ಸಹಯೋಗದೊಂದಿಗೆ, ಕೆಎಂಸಿ ಆಸ್ಪತ್ರೆ ಮಂಗಳೂರು ಇವರ ಸಹಕಾರದೊಂದಿಗೆ ಬಿ.ಸಿ.ರೋಡಿನ ಆರ್. ಡಿ. ಕಾಂಪ್ಲೆಕ್ಸ್ ನ ಸಭಾಂಗಣದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.


ಮೊಡಂಕಾಪು ಇನ್ಫೆಂಟ್ ಜೀಸಸ್ ಚರ್ಚ್ ನ ಸಹಾಯಕ ಧರ್ಮಗುರುಗಳಾದ ಅತೀ ವಂದನೀಯ ಲಾನ್ಸಿ ಡಿಸೋಜಾ ಸ್ವಯಂ ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.
ಬಳಿಕ ನಡೆದ ಸಭಾಕಾರ್ಯಕ್ರಮವನ್ನು ದೈಜಿವರ್ಲ್ಡ್ ನ ಸಂಸ್ಥಾಪಕ ವಾಲ್ಟರ್ ನಂದಳಿಕೆ ಉದ್ಘಾಟಿಸಿದರು. ಅವರು ಮಾತನಾಡಿ ಜೀವನದಲ್ಲಿ ಎಷ್ಟೇ ಹಣ ಗಳಿಸಿದರೂ ಇನ್ನೊಬ್ಬರ ಭಾವನೆ, ಕಾಳಜಿಯನ್ನು ಅರ್ಥಮಾಡಿಕೊಳ್ಳದಿದ್ದರೆ ಆತನ ಬದುಕು ಸಾರ್ಥಕವಾಗುವುದಿಲ್ಲ. ಇನ್ನೊಬ್ಬರ ಮನಸ್ಸಿಗೆ ಖುಷಿ ನೀಡುವುದೂ ಕೂಡ ಒಂದು ರೀತಿಯ ಚ್ಯಾರಿಟಿ ಎಂದು ತಿಳಿಸಿದರು.




ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸಮಾಜದ ಋಣ ಪ್ರತಿಯೊಬ್ಬ ವ್ಯಕ್ತಿಗೂ ಇದೆ. ಪ್ರಶಾಂತ್ ಫ್ರಾಂಕ್ ಸಾಧನೆಯ ಮೂಲಕ ಜನರ ವಿಶ್ವಾಸ ಗಳಿಸಿದ್ದಾರೆ. ರಕ್ತದಾನ ಶಿಬಿರ ಮಹತ್ತರವಾದ ಕೆಲಸ. ಒಂದು ಯುನಿಟ್ ರಕ್ತ ದಾನದಿಂದ ಮೂರು ಜನರ ಪ್ರಾಣ ಉಳಿಯುತ್ತದೆ ಎಂದು ತಿಳಿಸಿದರು.

ಸೆಕ್ಯೂರ್ ಇನ್ಸೂರೆನ್ಸ್ ಕನ್ಸಲ್ಟೆನ್ಸಿ ಸಂಸ್ಥಾಪಕ ಪ್ರಶಾಂತ್ ಪ್ರಾಂಕ್ ಪ್ರಾಸ್ತವಿಕವಾಗಿ ಮಾತನಾಡಿ ಎಲ್ಲಾ ವಿಮೆಗಳನ್ನು ಒಂದೆ ಸೂರಿನಡಿ ತರುವ ಉದ್ದೇಶದಿಂದ ಈ ಸಂಸ್ಥೆಯನ್ನು ಆರಂಭಿಸಿದ್ದೇನೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯ ವಿಮೆ ಹಾಗೂ ಅಪಘಾತ ವಿಮೆ ಅತ್ಯಂತ ಅವಶ್ಯಕವಾಗಿದ್ದು ಎಲ್ಲರೂ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭ ವಾಲ್ಟರ್ ನಂದಳಿಕೆ ಹಾಗೂ ಕೃಷ್ಣ ಕುಮಾರ್ ಪೂಂಜ ಅವರನ್ನು ಗೌರವಿಸಲಾಯಿತು.



ಎಂಡಿಆರ್ ಟಿ ಸಾಧನೆಗೈದ ರೆನಿಟಾ ರೇಷ್ಮ ಡಿ. ಪೌಲ್, ಜೆಸಿಂತಾ ಜ್ಯೋತಿ ಡಿಸೋಜಾ, ಅನಿತಾ, ಡಿಸೋಜಾ, ಅನಿಲ್ ರಾಕೇಶ್ ಡಿಸೋಜಾ ಅವರನ್ನು ಸನ್ಮಾನಿಸಲಾಯಿತು. ರಕ್ತದಾನ ಮಾಡಿದ ರಕ್ತದಾನಿಗಳಿಗೆ 5 ಲಕ್ಷ ಮೊತ್ತದ ಉಚಿತ ವಿಮೆ ನೀಡಲಾಯಿತು. ವೇದಿಕೆಯಲ್ಲಿ ಜೆಸಿಐ ಬಂಟ್ವಾಳದ ಅಧ್ಯಕ್ಷ ಕಿಶೋರ್ ಕುಮಾರ್ ಆಚಾರ್ಯ, ವೈಟ್ ಡೌಸ್ ಚಾಪ್ಲೆನ್ ನ ಧರ್ಮಗುರುಗಳಾದ ವಲೇರಿಯನ್ ಫ್ರಾಂಕ್ ಉಪಸ್ಥಿತರಿದ್ದರು.
ಮೊಡಂಕಾಪು ಇನ್ಫೆಂಟ್ ಜೀಸಸ್ ಚರ್ಚ್ ನ ಧರ್ಮಗುರುಗಳಾದ ಅತೀ ವಂದನೀಯ ವಿಕ್ಟರ್ ಡಿಸೋಜಾ, ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಅತೀ ವಂದನೀಯ ಸಿಲ್ವೆಸ್ಟರ್ ವಿನ್ಸೆಂಟ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ಅಮ್ಟಾಡಿ ಗ್ರಾ.ಪಂ. ಅಧ್ಯಕ್ಷ ವಿಜಯ್ ಮತ್ತಿತರರು ಭಾಗವಹಿಸಿದ್ದರು.


ಸಂಸ್ಥೆಯ ಅಕೌಂಟ್ಸ್ ವಿಭಾಗ ಮುಖ್ಯಸ್ಥೆ ನಿಶಾ ಮಿಥುನ್ ಶೆಟ್ಟಿ ಸ್ವಾಗತಿಸಿದರು, ಅಸೋಸಿಯೇಟ್ ವಿನಯ್ ಡಿಸೋಜ ವರದಿ ವಾಚಿಸಿದರು. ಸಂಸ್ಥೆಯ ಸಹಪಾಲುದಾರ ಜೆಸಿಂತಾ ಜ್ಯೋತಿ ವಂದಿಸಿದರು, ರಾಬಿನ್ ವಾಝ್ ಕಾರ್ಯಕ್ರಮ ನಿರೂಪಿಸಿದರು. ಜೆಸಿಐ ಬಂಟ್ವಾಳದ ಅಧ್ಯಕ್ಷ ಕಿಶೋರ್ ಕುಮಾರ್ ಆಚಾರ್ಯ,ಸೆಕ್ಯೂರ್ ಇನ್ಸೂರೆನ್ಸ್ ಕನ್ಸಲ್ಟೆನ್ಸಿ ಸಂಸ್ಥಾಪಕ ಪ್ರಶಾಂತ್ ಪ್ರಾಂಕ್ ಸಹಿತ ಅನೇಕ ಮಂದಿ ಸ್ವಯಂ ರಕ್ತದಾನ ಮಾಡಿದ್ದು ಶಿಬಿರದಲ್ಲಿ ಒಟ್ಟು 75 ಯುನಿಟ್ ರಕ್ತ ಸಂಗ್ರಹವಾಯಿತು.
Advertisement







