
ಬಂಟ್ವಾಳ: ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ ರಾಜ್ಯ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸುರೇಶ್ ಸಾಲ್ಯಾನ್ ಅವರಿಗೆ ಅಭಿನಂದನಾ ಸಮಾರಂಭ ಜ.13 ರಂದು ಮಂಗಳವಾರ ಬೆಳಿಗ್ಗೆ 10.30ಕ್ಕೆ ಬಿ.ಸಿ.ರೋಡಿನ ಅಂಬೇಡ್ಕರ್ ಸಭಾಭವನದಲ್ಲಿ ನಡೆಯಲಿದೆ.
ಅಸೋಸಿಯೇಷನ್ ನ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಯಾದೇಶ್ ತುಂಬೆ ಅಧ್ಯಕ್ಷತೆ ವಹಿಸುವರು, ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್ ಉದ್ಘಾಟಿಸುವರು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ದೀಪ ಪ್ರಜ್ವಲಿಸುವರು, ಮುಖ್ಯ ಅತಿಥಿಗಳಾಗಿ ತಹಶಿಲ್ದಾರ್ ಮಂಜುನಾಥ, ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ, ಕಾರ್ಮಿಕ ನಿರೀಕ್ಷಕಿ ಲವೀನಾ ಡಿಸೋಜಾ, ಕೆ ಎಸ್ ಟಿ ಎ ಸ್ಥಾಪಕಾಧ್ಯಕ್ಷ ಲಕ್ಷ್ಮಣ ಉಳ್ಳಾಲ, ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ವಚನ್ ಶೆಟ್ಟಿ, ಗ್ಯಾರೇಜು ಮಾಲಕರ ಸಂಘದ ಅಧ್ಯಕ್ಷ ಸುಧೀರ್ ಪೂಜಾರಿ ಮತ್ತಿತರ ಗಣ್ಯರು ಭಾಗವಹಿಸುವವರು ಎಂದು ಅಸೋಸಿಯೇಷನ್ ಪ್ರಕಟಣೆ ತಿಳಿಸಿದೆ.


Advertisement







