
ಬಂಟ್ವಾಳ: ಬಿಲ್ಲವ ಸೇವಾ ಸಮಿತಿ ಬೊಳ್ಳಾಯಿ ಇದರ ವತಿಯಿಂದ ಇತ್ತಿಚೆಗೆ ಬೊಳ್ಳಾಯಿ ಸಮೀಪ ಕಂಚಿಲ ಪರಿಸರದ ದೇವರಾಜ್ ಪೂಜಾರಿ ಅವರ ಪತ್ನಿ ಪುಷ್ಪ ಹಾಗೂ ದಿ.ಆನಂದ ಪೂಜಾರಿ ಅವರ ಪತ್ನಿ ರೇವತಿ ಎಂಬವರು ಅಗ್ನಿ ಅವಘಡದಿಂದ ತೀವ್ರವಾಗಿ ಗಾಯಗೊಂಡಿದ್ದು ಬಿಲ್ಲವ ಸೇವಾ ಸಮಿತಿ ಬೊಳ್ಳಾಯಿ ಇದರ ಅಧ್ಯಕ್ಷ ಪುರುಷೋತ್ತಮ ಪೂಜಾರಿ ಕೋಮಾಲಿ ಪಡೀಲ್ ಇವರ ನೇತೃತ್ವದಲ್ಲಿ ಸಾಂತ್ವನ ನಿಧಿಯ ಚೆಕ್ ನ್ನು ಹಸ್ತಾಂತರಿಸಲಾಯಿತು.


ಈ ಸಂದರ್ಭ ಸುಭಾಷ್ ನಗರ ಬಿಲ್ಲವ ಸೇವಾ ಸಂಘ ಇದರ ಅಧ್ಯಕ್ಷ ಮೊಹನ್ ದಾಸ್ ಪೂಜಾರಿ ಬೊಳ್ಳಾಯಿ, ಬಂಟ್ವಾಳ ತಾಲೂಕು ಪಿಡಬ್ಲ್ಯಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶೈಲೇಶ್ ಪೂಜಾರಿ ಕುಚ್ಚಿಗುಡೆ ಸಮಿತಿಯು ಗೌರವ ಅಧ್ಯಕ್ಷ ಸುಂದರ ಪೂಜಾರಿ ವಿಟ್ಲಕೋಡಿ, ಮಾಜಿ ಅಧ್ಯಕ್ಷ ಪ್ರಶಾಂತ್ ಪೂಜಾರಿ ವಿಟ್ಲಕೋಡಿ, ಕಾರ್ಯದರ್ಶಿ ನಾಗೇಶ್ ಪೂಜಾರಿ ಉಪಾಧ್ಯಕ್ಷ ಮಹೇಶ್ ಪೂಜಾರಿ ಪ್ರಮುಖರಾದ ತಿಲಕರ ಪೂಜಾರಿ ಮಿತ್ತಮಜಲ್, ನಾರಾಯಣ ಪೂಜಾರಿ ಪಟ್ಟುಗುಡ್ಡೆ ಯೋಗೀಂದ್ರ ಪೂಜಾರಿ ಕೋಮಾಲಿ, ಅಂತಪ್ಪ ಪೂಜಾರಿ ಕೊಮಾಲಿ, ವಿನೋದ್ ಪೂಜಾರಿ ಕೋಮಾಲಿ ಮತ್ತಿತರರು ಉಪಸ್ಥಿತರಿದ್ದರು.
Advertisement







