Author: admin

ಬಂಟ್ವಾಳ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯೋರ್ವರು ಪ್ರಸವ ವೇದನೆ ಕಾಣಿಸಿಕೊಂಡು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಬಿ ಸಿ ರೋಡು ರೈಲ್ವೇ ನಿಲ್ದಾಣದಲ್ಲಿ ಭಾನುವಾರ ರಾತ್ರಿ ವೇಳೆ ಸಂಭವಿಸಿದೆ. ಮೈಸೂರು ಮೂಲದ ನಿವಾಸಿ ಪೊನ್ನಮ್ಮ ಅವರೇ ರೈಲು ಗಾಡಿಯ ಬೋಗಿಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ ಎಂದು ತಿಳಿದು ಬಂದಿದೆ. ಮಂಗಳೂರು-ಬೆಂಗಳೂರು ನಡುವೆ ಸಂಚಾರದ ರೈಲಿನಲ್ಲಿ ಈ ಘಟನೆ ಸಂಭವಿಸಿದೆ. ಮಂಗಳೂರಿನಲ್ಲಿ ರೈಲು ಹತ್ತಿ ಪ್ರಯಾಣಿಸುತ್ತಿದ್ದ ತುಂಬು ಗರ್ಭಿಣಿ ಪೊನ್ನಮ್ಮಳಿಗೆ ಹಠಾತ್ ಆಗಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಅದೇ ರೈಲಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಮಹಿಳೆಯರು ಅವರನ್ನು ಆರಂಭದಲ್ಲಿ ಉಪಚರಿಸಿ, ಬಳಿಕ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಪಂದಿಸಿದ ರೈಲ್ವೆ ಇಲಾಖೆ ಬಿ.ಸಿ.ರೋಡಿನ ನಿಲ್ದಾಣದಲ್ಲಿ ಗಾಡಿಯನ್ನು ನಿಲ್ಲಿಸಿ, ಸ್ಥಳೀಯ ಸೋಮಯಾಜಿ ಆಸ್ಪತ್ರೆಯ ವೈದ್ಯರ ತಂಡವನ್ನು ಸ್ಥಳಕ್ಕೆ ಕರೆಸಿಕೊಂಡು ರೈಲು ಬೋಗಿಯೊಳಗೆ ಹೆರಿಗೆಗಾಗಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ವೈದ್ಯರ ತಂಡ ಯಶಸ್ವಿಯಾಗಿ ಮಹಿಳೆಗೆ ಹೆರಿಗೆ ಮಾಡಿಸಿದೆ. ಬಳಿಕ ತಕ್ಷಣ ಅಂಬ್ಯುಲೆನ್ಸ್ ಕರೆಸಿ…

Read More

ಬಂಟ್ವಾಳ: ಕುಕ್ಕಿಪಾಡಿ ಗ್ರಾಮದ ಕೋರ್ಯಾರು ಶ್ರೀ ದುರ್ಗಾ ಮಹಮ್ಮಾಯೀ ದೇವಸ್ಥಾನದ ಪುನರ್ ಪ್ರತಿಷ್ಠೆ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮಗಳು ಎಪ್ರಿಲ್ 26 ರಿಂದ ಮೇ 2 ರ ತನಕ ಜರುಗಲಿದೆ ಎಂದು ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಗೌಡ ಮಂಚಕಲ್ಲು ತಿಳಿಸಿದರು. ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು . ಎ‌.26 ರಂದು ಆದಿತ್ಯವಾರ 3 ಗಂಟೆಗೆ ಸಿದ್ದಕಟ್ಟೆ ನಲ್ಲೂರಂಗಡಿ ಬಸದಿಯಿಂದ ಹಸಿರು ಹೊರೆಕಾಣಿಕೆ ಮೆರವಣಿಗೆಗೆ ಸಂಗಬೆಟ್ಟು ವೀರಭದ್ರ ದೇವಸ್ಥಾನದ ಪ್ರಧಾನ ಅರ್ಚಕ ಪ್ರಭಾಕರ ಐಗಳ್ ಮತ್ತು ಸಿದ್ದಕಟ್ಟೆಯ ವೈದ್ಯ ಡಾI ಪ್ರಭಾಚಂದ್ರ ಜೈನ್ ಚಾಲನೆ ನೀಡಲಿದ್ದಾರೆ‌. ಗಣ್ಯರಾದ ಕಿರಣ್ ಕುಮಾರ್ ಮಂಜಿಲ,ಜಗತ್ಪಾಲ ಶೆಟ್ಟಿ ಉಮನೊಟ್ಟು , ಮಹಾವೀರ ಜೈನ್, ನಿತ್ಯಾನಂದ ಪೂಜಾರಿ ಕೆಂತಲೆ, ಸಂತೋಷ್ ಕುಮಾರ್ ರಾಯಿಬೆಟ್ಟು , ಪ್ರಭಾಕರ ಆಚಾರ್ಯ ,ಸದಾನಂದ ಕುಲಾಲ್ , ಮುಂತಾದವರು ಭಾಗವಹಿಸುವರು . ಸಂಜೆ ಗಂಟೆ 6 ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ…

Read More

ಬಂಟ್ವಾಳ:  ಸ್ವಾತಂತ್ರ್ಯ ಹೋರಾಟಗಾರ ಸಮಾಜರತ್ನ ಡಾ| ಅಮ್ಮೆಂಬಳ ಬಾಳಪ್ಪರವರ ನೇತೃತ್ವದಲ್ಲಿ ಹಾಗೂ ಸಹಕಾರಿ ಧುರಿಣ ಬಿ. ಹೂವಯ್ಯ ಮೂಲ್ಯರವರ ಸಾರಥ್ಯದಲ್ಲಿ ಸ್ಥಾಪಿಸಲ್ಪಟ್ಟ ಸಮಾಜ ಸೇವಾ ಸಹಕಾರಿ ಸಂಘವು 5.28ಕೋಟಿ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ  ಸುರೇಶ್‌ಕುಲಾಲ್ ತಿಳಿಸಿದ್ದಾರೆ. ಬಂಟ್ವಾಳದಲ್ಲಿ ಸ್ವಂತ ಕಟ್ಟಡದಲ್ಲಿ ಕೇಂದ್ರಕಛೇರಿ ಹೊಂದಿರುವ ಸಮಾಜ ಸೇವಾ ಸಹಕಾರಿ ಸಂಘವು 2025-26ನೇ ಸಾಲಿನಲ್ಲಿ ರೂ. 1432.13 ಕೋಟಿ ವ್ಯವಹಾರ ನಡೆಸಿದ್ದು ಆರ್ಥಿಕ ವರ್ಷ 2025-26ರ ಅಂತ್ಯಕ್ಕೆ ಸಂಘದಲ್ಲಿ 9319ಎ’ ತರಗತಿ, 5921 ‘ಬಿ’ ತರಗತಿ ಸದಸ್ಯರಿದ್ದು ರೂ. 8.28ಕೋಟಿ ಪಾಲು ಬಂಡವಾಳ ಹೊಂದಿರುತ್ತದೆ. 22.64 ಕೋಟಿರೂ. ನಿಧಿಗಳು 62.88 ಕೋಟಿ ರೂ. ವಿನಿಯೋಗಗಳು, 264.08ಕೋಟಿ ರೂ. ಠೇವಣಾತಿಗಳು ಇದ್ದು 248.99 ಕೋಟಿ ರೂ. ಹೊರ ಬಾಕಿ ಸಾಲಗಳು ಇರುತ್ತದೆ. ಸಂಘದ ದುಡಿಯುವ ಬಂಡವಾಳ ರೂ. 297.71ಕೋಟಿ ಆಗಿರುತ್ತದೆ. ಆಡಿಟ್ ವರ್ಗೀಕರಣದಲ್ಲಿ ಸತತವಾಗಿ ಎ ತರಗತಿ ಹೊಂದಿರುವ ಸಂಘವು ಸಂಪೂರ್ಣ ಗಣಕಿಕೃತ ಸಿಬಿಎಸ್ ತಂತ್ರಾಂಶದೊಂದಿಗೆ ಇ-ಕಲೆಕ್ಷನ್ ತಂತ್ರಾಜ್ಞಾನವನ್ನು ಆಳವಡಿಸಿಕೊಂಡಿರುತ್ತದೆ. ಸಂಘವು…

Read More

ಬಂಟ್ವಾಳ: ಕುಟುಂಬದ ಮನೆ ತಾಯಿ ಬೇರು ಇದ್ದಂತೆ. ದೈವದ ಹೆಸರಿನಲ್ಲಿ ಕುಟುಂಬದ ಬಂಧುಗಳನ್ನು ಸೇರಿಸುವ ಕೆಲಸವನ್ನು ನಮ್ಮ ಹಿರಿಯರು ಮಾಡಿಕೊಂಡು ಬಂದಿದ್ದು ಇದರಿಂದ ಕುಟುಂಬದ ಸದಸ್ಯರನ್ನು ಮುಖತ: ಭೇಟಿಯಾಗಲು ಸಾಧ್ಯವಿದೆ. ಸಂಬಂಧವನ್ನು ಪರಸ್ಪರ ಗಟ್ಟಿಗೊಳಿಸಲು ಸಾಧ್ಯವಿದೆ. ಇಂತಹ ಅವಕಾಶವನ್ನು ಕುಟುಂಬದ ಸದಸ್ಯರು ಬಳಸಿಕೊಳ್ಳಬೇಕು ಎಂದು ಮಂಗಳೂರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿಭಾಗ ಮುಖ್ಯಸ್ಥ ಡಾ. ಅರುಣ್ ಉಳ್ಳಾಲ್ ಹೇಳಿದರು. ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನ ಕಲ್ಕಾರು ಇದರ ಕುಟುಂಬ ದೈವ ದೇವರುಗಳ ವಾರ್ಷಿಕ ನೇಮೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ನಡೆದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಕುಟುಂಬದ ಮನೆಯಲ್ಲಿ ಜೀವ ಜೀವಂತಿಕೆ ಮುಖಮುಖಿಯಾಗಬೇಕು. ಆ ಕಾರಣಕ್ಕಾಗಿ ಪ್ರತಿಯೊಬ್ಬರು ಕುಟುಂಬದ ಮನೆಗೆ ಬರಬೇಕು. ಹಿರಿಯರಿಂದ ಬಂದ ಕುಟುಂಬದ ಪರಂಪರೆಯನ್ನು ಕಿರಿಯರಿಗೆ ತಿಳಿಸಿಕೊಡುವ ಕಾರ್ಯ ಆಗಬೇಕು ಎಂದರು. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ದೀಪ ಪ್ರಜ್ವಲಿಸಿ ಮಾತನಾಡಿ ತನಗೂ ಕಲ್ಕಾರ್ ಕುಟುಂಬಕ್ಕೂ ಇರುವ ಸಂಬಂಧದ ಬಗ್ಗೆ ತಿಳಿಸಿದರು.…

Read More

ಬಂಟ್ವಾಳ: ಇಲ್ಲಿನ ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್ ಇಲ್ಲಿಗೆ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ.ಅವರ ಅಧಿಕೃತ ಭೇಟಿ ಕಾರ್ಯಕ್ರಮ ನಡೆಯಿತು. ರೋಟರಿ ಸಭಾಭವನ ಗ್ರೀನ್ ಸಿಟಿ ಲೊರೆಟ್ಟೊ ಹಿಲ್ಸ್ ನಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಅವರು ಮಾತನಾಡಿ ಅದ್ಭುತವಾದ ಸಾರ್ವಜನಿಕ ಉಪಯೋಗದ ಸೇವಾ ಕಾರ್ಯಕ್ರಮವನ್ನು ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ಮಾಡಿದೆ ಎಂದರು. ಕ್ಲಬ್ ಮಾಡುವ ಸೇವಾ ಯೋಜನೆಗಳ ಎಲ್ಲಾ ಡೇಟಾಗಳು ನಮ್ಮಲ್ಲಿ ಅಗತ್ಯವಾಗಿ ಬೇಕಾಗಿದ್ದು ಅದಕ್ಕಾಗಿ ಸ್ವಂತ ವೆಬ್ ಸೈಟ್ ಆರಂಭಿಸುವಂತೆ ತಿಳಿಸಿದರು. ಇದರಿಂದ ನಾವೇನು ಮಾಡುತ್ತಿದ್ದೇವೆ ಎನ್ನುವುದು ಜನರಿಗೆ ತಿಳಿಯಲು ಸಾಧ್ಯವಿದೆ ಎಂದರು. ರೋಟರಿ ಜಿಲ್ಲಾ ಮಾಜಿ ಗವರ್ನರ್ ಎನ್.ಪ್ರಕಾಶ್ ಕಾರಂತ್ ಮಾತನಾಡಿ ರೋಟರಿ ಸಂಸ್ಥೆಯ ಟಿಆರ್ ಎಫ್ ಗೆ ನೀಡುವ ದೇಣಿಗೆ ಸಮಾಜದ ಅರ್ಹ ವ್ಯಕ್ತಿಗಳಿಗೆ ತಲುಪುತ್ತದೆ ಎಂದರು. ಸಹಾಯಕ ಗವರ್ನರ್ ಸಿ.ಎ. ಉಮೇಶ್ ರಾವ್ ಮಿಜಾರ್ ಮಾತನಾಡಿ ರೋಟರಿ ಸಂಸ್ಥೆಯ ಟಿಆರ್ ಎಫ್ ಗೆ ದೇಣಿಗೆ ನೀಡುವಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಇಂತಹ ಸಂಸ್ಥೆಯ ಸದಸ್ಯರಾಗಿರುವುದು…

Read More

ಬಂಟ್ವಾಳ: ಮುಂಬೈ ಉದ್ಯಮಿ ಸುನೀಲ್ ರಾಜು ಕೋಟ್ಯಾನ್ ಹಾಗೂ ಅವರ ಸಹಧರ್ಮಿಣಿ ದೇವಕಿ ಸುನೀಲ್ ಅವರ 26 ನೇ ವಿವಾಹ ವಾರ್ಷಿಕೋತ್ಸವವನ್ನು ಬಂಟ್ವಾಳ ತಾಲೂಕಿನ ಕನ್ಯಾನದಲ್ಲಿರುವ ಭಾರತ್ ಸೇವಾಶ್ರಮದಲ್ಲಿ ಸರಳವಾಗಿ ಆಚರಿಸಲಾಯಿತು. ಸೇವಾಶ್ರಮದಲ್ಲಿರುವ ಶಿರ್ಡಿ ಸಾಯಿ ಮಂದಿರದಲ್ಲಿ ವಿಶೇಷ ಪೋಜೆ ಸಲ್ಲಿಸಿ, ಬಳಿಕ ಅಲ್ಲಿನ ಗೋಶಾಲೆಯಲ್ಲಿ ಗೋವುಗಳಿಗೆ ಗೋಗ್ರಾಸವನ್ನು ನೀಡಿ ಸೇವಾಶ್ರಮದಲ್ಲಿರುವ ಅನಾಥ ವೃದ್ದರು, ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಈ ಸಂದರ್ಭ ಸೇವಾಶ್ರಮದ ಕಾರ್ಯದರ್ಶಿ ಈಶ್ವರ್ ಭಟ್ ಅವರು ಜೊತೆಗಿದ್ದು ಆಶ್ರಮ ನಿರ್ಮಾಣ ಹಾಗೂ ನಡೆದು ಬಂದ ಹಾದಿಯ ಬಗ್ಗೆ ತಿಳಿಸಿಕೊಟ್ಟರು. ಸೇವಾಶ್ರಮದ ಮೂರು ಆಶ್ರಮಕ್ಕೂ ಭೇಟಿ ನೀಡಿ ಅಲ್ಲಿನ ವೃದ್ಧರು, ನಿರ್ಗತಿಕರು, ಮಕ್ಕಳೊಂದಿಗೆ ಬೆರೆತು ಸಹಭೋಜನ ನಡೆಸಿದರು. ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ದಂಪತಿಗೆ ಹಿರಿಯರು ಮನಪೂರ್ವಕವಾಗಿ ಶುಭ ಹಾರೈಸಿದರು. ಈ ಮೂಲಕ ದಂಪತಿಗಳು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿ ಮಾದರಿಯಾದರು. ಈ ಸಂದರ್ಭ ಪ್ರಮುಖರಾದ ತಿಮ್ಮಪ್ಪ ಕುಲಾಲ್ ಮಣ್ಣಗುಡ್ಡೆ, ಸುರೇಶ್ ಕುಲಾಲ್ ಮಂಗಳೂರು, ಮುಂಬೈ…

Read More

ಬಂಟ್ವಾಳ: ತಾಲೂಕಿನ ಬಿಳಿಯೂರು ಗ್ರಾಮದ ಕುಲಗದ್ದೆ ಎಂಬಲ್ಲಿ ಪುನರ್ ನಿರ್ಮಾಣಗೊಳ್ಳಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮ ಸೋಮವಾರ ನಡೆಯಿತು. ಬೆಳಿಗ್ಗೆ 9 ಗಂಟೆಯ ಶುಭಮುಹೂರ್ತದಲ್ಲಿ ವರ್ಮುಡಿ ವೇ. ಮೂ. ಗೋಪಾಲಕೃಷ್ಣ ಭಟ್ ತಂತ್ರಿಯವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು. ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಸಂಪತ್ತನ್ನು ದಾನಧರ್ಮದ ಮೂಲಕ ಪರಿವರ್ತನೆ ಮಾಡಿದರೆ ಪುಣ್ಯ ಸಂಚಯವಾಗುತ್ತದೆ. ಭಕ್ತಿಯ ಮೂಲಕ ಮುಕ್ತಿಯೆಡೆಗೆ ಸಾಗಲು ಶಿವ ನಾಮ ಸಂಕೀರ್ತನೆಯಿಂದ ಸಾಧ್ಯವಿದೆ.‌ ಇಲ್ಲಿ ಕೇವಲ ದೇವಸ್ಥಾನಕ್ಕೆ ಮಾತ್ರವಲ್ಲದೆ ಧರ್ಮ ಹಾಗೂ ಸಂಸ್ಕೃತಿ ಯ ಪುನರುತ್ಥಾನಕ್ಕೂ ಶಿಲಾನ್ಯಾಸವಾಗಿದೆ ಎಂದ ಅವರು ಬಿಳಿಯೂರಿನಲ್ಲಿ ಉತ್ತಮ ಜನರಿರುವುದರಿಂದ ಶೀಘ್ರದಲ್ಲಿ ಕ್ಷೇತ್ರ ನಿರ್ಮಾಣ ಕಾರ್ಯ ಆಗಲಿದೆ ಎಂದರು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಮನಶುದ್ದಿ, ಭಾವಶುದ್ದಿ, ಕರ್ಮ ಶುದ್ಧಿಯೊಂದಿಗೆ ಧನಾತ್ಮಕತೆಯಿಂದ ಚಿಂತನೆ ಮಾಡಿದಾಗ ದೇವರನ್ನು ಕಾಣಲು ಸಾಧ್ಯವಿದೆ. ಇದು ಇತಿಹಾಸ…

Read More

ಬಂಟ್ವಾಳ: ಇಲ್ಲಿನ ರೋಟರಿ ಕ್ಲಬ್ ಬಂಟ್ವಾಳಕ್ಕೆ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ.ಅವರ ಅಧಿಕೃತ ಭೇಟಿ ಕಾರ್ಯಕ್ರಮ ನಡೆಯಿತು. ಭಾನುವಾರ ಸಂಜೆ ಬಿ.ಎ. ಸೋಮಯಾಜಿ ಮೆಮೋರಿಯಲ್ ರೋಟರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಮೂಲಕ ಇಂದು ಅನೇಕ ಸೇವಾ ಕಾರ್ಯಕ್ರಮಗಳು ನಡೆಯುತ್ತಿದೆ. ರೋಟರಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಸಮಾಜದ ಸೇವೆ ಮಾಡಲು ಅವಕಾಶವಿದೆ. ಬಂಟ್ವಾಳ ರೋಟರಿ ಕ್ಲಬ್ ಹಲವಾರು ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡಿ, ಶಾಶ್ವತ ಕೊಡುಗೆಗಳನ್ನು ನೀಡಿ ಜಿಲ್ಲೆಯ ರೋಟರಿ ಕ್ಲಬ್ ಗಳ ಪೈಕಿ ಮುಂಚೂಣಿಯಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಹಾಯಕ ಗವರ್ನರ್ ಡಾ. ಎ. ಜಯಕುಮಾರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ನಮ್ಮ ಸೇವಾ ಪ್ರಯಾಣವನ್ನು ಪುನರ್ ಪರಿಶೀಲನೆ ಮಾಡಲು, ನಮ್ಮ‌ಚಟುವಟಿಕೆಗಳನ್ನು ಪುನರ್ ಸಂಯೋಜಿಸಲು, ಹೊಸ ಉತ್ಸಾಹದಿಂದ ಕೆಲಸ ಮಾಡಲು ಗವರ್ನರ್ ಅಧಿಕೃತ ಬೇಟಿ ಕಾರ್ಯಕ್ರಮದಿಂದ ಸಾಧ್ಯವಿದೆ ಎಂದರು. ಬಂಟ್ವಾಳ ರೋಟರಿ ಕ್ಲಬ್ ಹೃದಯವಂತಿಕೆಯಲ್ಲೂ ದೊಡ್ಡ ಕ್ಲಬ್, ಸೇವಾ ಕಾರ್ಯಗಳ…

Read More

ಬಂಟ್ವಾಳ: ಮೊಡಂಕಾಪು ಬಳಿ ರೈಲ್ವೇ ಓವರ್ ಬ್ರಿಡ್ಜ್ ಬಳಿ ಹಾಕಲಾದ ಕಬ್ಬಿಣ ಬೀಮ್ ಗೆ ಲಾರಿ ಡಿಕ್ಕಿಯಾಗಿ ಅದು ಸ್ಕೂಟರ್ ಸವಾರನ ಮೇಲೆ ಬಿದ್ದು ಆತ ಗಂಭೀರ ಗಾಯಗೊಂಡ ಘಟನೆ ಬುಧವಾರ ಸಂಜೆಯ ವೇಳೆ ನಡೆದಿದೆ. ವಾಹನ ಸಾಗಾಟದ ಕಂಟೈನರ್ ಲಾರಿ ರೈಲ್ವೇ ಮೇಲ್ಸೆತುವೆಯ ತಡೆಬೇಲಿಗೆ ಡಿಕ್ಕಿಯಾಗಿದೆ. ಈ ಸಂದರ್ಭ ಕಬ್ಬಿಣದ ಬೀಮ್ ಸೇತುವೆಯ ಅಡಿಯಲ್ಲಿ ಸಂಚರಿಸುತ್ತಿದ್ದ ಪಚ್ಚಿನಡ್ಕ ಬಳಿಕ ನೂರ್ನಡ್ಕ ನಿವಾಸಿಯ ಮೇಲೆ ಬಿದ್ದು ಅವರಿಗೆ ಗಂಭೀರ ಗಾಯವಾಗಿದೆ. ಗಾಯಾಳುವನ್ನು ತಕ್ಷಣ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಬೀಮ್ ಬಿದ್ದು ಸ್ಕೂಟರ್ ಜಖಂಗೊಂಡಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Read More

ಬಂಟ್ವಾಳ : ತಾಲೂಕಿನ ಇರ್ವತ್ತೂರುಪದವು ಶ್ರೀ ಶಾರದಾ ಸೇವಾ ಟ್ರಸ್ಟ್ ಮತ್ತು ಜೆ ಸಿ ಐ ಬಂಟ್ವಾಳ ಸಹಯೋಗದಲ್ಲಿ ಮೂಡುಪಡುಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಬೇಸಿಗೆಯ “ಕಲಾ ಮತ್ತು ಶೂನ್ಯ ತ್ಯಾಜ್ಯ ಮಾಹಿತಿ ಶಿಬಿರ”ಕ್ಕೆ ಮೂಡುಪಡುಕೋಡಿ ಹಿ.ಪ್ರಾ. ಶಾಲಾ ಸಭಾಂಗಣದಲ್ಲಿ ಬುಧವಾರ ಚಾಲನೆ‌ ನೀಡಲಾಯಿತು. ವಾಮದಪದವು ಸ. ಪ. ಪೂ. ಕಾಲೇಜಿನ‌ ಚಿತ್ರಕಲಾ ಶಿಕ್ಷಕರಾದ ಮುರಳೀಕೃಷ್ಣ ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ,ಇರ್ವತ್ತೂರುಪದವು ಶ್ರೀ ಶಾರದಾ ಸೇವಾ ಟ್ರಸ್ಟ್ ಸ್ಥಳೀಯವಾಗಿ ಸಮಾಜಮುಖಿ ಚಟುವಟಿಕೆಯಿಂದ ಗುರುತಿಸಿಕೊಂಡಿದ್ದು, ಬೇಸಿಗೆ ಶಿಬಿರವನ್ನು ಆಯೋಜಿಸುವ ಮೂಲಕ ಮಕ್ಕಳ ಪ್ರತಿಭೆಯನ್ನು‌ ಅನಾವರಣಗೊಳಿಸಲು ಅವಕಾಶವನ್ನು ಒದಗಿಸಿದ್ದು,ಇದರ ಸದುಪಯೋಗಪಡೆದುಕೊಳ್ಳಬೇಕೆಂದರು. ರಂಗಭೂಮಿ ಕಲಾವಿದ ರತ್ನ ದೇವ್ ಪುಂಜಾಲಕಟ್ಟೆ ಮಾತನಾಡಿ, ಒಂದಲ್ಲ ಒಂದು ರೀತಿಯಲ್ಲಿ ಮಕ್ಕಳು ಕೂಡ ಕಲಾವಿದರೇ ಅಗಿದ್ದಾರೆ.ಇಂತಹ ಶಿಬಿರದಲ್ಲಿ ದೊರಕುವ ತರಬೇತಿಯನ್ನು ಆಸಕ್ತಿಯಿಂದ ಬಳಸಿಕೊಳ್ಳಬೇಕು ಎಂದರು. ಬಂಟ್ವಾಳ ಜೆ‌.ಸಿ.ಐ.ಅಧ್ಯಕ್ಷ ಕಿಶೋರ್ ಆಚಾರ್ಯ ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ,ಇಂತಹ ಉಪಯುಕ್ತ ಕಾರ್ಯಕ್ರಮಗಳಿಗೆ ಜೆಸಿಐಯು ಸದಾ ಸಹಯೋಗವನ್ನು ನೀಡುತ್ತಾ ಬರುತ್ತಿದೆ.…

Read More