Author: admin

ಬಂಟ್ವಾಳ: ಇತ್ತೀಚೆಗೆ ಜಾರಿಯಾಗುವ ಕಾನೂನುಗಳು ಹಾಗೂ ತಿದ್ದುಪಡಿಗಳು ಸಂವಿಧಾನದ ಆಶಯಗಳಿಗೆ ಧಕ್ಕೆಯಾಗುವಂತಿದೆ. ಮಾನವನ ಬದುಕನ್ನು ಸಹನೀಯ ಮಾಡಲು, ದೇಶದ ಸಂಪತ್ತು ಎಲ್ಲರಿಗೂ ತಲುಪಲು ರಚನೆಯಾಗಿದ್ದ ಸಂವಿಧಾನದ ದಿಕ್ಕನ್ನು ಬದಲಿಸುವ ಪ್ರಯತ್ನ ನಡೆಯುತ್ತಿದೆ. ಜನರು ನೀಡುವ ಮತದ ಮೌಲ್ಯವನ್ನು ದುಡ್ಡು, ಜಾತಿಯಿಂದ ಅಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮೂಲಕ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ ಎಂದು ಹೊಸತು ಮಾಸ ಪತ್ರಿಕೆಯ ಸಂಪಾದಕ ಡಾ. ಸಿದ್ದನಗೌಡ ಪಾಟೀಲ್ ಹೇಳಿದರು.ಮಾನವ ಬಂಧುತ್ವ ವೇದಿಕೆ ಬಂಟ್ವಾಳ ತಾಲೂಕು ಸಂಚಲನ ಸಮಿತಿ ಹಾಗೂ ಸ್ವಾಗತ ಸಮಿತಿ ಆಶ್ರಯದಲ್ಲಿ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆದ ಸಂವಿಧಾನ ಅರಿವಿನ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವದ ಮೊದಲಿನ ದಾಳಿ ಮತದ ಮೌಲ್ಯದ ಮೇಲೆ ಆಗಿದೆ. ದೇಶವನ್ನು ಕಾರ್ಪೊರೇಟ್ ಕಂಪೆನಿಗಳಿಗೆ ನೀಡಲಾಗಿದೆ. ಮತ ಹಾಕಿದ ಪ್ರಜೆಗೆ ಬೆಲೆಯೇರಿಕೆಯ ಬಿಸಿ ನೀಡಿ ಅದಾನಿ ಅಂಬಾನಿಯಂತಹ ಉದ್ಯಮಿಗಳಿಗೆ ತೆರಿಗೆ ರಿಯಾಯಿತಿ ನೀಡಿ ಅವರು ಜಗತ್ತಿನ ಶ್ರೀಮಂತರಾಗುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳೆಲ್ಲವೂ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿದೆ ಎಂದು…

Read More

ಬಂಟ್ವಾಳ: ಒಂದು ಸುಳನ್ನು ನೂರು ಬಾರಿ ಹೇಳುವ ಮೂಲಕ ಜನರ ದಿಕ್ಕುತಪ್ಪಿಸುವ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಅಂದು ಕಾಂಗ್ರೆಸನ್ನು ಮಹಾತ್ಮ ಗಾಂಧಿಯವರೇ ವಿಸರ್ಜನೆ ಮಾಡಲು ತಿಳಿಸಿದರೂ ಕೂಡ ವಿಸರ್ಜನೆ ಮಾಡಿರಲಿಲ್ಲ. ಈಗ ರಾಹುಲ್ ಗಾಂಧಿ ಕಾಂಗ್ರೆಸನ್ನು ವಿಸರ್ಜಿಸಲು ಪಣ ತೊಟ್ಡಿದ್ದಾರೆ. ರಾಹುಲ್ ಗಾಂಧಿ ಕಾಲಿಟ್ಟಲ್ಲಿ ಕಾಂಗ್ರೆಸ್ ನಾಶವಾಗುತ್ತಿದೆ. ಕಾಂಗ್ರೆಸ್ ಪಕ್ಷ ನಿರ್ನಾಮ ಮಾಡಲು ರಾಹುಲ್ ದೇಶದ್ಯಂತ ಯಾತ್ರೆ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಪ್ಪಿಸಲು ಸಾದ್ಯವಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಅವರು ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ನಡೆದ ಗ್ರಾಮ ವಿಕಾಸ ಯಾತ್ರೆ- ಗ್ರಾಮದೆಡೆಗೆ ಶಾಸಕರ ನಡಿಗೆಯ 10ನೇ ದಿನದ ಪಾದಯಾತ್ರೆಯು ಸಮಾರೋಪವಾಗಿ ಕೊಯ್ಲ ಗ್ರಾಮದ ಮಾವಂತೂರು ಶ್ರೀ ದೇವಪ್ಪ ಶೆಟ್ಟಿ ವೇದಿಕೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.10 ಲಕ್ಷ ಕೋಟಿ ಹಗರಣ ಮಾಡಿರುವ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಕನಸು ಕಾಣುತ್ತಿದೆ.…

Read More

ಬಂಟ್ವಾಳ: ಅಷ್ಠಬಂಧ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರಕ್ಕೆ ದೇವಾಡಿಗ ಸಮಾಜ ಶ್ರೀ ನಂದಾವರ ದೇವಸ್ಥಾನ ರಥ ಸಮರ್ಪಣಾ ಸಮಿತಿ ವತಿಯಿಂದ ಶ್ರೀದೇವರಿಗೆ ಫೆ.3 ರಂದು ಶ್ರೀ ರಥ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ರಾಮದಾಸ್ ಬಂಟ್ವಾಳ ತಿಳಿಸಿದರು. ಸೋಮವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ನಂದಾವರ ಶ್ರೀವಿನಾಯಕ ಶಂಕರನಾರಾಯಣ ದುರ್ಗಾಂಭ ಕ್ಷೇತ್ರದ ಅಷ್ಠಬಂಧ ಬ್ರಹ್ಮಕಲಶವು ನಡೆಯಲಿದ್ದು, ಮಧ್ಯಾಹ್ನ 12.30 ರ ಶುಭ ಮುಹೂರ್ತ ದಲ್ಲಿ ನೂತನ ಶ್ರೀರಥಕ್ಕೆ ಕಲಶಾಭಿಷೇಕ ಮತ್ತು ಶ್ರೀದೇವರಿಗೆ ರಥ ಸಮರ್ಪಣೆ, ರಾತ್ರಿ ರಥೋತ್ಸವವು ನಡೆಯಲಿದೆ ಎಂದರು.ಪೊಳಲಿಗೆ ಸಮರ್ಪಣೆಗೈದ ರಥ ನಿರ್ಮಾಣದ ಶಿಲ್ಪಿಯವರು ನಂದಾವರಕ್ಕೆ ಸಮರ್ಪಿಸುವ ಶ್ರೀರಥ ನಿರ್ಮಿಸುತ್ತಿದ್ದು, ಈಗಾಗಲೇ ಶೇ.90ರಷ್ಟು ಕೆಲಸ ಮುಗಿದಿದೆ. ರಥದ ನಿರ್ಮಾಣದಲ್ಲಿ ಕೇವಲ ದೇವಾಡಿಗ ಮಾತ್ರವಲ್ಲ ಸಮಸ್ತ ಹಿಂದೂ ಸಮಾಜದಿಂದ ಉತ್ತಮವಾದ ಸ್ಪಂದನೆ ಸಿಕ್ಕಿದ್ದು, ಸುಮಾರು 25 ಲಕ್ಷ ರೂ.ವೆಚ್ಚದಲ್ಲಿ ನೂತನ ಶ್ರೀರಥವನ್ನು ನಿರ್ಮಿಲಾಗಿದೆ…

Read More

ಬಂಟ್ವಾಳ: ಬಿ.ಸಿ.ರೋಡಿನ ಕೈಕಂಬ ಯಕ್ಷ ಮಿತ್ರರು ಆಶ್ರಯದಲ್ಲಿ ಭಾನುವಾರ ರಾತ್ರಿ ಬಿ.ಸಿ.ರೋಡಿನ ಹೊಟೇಲ್ ರಂಗೋಲಿ ಹೊರಾಂಗಣದಲ್ಲಿ ೧೪ನೇ ವರ್ಷದ ಯಕ್ಷಗಾನ ಪ್ರದರ್ಶನದಲ್ಲಿ ಹಿಮ್ಮೇಳ ಕಲಾವಿದ ದೇಲಂತಮಜಲು ಸುಬ್ರಹ್ಮಣ್ಣ ಭಟ್ ಅವರನ್ನು ಸನ್ಮಾನಿಸಲಾಯಿತು. ಬಿ.ಸಿ.ರೋಡಿನ ಸಿವಿಲ್ ಇಂಜಿನಿಯರ್ ಸುಧೀರ್ ಶೆಟ್ಟಿ ಅವರು ಖ್ಯಾತ ಚೆಂಡೆ ಕಲಾವಿದ ದೇಲಂತಮಜಲು ಸುಬ್ರಹ್ಮಣ್ಣ ಭಟ್ ಅವರನ್ನು ಸನ್ಮಾನಿಸಿದರು.ನಿವೃತ್ತ ಶಿಕ್ಷಕ ಸಂಕಪ್ಪ ಶೆಟ್ಟಿ ಅಭಿನಂದನಾ ಭಾಷಣಗೈದು ಯಕ್ಷಮಿತ್ರರು ಇದೇ ಮೊದಲಿಗೆ ಹಿಮ್ಮೇಳ ಕಲಾವಿದರನ್ನು ಗುರುತಿಸಿ ಸನ್ಮಾನಿಸಿರುವುದು ಅಭಿನಂದನೀಯವಾಗಿದೆ. ದೇಲಂತಮಜಲು ಸುಬ್ರಹ್ಮಣ್ಣ ಭಟ್ ಅವರು ಕಳೆದ ೪೦ ವರ್ಷಗಳಿಂದ ಯಕ್ಷಗಾನ ರಂಗಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ .ಹಿಮ್ಮೇಳ ಕಲಾವಿದ ಮಾತ್ರವಲ್ಲ ನಾಟ್ಯದಲ್ಲೂ ಪ್ರವೀಣರು ಆಗಿದ್ದಾರೆ ಎಂದರು.ಹಿರಿಯ ಕಲಾವಿದ ಗೋವಿಂದ ಭಟ್ , ಯಕ್ಷಮಿತ್ರರು ಸದಸ್ಯರಾದ ಸದಾಶಿವ ಕೈಕಂಬ, ಶಂಕರ ಶೆಟ್ಟಿ, ವಿಶ್ವನಾಥ, ಭುಜಂಗ ಸಾಲಿಯಾನ್, ಸದಾನಂದ ಶೆಟ್ಟಿ ವೇದಿಕೆಯಲ್ಲಿದ್ದರು.ಕಿಶೋರ್ ಭಂಡಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಹನುಮಗಿರಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ಭಾರತ ಜನನಿ ಎಂಬ ಯಕ್ಷಗಾನ ಬಯಲಾಟವು…

Read More

ಬಂಟ್ವಾಳ: ಇಲ್ಲಿನ ಪುರಸಭೆಯ ಬಜೆಟ್ ಪೂರ್ವಭಾವಿ ಸಮಾಲೋಚನಾ ಸಭೆ ಸೋಮವಾರ ಪುರಸಭೆಯ ಅಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆಯಲ್ಲಿ ಪುರಸಭೆಯ ಸಭಾಂಗಣದಲ್ಲಿ ನಡೆಯಿತು.ಅಧ್ಯಕ್ಷ ಮಹಮ್ಮದ್ ಶರೀಫ್ ಮಾತನಾಡಿ ಸಾರ್ವಜನಿಕ ಹಿತದೃಷ್ಟಿಯಿಂದ ಉತ್ತಮವಾದ ಬಜೆಟ್ ಮಂಡಿಸಲು ಸಾರ್ವಜನಿಕರ ಸಲಹೆ ಸೂಚನೆ ಅಗತ್ಯ ಎಂದು ತಿಳಿಸಿದರು. ಈ ಹಿಂದೆ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರ ಯಾವುದಾದರೊಂದು ಸಲಹೆಯನ್ನು ಅನುಷ್ಠಾನಕ್ಕೆ ತಂದಿದ್ದೀರಾ? ಎಂದು ಪುರಸಭೆಯ ಹಿರಿಯ ಸದಸ್ಯ ಗೋವಿಂದ ಪ್ರಭು ಪ್ರಶ್ನಿಸಿದರು. ಇದೇ ಪ್ರಥಮ ಭಾರಿಗೆ ಸಭೆಯಲ್ಲಿ ಭಾಗವಹಿಸಲು ಸದಸ್ಯರಿಗೆ ನೋಟಿಸ್ ನೀಡಲಾಗಿದೆ. ಸರಕಾರದ ಮಾರ್ಗದರ್ಶನದಂತೆ ಕಾಟಾಚಾರಕ್ಕೆ ಸಭೆ ಮಾಡಲಾಗುತ್ತಿದೆ ಎಂದ ಅವರು ಮುಖ್ಯಾಧಿಕಾರಿಯ ಅನುಪಸ್ಥಿತಿಯಿಂದ ಆಕ್ರೋಶಗೊಂಡು ಸಭೆಯಿಂದ ಹೊರ ನಡೆದರು.ಮೆಲ್ಕಾರ್‌ನಲ್ಲಿ ಸಾರ್ವಜನಿಕ ಶೌಚಾಲಯ ಹಾಗೂ ಪ್ರಯಾಣಿಕರ ತಂಗುದಾಣ ನಿರ್ಮಿಸುವಂತೆ ವಸಂತಿ ಗಂಗಾಧರ್ ಸಲಹೆ ನೀಡಿದರು. ಬಿ.ಸಿ.ರೋಡಿನಿಂದ ಕೈಕಂಬದವರೆಗೆ ರಸ್ತೆ ಬದಿಯಲ್ಲಿ ಪುಟ್‌ಪಾತ್ ಇಲ್ಲದೆ ಸಾರ್ವಜನಿರು ತೊಂದರೆ ಪಡುತ್ತಿದ್ದು ರಸ್ತೆ ದಾಟುವ ಸಂದರ್ಭದಲ್ಲಿ ಜೀವಹಾನಿಯೂ ಸಂಭವಿಸಿದೆ, ಆದ್ದರಿಂದ ಸೂಕ್ತ ಪುಟ್‌ಪಾತ್ ನಿರ್ಮಿಸುವಂತೆ ಪುರಸಭೆಯ ಸ್ವಚ್ಛತಾ ರಾಯಭಾರಿ…

Read More

ಬಂಟ್ವಾಳ: ದೇವರ ಭಕ್ತಿ ಜೊತೆಗೆ ವಿವಿಧ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಮತ್ತು ಬ್ರಹ್ಮಕಲಶೋತ್ಸವದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ನಮಗೆ ಪುಣ್ಯ ಪ್ರಾಪ್ತಿ ಮತ್ತು ಜೀವನ ಪಾವನವಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾವೃದ್ಧಿ ಯೋಜನೆ ಯೋಜನಾಧಿಕಾರಿ ಜಯಾನಂದ ಪಿ. ಹೇಳಿದ್ದಾರೆ. ‌ ‌ ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಗ್ರಾಮ ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಭಾನುವಾರ ಸಂಜೆ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಕ್ಷೇತ್ರದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಂ.ತುಂಗಪ್ಪ ಬಂಗೇರ ಪ್ರಾಸ್ತಾವಿಕ ಮಾತನಾಡಿದರು. ಯೋಜನೆ ಮೇಲ್ವಿಚಾರಕಿ ಸುಜಾತ, ಕಾಡಬೆಟ್ಟು ಸೇವಾಪ್ರತಿನಿಧಿ ರೇಖಾ, ಕೊಡಂಬೆಟ್ಟು ಸೇವಾಪ್ರತಿನಿಧಿ ಮೋಹನದಾಸ ಗಟ್ಟಿ, ವಲಯಾಧ್ಯಕ್ಷ ಉಮೇಶ್ ಅನಿಸಿಕೆ ವ್ಯಕ್ತಪಡಿಸಿದರು. ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ ಸ್ವಾಗತಿಸಿ, ಅಭಿಷೇಕ್ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.

Read More

ಬಂಟ್ವಾಳ: 41 ಗ್ರಾಮದಲ್ಲಿ ಗ್ರಾಮ ವಿಕಾಸ ಪಾದಯಾತ್ರೆ ಸಾಗಿ ಬಂದಿದ್ದು ಜನರ ಪ್ರೀತಿ, ವಿಶ್ವಾಸವನ್ನು ಗಮನಿಸಿದಾಗ ಇಲ್ಲಿ ರಾಹುಲ್ ಗಾಂಧಿಯಾದಿಯಾಗಿ ಯಾರೇ ಕಾಂಗ್ರೆಸ್ ನಾಯಕರು ಬಂದು ಚುನಾವಣೆಯಲ್ಲಿ ಸ್ಪರ್ಧಿಸಿದರೂ ಬಂಟ್ವಾಳದಲ್ಲಿ ರಾಜೇಶ್ ನಾಯ್ಕ್ ಗೆಲುವು ಸಾಧಿಸುತ್ತಾರೆ ಎಂದು ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಹೇಳಿದರು.ಅವರು ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ನಡೆದ ಗ್ರಾಮ ವಿಕಾಸ ಯಾತ್ರೆ- ಗ್ರಾಮದೆಡೆಗೆ ಶಾಸಕರ ನಡಿಗೆಯ 9ನೇ ದಿನದ ಪಾದಯಾತ್ರೆಯು ಸಮಾರೋಪವಾಗಿ ಸಂಗಬೆಟ್ಟು ಗ್ರಾಮದ ಗ್ರಾಮ ಸಿದ್ದಕಟ್ಟೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.ಕಾಂಗ್ರೆಸ್ ನ ಗ್ಯಾರೆಂಟಿ, ವಾರಂಟಿ ಮುಗಿದಿದೆ. ಇನ್ನೆಂಥ ಗ್ಯಾರೆಂಟಿ ಇದೆ ನಿಮಗೆ ಎಂದು ಪ್ರಶ್ನಿಸಿದ ಅವರು ನಕಲಿ ಗಾಂಧಿಗಳಿಂದ ದೇಶಕ್ಕೆ ಮೋಸ ಆಗಿದೆ ಎಂದು ಟೀಕಿಸಿದರು. ಈ ದೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್ ಅವರ ಗರೀಭಿ ಹಠಾವೋ ಆಗಿದೆ. ರಾಜೇಶ್ ನಾಯ್ಕ್ ಶಾಸಕರು ಆದ ಬಳಿಕ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಆಗಿದೆ ಎಂದು…

Read More

ಬಂಟ್ವಾಳ: ಇಲ್ಲಿಗೆ ಬೈಪಾಸ್ ನಿತ್ಯಾನಂದ ನಗರದಲ್ಲಿ ವಿನೂತನ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಶ್ರೀ ಸದ್ಗುರು ನಿತ್ಯಾನಂದ, ಗೋವಿಂದ ಸ್ವಾಮಿ ಮಂದಿರದ ಲೋಕಾರ್ಪಣೆ ಹಾಗೂ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಪ್ರಯುಕ್ತ ಹಸಿರುವಾಣಿ ಹೊರೆಕಾಣಿಕೆ ಹಾಗೂ ಶ್ರೀ ನಿತ್ಯಾನಂದ ಸ್ವಾಮಿ ಮತ್ತು ಶ್ರೀಗೋವಿಂದ ಸ್ವಾಮಿಗಳ ಪಂಚಲೋಹದ ವಿಗ್ರಹಗಳ ವೈಭವಪೂರ್ಣವಾದ ಮೆರವಣಿಗೆ ಭಾನುವಾರ ಮಧ್ಯಾಹ್ನ ನಡೆಯಿತು.ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಸ್ಥಾನದ ವಠಾರದಿಂದ ಹೊರಟ ಶ್ರೀ ಗುರುದ್ವಯರ ವಿಗ್ರಹ ಮತ್ತು ಹಸಿರುವಾಣಿ ಮೆರವಣಿಗೆಯು ಬಂಟ್ವಾಳ ರಥಬೀದಿ,ಮಾರ್ಕೆಟ್ ರಸ್ತೆಯಾಗಿ , ಜಕ್ರಿಬೆಟ್ಟು,ಬೈಪಾಸ್ ರಸ್ತೆಯ ಮೂಲಕ ನಿತ್ಯಾನಂದನಗರದಲ್ಲಿರುವ ಮಂದಿರದಲ್ಲಿ ಸಂಪನ್ನಗೊಂಡಿತು.ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಕಾಂಞಗಾಂಡ್ ನಿತ್ಯಾನಂದ ಆಶ್ರಮದ ಶ್ರೀ ಗಣಪತಿ ಸ್ವಾಮೀಜಿ, ಹಿಮಾಚಲ ಪ್ರದೇಶದ ಮಹಾಂತ್ ವಿದ್ಯಾನಂದ ಸರಸ್ವತಿ ಸ್ವಾಮೀಜಿ,ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ದಿನೇಶ್ ಭಂಡಾರಿ,ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ, ಗೌರವಾಧ್ಯಕ್ಷ ಸುರೇಶ್ ಕುಲಾಲ್, ಪುರಸಭಾ ಸದಸ್ಯರಾದ ಗೋವಿಂದಪ್ರಭು,ಗಂಗಾಧರ ಪೂಜಾರಿ,ದೇವಕಿ, ಸಮಿತಿ…

Read More

ಬಂಟ್ವಾಳ: ತಲೆಬತಗ್ಗಿಸಿ ಮತ ಕೇಳುವ ಪರಿಸ್ಥಿತಿ ಬಿಜೆಪಿಯ ಅಭ್ಯರ್ಥಿಗಳಿಗೆ ಬಂದಿಲ್ಲ ಎನ್ನುವುದೇ ಬಿಜೆಪಿ ಕಾರ್ಯಕರ್ತರ ಹೆಮ್ಮೆ. ಚುನಾವಣೆಯ ಯುದ್ದಕ್ಕೆ ನಾವೆಲ್ಲ ಪಕ್ಷದ ಸೈನಿಕರಂತೆ ಸಿದ್ದರಾಗಬೇಕು ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.ಅವರು ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ನಡೆದ ಗ್ರಾಮ ವಿಕಾಸ ಯಾತ್ರೆ- ಗ್ರಾಮದೆಡೆಗೆ ಶಾಸಕರ ನಡಿಗೆಯ 8ನೇ ದಿನದ ಪಾದಯಾತ್ರೆಯ ಸಮಾರೋಪವಾಗಿ ಪಿಲಾತಬೆಟ್ಟು ಗ್ರಾಮದ ಶ್ರೀ ಬ್ರಹ್ಮಬೈದರ್ಕಳ ಗರಡಿ ಬಳಿನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.ಕೇಂದ್ರ ಹಾಗೂ ರಾಜ್ಯದಲ್ಲಿ ಬಹುಮತ ಪಡೆದ ಕಾಗ್ರೆಸ್ ಸರಕಾರ ಅಧಿಕಾರದಲ್ಲಿ ಇದ್ದಾಗ ಅವರಿಗೆ ಯಾಕೆ ಅನುದಾನ ತರಲು ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಗೆ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ, ಮುಖ್ಯಮಂತ್ರಿ ಆದವರ ಕ್ಷೇತ್ರವೂ ಅಭಿವೃದ್ಧಿ ಆಗಿಲ್ಲ ಎಂದು ಟೀಕಿಸಿದರು.‌ ಬಿಜೆಪಿ ಶಾಸಕರು ಬಹುಮತ ಪಡೆದು ಅಧಿಕಾರಕ್ಕೆ ಬಂದು 5 ವರ್ಷ ದ ಪೂರ್ಣ ಅವಕಾಶ ಸಿಕ್ಕಲ್ಲಿ ನಮ್ಮ ಊರಿನ ಅಭಿವೃದ್ಧಿ ಹೇಗಾಗ ಬಹುದು ಊಹಿಸಿ…

Read More

ಬಂಟ್ವಾಳ: ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಗ್ರಾಮ ಪಿಲಿಂಗಾಲು ಎಂಬಲ್ಲಿ ರೂ 1 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಗಾಯತ್ರಿ ದೇವಿ ದೇವಸ್ಥಾನಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಶುಕ್ರವಾರ ಭೇಟಿ ನೀಡಿ ಜೀರ್ಣೋದ್ಧಾರ ಕಾಮಗಾರಿ ವೀಕ್ಷಿಸಿದರು. ಫೆ.8ರಿಂದ 10ರತನಕ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ನೆರವು ನೀಡುವುದಾಗಿ ಅವರು ತಿಳಿಸಿದರು.ಕ್ಷೇತ್ರದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್ ಮಾತನಾಡಿ, ಕಳೆದ 2006ರಲ್ಲಿ ಕೇವಲ ಗರ್ಭಗುಡಿ ನಿರ್ಮಿಸಿ ದೇವರ ವಿಗ್ರಹ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ನಡೆದಿದೆ. ಇದೀಗ ಸುತ್ತುಗೋಪುರ ನಿರ್ಮಾಣ ಸಹಿತ ಗಣಪತಿ ಗುಡಿ, ಗುರು ರಾಘವೇಂದ್ರ ಸ್ವಾಮಿ ಗುಡಿ ಮತ್ತು ಪರಿವಾರ ದೈವಗಳಿಗೆ ಗುಡಿ ನಿರ್ಮಾಣಗೊಂಡಿದೆ ಎಂದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಜನಿ ಬಾಬು ಕುಲಾಲ್ ಮಾತನಾಡಿ, ಗ್ರಾಮ ಪಂಚಾಯಿತಿ ವತಿಯಿಂದ ಸುಸಜ್ಜಿತ ಶೌಚಾಲಯ ನಿರ್ಮಾಣಗೊಳ್ಳುತ್ತಿದೆ ಎಂದರು.ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಪದ್ಮಶೇಖರ ಜೈನ್, ಹೊರೆಕಾಣಿಕೆ ಸಮಿತಿ ಅಧ್ಯಕ್ಷ ವೀರೇಂದ್ರ ಅಮೀನ್, ಪ್ರಮುಖರಾದ ಬೇಬಿ ಕುಂದರ್, ಕರ್ಣ ಚಂದ್ರಶೇಖರ್, ಪ್ರಭಾಕರ ಪೂಜಾರಿ, ಅಭಿಷೇಕ್ ಗಾಣಿಗ…

Read More