Author: admin
ಬಂಟ್ವಾಳ: ದೇಶಕ್ಕೆ ಭ್ರಷ್ಠಾಚಾರದ ಕೊಡುಗೆಯನ್ನು ನೀಡಿದ ಕಾಂಗ್ರೆಸಿಗರು. ಭಾರತ್ ಜೋಡೋ, ನಾ ನಾಯಕಿ ಕಾರ್ಯಕ್ರಮವನ್ನು ಆಯೋಜಸಿತ್ತಿರುವುದು ನಾಚಿಗೇಡು ಎಂದು ಮಾಜಿ ಶಾಸಕ ರುಕ್ಮಯ ಪೂಜಾರಿ ಹೇಳಿದರು.ಅವರು ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ನಡೆದ ಗ್ರಾಮವಿಕಾಸ ಯಾತ್ರೆ- ಗ್ರಾಮದೆಡೆಗೆ ಶಾಸಕರ ನಡಿಗೆಯ 6ನೇ ದಿನದ ಪಾದಯಾತ್ರೆಯ ಸಮಾರೋಪವಾಗಿ ಬಾಳ್ತಿಲ ಗ್ರಾಮದ ನೀರಪಾದೆ ಶ್ರೀ ಕುಂದಾಯ ರಕ್ತೇಶ್ವರೀ ಮಹಮ್ಮಾಯಿ ದೇವಸ್ಥಾನದ ವಠಾರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.ಅಲ್ಪಸಂಖ್ಯಾತರನ್ನು ತುಷ್ಠೀಕರಣ ಮಾಡುವುದು ಜಾತ್ಯತೀತಯೇ? ಎಂದು ಪ್ರಶ್ನಿಸಿದ ಅವರುಬಿಜೆಪಿ ಸರ್ಕಾರದ ಸಾಧನೆ ಸಣ್ಣದೇನಲ್ಲ. ಆದರೆ ಕಾಂಗ್ರೆಸ್ಸಿಗರು ಅಪ್ರಚಾರ ಮಾಡಿತ್ತಿದ್ದಾರೆ. ಈ ಬಗ್ಗೆ ಬಿಜೆಪಿ ಕಾರ್ಯಕರ್ತರು ಎಚ್ಚೆತ್ತುಕೊಳ್ಳಬೇಕು ಎಂದರು.ಜನರಿಗೆ ಸಮಸ್ಯೆ ಬಂದಾಗ ತಕ್ಷಣ ಸ್ಪಂದಿಸುವ ಕಾರ್ಯವನ್ನು ರಾಜೇಶ್ ನಾಯ್ಕ್ ಮಾಡುತ್ತಿದ್ದಾರೆ.ವೈಯಕ್ತಿಕ ಅಸಮಾಧಾನವನ್ನೇ ಮುಂದಿಟ್ಟುಕೊಂಡು ಬೇರೆ ಪಕ್ಷಗಳು ಅಧಿಕಾರಕ್ಕೆ ಬಂದರೆ ನಾವು ಬದುಕಲು ಸಾಧ್ಯವಿಲ್ಲ. ಅದನ್ನು ನಾವು ಅರ್ಥೈಸಿಕೊಂಡು ಪಕ್ಷಕ್ಕಾಗಿ ದುಡಿಯಬೇಕಾಗಿದೆ ಎಂದರು.ಶಾಸಕ ರಾಜೇಶ್ ನಾಯ್ಕ್ ಮಾತನಾಡಿ ಕ್ಷೇತ್ರದ ಅಭಿವೃದ್ದಿ ಕಾರ್ಯಗಳು ನಮ್ಮ…
ಬಂಟ್ವಾಳ: ನಾಗರಿಕ ಕ್ರಿಯಾ ಸಮಿತಿ ಸಂಚಯಗಿರಿ ಇದರ ೨೦೨೩-೨೪ ನೇ ಸಾಲಿನ ಅಧ್ಯಕ್ಷರಾಗಿ ಸುರೇಶ ಬಂಗೇರ ಪುನರಾಯ್ಕೆ ಯಾಗಿದ್ದಾರೆ. ಭಾನುವಾರ ಸಂಚಯಗಿರಿಯ ನರಸಿಂಹರಾಜ ಹೊಳ್ಳ ಇವರ ಮನೆಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಪ್ರಿಯಲತಾ ಕಾರ್ಯದರ್ಶಿಯಾಗಿ ಶಿವನಾಯ್ಕ್ ಕೋಶಾಧಿಕಾರಿಯಾಗಿ ಎ.ದಾಮೋದರ್, ಕ್ರೀಡಾ ಕಾರ್ಯದರ್ಶಿಯಾಗಿ ಪುರಂದರ ಶೆಟ್ಟಿ, ಗೌರವಾಧ್ಯಕ್ಷರಾಗಿ ನರಸಿಂಹರಾಜ ಹೊಳ್ಳ ಆಯ್ಕೆಯಾಗಿದ್ದಾರೆ> ಈ ಸಂದರ್ಭ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಬಂಟ್ವಾಳ: ಅಭಿವೃದ್ದಿ ಕಾರ್ಯದ ಸ್ಪಷ್ಟತೆ ಇಲ್ಲದೆ ತುಷ್ಟೀಕರಣದ ರಾಜಕಾರಣದ ಮೂಲಕ ಸಮಾಜದಲ್ಲಿ ಗೊಂದಲ, ಸಮಸ್ಯೆ ಉಂಟು ಮಾಡಿದ ಕಾಂಗ್ರೆಸ್ ಜಾತಿ, ಧರ್ಮ ಆಧಾರದಲ್ಲಿ ಸಮಾಜವನ್ನು ಇಬ್ಬಾಗ ಮಾಡಿ ತಮ್ಮಸ್ವಾರ್ಥಕ್ಕಾಗಿ ದೇಶದ ಹಿತವನ್ನು ಕಡೆಗಣಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಹೇಳಿದರು. ಅವರು ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ನಡೆದ ಗ್ರಾಮವಿಕಾಸ ಯಾತ್ರೆ- ಗ್ರಾಮದೆಡೆಗೆ ಶಾಸಕರ ನಡಿಗೆಯ 5ನೇ ದಿನದ ಪಾದಯಾತ್ರೆಯ ಸಮಾರೋಪವಾಗಿ ಗೋಳ್ತಮಜಲು ಗ್ರಾಮದ ಕಲ್ಲಡ್ಕ ಶ್ರೀರಾಮ ಮಂದಿರದ ಮಾಧವ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಕೋವಿಡ್, ಅತಿವೃಷ್ಟಿ ಅನಾವೃಷ್ಟಿ ಯಿಂದ ದೇಶ ಸಮಸ್ಯೆಯನ್ನು ಎದುರುಸಿದರೂ , ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸಶಕ್ತ ರಾಷ್ಟ್ರವಾಗಿ ಇಡೀ ವಿಶ್ವಕ್ಕೆ ನಾಯಕತ್ವ ಕೊಡುವ ಮೂಲಕ ದೇಶದ ಐಕ್ಯತೆ, ಸಮಗ್ರತೆಯ ನ್ನು ಕಾಪಾಡಿದೆ ಎಂದು ತಿಳಿಸಿದರು. ಬಿಜೆಪಿ ಪಕ್ಷ ಒಳ್ಳೆಯ ನಾಯಕತ್ವ, ಒಳ್ಳೆಯ ಸರಕಾರ ನೀಡಿದೆ ಎಂದು ತಿಳಿಸಿದರು.ಪ್ರತಿಭೆ ಆಧಾರಿತವಾಗಿ ಪ್ರತಿಯೊಬ್ಬರಿಗೆ…
ಬಂಟ್ವಾಳ: ಪ್ರೌಢಾವಸ್ಥೆಗೆ ಬಂದ ಮಕ್ಕಳೊಂದಿಗೆ ನಾವು ಸ್ನೇಹಿತರಂತೆ ವರ್ತಿಸಬೇಕು, ಮಕ್ಕಳು ಏನೇ ಸಮಸ್ಯೆಯಿದ್ದರೆ ನಮ್ಮ ಜೊತೆ ಹಂಚಿ ಕೊಳ್ಳುವಂತಹ ಆತ್ಮೀಯತೆಯನ್ನು ಪೋಷಕರು ಬೆಳೆಸಿಕೊಳ್ಳಬೇಕು ಎಂದು ವೇಣೂರು ಪೊಲೀಸ್ ಠಾಣೆಯ ಎಸೈ ಸೌಮ್ಯ ಜೆ. ಹೇಳಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಇದರ ಆಶ್ರಯದಲ್ಲಿ, ಬಂಟ್ವಾಳದ ಶ್ರೀ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ನಡೆಯುವ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಪರಿಸರದಲ್ಲಿ ಪೋಕ್ಸೊದಂತಹ ಪ್ರಕರಣಗಳು ನಡೆದಾಗ ಪೊಲೀಸರಿಗೆ ಮಾಹಿತಿ ನೀಡಿಲು ಪೋಷಕರು ಹಿಂಜರಿಯ ಬಾರದು. ಮನೆಯಲ್ಲಿರುವ ಬಂಗಾರ, ಹಣ ಮೊದಲಾದ ಅಮೂಲ್ಯ ವಸ್ತುಗಳು ಬಗ್ಗೆ ನಿಗಾ ವಹಿಸಬೇಕು, ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಮಕ್ಕಳಿಗೆ ವಾಹನ ನೀಡಬಾರದು ಮೊದಲಾದ ಸಲಹೆಗಳನ್ನು ನೀಡಿದರು.ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಪಕಿ ಡಾ. ಮೇರಿ ಎಂ.ಜೆ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸಂಸಾರ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಯೋಜನೆಯ ಪ್ರಾದೇಶಿಕ…
ಬಂಟ್ವಾಳ: ಅಧಿಕಾರ ಶಾಶ್ವತವಲ್ಲ. ಆದರೆ ಶಾಸಕನಾಗಿ ಅಧಿಕಾರದಲ್ಲಿರುವ ವರೆಗೆ ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತೇನೆ. ನಾನು ಸಿದ್ದಾಂತ ರಾಜಕೀಯ ಮಾಡುತ್ತೇನೆಯೇ ವಿನಃ ದ್ವೇಷದ ರಾಜಕಾರಣ ನನ್ನಲ್ಲಿಲ್ಲ.ಎಂದು ಶಾಸಕ ರಾಜೇಶ್ ನಾಯ್ಕ್ ಹೇಳಿದರು.ಪೆರಾಜೆ ಗ್ರಾಮದ ಗುಡ್ಡ ಚಾಮುಂಡೇಶ್ವರೀ ದೈವಸ್ಥಾನದ ವಠಾರದಲ್ಲಿ ನಡೆದ ಗ್ರಾಮ ವಿಕಾಸ ಪಾದಯಾತ್ರೆಯ 4 ನೇ ದಿನದ ಸಾರ್ವಜನಿಕ ಸಭೆಯಲ್ಲಿ ಅವರು ಪ.ಪರಿಚಯವೇ ಇಲ್ಲದ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಸಂದರ್ಭದಲ್ಲೂ 65 ಸಾವಿರ ಮಂದಿ ನನಗೆ ಮತ ನೀಡಿದ್ದು ವಿಶೇಷವಾಗಿತ್ತು. ಬಳಿಕ ನಿರಂತರವಾಗಿ ಕೆಲಸ ಮಾಡಿದ ಪರಿಣಾಮ ಮತ್ತೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು. ಅಭಿವೃದ್ಧಿ ಕೆಲಸದ ಮೂಲಕ ಮತವಾಗಿ ಪರಿವರ್ತನೆ ಮಾಡುವ ಕಾರ್ಯ ಆಗ ಬೇಕಿದೆ ಎಂದರು. ಇಂದು ಅಭಿವೃದ್ಧಿ ಕಾರ್ಯಗಳ ಬಗ್ಗೆ ಸುಳ್ಳು ಮಾಹಿತಿ ನೀಡಲು ಸಾಧ್ಯವಿಲ್ಲ. ಜನರು ಬುದ್ದಿವಂತರಿದ್ದಾರೆ. ಶಾಸಕನಾಗಿ ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ. ಜನರು ಪ್ರೀತಿ, ವಿಶ್ವಾಸವನ್ನು ನೀಡಿದ್ದಾರೆ. ಅಭಿವೃದ್ದಿ ಕಾರ್ಯ ಮಾಡಿದಾಗ ಮಾತ್ರವಲ್ಲ, ನಾನು ಸೋತಾಗಲೂ ಇಲ್ಲಿನ ಜನರು…
ಬಂಟ್ವಾಳ: ನಾನು ಎಂದಿಗೂ ಶಾಸಕನಾಗುವ ಕನಸು ಕಂಡವನಲ್ಲ, ದೇವರುವ ಕೊಟ್ಟ ಅವಕಾಶದಿಂದ ಶಾಸಕನಾಗಿ ಇಂದು ಜನರ ಪ್ರೀತಿ ಗಳಿಸಲು ಸಾಧ್ಯವಾಯಿತು. ನನ್ನ ಅಧಿಕಾರವಧಿಯಲ್ಲಿ ಕ್ಷೇತ್ರದ ಜನತೆ ತಲೆ ತಗ್ಗಿಸುವ ಕೆಲಸ ನಾನು ಮಾಡಿಲ್ಲ. ಆದ್ದರಿಂದಾಗಿ ಧೈರ್ಯದಿಂದ ಪಾದಯಾತ್ರೆ ಮಾಡಲು ಸಾಧ್ಯವಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಹೇಳಿದರು. ಗ್ರಾಮ ವಿಕಾಸ ಯಾತ್ರೆ, ಗ್ರಾಮದೆಡೆಗೆ ಶಾಸಕರ ನಡಿಗೆ ಕಾರ್ಯಕ್ರಮದ ಎರಡನೇ ದಿನ ಕಾಪುಮಜಲುವಿನ ಮಲರಾಯ ದೈವಸ್ಥಾನದ ವಠಾರದಲದಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.22 ಕಿ.ಮೀ. ಪಾದಯಾತ್ರೆಯಲ್ಲಿ ಜನರು ನನ್ನ ಜೊತೆ ಉತ್ಸಾಹದಿಂದ ಪಾಲ್ಗೊಂಡಿರುವುದು ಖುಷಿ ನೀಡಿದೆ. .ದೇವರ ದಯೆ ಹಾಗೂ ಕ್ಷೇತ್ರದ ಜನರ ಪ್ರೀತಿ ಯಿಂದ ಪಾದಯಾತ್ರೆ ಯಶಸ್ವಿಯಾಗಿ ನಡೆಯಲಿದೆ ಎಂದು ತಿಳಿಸಿದರು.. ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ ಕಾಂಗ್ರೆಸ್ ಹುಟ್ಟಿದ್ದು ಬ್ರಿಟಿಷ್ ಗರ್ಭದಿಂದ. ವ್ಯಾಪರಕ್ಕೆ ಬಂದ ಬ್ರಿಟಿಷರು ಹುಟ್ಟುಹಾಕಿದ ಕಾಂಗ್ರೆಸ್ ಇಂದು ಇಟಲಿಯ ವ್ಯಕ್ತಿಯ ಹಿಡಿತದಲ್ಲಿದೆ ಎಂದು ಕಿಡಿಕಾರಿದರು.ಮುಂದಿನ ಚುನಾವಣೆ ಭಾರತೀಯ ಸಂಸ್ಕೃತಿ ಉಳಿಬೇಕೋ ಬೇಡವೋ ಎಂದು ನಿರ್ಧರಿಸಲಿರುವ ಚುನಾವಣೆಯಾಗಲಿದೆ.…
ಬಂಟ್ವಾಳ : ಬಂಟ್ವಾಳ ಕುಲಾಲ ಸೇವಾದಳದ ಚೈತನ್ಯ ನಿರಂತರ ಕಾರ್ಯಾಗಾರ ಇನ್ನಷ್ಟು ಉತ್ತಮವಾಗಿ ಮೂಡಿಬರಲಿ. ತಾಲೂಕಿನ ಎಲ್ಲ ಕುಲಾಲ ಸಮುದಾಯದವರು ಈ ಉಚಿತ ನಿರಂತರ ಕಾರ್ಯಾಗಾರದ ಪ್ರಯೋಜನ ಪಡೆಯಲಿ ಎಂದು ಬಂಟ್ವಾಳತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ನಾರಾಯಣ ಸಿ. ಪೆರ್ನೆ ತಿಳಿಸಿದರು.ಅವರು ಬಿ.ಸಿ.ರೋಡು ಪೊಸಳಿಯ ಕುಲಾಲ ಸಮುದಾಯ ಭವನದಲ್ಲಿ ಭಾನುವಾರ ನಡೆದ ಬಂಟ್ವಾಳ ತಾ. ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿರುವ ಕುಲಾಲ ಸೇವಾದಳದ ಚೈತನ್ಯ ನಿರಂತರ ಕಾರ್ಯಾಗಾರದ ಫೆಬ್ರವರಿ 12ರಿಂದ ನಡೆಯುವ ಎರಡನೇ ಹಂತದ ಕಾರ್ಯಾಗಾರದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು. ಎರಡನೇ ಹಂತದ ಕಾರ್ಯಾಗಾರದಲ್ಲಿ ಹಿರಿಯ ಕಲಾವಿದ ಎಚ್ಕೆ ನೈನಾಡು, ಯಕ್ಷಗಾನದ ಕಲಾವಿದ ಅಶ್ವಥ್ ಕುಲಾಲ್ ಜನಾಡಿ, ತುಳುಲಿಪಿ ಶಿಕ್ಷಕ ಸುದರ್ಶನ್ ಸುರತ್ಕಲ್, ಪತ್ರಕರ್ತ ಸಂದೀಪ್ ಸಾಲ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಕಳೆದ ಮೂರು ತಿಂಗಳಿನಿಂದ ತರಬೇತಿ ನೀಡುತ್ತಿರುವ ಚಿತ್ರಕಲಾ ಶಿಕ್ಷಕ ಚೆನ್ನಕೇಶವ ಮತ್ತು ಡ್ಯಾನ್ಸ್ ಕೋರಿಯೋಗ್ರಾಫರ್ ಮಹೇಶ್ ಕುಲಾಲ್ ಕಡೇಶ್ವಾಲ್ಯರವರಿಗೆ ಗುರುನಮನ ಕಾರ್ಯಕ್ರಮ…
ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ನೇತೃತ್ವದಲ್ಲಿ ಬಂಟ್ವಾಳ ಬಿಜೆಪಿ ವತಿಯಿಂದ ಜ.14 ರಿಂದ ಜ.26 ರ ವರೆಗೆ ನಡೆಯಲಿರುವ ಗ್ರಾಮ ವಿಕಾಸ ಯಾತ್ರೆ , ಗ್ರಾಮದೆಡೆಗೆ ಶಾಸಕರ ನಡಿಗೆ ಪಾದಯಾತ್ರೆಯ ಎರಡನೇಯ ದಿನವಾದ ಭಾನುವಾರ ಬೆಳಿಗ್ಗೆ ಸಜೀಪಮುನ್ನೂರು ಗ್ರಾಮದ ನಂದಾವರದ ಶ್ರೀವಿನಾಯಕ ಶಂಕರನಾರಾಯಣ ದುರ್ಗಾಂಭ ಕ್ಷೇತ್ರದಿಂದ ಪ್ರಾರಂಭವಾಯಿತು. ಆರಂಭದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ನಂದಾವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು . ನಂದಾವರದಿಂದ ಹೊರಟ ಪಾದಯಾತ್ರೆ , ಮಂಚಿ,ಸಾಲೆತ್ತೂರು,ಕೊಳ್ನಾಡು ಮೂಲಕ ಸಾಗಿತು. ಈ ಸಂದರ್ಭ ಶಾಸಕರು ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಪಾದಾಯಾತ್ರೆ ಮಧ್ಯಾಹ್ನದ ವೇಳೆ ಕುಕ್ಕಾಜೆ ಶ್ರೀ ಸಿದ್ದಿವಿನಾಯಕ ಮಂದಿರಕ್ಕೆ ತಲುಪಿತು.ಈ ಸಂದರ್ಭದಲ್ಲಿ ಬೂತ್ ವಿಜಯ್ ಸಂಕಲ್ಪ ಕಾರ್ಯಕ್ರಮ ನಡೆಸಲಾಯಿತು. ಬೂಡ ಅಧ್ಯಕ್ಷ ದೇವದಾಸ ಶೆಟ್ಟಿ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಬಂಟ್ವಾಳ ಕ್ಷೇತ್ರದಲ್ಲಿ ನಡೆಸಲಾಗಿರುವ ಪ್ರತಿಯೊಂದು ಅಭಿವೃದ್ಧಿ…
ಬಂಟ್ವಾಳ: ನಮ್ಮಲ್ಲಿ ಸದ್ವಿಚಾರ, ಸತ್ ಚಿಂತನೆ ಇದ್ದಾಗ ಭಗವಂತನ ಸಾಕ್ಷತ್ಕಾರ ಪಡೆಯಲು ಸಾಧ್ಯವಿದೆ ಎಂದು ಒಡಿಯೂರು ಶ್ರೀ ಗುರುದೇವಾ ದತ್ತ ಸಂಸ್ಥಾನಂ ನ ಸಾಧ್ವಿ ಮಾತಾನಂದಮಯಿ ಹೇಳಿದರು.ಪುದು ಗ್ರಾಮದ ಸುಜೀರು ದತ್ತನಗರ ಶ್ರೀ ವೀರ ಹನುಮಾನ್ ಮಂದಿರದ 21ನೇ ವಾರ್ಷಿಕೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ಶ್ರದ್ಧಾ ಕೇಂದ್ರಗಳು ಆತ್ಮೋನೋತ್ತಿಗೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕೇಂದ್ರಗಳು. ಅಂತರಂಗದ ವಿಕಸನಕ್ಕೆ ಆಧ್ಯಾತ್ಮದ ಪಥದೊಂದಿಗೆ ಮುಂದುವರಿಯಬೇಕು, ಸಂಸ್ಕೃತಿ, ಪ್ರಕೃತಿ ಬೆಳೆಸುವಿದರೊಂದಿಗೆ ವಿಕೃತಿಯನ್ನು ನಾಶಮಾಡಬೇಕು ಎಂದು ತಿಳಿಸಿದರು.ನೈಜೀರಿಯಾದ ಉದ್ಯಮಿ ಅಜಿತ್ ಚೌಟ ದೇವಸ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರ ಹಾಸ ಶೆಟ್ಟಿ ಬೆಂಜನಪದವು ಶ್ರೀ ಕೊರಗಜ್ಜ ಸನ್ನಿಧಿಯ ಧರ್ಮದರ್ಶಿ ವಿಜಯ್ ಕೆ. ಪೂಜಾಇ, ಸುಜೀರು ಶ್ರೀ ರಕ್ತೇಶ್ವರಿ ಸಹಪರಿವಾರ ಸಾನಿಧ್ಯ ಇದರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಶೋಕ್ ಶೆಟ್ಟಿ ಸುಜೀರುಗುತ್ತು, ಪ್ರಮುಖರಾದ ಚಂದ್ರಶೇಖರ ಗಾಂಭೀರ, ಪತ್ರಕರ್ತ ರಾಜಾ ಬಂಟ್ವಾಳ ಫರಂಗಿಪೇಟೆ ಶ್ರೀ ಆಂಜನೇಯ ದೇವಸ್ಥಾನ ದ ಪ್ರಧಾನ ಕಾರ್ಯದರ್ಶಿ…
ಬಂಟ್ವಾಳ: ಜ.14 ರಿಂದ ಜ. 26ರವರೆಗೆ ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತ್ರತ್ವದಲ್ಲಿ ನಡೆಯಲಿರುವ ಗ್ರಾಮ ವಿಕಾಸ ಯಾತ್ರೆ, ಗ್ರಾಮದೆಡೆಗೆ ಶಾಸಕರ ನಡಿಗೆ ಪಾದಯಾತ್ರೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆವರಣದಲ್ಲಿ ಶನಿವಾರ ಸಂಜೆ ಚಾಲನೆ ನೀಡಲಾಯಿತು. ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರಿಗೆ ಪಕ್ಷದ ಧ್ವಜವನ್ನು ಸಂಸದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹಸ್ತಾಂತರ ಮಾಡಿ ಪಾದಾಯಾತ್ರೆಯನ್ನು ಆರಂಭಿಸಲಾಯಿತು. ಈ ಸಂದರ್ಭ ಪೊಳಲಿ ಸರ್ವಮಂಗಳ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ನಳಿನ್ ಕುಮಾರ್ ಮಾತನಾಡಿ, ನಾಯಕ ಪದಕ್ಕೆ ಅರ್ಥ ತುಂಬಿದವರು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು, ರಾಜ್ಯದಲ್ಲಿ ವಿವಾದರಹಿತ ಶಾಸಕರಲ್ಲಿ ಓರ್ವರು ಎಂದು ಬಣ್ಣಿಸಿದರು. ಬಂಟ್ವಾಳ ಬಿಜೆಪಿ ಹಾಗೂ ಶಾಸಕ ರಾಜೇಶ್ ನಾಯ್ಕ್ ಅವರ ಕಾಲಘಟ್ಟದಲ್ಲಿ ಧಾರ್ಮಿಕ ಕೇಂದ್ರಗಳು, ಗ್ರಾಮಗಳು ಸಮಗ್ರ ಅಭಿವೃದ್ಧಿ ಕಂಡಿದೆ. ಅಭಿವೃದ್ಧಿ ಮತ್ತು ಪಕ್ಷ ಸಂಘಟನೆಯಲ್ಲಿ ಅವರ ಕಾರ್ಯ…








