Author: admin
https://www.youtube.com/embed/qVumASJGlu8
ಬಂಟ್ವಾಳ: ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬಾ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶಾಭೀಷೇಕದ ಪ್ರಯುಕ್ತ ಜ.31 ಮತ್ತು ಫೆ. 3 ರಂದು ಪಣೋಲಿ ಬೈಲು ಕಲ್ಲುರ್ಟಿ ಕ್ಷೇತ್ರದಲ್ಲಿ ಅಗೇಲು ಸೇವೆ ಇರುವುದಿಲ್ಲ. ಫೆ. 5ರಂದು “ಅಗೇಲು ಸೇವೆ” ಇರಲಿದೆ. ನಂದಾವರ ಕ್ಷೇತ್ರದ ವಾರ್ಷಿಕ ಜಾತ್ರೆಯ ಪ್ರಯುಕ್ತ ಫೆ. 07 ರಂದು ಸದ್ರಿ ಕ್ಷೇತ್ರದಲ್ಲಿ ಅಗೇಲು ಸೇವೆ” ನಡೆಯುವುದಿಲ್ಲ. ನಂತರದ ದಿನಗಳಲ್ಲಿ ಎಂದಿನಂತೆ “ಅಗೇಲು ಸೇವೆ” ನಡೆಯುತ್ತದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ
ಬಂಟ್ವಾಳ: ಪ್ರತಿಯೊಂದು ಚರಾಚರ ವಸ್ತುವಿನಲ್ಲೂ ಜ್ಞಾನವಾಗಿ ದೇವರ ಅಸ್ಥಿತ್ವವಿದೆ. ದೇವರ ವಿರಾಟ್ ಸ್ವರೂಪವನ್ನು ಗ್ರಹಿಸುವ ಜ್ಞಾನ ನಮ್ಮಲ್ಲಿದ್ದಾಗ ದೇವರ ಸಾಕ್ಷತ್ಕಾರ ಪಡೆಯಲು ಸಾಧ್ಯವಿದೆ, ದೇವರನ್ನು ನಾವು ಉಪಾಸನೆ ಮಾಡಿದಾಗ ನಾವು ವಿಜ್ಞಾನಿಗಳಾಗುತ್ತೇವೆ ಎಂದು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಹೇಳಿದರು. ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶಾಭಿಷೇಕ, ನೂತನ ರಥ ಸಮರ್ಪಣೆ ಹಾಗೂ ಜಾತ್ರಾಮಹೋತ್ಸವದ ಪ್ರಯುಕ್ತ ನಡೆದ ಮೊದಲ ದಿನದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.ಮುಗಿಯದಷ್ಟು ಸಂಶೋಧನೆ ಮಾಡಬಹುದಾದ ರಹಸ್ಯ ಈ ಭೂ ಮಂಡಲದಲ್ಲಿದೆ. ಪ್ರಕೃತಿಯೊಂದಿಗೆ ಈ ದೇಹವನ್ನು ಸಂಯೋಜಿಸಲಾಗಿದೆ. ಪಂಚಭೂತಗಳ ತತ್ವವು ನಮ್ಮ ದೇಹದಲ್ಲಿದೆ. ಸೃಷ್ಡಿಯನ್ನು ಸೃಷ್ಟಿಸಿದ ಚೈತನ್ಯ ನಮ್ಮ ದೇಹದಲ್ಲೂ ಇದೆ. ದೇವಸ್ಥಾನ ಪಂಚ ಪ್ರಾಕಾರಗಳಿಂದ ನಿರ್ಮಾಣವಾದರೆ ದೇಹವು ಪಂಚ ಕೋಶಗಳಿಂದ ರಚಿತವಾಗಿದೆ. ದೇಹ ಎನ್ನುವ ನಮ್ಮ ದೇವಸ್ಥಾನಕ್ಕೆ ತಂತ್ರಿಗಳು ನಾವೇ, ಅಲ್ಲಿಗೆ ಕಲಶಾಭಿಷೇಕ ಮಾಡ ಬೇಕಾದವರು ನಾವು. ಆದ್ದರಿಂದ ಉತ್ತಮವಾದ ಆಚಾರ ವಿಚಾರಗಳನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದರು.ಈ ಸಂದರ್ಭ…
ಬಂಟ್ವಾಳ: ತಾಲೂಕಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಗ್ರಾಮ ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರು ಮತ್ತು ಸ್ಥಳೀಯ ಭಕ್ತರು ಭಾನುವಾರ ಶ್ರಮದಾನ ನಡೆಸಿದರು. ಕ್ಷೇತ್ರದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಂ.ತುಂಗಪ್ಪ ಬಂಗೇರ, ಉಪಾಧ್ಯಕ್ಷರಾದ ಎಂ.ಬೂಬ ಸಪಲ್ಯ, ಪುರುಷೋತ್ತಮ ಶೆಟ್ಟಿ ಬಾರೆಕ್ಕಿನಡೆ, ಕೆ.ಬಾಬು ಸಪಲ್ಯ, ಪ್ರಧಾನ ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ, ಕೋಶಾಧಿಕಾರಿ ಅಭಿಷೇಕ್ ಪಿಲಿಂಗಾಲು, ಹರೀಶ ಪಿಲಿಂಗಾಲು, ಯೋಜನೆ ಮೇಲ್ವಿಚಾರಕಿ ರೇಖಾ ಕಾಡಬೆಟ್ಟು, ವಲಯಾಧ್ಯಕ್ಷ ಉಮೇಶ್ ಮತ್ತಿತರರು ಇದ್ದರು.
ಬಂಟ್ವಾಳ: ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ,ನೇತ್ರಾವತಿ ವಲಯ ಜಿಲ್ಲಾ ಸಮಿತಿ ವತಿಯಿಂದ ಮಹಾತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನ, ಬಂಟ್ವಾಳ ರಥ ಸಪ್ತಮಿ ಪ್ರಯುಕ್ತ ಭಾನುವಾರ ಮುಂಜಾನೆ ಸಾಮೂಹಿಕ 108 ಸೂರ್ಯ ನಮಸ್ಕಾರ ನಡೆಯಿತು.ಮಹಾತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ,ಗ್ರಾಮಣಿ ವೆಂಕಟರಮಣ ಮುಚ್ಚಿನ್ನಯ ಕಳಿಮರ್ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿದರು. ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ನೇತ್ರಾವತಿ ವಲಯ ದಕ್ಷಿಣ ಕನ್ನಡ ಬಂಟ್ವಾಳ ತಾಲೂಕು ಪ್ರಾಂತ ಸಂಚಾಲಕ, ಸಂಘಟನ ವಿಭಾಗದ ಹರೀಶ, ಪ್ರಾಂತ ಪ್ರತಿನಿಧಿ ಶಿವಾನಂದ, ಜಿಲ್ಲಾ ಶಿಕ್ಷಣ ಪ್ರಮುಖ ಹರೀಶ್. ತಾಲೂಕು ಸಹ ಸಂಚಾಲಕಿ ನಯನ, ತಾಲೂಕು ವಿಸ್ತರಣ ಪ್ರಮುಖ್ ಕಿಶೋರ್ ಉಪಸ್ಥಿತರಿದ್ದರು.ರಥಸಪ್ತಮಿಯ ವಿಶೇಷತೆ ಬಗ್ಗೆ ಲೋಕಯ್ಯ ಬೌದ್ಧಿಕ್ ನೀಡಿದರು. ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ಸುರೇಶ ವಂದಿಸಿದರು.
ಬಂಟ್ವಾಳ: ಇತಿಹಾಸ ಪ್ರಸಿದ್ದ ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ದೇವಸ್ಥಾನದ ಅಷ್ಡಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಅದ್ದೂರಿ ಹೊರೆಕಾಣಿಕೆ ಮೆರವಣಿಗೆಗೆ ಮಾರ್ನಬೈಲಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಭಾನುವಾರ ಸಂಜೆ ಚಾಲನೆ ನೀಡಿದರು.ಮಾರ್ನಬೈಲು ಮುಖ್ಯ ರಸ್ತೆಯ ಮೂಲಕ ದೇವಸ್ಥಾನಕ್ಕೆ ಸಾಗಿ ಬಂದ ಮೆರವಣಿಗೆಗೆ ಗೊಂಬೆ ಕುಣಿತ, ಚೆಂಡೆ ವಾದನ, ಕೊಂಬು ವಾದ್ಯ ವಾದನ, ತಾಲೀಮ್ ತಂಡ, ಭಜನಾ ತಂಡ, ಪೂರ್ಣ ಕುಂಭ ಕಲಶ ಹೊತ್ತ ಮಹಿಳೆಯರ ತಂಡ , ಸುಡು ಮದ್ದು ಪ್ರದರ್ಶನ ವಿಶೇಷ ಮೆರುಗು ನೀಡಿತು.ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಶಾಸಕ ರಾಜೇಶ್ ನಾಯ್ಕ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ,ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂತೋಶ್ ಜಿ.ಶೆಟ್ಟಿ ದಳಂದಿಲ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿರಾಜ ರಾವ್ ನೂಯಿ, ಕಾರ್ಯಧ್ಯಕ್ಷ ಕೆ. ವಿಶ್ವನಾಥ ಆಳ್ವ ಕಾಂತಾಡಿಗುತ್ತು, ಕಾರ್ಯನಿರ್ವಾಹಣಾಧಿಕಾರಿ ಜಯಮ್ಮ ಪಿ.,…
ಚಿತ್ರ: ಬಿ.ಸಿ.ರೋಡಿನ ಶ್ರೀ ಚಂಡಿಕಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶಾಭಿಷೇಕ ಹಾಗೂ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಬಂಟ್ವಾಳ: ತಾಲೂಕಿನ ಬಿ.ಸಿ.ರೋಡ್ ಚಂಡಿಕಾನಗರದಲ್ಲಿರುವ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದ ಬ್ರಹ್ಮಕಲಶಾಭಿಷೇಕ ಮತ್ತು ಜಾತ್ರೋತ್ಸವ ಫೆ.22ರಿಂದ 28ರವರೆಗೆ ನಡೆಯುವ ಹಿನ್ನೆಲೆಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಭಾನುವಾರ ಕ್ಷೇತ್ರದಲ್ಲಿ ನಡೆಯಿತು. ಉದ್ಯಮಿ ರವಿ ಶೆಟ್ಟಿ ಕತಾರ್ ಬಿಡುಗಡೆಗೊಳಿಸಿ, ಶುಭ ಹಾರೈಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಕೇಶ್ ಮಲ್ಲಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕನಾಥ ಶೆಟ್ಟಿ, ಕೋಶಾಧಿಕಾರಿ ಐತಪ್ಪ ಆಳ್ವ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ಚರಣ್ ಜುಮಾದಿಗುಡ್ಡೆ, ಪ್ರದೀಪ್ ರಾವ್ ಬಂಟ್ವಾಳ, ಪ್ರಧಾನ ಕಾರ್ಯದರ್ಶಿ ಬಿ.ರಾಮಚಂದ್ರ ರಾವ್, ಜೊತೆ ಕಾರ್ಯದರ್ಶಿ ಐತಪ್ಪ ಪೂಜಾರಿ, ಕೋಶಾಧಿಕಾರಿ ಸಂಕಪ್ಪ ಶೆಟ್ಟಿ ಸಹಿತ ವಿವಿಧ ಸಮಿತಿಗಳ ಪ್ರಮುಖರು ಹಾಜರಿದ್ದರು.
ಬಂಟ್ವಾಳ: ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಕಾಪು ಶ್ರೀ ಉಮಾಮಹೇಶ್ವರ ದೇವಸ್ಥಾನದ ಪುನರ್ ನಿರ್ಮಾಣದ ಪ್ರಯುಕ್ತ ನೂತನ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮ ಶುಕ್ರವಾರ ನಡೆಯಿತು. ಉಡುಪಿ ಅದಮಾರು ಮಠದ ಕಿರಿಯ ಯತಿವರ್ಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರು ಶಿಲಾನ್ಯಾಸ ನೆರವೇರಿಸಿದರು. ಬಳಿಕ ನಡೆದ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಆಶೀರ್ವಚನ ನೀಡಿ ಮಾತನಾಡಿ, ಪ್ರಕೃತಿಯಲ್ಲಿ ದೇವರನ್ನು ಕಂಡ ಸಂಸ್ಕೃತಿ ನಮ್ಮದು. ಪ್ರಕೃತಿ ಆರಾಧನೆ ಮೂಲಕ ದೇವರನ್ನು ಕಾಣಬೇಕು.ಪ್ರಕೃತಿಗೆ ಹಾನಿಯಾಗದಂತೆ ದೇವಸ್ಥಾನ ನಿರ್ಮಾಣವಾಗುವ ಮೂಲಕ ಮಾದರಿ ಬ್ರಹ್ಮಕಲಶೋತ್ಸವ ನಡೆಯಬೇಕು ಎಂದು ನುಡಿದರು.ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಪ್ರ.ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಅವರು ಆಶೀರ್ವಚನ ನೀಡಿದರು. ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಅಧ್ಯಕ್ಷತೆ ವಹಿಸಿದ್ದರು.ಕ್ಷೇತ್ರದ ತಂತ್ರಿಗಳಾದ ಶ್ರೀಪಾದ ಪಾಂಗಣ್ಣಾಯ ಪ್ರಸ್ತಾವಿಸಿದರು. ಅಂಡಿಂಜೆ ಶ್ರೀ ಸುಽಂದ್ರ ವಿಷ್ಣುತೀರ್ಥ ಪ್ರಭು ಶ್ರೀ ಪಾದರು,ಶ್ರೀ ಕ್ಷೇ.ಧ.ಗ್ರಾ.ಯೋಜನೆ ಸಮುದಾಯ ಮತ್ತು ಅಭಿವೃದ್ಧಿ ವಿಭಾಗ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ, ಇರ್ವತ್ತೂರು ಗ್ರಾ.ಪಂ.ಅಧ್ಯಕ್ಷ…
ಬಂಟ್ವಾಳ: ನಾನು ಶ್ರೇಷ್ಠ ಎನ್ನುವ ಪೈಪೋಟಿ ಬಿಟ್ಟು ಹೊಂದಾಣಿಕೆ, ಸಾಮರಸ್ಯದಿಂದ ಬದುಕುವುದೇ ಮದುವೆಯ ಸಾರ ಎಂದು ಪುತ್ತೂರು ಶ್ರೀವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.ಬಂಟ್ವಾಳ ಬೈಪಾಸ್ ನಿತ್ಯಾನಂದ ನಗರ ಶ್ರೀಸದ್ಗುರು ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರ ಟ್ರಸ್ಟ್ ನ ಸುವರ್ಣ ಮಹೋತ್ಸವದ ವರ್ಷಾಚರಣೆಯ ಪ್ರಯುಕ್ತ ಶುಕ್ರವಾರ ನಡೆದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಧರ್ಮ ದೇಶದ ಆತ್ಮವಿದ್ದಂತೆ, ಧರ್ಮದ ಆಚರಣೆಯನ್ನು ಮುಂದಿನ ತಲೆಮಾರಿಗೆ ರವಾನಿಸುವ ಕಾರ್ಯ ಆಗಬೇಕಾಗಿದೆ ಎಂದರು. ಸಾಮೂಹಿಕ ವಿವಾಹದ ಮೂಲಕ ಆಗುವ ಸರಳ ವಿವಾಹ ತ್ಯಾಗದ ಜೀವನಕ್ಕೂ ಪ್ರೇರಣೆ ಎಂದರು.ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉಡುಪಿ,ಮುಂಬೈ ಗಣೇಶ್ ಪುರಿ ಶ್ರೀನಿತ್ಯಾನಂದ ಸ್ವಾಮಿ ಸಮಾಧಿ ಮಂದಿರದ ಪ್ರಧಾನ ಅರ್ಚಕ ನಂದು ಮಹಾರಾಜ್,ಹಿಮಾಚಲ ಪ್ರದೇಶದ ವಿಜಯಾನಂದ ಮಹಂತ್ ಸರಸ್ವತಿ ಸ್ವಾಮೀಜಿ, ಕಾಂಞಗಾಡ್ ಗುರುವನ ಶ್ರೀವಿದ್ಯಾನಂದ ಭಾರತಿ ಸ್ವಾಮೀಜಿ,ಉಡುಪಿ ಶ್ರೀ ರಾಜರಾಜೇಶ್ವರೀ ಸಂಸ್ಥಾನದ ವಿಶ್ವಾಧೀ ತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮುಂಬೈಯ ಉದ್ಯಮಿ,ಸಮಾಜಿಕ ಕಾರ್ಯಕರ್ತ…
ಬಂಟ್ವಾಳ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಪಾತ್ರ ಅತ್ಯಂತ ಮಹತ್ವವಾದುದು ಎಂದು ಬಂಟ್ವಾಳಜೆಎಮ್‌ಎಫ್‌ನ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ ವೈ ಕಳವಾರ ಇವರು ತಿಳಿಸಿದರು. ಮತದಾರ ಸಾಕ್ಷಾರತಾ ಸಂಘ, ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು ಬಂಟ್ವಾಳ, ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘ, ಬಂಟ್ವಾಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಮತದಾರರ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪಾರದರ್ಶಕ ಆಡಳಿತ ವ್ಯವಸ್ಥೆ ರೂಪಿಸಲು ಸಂವಿಧಾನವು ನಮಗೆ ಅತ್ಯಮೂಲ್ಯವಾದ ಮತದಾನದ ಹಕ್ಕು ನೀಡಿದೆ. 18ವರ್ಷ ತುಂಬಿದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಹೇಳಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಶಿವಪ್ರಕಾಶ್ ಮಾತನಾಡಿ ಪ್ರಪಂಚದ ಹಲವಾರು ದೇಶಗಳಲ್ಲಿ ಮತದಾನದ ಹಕ್ಕನ್ನು ಪಡೆಯಲು ಕೆಲವು ನಿಬಂಧನೆಗಳಿದ್ದು, ಭಾರತವು ಈ ಪಟ್ಟಿಯಲ್ಲಿ ಅತ್ಯಂತ ವಿಶಿಷ್ಟವಾದ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಪ್ರಜಾಪ್ರಭುತ್ವದಲ್ಲಿ ಮತದಾನ ಎಂಬುವುದು ಪ್ರಜೆಗಳಿಗಿರುವ ಅತ್ಯಂತ ಪ್ರಬಲವಾದ ಅಸ್ತ್ರ. ತಮ್ಮ ನಾಯಕನನ್ನು ತಾವೇ ಆಯ್ಕೆ ಮಾಡಿಕೊಳ್ಳುವ ಒಂದು ಅಪರೂಪದ ಅವಕಾಶವನ್ನು ಮತದಾನ ನೀಡುತ್ತದೆ. ಪ್ರತಿಯೊಬ್ಬನೂ ಕೂಡ…








