Advertisement
ಬಂಟ್ವಾಳ: ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಸಂಭ್ರಮದಲ್ಲಿರುವ ಶ್ರೀ ನಂದಾವರ ದೇವಸ್ಥಾನಕ್ಕೆ ದೇವಾಡಿಗ ಸಮಾಜ ಶ್ರೀ ನಂದಾವರ ದೇವಸ್ಥಾನ ರಥ ಸಮರ್ಪಣಾ ಸಮಿತಿ ನೂತನ ರಥವನ್ನು ಸಮರ್ಪಿಸಿದ್ದು ಶುಕ್ರವಾರ ರಾತ್ರಿ ಮೊದಲ ರಥೋತ್ಸವ ನಡೆಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ರಥೋತ್ಸವ ಕಣ್ತುಂಬಿಕೊಂಡರು.
ಬಾನಂಗಳದಲ್ಲಿ ಬಣ್ಣ ಬಣ್ಣ ಚಿತ್ತಾರದ ಸುಡುಮದ್ದು ಪ್ರದರ್ಶನ ರಥೋತ್ಸವಕ್ಕೆ ವಿಶೇಷ ಮೆರುಗು ನೀಡಿತು. ಫೆ. 5 ರಿಂದ ಕ್ಷೇತ್ರದ ವರ್ಷಾವಧಿ ಜಾತ್ರಾಮಹೋತ್ಸವ ನಡೆಯಲಿದ್ದು ಫೆ. 8 ರಂದು ಶ್ರೀ ದೇವರಿಗೆ ಮತ್ತೊಮ್ಮೆ ಮಹಾರಥೋತ್ಸವ ನಡೆಯಲಿದೆ.
Advertisement