Author: admin
ಬಂಟ್ವಾಳ: ನಾನು ಎಂದಿಗೂ ಶಾಸಕನಾಗುವ ಕನಸು ಕಂಡವನಲ್ಲ, ದೇವರುವ ಕೊಟ್ಟ ಅವಕಾಶದಿಂದ ಶಾಸಕನಾಗಿ ಇಂದು ಜನರ ಪ್ರೀತಿ ಗಳಿಸಲು ಸಾಧ್ಯವಾಯಿತು. ನನ್ನ ಅಧಿಕಾರವಧಿಯಲ್ಲಿ ಕ್ಷೇತ್ರದ ಜನತೆ ತಲೆ ತಗ್ಗಿಸುವ ಕೆಲಸ ನಾನು ಮಾಡಿಲ್ಲ. ಆದ್ದರಿಂದಾಗಿ ಧೈರ್ಯದಿಂದ ಪಾದಯಾತ್ರೆ ಮಾಡಲು ಸಾಧ್ಯವಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಹೇಳಿದರು. ಗ್ರಾಮ ವಿಕಾಸ ಯಾತ್ರೆ, ಗ್ರಾಮದೆಡೆಗೆ ಶಾಸಕರ ನಡಿಗೆ ಕಾರ್ಯಕ್ರಮದ ಎರಡನೇ ದಿನ ಕಾಪುಮಜಲುವಿನ ಮಲರಾಯ ದೈವಸ್ಥಾನದ ವಠಾರದಲದಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.22 ಕಿ.ಮೀ. ಪಾದಯಾತ್ರೆಯಲ್ಲಿ ಜನರು ನನ್ನ ಜೊತೆ ಉತ್ಸಾಹದಿಂದ ಪಾಲ್ಗೊಂಡಿರುವುದು ಖುಷಿ ನೀಡಿದೆ. .ದೇವರ ದಯೆ ಹಾಗೂ ಕ್ಷೇತ್ರದ ಜನರ ಪ್ರೀತಿ ಯಿಂದ ಪಾದಯಾತ್ರೆ ಯಶಸ್ವಿಯಾಗಿ ನಡೆಯಲಿದೆ ಎಂದು ತಿಳಿಸಿದರು.. ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ ಕಾಂಗ್ರೆಸ್ ಹುಟ್ಟಿದ್ದು ಬ್ರಿಟಿಷ್ ಗರ್ಭದಿಂದ. ವ್ಯಾಪರಕ್ಕೆ ಬಂದ ಬ್ರಿಟಿಷರು ಹುಟ್ಟುಹಾಕಿದ ಕಾಂಗ್ರೆಸ್ ಇಂದು ಇಟಲಿಯ ವ್ಯಕ್ತಿಯ ಹಿಡಿತದಲ್ಲಿದೆ ಎಂದು ಕಿಡಿಕಾರಿದರು.ಮುಂದಿನ ಚುನಾವಣೆ ಭಾರತೀಯ ಸಂಸ್ಕೃತಿ ಉಳಿಬೇಕೋ ಬೇಡವೋ ಎಂದು ನಿರ್ಧರಿಸಲಿರುವ ಚುನಾವಣೆಯಾಗಲಿದೆ.…
ಬಂಟ್ವಾಳ : ಬಂಟ್ವಾಳ ಕುಲಾಲ ಸೇವಾದಳದ ಚೈತನ್ಯ ನಿರಂತರ ಕಾರ್ಯಾಗಾರ ಇನ್ನಷ್ಟು ಉತ್ತಮವಾಗಿ ಮೂಡಿಬರಲಿ. ತಾಲೂಕಿನ ಎಲ್ಲ ಕುಲಾಲ ಸಮುದಾಯದವರು ಈ ಉಚಿತ ನಿರಂತರ ಕಾರ್ಯಾಗಾರದ ಪ್ರಯೋಜನ ಪಡೆಯಲಿ ಎಂದು ಬಂಟ್ವಾಳತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ನಾರಾಯಣ ಸಿ. ಪೆರ್ನೆ ತಿಳಿಸಿದರು.ಅವರು ಬಿ.ಸಿ.ರೋಡು ಪೊಸಳಿಯ ಕುಲಾಲ ಸಮುದಾಯ ಭವನದಲ್ಲಿ ಭಾನುವಾರ ನಡೆದ ಬಂಟ್ವಾಳ ತಾ. ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿರುವ ಕುಲಾಲ ಸೇವಾದಳದ ಚೈತನ್ಯ ನಿರಂತರ ಕಾರ್ಯಾಗಾರದ ಫೆಬ್ರವರಿ 12ರಿಂದ ನಡೆಯುವ ಎರಡನೇ ಹಂತದ ಕಾರ್ಯಾಗಾರದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು. ಎರಡನೇ ಹಂತದ ಕಾರ್ಯಾಗಾರದಲ್ಲಿ ಹಿರಿಯ ಕಲಾವಿದ ಎಚ್ಕೆ ನೈನಾಡು, ಯಕ್ಷಗಾನದ ಕಲಾವಿದ ಅಶ್ವಥ್ ಕುಲಾಲ್ ಜನಾಡಿ, ತುಳುಲಿಪಿ ಶಿಕ್ಷಕ ಸುದರ್ಶನ್ ಸುರತ್ಕಲ್, ಪತ್ರಕರ್ತ ಸಂದೀಪ್ ಸಾಲ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಕಳೆದ ಮೂರು ತಿಂಗಳಿನಿಂದ ತರಬೇತಿ ನೀಡುತ್ತಿರುವ ಚಿತ್ರಕಲಾ ಶಿಕ್ಷಕ ಚೆನ್ನಕೇಶವ ಮತ್ತು ಡ್ಯಾನ್ಸ್ ಕೋರಿಯೋಗ್ರಾಫರ್ ಮಹೇಶ್ ಕುಲಾಲ್ ಕಡೇಶ್ವಾಲ್ಯರವರಿಗೆ ಗುರುನಮನ ಕಾರ್ಯಕ್ರಮ…
ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ನೇತೃತ್ವದಲ್ಲಿ ಬಂಟ್ವಾಳ ಬಿಜೆಪಿ ವತಿಯಿಂದ ಜ.14 ರಿಂದ ಜ.26 ರ ವರೆಗೆ ನಡೆಯಲಿರುವ ಗ್ರಾಮ ವಿಕಾಸ ಯಾತ್ರೆ , ಗ್ರಾಮದೆಡೆಗೆ ಶಾಸಕರ ನಡಿಗೆ ಪಾದಯಾತ್ರೆಯ ಎರಡನೇಯ ದಿನವಾದ ಭಾನುವಾರ ಬೆಳಿಗ್ಗೆ ಸಜೀಪಮುನ್ನೂರು ಗ್ರಾಮದ ನಂದಾವರದ ಶ್ರೀವಿನಾಯಕ ಶಂಕರನಾರಾಯಣ ದುರ್ಗಾಂಭ ಕ್ಷೇತ್ರದಿಂದ ಪ್ರಾರಂಭವಾಯಿತು. ಆರಂಭದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ನಂದಾವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು . ನಂದಾವರದಿಂದ ಹೊರಟ ಪಾದಯಾತ್ರೆ , ಮಂಚಿ,ಸಾಲೆತ್ತೂರು,ಕೊಳ್ನಾಡು ಮೂಲಕ ಸಾಗಿತು. ಈ ಸಂದರ್ಭ ಶಾಸಕರು ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಪಾದಾಯಾತ್ರೆ ಮಧ್ಯಾಹ್ನದ ವೇಳೆ ಕುಕ್ಕಾಜೆ ಶ್ರೀ ಸಿದ್ದಿವಿನಾಯಕ ಮಂದಿರಕ್ಕೆ ತಲುಪಿತು.ಈ ಸಂದರ್ಭದಲ್ಲಿ ಬೂತ್ ವಿಜಯ್ ಸಂಕಲ್ಪ ಕಾರ್ಯಕ್ರಮ ನಡೆಸಲಾಯಿತು. ಬೂಡ ಅಧ್ಯಕ್ಷ ದೇವದಾಸ ಶೆಟ್ಟಿ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಬಂಟ್ವಾಳ ಕ್ಷೇತ್ರದಲ್ಲಿ ನಡೆಸಲಾಗಿರುವ ಪ್ರತಿಯೊಂದು ಅಭಿವೃದ್ಧಿ…
ಬಂಟ್ವಾಳ: ನಮ್ಮಲ್ಲಿ ಸದ್ವಿಚಾರ, ಸತ್ ಚಿಂತನೆ ಇದ್ದಾಗ ಭಗವಂತನ ಸಾಕ್ಷತ್ಕಾರ ಪಡೆಯಲು ಸಾಧ್ಯವಿದೆ ಎಂದು ಒಡಿಯೂರು ಶ್ರೀ ಗುರುದೇವಾ ದತ್ತ ಸಂಸ್ಥಾನಂ ನ ಸಾಧ್ವಿ ಮಾತಾನಂದಮಯಿ ಹೇಳಿದರು.ಪುದು ಗ್ರಾಮದ ಸುಜೀರು ದತ್ತನಗರ ಶ್ರೀ ವೀರ ಹನುಮಾನ್ ಮಂದಿರದ 21ನೇ ವಾರ್ಷಿಕೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ಶ್ರದ್ಧಾ ಕೇಂದ್ರಗಳು ಆತ್ಮೋನೋತ್ತಿಗೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕೇಂದ್ರಗಳು. ಅಂತರಂಗದ ವಿಕಸನಕ್ಕೆ ಆಧ್ಯಾತ್ಮದ ಪಥದೊಂದಿಗೆ ಮುಂದುವರಿಯಬೇಕು, ಸಂಸ್ಕೃತಿ, ಪ್ರಕೃತಿ ಬೆಳೆಸುವಿದರೊಂದಿಗೆ ವಿಕೃತಿಯನ್ನು ನಾಶಮಾಡಬೇಕು ಎಂದು ತಿಳಿಸಿದರು.ನೈಜೀರಿಯಾದ ಉದ್ಯಮಿ ಅಜಿತ್ ಚೌಟ ದೇವಸ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರ ಹಾಸ ಶೆಟ್ಟಿ ಬೆಂಜನಪದವು ಶ್ರೀ ಕೊರಗಜ್ಜ ಸನ್ನಿಧಿಯ ಧರ್ಮದರ್ಶಿ ವಿಜಯ್ ಕೆ. ಪೂಜಾಇ, ಸುಜೀರು ಶ್ರೀ ರಕ್ತೇಶ್ವರಿ ಸಹಪರಿವಾರ ಸಾನಿಧ್ಯ ಇದರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಶೋಕ್ ಶೆಟ್ಟಿ ಸುಜೀರುಗುತ್ತು, ಪ್ರಮುಖರಾದ ಚಂದ್ರಶೇಖರ ಗಾಂಭೀರ, ಪತ್ರಕರ್ತ ರಾಜಾ ಬಂಟ್ವಾಳ ಫರಂಗಿಪೇಟೆ ಶ್ರೀ ಆಂಜನೇಯ ದೇವಸ್ಥಾನ ದ ಪ್ರಧಾನ ಕಾರ್ಯದರ್ಶಿ…
ಬಂಟ್ವಾಳ: ಜ.14 ರಿಂದ ಜ. 26ರವರೆಗೆ ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತ್ರತ್ವದಲ್ಲಿ ನಡೆಯಲಿರುವ ಗ್ರಾಮ ವಿಕಾಸ ಯಾತ್ರೆ, ಗ್ರಾಮದೆಡೆಗೆ ಶಾಸಕರ ನಡಿಗೆ ಪಾದಯಾತ್ರೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆವರಣದಲ್ಲಿ ಶನಿವಾರ ಸಂಜೆ ಚಾಲನೆ ನೀಡಲಾಯಿತು. ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರಿಗೆ ಪಕ್ಷದ ಧ್ವಜವನ್ನು ಸಂಸದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹಸ್ತಾಂತರ ಮಾಡಿ ಪಾದಾಯಾತ್ರೆಯನ್ನು ಆರಂಭಿಸಲಾಯಿತು. ಈ ಸಂದರ್ಭ ಪೊಳಲಿ ಸರ್ವಮಂಗಳ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ನಳಿನ್ ಕುಮಾರ್ ಮಾತನಾಡಿ, ನಾಯಕ ಪದಕ್ಕೆ ಅರ್ಥ ತುಂಬಿದವರು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು, ರಾಜ್ಯದಲ್ಲಿ ವಿವಾದರಹಿತ ಶಾಸಕರಲ್ಲಿ ಓರ್ವರು ಎಂದು ಬಣ್ಣಿಸಿದರು. ಬಂಟ್ವಾಳ ಬಿಜೆಪಿ ಹಾಗೂ ಶಾಸಕ ರಾಜೇಶ್ ನಾಯ್ಕ್ ಅವರ ಕಾಲಘಟ್ಟದಲ್ಲಿ ಧಾರ್ಮಿಕ ಕೇಂದ್ರಗಳು, ಗ್ರಾಮಗಳು ಸಮಗ್ರ ಅಭಿವೃದ್ಧಿ ಕಂಡಿದೆ. ಅಭಿವೃದ್ಧಿ ಮತ್ತು ಪಕ್ಷ ಸಂಘಟನೆಯಲ್ಲಿ ಅವರ ಕಾರ್ಯ…
ಬಂಟ್ವಾಳ: ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ಇದರ 15 ನೇಉಪ್ಪಿನಂಗಡಿ ಶಾಖೆಯು ಬ್ಯಾಂಕ್ ರಸ್ತೆಯಲ್ಲಿರುವ ಕೋಟೆ ಕೆಂಪಿನಮಜಲು “ಗೌರಿಕಾಂಪ್ಲೆಕ್ಸ್” ನ ಒಂದನೇ ಮಹಡಿಯಲ್ಲಿ ಶನಿವಾರ ಶುಭಾರಂಭಗೊಂಡಿತು. ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ದೀಪ ಪ್ರಜ್ವಲನಗೈದು 15ನೇ ಉಪ್ಪಿನಂಗಡಿ ಶಾಖೆಯನ್ನು ಉದ್ಘಾಟಿಸಿ ಬಳಿಕ ಆಶೀರ್ವಚನಗೈದರುಜನತೆ ಸಹಕಾರಿ ತತ್ವದಡಿಯಲ್ಲಿ ವ್ಯವಹರಿಸಿ ಬ್ಯಾಂಕ್ ಅಭಿವೃದ್ಧಿ ಪಥದಲ್ಲಿ ಸಾಗಲಿ, ಸಂಘದ ಸಂಸ್ಥಾಪಕ ಡಾ.ಅಮ್ಮೆಂಬಳಬಾಳಪ್ಪ ಹಾಗೂ ಹೂವಯ್ಯ ಮೂಲ್ಯ ಅವರು ದೂರದೃಷ್ಠಿ ಮೂಲಕ ಹಾಕಿಕೊಟ್ಟ ಸಹಕಾರಿ ಬ್ಯಾಂಕ್ ಇಂದು ಅವರ ಚಿಂತನೆಯಂತೆ ಯುವಕರ ನೇತೃತ್ವದಲ್ಲಿ ಯಶಸ್ವಿಯಾಗಿ ಮುಂದುವರಿಯುತ್ತಿರುವುದು ಪ್ರಗತಿಯ ಸಂಕೇತವಾಗಿದೆ ಎಂದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಕಂಪ್ಯೂಟರ್ ಉದ್ಘಾಟಿಸಿ ಶುಭಹಾರೈಸಿದರು. ಉಪ್ಪಿನಂಗಡಿ ಅಡಕೆ ವ್ಯಾಪಾರಿ ಯಂ. ರಾಮ ಅವರು ಭದ್ರತಾ ಕೊಠಡಿ ಉದ್ಘಾಟಿಸಿದರು. ಮಂಗಳೂರು ಕುಲಾಲ ಮಾತೃಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ ಠೇವಣಿಪತ್ರ ಬಿಡುಗಡೆಗೊಳಿಸಿದರು ಅವರು ಮಾತನಾಡಿ ಮಂಗಳೂರಿನ ಕೇಂದ್ರ ಸ್ಥಳದಲ್ಲಿರುವ ಮುಖ್ಯ ರಸ್ತೆಗೆ ಡಾ.ಅಮ್ಮೆಂಬಳ ಬಾಳಪ್ಪ…
ಬಂಟ್ವಾಳ: ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬಾ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕದ ಕಾರ್ಯಲಯ ಉದ್ಘಾಟನಾ ಸಮಾರಂಭ ಜ.14ರಂದು ಶನಿವಾರ ಬೆಳಿಗ್ಗೆ 11.30ಕ್ಕೆ ನಡೆಯಲಿದೆ.ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಕಾರ್ಯಾಲಯ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಿ.ಸಿ.ರೋಡಿನ ಶ್ರೀ ಚಂಡಿಕಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಾಕೇಶ್ ಮಲ್ಲಿ, ಬಿ.ಸಿ.ರೋಡಿನ ಸೋಮಯಾಜಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ರಮೇಶಾನಂದ ಸೋಮಯಾಜಿ, ಪಾಣೆಮಂಗಳೂರು ಶ್ರೀಶಾರದಾ ಪ್ರೌಢಶಾಲೆಯ ಸಂಚಾಲಕ ಡಾ. ಪಿ. ವಿಶ್ವನಾಥ ನಾಯಕ್ ಭಾಗವಹಿಸಲಿರುವರು. ಇದೇ ದಿನ ಬೆಳಿಗ್ಗೆ 9.30ರಿಂದ ಪ್ರತೀ ತಿಂಗಳ ಸಂಕ್ರಮಣದಂದು ನಡೆಯುವ ಸತ್ಯನಾರಾಯಣ ಪೂಜೆ ಜರುಗಲಿದ್ದು 11 ಗಂಟೆಗೆ ಮಹಾಪೂಜೆ ಜರುಗಲಿದೆ.
ಬಂಟ್ವಾಳ: ದ.ಕ.ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ.ಜಿಲ್ಲಾ ಯುವ ಜನ ಒಕ್ಕೂಟ ಮಂಗಳೂರು, ತಾಲೂಕು ಯುವಜನ ಒಕ್ಕೂಟ ಬಂಟ್ವಾಳ ಹಾಗೂ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯ ಇವರ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಪ್ರಯುಕ್ತ ಯುವ ಸಪ್ತಾಹ ಮತ್ತು ವಿವೇಕ ರಥ, ಯುವಪಥ- ಯುವ ಜಾಗೃತಿ ಕಾರ್ಯಕ್ರಮ ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆಯಿತು.ಕಲ್ಲಡ್ಕ ಪೇಟೆಯಲ್ಲಿ ಸ್ವಾಮಿ ವಿವೇಕಾನಂದರ ಸ್ತಬ್ಧ ಚಿತ್ರದ ರಥವನ್ನು ಶಾಸಕ ರಾಜೇಶ್ ನಾಕ್ ಹಾಗೂ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಅವರು ಪುಷ್ಪಾರ್ಚನೆಯ ಮಾಡುವ ಮೂಲಕ ಸ್ವಾಗತಿಸಿದರು. ಬಳಿಕ ಕಲ್ಲಡ್ಕ ಶಾಲಾ ಮಕ್ಕಳ ಮೆರವಣಿಗೆಯ ಮೂಲಕ ರಥಯಾತ್ರೆ ಕಾಲೇಜಿಗೆ ತೆರಳಿತು.ರಥಯಾತ್ರೆಯ ಬಳಿಕ ಕಾಲೇಜಿನ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಲ್ಲಡ್ಕ ಡಾ | ಪ್ರಭಾಕರ್ ಭಟ್, ಸ್ವಾಮಿ ವಿವೇಕಾನಂದ ಸರ್ವ ಶ್ರೇಷ್ಠ ವ್ಯಕ್ತಿಗಳ ಸಾಲಿನಲ್ಲಿ ಇವರು ಓರ್ವರಾಗಿದ್ದು, ಇದೇ ರೀತಿ ದೇಶಕ್ಕಾಗಿ ಪ್ರಾಣತ್ಯಾಗ…
ಬಂಟ್ವಾಳ: ಇಲ್ಲಿನ ಪುರಸಭೆಯ ಎರಡನೇ ಮಹಡಿಯಲ್ಲಿ ನೂತನವಾಗಿ ನಿರ್ಮಾಣವಾದ ಅಭಿಲೇಖಾಲಯ ಕಚೇರಿಯ ಕಟ್ಟಡವನ್ನು ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ ಅವರು ಶುಕ್ರವಾರ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ೩೦೦ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಯನ್ನ ಪುರಸಭಾ ವ್ಯಾಪ್ತಿಯಲ್ಲಿ ಮಾಡಲಾಗಿದೆ ಎಂದು ತಿಳಿಸಿದರು. ರೂಪಾಯಿ ೧೩೫ ಕೋಟಿ ವೆಚ್ಚದಲ್ಲಿ ಜಕ್ರಿಬೆಟ್ಟುವಿನಲ್ಲಿ ಸೇತುವೆ ಹಾಗೂ ಅಣೆಕಟ್ಟು ನಿರ್ಮಾಣ ಕಾಮಗಾರಿ ವೇಗ ಪಡೆದಿದೆ. ಈ ಯೋಜನೆ ಪೂರ್ಣಗೊಂಡ ಬಳಿಕ ಪುರಸಭಾ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ ಎಂದು ತಿಳಿಸಿದರು. ೪೦.೧೬ ಕೋಟಿ ರೂಪಾಯಿ ವೆಚ್ಚದಲ್ಲಿ ಎರಡನೇ ಹಂತದ ಸಮಗ್ರ ಕುಡಿಯುವ ನೀರಿನ ಯೋಜನೆ ಕಾಮಗಾರಿ ಟೆಂಡರ್ ಹಂತದಲ್ಲಿದ್ದು, ಶೀಘ್ರವಾಗಿ ಕಾಮಗಾರಿ ಪ್ರಾರಂಭವಾಗಲಿದೆ. ಇದರ ಜೊತೆಗೆ ಅಂದಾಜು ೫೪ ಕೋಟಿ ರೂಪಾಯಿಗೂ ಮಿಕ್ಕಿದ ಯುಜಿಡಿ ಯೋಜನೆ ಕಾಮಗಾರಿ ಟೆಂಡರ್ ಹಂತದಲ್ಲಿದೆ, ಸಣ್ಣ ಪುಟ್ಟ ಸಮಸ್ಯೆಗಳನ್ನು ನಿವಾರಿಸಿಕೊಂಡು ಶೀಘ್ರವಾಗಿ ಕಾಮಗಾರಿ ನಡೆಯಲಿದೆ ಎಂದ ಅವರು ಪುರಸಭಾ ವ್ಯಾಪ್ತಿಯಲ್ಲಿ ಕಳೆದ ನಾಲ್ಕುವರೆ ವರ್ಷಗಳ ಅವಧಿಯಲ್ಲಿ ಸಮಗ್ರ…
ಬಂಟ್ವಾಳ: ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ ಅವರ ಪರಿಕಲ್ಪನೆ ಮತ್ತು ನೇತೃತ್ವದಲ್ಲಿ 13 ದಿನಗಳ ಕಾಲ ನಡೆಯುವ ಗ್ರಾಮ ವಿಕಾಸ ಯಾತ್ರೆ ಗ್ರಾಮದೆಡೆ ಶಾಸಕರ ನಡಿಗೆಗೆ ಜ.14 ರಂದು ಮಧ್ಯಾಹ್ನ 2 ಗಂಟೆಗೆ ಶ್ರೀಕ್ಷೇತ್ರ ಪೊಳಲಿಯ ವಠಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಚಾಲನೆ ನೀಡಲಿದ್ದಾರೆ ಎಂದು ಗ್ರಾಮ ವಿಕಾಸ ಯಾತ್ರೆಯ ಸಂಚಾಲಕ ಬಿ.ದೇವದಾಸ ಶೆಟ್ಟಿ ಅವರು ತಿಳಿಸಿದರು.ಗುರುವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಜ.26ರಂದು ಮಧ್ಯಾಹ್ನ ಬಿ.ಸಿ.ರೋಡಿನಲ್ಲಿ ಶಾಸಕರ ಪಾದಯಾತ್ರೆ ಸಂಪನ್ನಗೊಳ್ಳಲಿದೆ. ಅಂದು ಮುಖ್ಯಂಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,ಕಂದಾಯ ಸಚಿವ ಆರ್ .ಅಶೋಕ್ ಸಹಿತ ಪಕ್ಷದ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ ಎಂದರು. ಪಕ್ಷದ ಸಂಘಟನೆ ಮತ್ತು ಕ್ಷೇತ್ರದಲ್ಲಿ ಭವಿಷ್ಯದ ದಿನಗಳಲ್ಲಿ ಆಗಬೇಕಾದ ಅಭಿವೃದ್ಧಿಗೆ ಪೂರಕವಾಗಿ ಅಧ್ಯಯನ ನಡೆಸುವ ನಿಟ್ಟಿನಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ಕ್ಷೇತ್ರದ 59 ಗ್ರಾಮಗಳ ಪೈಕಿ 58…








