Author: admin
ಬಂಟ್ವಾಳ: ಕೇಂದ್ರ ಚುನಾವಣಾ ಆಯೋಗದ ಸಂಸ್ಥಾಪನಾ ದಿನದ ಅಂಗವಾಗಿ ಬುಧವಾರ ಬಂಟ್ವಾಳ ತಾಲೂಕು ಆಡಳಿತದ ವತಿಯಿಂದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ತಹಶೀಲ್ದಾರ್ ದಯಾನಂದ ಕೆ .ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮತದಾನದ ಮಹತ್ವದ ಬಗ್ಗೆ ಮಾತನಾಡಿದ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ರವರು ಜಾಗೃತ ಮತದಾರರಾಗಿ ಮತ ಚಲಾಯಿಸಬೇಕು. ಆಗ ಉತ್ತಮ ನಾಯಕರ ಆಯ್ಕೆ ನಡೆದು ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದರು.ಮತದಾರರ ದಿನಾಚರಣೆಯ ಬಗ್ಗೆ ಮಾಹಿತಿ ನೀಡಿದ ಉಪನ್ಯಾಸಕ ಹಾಗೂ ತಾಲೂಕು ಚುನಾವಣೆಯ ಮುಖ್ಯ ತರಬೇತುದಾರರಾದ ಅಬ್ದುಲ್ ರಝಾಕ್ ರವರು 18 ವರ್ಷ ಪೂರೈಸಿದ ಎಲ್ಲಾ ಭಾರತೀಯ ಪ್ರಜೆಗಳೂ ಮತದಾನದ ಹಕ್ಕನ್ನು ಪಡೆಯುತ್ತಾರೆ. ಮತದಾನ ಮಾಡುವುದು ಅಭಿಮಾನದ ವಿಷಯ. ಆದ್ದರಿಂದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂದು ಪರಿಶೀಲಿಸಿ ಖಚಿತಪಡಿಸಿಕೊಂಡು ಎಲ್ಲರೂ ತಪ್ಪದೇ ನಿಮ್ಮ ಹಕ್ಕನ್ನು ಚಲಾಯಿಸಿ ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಪಾಣೆಮಂಗಳೂರು ಹೋಬಳಿ…
ಬಂಟ್ವಾಳ: ಜ.26ರಂದು ಪ್ರಜಾಪ್ರಭುತ್ವ ದಿನದ ಅಂಗವಾಗಿ ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ ಪಥಸಂಚಲನದಲ್ಲಿ ರಾಜ್ಯದ ಪ್ರತಿನಿಧಿಯಾಗಿ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಮಿಥುನ್ ಆಯ್ಕೆಯಾಗಿದ್ದಾರೆ.ತಾಲೂಕಿನ ಶೇರಾ ನಿವಾಸಿ ದಿ|.ಕೃಷ್ಣಪ್ಪ ಪೂಜಾರಿ ಹಾಗೂ ದಿ.| ಭಾರತಿ ಅವರ ಏಕೈಕ ಪುತ್ರನಾಗಿರುವಮಿಥುನ್ ಕುಮಾರ್ ಭಾರತೀಯ ತಟ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಪ್ರಸ್ತುತ ಆಂಧ್ರಪ್ರದೇಶದ ವಿಶಾಖಪಟ್ಟಣಂದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದೆಹಲಿಯಲ್ಲಿ ಪ್ರಜಾಪ್ರಭುತ್ವ ದಿನದ ಅಂಗವಾಗಿ ನಡೆಯುವ ಪಥಸಂಚಲನಕ್ಕೆಕರ್ನಾಟಕದ ಇಂಡಿಯಾನ್ ಕೋಸ್ಟ್ ಗಾರ್ಡ್ ನಿಂದ ಒರ್ವ ಆಯ್ಕೆಯಾಗಿರುವುದು , ರಾಜ್ಯಕ್ಕೆ ಅತ್ಯಂತ ಸಂತಸದ ವಿಷಯವಾಗಿದೆ. ಇಂದು ನಡೆಯುವ ಪಥಸಂಚಲನದ ಒಂದು ಯುನಿಟ್ ನಲ್ಲಿ 144 ಜನರಿದ್ದು ಅ ತಂಡದಲ್ಲಿ ಮಿಥುನ್ ಪಥಸಂಚನದಲ್ಲಿ ಭಾಗವಹಿಸಲಿದ್ದಾರೆ.
ಬಂಟ್ವಾಳ: ಗ್ರಾಮ ವಿಕಾಸ ಯಾತ್ರೆಯಲ್ಲಿ ಜನರ ಪ್ರೀತಿ ವಿಶ್ವಾಸವನ್ನು ನೋಡಿದಾಗ ಜೀವನದಲ್ಲಿ ಸಾರ್ಥಕತೆ ಸಿಕ್ಕಿದೆ. ಅಧಿಕಾರ ಬಂದು ಹೋಗುತ್ತದೆ. ಆದರೆ ಪಾದಯಾತ್ರೆಯ 11 ದಿನದಲ್ಲಿ ಹಿರಿಯರಾದಿಯಾಗಿ ಎಲ್ಲಾ ವರ್ಗದ ಜನರು ಪ್ರೀತಿ ನೀಡಿದಾಗ ಹೃದಯ ತುಂಬಿ ಬಂದಿದೆ. ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದರು.ಅವರು ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ನಡೆಯುತ್ತಿರುವ ಗ್ರಾಮ ವಿಕಾಸ ನಡಿಗೆ- ಗ್ರಾಮದೆಡೆಗೆ ಶಾಸಕರ ನಡಿಯ 11ನೇ ದಿನದ ಪಾದಯಾತ್ರೆಯ ಬಳಿಕ ಕುರಿಯಾಳ ದುರ್ಗಾನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಸ್ವಾರ್ಥ ರಹಿತವಾಗಿ ಪಕ್ಷ ಕಟ್ಟಿದವರು ನಮ್ಮ ಹಿರಿಯರು, ಈ ಪಕ್ಷ ಅಧಿಕಾರಕ್ಕೆ ಬರುವ ಕನಸು ಅವರು ಕಂಡಿರಲಿಲ್ಲ, ಆದರೆ ನಮ್ಮ ಜೀವಿತಾವಧಿಯಲ್ಕಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿರುವುದೇ ವಿಶೇಷ. ಬಿಜೆಪಿ ಪಕ್ಷ ಸಾಕಷ್ಟು ಕಾರ್ಯ ಮಾಡಿದೆ. 2 ಸಾವಿರ ಕೋಟಿಯ ಅಭಿವೃದ್ಧಿ ಕಾರ್ಯ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲೇ ಆಗಿದೆ. ಪಕ್ಷ ಸಂಘಟನೆಯಾಗಬೇಕು, ಯಾರು ನಿಂತರೂ ಬಿಜೆಪಿ…
ಬಂಟ್ವಾಳ: ಜೇಸಿಐ ಜೋಡುಮಾರ್ಗ ನೇತ್ರಾವತಿ ಯ 2023 ನೇ ಸಾಲಿನ ಅಧ್ಯಕ್ಷರಾಗಿ ಗಾಯತ್ರಿ ಲೋಕೇಶ್ ರವರು ಆಯ್ಕೆಯಾಗಿರುತ್ತಾರೆ. ಘಟಕದ ಕಾರ್ಯದರ್ಶಿಯಾಗಿ ರಮ್ಯ, ಕೋಶಾಧಿಕಾರಿಯಾಗಿ ದೀಪ್ತಿಶ್ರೀನಿಧಿ ಹಾಗು ಘಟಕದ ಉಪಾಧ್ಯಕ್ಷರುಗಳಾಗಿ ಸುಬ್ರಹ್ಮಣ್ಯ ಪೈ, ಕಿಶನ್ ಎನ್ ರಾವ್, ಅಮಿತಾಹರ್ಷರಾಜ್, ಡಾ.ವಿನಾಯಕ್ ಕೆ.ಎಸ್. ಪ್ರಕಾಶ್ ಆಳ್ವ, ಶ್ರೀನಿಧಿ ಭಟ್ ಆಯ್ಕೆಯಾಗಿರುತ್ತಾರೆ. ಘಟಕದ ಜೇಜೇಸಿ ಅಧ್ಯಕ್ಷರಾಗಿ ರಶ್ಮಿತಾ ಆಯ್ಕೆಯಾಗಿರುತ್ತಾರೆ.ಘಟಕದ ನಿರ್ದೇಶಕರುಗಳಾಗಿ ಹರಿಶ್ಚಂದ್ರ ಆಳ್ವ, ಹರ್ಷರಾಜ್, ಡಾ.ಧೀರಜ್ ಹೆಬ್ರಿ, ರವೀಂದ್ರ ಕುಕ್ಕಾಜೆ ಆಯ್ಕೆಯಾಗಿರುತ್ತಾರೆ.ನೂತನ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜ.30 ಸೋಮವಾರ ಸಂಜೆ ಘಂಟೆ 6.30 ಕ್ಕೆ ಬಿ.ಸಿ.ರೋಡಿನ ರೋಟರಿ ಸಭಾ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾವಂತೂರು ಮಹಾಗಣಪತಿ ದೇವಾಲಯ ಸಮಿತಿಯ ಅಧ್ಯಕ್ಷ ಪದ್ಮರಾಜ ಬಲ್ಲಾಳ್ ಮಾವಂತೂರು, ಜೇಸಿಐ ವಲಯ 15 ರ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಪದ ಪ್ರಧಾನ ಅಧಿಕಾರಿಯಾಗಿ ಜೇಸಿಐ ವಲಯ ಉಪಾಧ್ಯಕ್ಷ ಅಜಿತ್ ಕುಮಾರ್ ಭಾಗವಹಿಸಲಿದ್ದಾರೆ.
ಬಂಟ್ವಾಳ: ಇತ್ತೀಚೆಗೆ ಜಾರಿಯಾಗುವ ಕಾನೂನುಗಳು ಹಾಗೂ ತಿದ್ದುಪಡಿಗಳು ಸಂವಿಧಾನದ ಆಶಯಗಳಿಗೆ ಧಕ್ಕೆಯಾಗುವಂತಿದೆ. ಮಾನವನ ಬದುಕನ್ನು ಸಹನೀಯ ಮಾಡಲು, ದೇಶದ ಸಂಪತ್ತು ಎಲ್ಲರಿಗೂ ತಲುಪಲು ರಚನೆಯಾಗಿದ್ದ ಸಂವಿಧಾನದ ದಿಕ್ಕನ್ನು ಬದಲಿಸುವ ಪ್ರಯತ್ನ ನಡೆಯುತ್ತಿದೆ. ಜನರು ನೀಡುವ ಮತದ ಮೌಲ್ಯವನ್ನು ದುಡ್ಡು, ಜಾತಿಯಿಂದ ಅಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮೂಲಕ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ ಎಂದು ಹೊಸತು ಮಾಸ ಪತ್ರಿಕೆಯ ಸಂಪಾದಕ ಡಾ. ಸಿದ್ದನಗೌಡ ಪಾಟೀಲ್ ಹೇಳಿದರು.ಮಾನವ ಬಂಧುತ್ವ ವೇದಿಕೆ ಬಂಟ್ವಾಳ ತಾಲೂಕು ಸಂಚಲನ ಸಮಿತಿ ಹಾಗೂ ಸ್ವಾಗತ ಸಮಿತಿ ಆಶ್ರಯದಲ್ಲಿ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆದ ಸಂವಿಧಾನ ಅರಿವಿನ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವದ ಮೊದಲಿನ ದಾಳಿ ಮತದ ಮೌಲ್ಯದ ಮೇಲೆ ಆಗಿದೆ. ದೇಶವನ್ನು ಕಾರ್ಪೊರೇಟ್ ಕಂಪೆನಿಗಳಿಗೆ ನೀಡಲಾಗಿದೆ. ಮತ ಹಾಕಿದ ಪ್ರಜೆಗೆ ಬೆಲೆಯೇರಿಕೆಯ ಬಿಸಿ ನೀಡಿ ಅದಾನಿ ಅಂಬಾನಿಯಂತಹ ಉದ್ಯಮಿಗಳಿಗೆ ತೆರಿಗೆ ರಿಯಾಯಿತಿ ನೀಡಿ ಅವರು ಜಗತ್ತಿನ ಶ್ರೀಮಂತರಾಗುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳೆಲ್ಲವೂ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿದೆ ಎಂದು…
ಬಂಟ್ವಾಳ: ಒಂದು ಸುಳನ್ನು ನೂರು ಬಾರಿ ಹೇಳುವ ಮೂಲಕ ಜನರ ದಿಕ್ಕುತಪ್ಪಿಸುವ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಅಂದು ಕಾಂಗ್ರೆಸನ್ನು ಮಹಾತ್ಮ ಗಾಂಧಿಯವರೇ ವಿಸರ್ಜನೆ ಮಾಡಲು ತಿಳಿಸಿದರೂ ಕೂಡ ವಿಸರ್ಜನೆ ಮಾಡಿರಲಿಲ್ಲ. ಈಗ ರಾಹುಲ್ ಗಾಂಧಿ ಕಾಂಗ್ರೆಸನ್ನು ವಿಸರ್ಜಿಸಲು ಪಣ ತೊಟ್ಡಿದ್ದಾರೆ. ರಾಹುಲ್ ಗಾಂಧಿ ಕಾಲಿಟ್ಟಲ್ಲಿ ಕಾಂಗ್ರೆಸ್ ನಾಶವಾಗುತ್ತಿದೆ. ಕಾಂಗ್ರೆಸ್ ಪಕ್ಷ ನಿರ್ನಾಮ ಮಾಡಲು ರಾಹುಲ್ ದೇಶದ್ಯಂತ ಯಾತ್ರೆ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಪ್ಪಿಸಲು ಸಾದ್ಯವಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಅವರು ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ನಡೆದ ಗ್ರಾಮ ವಿಕಾಸ ಯಾತ್ರೆ- ಗ್ರಾಮದೆಡೆಗೆ ಶಾಸಕರ ನಡಿಗೆಯ 10ನೇ ದಿನದ ಪಾದಯಾತ್ರೆಯು ಸಮಾರೋಪವಾಗಿ ಕೊಯ್ಲ ಗ್ರಾಮದ ಮಾವಂತೂರು ಶ್ರೀ ದೇವಪ್ಪ ಶೆಟ್ಟಿ ವೇದಿಕೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.10 ಲಕ್ಷ ಕೋಟಿ ಹಗರಣ ಮಾಡಿರುವ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಕನಸು ಕಾಣುತ್ತಿದೆ.…
ಬಂಟ್ವಾಳ: ಅಷ್ಠಬಂಧ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರಕ್ಕೆ ದೇವಾಡಿಗ ಸಮಾಜ ಶ್ರೀ ನಂದಾವರ ದೇವಸ್ಥಾನ ರಥ ಸಮರ್ಪಣಾ ಸಮಿತಿ ವತಿಯಿಂದ ಶ್ರೀದೇವರಿಗೆ ಫೆ.3 ರಂದು ಶ್ರೀ ರಥ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ರಾಮದಾಸ್ ಬಂಟ್ವಾಳ ತಿಳಿಸಿದರು. ಸೋಮವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ನಂದಾವರ ಶ್ರೀವಿನಾಯಕ ಶಂಕರನಾರಾಯಣ ದುರ್ಗಾಂಭ ಕ್ಷೇತ್ರದ ಅಷ್ಠಬಂಧ ಬ್ರಹ್ಮಕಲಶವು ನಡೆಯಲಿದ್ದು, ಮಧ್ಯಾಹ್ನ 12.30 ರ ಶುಭ ಮುಹೂರ್ತ ದಲ್ಲಿ ನೂತನ ಶ್ರೀರಥಕ್ಕೆ ಕಲಶಾಭಿಷೇಕ ಮತ್ತು ಶ್ರೀದೇವರಿಗೆ ರಥ ಸಮರ್ಪಣೆ, ರಾತ್ರಿ ರಥೋತ್ಸವವು ನಡೆಯಲಿದೆ ಎಂದರು.ಪೊಳಲಿಗೆ ಸಮರ್ಪಣೆಗೈದ ರಥ ನಿರ್ಮಾಣದ ಶಿಲ್ಪಿಯವರು ನಂದಾವರಕ್ಕೆ ಸಮರ್ಪಿಸುವ ಶ್ರೀರಥ ನಿರ್ಮಿಸುತ್ತಿದ್ದು, ಈಗಾಗಲೇ ಶೇ.90ರಷ್ಟು ಕೆಲಸ ಮುಗಿದಿದೆ. ರಥದ ನಿರ್ಮಾಣದಲ್ಲಿ ಕೇವಲ ದೇವಾಡಿಗ ಮಾತ್ರವಲ್ಲ ಸಮಸ್ತ ಹಿಂದೂ ಸಮಾಜದಿಂದ ಉತ್ತಮವಾದ ಸ್ಪಂದನೆ ಸಿಕ್ಕಿದ್ದು, ಸುಮಾರು 25 ಲಕ್ಷ ರೂ.ವೆಚ್ಚದಲ್ಲಿ ನೂತನ ಶ್ರೀರಥವನ್ನು ನಿರ್ಮಿಲಾಗಿದೆ…
ಬಂಟ್ವಾಳ: ಬಿ.ಸಿ.ರೋಡಿನ ಕೈಕಂಬ ಯಕ್ಷ ಮಿತ್ರರು ಆಶ್ರಯದಲ್ಲಿ ಭಾನುವಾರ ರಾತ್ರಿ ಬಿ.ಸಿ.ರೋಡಿನ ಹೊಟೇಲ್ ರಂಗೋಲಿ ಹೊರಾಂಗಣದಲ್ಲಿ ೧೪ನೇ ವರ್ಷದ ಯಕ್ಷಗಾನ ಪ್ರದರ್ಶನದಲ್ಲಿ ಹಿಮ್ಮೇಳ ಕಲಾವಿದ ದೇಲಂತಮಜಲು ಸುಬ್ರಹ್ಮಣ್ಣ ಭಟ್ ಅವರನ್ನು ಸನ್ಮಾನಿಸಲಾಯಿತು. ಬಿ.ಸಿ.ರೋಡಿನ ಸಿವಿಲ್ ಇಂಜಿನಿಯರ್ ಸುಧೀರ್ ಶೆಟ್ಟಿ ಅವರು ಖ್ಯಾತ ಚೆಂಡೆ ಕಲಾವಿದ ದೇಲಂತಮಜಲು ಸುಬ್ರಹ್ಮಣ್ಣ ಭಟ್ ಅವರನ್ನು ಸನ್ಮಾನಿಸಿದರು.ನಿವೃತ್ತ ಶಿಕ್ಷಕ ಸಂಕಪ್ಪ ಶೆಟ್ಟಿ ಅಭಿನಂದನಾ ಭಾಷಣಗೈದು ಯಕ್ಷಮಿತ್ರರು ಇದೇ ಮೊದಲಿಗೆ ಹಿಮ್ಮೇಳ ಕಲಾವಿದರನ್ನು ಗುರುತಿಸಿ ಸನ್ಮಾನಿಸಿರುವುದು ಅಭಿನಂದನೀಯವಾಗಿದೆ. ದೇಲಂತಮಜಲು ಸುಬ್ರಹ್ಮಣ್ಣ ಭಟ್ ಅವರು ಕಳೆದ ೪೦ ವರ್ಷಗಳಿಂದ ಯಕ್ಷಗಾನ ರಂಗಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ .ಹಿಮ್ಮೇಳ ಕಲಾವಿದ ಮಾತ್ರವಲ್ಲ ನಾಟ್ಯದಲ್ಲೂ ಪ್ರವೀಣರು ಆಗಿದ್ದಾರೆ ಎಂದರು.ಹಿರಿಯ ಕಲಾವಿದ ಗೋವಿಂದ ಭಟ್ , ಯಕ್ಷಮಿತ್ರರು ಸದಸ್ಯರಾದ ಸದಾಶಿವ ಕೈಕಂಬ, ಶಂಕರ ಶೆಟ್ಟಿ, ವಿಶ್ವನಾಥ, ಭುಜಂಗ ಸಾಲಿಯಾನ್, ಸದಾನಂದ ಶೆಟ್ಟಿ ವೇದಿಕೆಯಲ್ಲಿದ್ದರು.ಕಿಶೋರ್ ಭಂಡಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಹನುಮಗಿರಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ಭಾರತ ಜನನಿ ಎಂಬ ಯಕ್ಷಗಾನ ಬಯಲಾಟವು…
ಬಂಟ್ವಾಳ: ಇಲ್ಲಿನ ಪುರಸಭೆಯ ಬಜೆಟ್ ಪೂರ್ವಭಾವಿ ಸಮಾಲೋಚನಾ ಸಭೆ ಸೋಮವಾರ ಪುರಸಭೆಯ ಅಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆಯಲ್ಲಿ ಪುರಸಭೆಯ ಸಭಾಂಗಣದಲ್ಲಿ ನಡೆಯಿತು.ಅಧ್ಯಕ್ಷ ಮಹಮ್ಮದ್ ಶರೀಫ್ ಮಾತನಾಡಿ ಸಾರ್ವಜನಿಕ ಹಿತದೃಷ್ಟಿಯಿಂದ ಉತ್ತಮವಾದ ಬಜೆಟ್ ಮಂಡಿಸಲು ಸಾರ್ವಜನಿಕರ ಸಲಹೆ ಸೂಚನೆ ಅಗತ್ಯ ಎಂದು ತಿಳಿಸಿದರು. ಈ ಹಿಂದೆ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರ ಯಾವುದಾದರೊಂದು ಸಲಹೆಯನ್ನು ಅನುಷ್ಠಾನಕ್ಕೆ ತಂದಿದ್ದೀರಾ? ಎಂದು ಪುರಸಭೆಯ ಹಿರಿಯ ಸದಸ್ಯ ಗೋವಿಂದ ಪ್ರಭು ಪ್ರಶ್ನಿಸಿದರು. ಇದೇ ಪ್ರಥಮ ಭಾರಿಗೆ ಸಭೆಯಲ್ಲಿ ಭಾಗವಹಿಸಲು ಸದಸ್ಯರಿಗೆ ನೋಟಿಸ್ ನೀಡಲಾಗಿದೆ. ಸರಕಾರದ ಮಾರ್ಗದರ್ಶನದಂತೆ ಕಾಟಾಚಾರಕ್ಕೆ ಸಭೆ ಮಾಡಲಾಗುತ್ತಿದೆ ಎಂದ ಅವರು ಮುಖ್ಯಾಧಿಕಾರಿಯ ಅನುಪಸ್ಥಿತಿಯಿಂದ ಆಕ್ರೋಶಗೊಂಡು ಸಭೆಯಿಂದ ಹೊರ ನಡೆದರು.ಮೆಲ್ಕಾರ್‌ನಲ್ಲಿ ಸಾರ್ವಜನಿಕ ಶೌಚಾಲಯ ಹಾಗೂ ಪ್ರಯಾಣಿಕರ ತಂಗುದಾಣ ನಿರ್ಮಿಸುವಂತೆ ವಸಂತಿ ಗಂಗಾಧರ್ ಸಲಹೆ ನೀಡಿದರು. ಬಿ.ಸಿ.ರೋಡಿನಿಂದ ಕೈಕಂಬದವರೆಗೆ ರಸ್ತೆ ಬದಿಯಲ್ಲಿ ಪುಟ್‌ಪಾತ್ ಇಲ್ಲದೆ ಸಾರ್ವಜನಿರು ತೊಂದರೆ ಪಡುತ್ತಿದ್ದು ರಸ್ತೆ ದಾಟುವ ಸಂದರ್ಭದಲ್ಲಿ ಜೀವಹಾನಿಯೂ ಸಂಭವಿಸಿದೆ, ಆದ್ದರಿಂದ ಸೂಕ್ತ ಪುಟ್‌ಪಾತ್ ನಿರ್ಮಿಸುವಂತೆ ಪುರಸಭೆಯ ಸ್ವಚ್ಛತಾ ರಾಯಭಾರಿ…
ಬಂಟ್ವಾಳ: ದೇವರ ಭಕ್ತಿ ಜೊತೆಗೆ ವಿವಿಧ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಮತ್ತು ಬ್ರಹ್ಮಕಲಶೋತ್ಸವದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ನಮಗೆ ಪುಣ್ಯ ಪ್ರಾಪ್ತಿ ಮತ್ತು ಜೀವನ ಪಾವನವಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾವೃದ್ಧಿ ಯೋಜನೆ ಯೋಜನಾಧಿಕಾರಿ ಜಯಾನಂದ ಪಿ. ಹೇಳಿದ್ದಾರೆ. ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಗ್ರಾಮ ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಭಾನುವಾರ ಸಂಜೆ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಕ್ಷೇತ್ರದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಂ.ತುಂಗಪ್ಪ ಬಂಗೇರ ಪ್ರಾಸ್ತಾವಿಕ ಮಾತನಾಡಿದರು. ಯೋಜನೆ ಮೇಲ್ವಿಚಾರಕಿ ಸುಜಾತ, ಕಾಡಬೆಟ್ಟು ಸೇವಾಪ್ರತಿನಿಧಿ ರೇಖಾ, ಕೊಡಂಬೆಟ್ಟು ಸೇವಾಪ್ರತಿನಿಧಿ ಮೋಹನದಾಸ ಗಟ್ಟಿ, ವಲಯಾಧ್ಯಕ್ಷ ಉಮೇಶ್ ಅನಿಸಿಕೆ ವ್ಯಕ್ತಪಡಿಸಿದರು. ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ ಸ್ವಾಗತಿಸಿ, ಅಭಿಷೇಕ್ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.








