ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ನೇತೃತ್ವದಲ್ಲಿ ಬಂಟ್ವಾಳ ಬಿಜೆಪಿ ವತಿಯಿಂದ ಜ.14 ರಿಂದ ಜ.26 ರ ವರೆಗೆ ನಡೆಯಲಿರುವ ಗ್ರಾಮ ವಿಕಾಸ ಯಾತ್ರೆ , ಗ್ರಾಮದೆಡೆಗೆ ಶಾಸಕರ ನಡಿಗೆ ಪಾದಯಾತ್ರೆಯ ಎರಡನೇಯ ದಿನವಾದ ಭಾನುವಾರ ಬೆಳಿಗ್ಗೆ ಸಜೀಪಮುನ್ನೂರು ಗ್ರಾಮದ ನಂದಾವರದ ಶ್ರೀವಿನಾಯಕ ಶಂಕರನಾರಾಯಣ ದುರ್ಗಾಂಭ ಕ್ಷೇತ್ರದಿಂದ ಪ್ರಾರಂಭವಾಯಿತು.
ಆರಂಭದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ನಂದಾವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು . ನಂದಾವರದಿಂದ ಹೊರಟ ಪಾದಯಾತ್ರೆ , ಮಂಚಿ,ಸಾಲೆತ್ತೂರು,ಕೊಳ್ನಾಡು ಮೂಲಕ ಸಾಗಿತು. ಈ ಸಂದರ್ಭ ಶಾಸಕರು ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ಪಾದಾಯಾತ್ರೆ ಮಧ್ಯಾಹ್ನದ ವೇಳೆ ಕುಕ್ಕಾಜೆ ಶ್ರೀ ಸಿದ್ದಿವಿನಾಯಕ ಮಂದಿರಕ್ಕೆ ತಲುಪಿತು.
ಈ ಸಂದರ್ಭದಲ್ಲಿ ಬೂತ್ ವಿಜಯ್ ಸಂಕಲ್ಪ ಕಾರ್ಯಕ್ರಮ ನಡೆಸಲಾಯಿತು. ಬೂಡ ಅಧ್ಯಕ್ಷ ದೇವದಾಸ ಶೆಟ್ಟಿ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಬಂಟ್ವಾಳ ಕ್ಷೇತ್ರದಲ್ಲಿ ನಡೆಸಲಾಗಿರುವ ಪ್ರತಿಯೊಂದು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸ ಆಗಬೇಕಾಗಿದೆ ಎಂದು ತಿಳಿಸಿದರು.
ಬಂಟ್ವಾಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಮಾತನಾಡಿ, ಜ.26 ರ ನಡೆಯುವ ಪಾದಯಾತ್ರೆಯಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಪಕ್ಷವನ್ನು ಇನ್ನಷ್ಟು ಗಟ್ಟಿ ಗೊಳಿಸುವ ನಿಟ್ಟಿನಲ್ಲಿ ತಾಲೂಕಿನ ಪ್ರತಿಯೊಬ್ಬರೂ ಬಿಜೆಪಿ ಸದಸ್ಯರಾಗುವಂತೆ ತಿಳಿಸಿದರು. ಮಧ್ಯಾಹ್ನದ ಭೋಜನದ ಬಳಿಕ ಇಲ್ಲಿಂದ ಮತ್ತೆ ಪಾದಾಯಾತ್ರೆ ವಿಟ್ನಪಡ್ನೂರು ಗ್ರಾಮಕ್ಕೆ ಹೊರಟಿತು. ಸಭೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಕರ್ನಾಟಕ ನಗರ ನೀರು ಮತ್ತು ಒಳಚರಂಡಿ ನಿಗಮದ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್, ಪ್ರಮುಖರಾದ ಮಾಧವ ಮಾವೆ,ಸುದರ್ಶನ್ ಬಜ, ರವೀಂದ್ರ ಕಂಬಳಿ , ಮಂಚಿ ಗ್ರಾಮಪಂಚಾಯತ್ ಅಧ್ಯಕ್ಷೆ ಪುಷ್ಪಾ ಎಸ್.ಕಾಮತ್, ಉಪಾಧ್ಯಕ್ಷ ಮೋಹನ್ ದಾಸ್ ಶೆಟ್ಟಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು. ಈ ದಿನದ ಪಾದಾಯಾತ್ರೆಯಲ್ಲಿ ಪಕ್ಷ ಪ್ರಮುಖರಾದ ಸಂತೋಷ್ ಶೆಟ್ಟಿ ದಳಂದಿಲ, ರವೀಂದ್ರ ಕಂಬಳಿ, ಕಮಲಾಕ್ಷಿ ಕೆ.ಪೂಜಾರಿ,ಪ್ರಕಾಶ್ ಅಂಚನ್, ಗಣೇಶ್ ಸುವರ್ಣ, ಸಂತೋಷ್ ರಾಯಿಬೆಟ್ಟು, ಉದಯ ಪೂಜಾರಿ ಕಾಂಜಿಲ, ರವೀಶ್ ಶೆಟ್ಟಿ ಕರ್ಕಳ, ಅರವಿಂದ ಭಟ್, ರಮನಾಥ ರಾಯಿ, ಡೊಂಬಯ್ಯ ಅರಳ, ಸೀತಾರಾಮ ಫುಜಾರಿ, ಉಮೇಶ್ ಅರಳ, ಸುರೇಶ್ ಕೋಟ್ಯಾನ್, ಯಶೋಧರ ಕರ್ಬೆಟ್ಟು, ಪುರುಷ ಸಾಲಿಯಾನ್, ಜನಾರ್ದನ ಬೊಂಡಾಲ, ವೀರೇಂದ್ರ ಕುಲಾಲ್, ಜಯಶಂಕರ್ ಬಾಸ್ರಿತ್ತಾಯ, ಶರ್ಮಿತ್ ಜೈನ್, ಲೋಹಿತ್ ಅಗರಿ, ಗಣೇಶ್ ರೈ ಮಾಣಿ, ಪುರುಷೋತ್ತಮ ಶೆಟ್ಟಿ ವಾಮದಪದವು,ರೋನಾಲ್ಡ್ ಡಿ.ಸೋಜ,ಶಾಂತಪ್ಪ ಪೂಜಾರಿ , ಧನಂಜಯ ಶೆಟ್ಟಿ , ಕೃಷ್ಣಪ್ಪ ಪೂಜಾರಿ ದೋಟ,ವಜ್ರನಾಥ ಕಲ್ಲಡ್ಕ, ರೂಪೇಶ್ ಆಚಾರ್ಯ, ಸುಪ್ರಿತ್ ಅಳ್ವ, ಪುಷ್ಪರಾಜ ಚೌಟ, ಚರಣ್ ಜುಮಾದಿಗುಡ್ಡೆ, ಸೀಮಾಮಾಧವ, ಯಶವಂತ ದೇರಾಜೆ, ಭಾರತಿ ಚೌಟ, ಪ್ರವೀಣ್ ಗಟ್ಟಿ, ಇದಿನಬ್ಬ, ಸಂದೀಪ್ ಮಾರ್ನಬೈಲು, ಯಶವಂತ ನಗ್ರಿ, ಗಣೇಶ್ ಕುಲಾಲ್, ನವೀನ್ ಕಂದೂರು, ಅರವಿಂದ ರೈ, ಅನಿತಾ, ಲಖಿತಾ ಆರ್ ಶೆಟ್ಟಿ, ಚಂದ್ರಕಲಾ ಮತ್ತಿತರರು ಶಾಸಕರ ಜೊತೆ ಹೆಜ್ಜೆ ಹಾಕಿದರು.