ಬಂಟ್ವಾಳ : ಬಂಟ್ವಾಳ ಕುಲಾಲ ಸೇವಾದಳದ ಚೈತನ್ಯ ನಿರಂತರ ಕಾರ್ಯಾಗಾರ ಇನ್ನಷ್ಟು ಉತ್ತಮವಾಗಿ ಮೂಡಿಬರಲಿ. ತಾಲೂಕಿನ ಎಲ್ಲ ಕುಲಾಲ ಸಮುದಾಯದವರು ಈ ಉಚಿತ ನಿರಂತರ ಕಾರ್ಯಾಗಾರದ ಪ್ರಯೋಜನ ಪಡೆಯಲಿ ಎಂದು ಬಂಟ್ವಾಳತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ನಾರಾಯಣ ಸಿ. ಪೆರ್ನೆ ತಿಳಿಸಿದರು.
ಅವರು ಬಿ.ಸಿ.ರೋಡು ಪೊಸಳಿಯ ಕುಲಾಲ ಸಮುದಾಯ ಭವನದಲ್ಲಿ ಭಾನುವಾರ ನಡೆದ ಬಂಟ್ವಾಳ ತಾ. ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿರುವ ಕುಲಾಲ ಸೇವಾದಳದ ಚೈತನ್ಯ ನಿರಂತರ ಕಾರ್ಯಾಗಾರದ ಫೆಬ್ರವರಿ 12ರಿಂದ ನಡೆಯುವ ಎರಡನೇ ಹಂತದ ಕಾರ್ಯಾಗಾರದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು.
ಎರಡನೇ ಹಂತದ ಕಾರ್ಯಾಗಾರದಲ್ಲಿ ಹಿರಿಯ ಕಲಾವಿದ ಎಚ್ಕೆ ನೈನಾಡು, ಯಕ್ಷಗಾನದ ಕಲಾವಿದ ಅಶ್ವಥ್ ಕುಲಾಲ್ ಜನಾಡಿ, ತುಳುಲಿಪಿ ಶಿಕ್ಷಕ ಸುದರ್ಶನ್ ಸುರತ್ಕಲ್, ಪತ್ರಕರ್ತ ಸಂದೀಪ್ ಸಾಲ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಕಳೆದ ಮೂರು ತಿಂಗಳಿನಿಂದ ತರಬೇತಿ ನೀಡುತ್ತಿರುವ ಚಿತ್ರಕಲಾ ಶಿಕ್ಷಕ ಚೆನ್ನಕೇಶವ ಮತ್ತು ಡ್ಯಾನ್ಸ್ ಕೋರಿಯೋಗ್ರಾಫರ್ ಮಹೇಶ್ ಕುಲಾಲ್ ಕಡೇಶ್ವಾಲ್ಯರವರಿಗೆ ಗುರುನಮನ ಕಾರ್ಯಕ್ರಮ ನಡೆಯಲಿದೆ ಎಂದು ಸೇವಾದಳಪತಿ ಯಾದವ ಅಗ್ರಬೈಲು ತಿಳಿಸಿದರು.
ಕಾರ್ಯಕಾರಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೇಶವ ಮಾಸ್ತರ್, ಕೋಶಾಧಿಕಾರಿ ನಾಗೇಶ್ ಬಾಳೆಹಿತ್ಲು, ಜತೆಕಾರ್ಯದರ್ಶಿಗಳಾದ ಜಯಗಣೇಶ್, ಮೀನಾಕ್ಷಿ ಪದ್ಮನಾಭ, ಸದಸ್ಯರುಗಳಾದ ಕ್ರಷ್ಣಪ್ಪ ಬಿ., ಬೋಜ ಸಾಲ್ಯಾನ್, ಮಾದವ ಬಿ.ಸಿ.ರೋಡು, ಮನೋಹರ ನೇರಂಬೋಳು, ರಾಧಾಕ್ರಷ್ಣ ಬಂಟ್ವಾಳ, ರಮೇಶ್ ಸಾಲ್ಯಾನ್, ಯೋಗೀಶ್ ಮಿತ್ತಬೈಲು, ಗಣೇಶ್ ಮರ್ದೊಳಿ, ಮಚ್ಚೇಂದ್ರ ಸಾಲ್ಯಾನ್, ಪ್ರೇಮಾ ಪೊಸಳ್ಳಿ, ಜಲಜಾಕ್ಷಿ ಮತ್ತು ಮಹಿಳಾ ಘಟಕದ ಅಧ್ಯಕ್ಷೆ ಸುಶೀಲಾ ಲಿಂಗಪ್ಪ, ಸೇವಾದಳದ ಸದಸ್ಯರುಗಳಾದ ಕಿಶೋರ್ ರಾಜೀವಪಲ್ಕೆ, ದೇವದಾಸ ಅಗ್ರಬೈಲು ಉಪಸ್ಥಿತರಿದ್ದರು.