ಬಂಟ್ವಾಳ: ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ಇದರ 15 ನೇ
ಉಪ್ಪಿನಂಗಡಿ ಶಾಖೆಯು ಬ್ಯಾಂಕ್ ರಸ್ತೆಯಲ್ಲಿರುವ ಕೋಟೆ ಕೆಂಪಿನಮಜಲು “ಗೌರಿಕಾಂಪ್ಲೆಕ್ಸ್” ನ ಒಂದನೇ ಮಹಡಿಯಲ್ಲಿ ಶನಿವಾರ ಶುಭಾರಂಭಗೊಂಡಿತು.
ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ದೀಪ ಪ್ರಜ್ವಲನಗೈದು 15ನೇ ಉಪ್ಪಿನಂಗಡಿ ಶಾಖೆಯನ್ನು ಉದ್ಘಾಟಿಸಿ ಬಳಿಕ ಆಶೀರ್ವಚನಗೈದರು
ಜನತೆ ಸಹಕಾರಿ ತತ್ವದಡಿಯಲ್ಲಿ ವ್ಯವಹರಿಸಿ ಬ್ಯಾಂಕ್ ಅಭಿವೃದ್ಧಿ ಪಥದಲ್ಲಿ ಸಾಗಲಿ, ಸಂಘದ ಸಂಸ್ಥಾಪಕ ಡಾ.ಅಮ್ಮೆಂಬಳಬಾಳಪ್ಪ ಹಾಗೂ ಹೂವಯ್ಯ ಮೂಲ್ಯ ಅವರು ದೂರದೃಷ್ಠಿ ಮೂಲಕ ಹಾಕಿಕೊಟ್ಟ ಸಹಕಾರಿ ಬ್ಯಾಂಕ್ ಇಂದು ಅವರ ಚಿಂತನೆಯಂತೆ ಯುವಕರ ನೇತೃತ್ವದಲ್ಲಿ ಯಶಸ್ವಿಯಾಗಿ ಮುಂದುವರಿಯುತ್ತಿರುವುದು ಪ್ರಗತಿಯ ಸಂಕೇತವಾಗಿದೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಕಂಪ್ಯೂಟರ್ ಉದ್ಘಾಟಿಸಿ ಶುಭಹಾರೈಸಿದರು. ಉಪ್ಪಿನಂಗಡಿ ಅಡಕೆ ವ್ಯಾಪಾರಿ ಯಂ. ರಾಮ ಅವರು ಭದ್ರತಾ ಕೊಠಡಿ ಉದ್ಘಾಟಿಸಿದರು. ಮಂಗಳೂರು ಕುಲಾಲ ಮಾತೃಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ ಠೇವಣಿಪತ್ರ ಬಿಡುಗಡೆಗೊಳಿಸಿದರು ಅವರು ಮಾತನಾಡಿ ಮಂಗಳೂರಿನ ಕೇಂದ್ರ ಸ್ಥಳದಲ್ಲಿರುವ ಮುಖ್ಯ ರಸ್ತೆಗೆ ಡಾ.ಅಮ್ಮೆಂಬಳ ಬಾಳಪ್ಪ ಅವರ ಹೆಸರನ್ನುನಾಮಕರಣಗೊಳಿಸಿ ಅವರ ಜನ್ಮಶತಾಬ್ಧಿ ಸಂದರ್ಭ ಗೌರವ ಸಲ್ಲಿಸಲಾಗಿದೆ. ಹಣಕಾಸು ಸಂಸ್ಥೆಗೆ ಸ್ವಸಹಾಯ ಸಂಘ ಬೆನ್ನೆಲುಬು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವಂತೆ ಸಲಹೆ ನೀಡಿದರು. ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ ಆಗಮಿಸಿ ಶುಭಹಾರೈಸಿದರು. ಉಪ್ಪಿನಂಗಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಉಷಾ ಮುಳಿಯ, ಸದಸ್ಯ ತೌಸಿಫ್ ಯು.ಟಿ., ನಿವೃತ್ತ ಬಿಎಸ್ಎಫ್ ಡೆಪ್ಯುಟಿ ಕಮಾಂಡೆಂಟ್ ಡಿ.ಚಂದಪ್ಪ ಮೂಲ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಉಪ್ಪಿನಂಗಡಿ ಪರಿಸರದ ಸರ್ವರು ಬ್ಯಾಂಕಿನ ಏಳಿಗೆಗೆ ಸಹಕರಿಸುವಂತೆ ಕೋರಿದರು.
ನಿರ್ದೇಶಕರಾದ ಜನಾರ್ಧನ ಬೊಂಡಾಲ, ರಮೇಶ್ ಸಾಲಿಯಾನ್, ವಿಶ್ವನಾಥ ಕೆ.ಬಿ., ಎಂ.ವಾಮನ ಟೈಲರ್, ಸುರೇಶ್ ಎನ್, ಬಿ.ರಮೇಶ್ ಸಾಲ್ಯಾನ್, ಜಗನ್ನಿವಾಸ ಗೌಡ, ಅರುಣ್ ಕುಮಾರ್ ಕೆ., ನಾಗೇಶ್ ಬಿ., ವಿಜಯಕುಮಾರ್, ಜಯಂತಿ, ವಿದ್ಯಾ, ಗಣೇಶ್ ಸಮಗಾರ, ವಿಜಯಲಕ್ಷ್ಮೀ, ಶಾಖಾ ವ್ಯವಸ್ಥಾಪಕಿ ಸವಿತಾ ಉಪಸ್ಥಿತರಿದ್ದರು. ಇದೇ ವೇಳೆ ಅವಿನಾಶ್, ನಾಗರಾಜ್ ಕಂಪಿಮಜಲು ಅವರನ್ನು ಸನ್ಮಾನಿಸಲಾಯಿತು.
ಸಂಘದ ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ ಪ್ರಸ್ತಾವಿಸಿ ಸಂಘವು ಈ ಸಾಲಿನಲ್ಲಿ ೭೨೬.೦೮ ಕೋ.ರೂ. ವ್ಯವಹಾರ ನಡೆಸಿ ರೂ. ೨.೮೫ ಕೋ.ರೂ. ಲಾಭ ಗಳಿಸಿದೆ. ಸಂಘದ ದುಡಿಯುವ ಬಂಡವಾಳ ರೂ., ೧೯೬.೩೭ ಕೋಟಿ ರೂ.ಆಗಿದ್ದು, ಆಡಿಟ್ ವರ್ಗೀಕರಣದಲ್ಲಿ ‘ಎ’ ತರಗತಿ ಪಡೆದಿದೆ ಎಂದು ತಿಳಿಸಿದರು. ಸಹಾಯಕ ವ್ಯವಸ್ಥಾಪಕ ಮೋಹನ್ ಎಂ.ಕೆ.ಮಾತನಾಡಿ ಸಂಘವು ೧೯೧ಸ್ವಸಹಾಯ ಸಂಘ ಗಳಿದ್ದು೧೮೦೭ ಸದಸ್ಯರನ್ನು ಹೊಂದಿದೆ .ಉಪ್ಪಿನಂಗಡಿ ಶಾಖೆಯಲ್ಲು ಸ್ವಸಹಾಯ ಸಂಘವನ್ನು ರಚಿಸಲಾಗಿದೆ ಎಂದರು.ಇದೇ ವೇಳೆ ಫರಂಗಿಪೇಟೆ, ಕಲ್ಲಡ್ಕ, ಬಜಪೆ, ಬಿ.ಸಿ.ರೋಡ್, ಸಿದ್ದಕಟ್ಟೆ, ಬಂಟ್ವಾಳ, ಉಪ್ಪಿನಂಗಡಿ ಶಾಖೆಯ ಸ್ವಸಹಾಯ ಸಂಘವನ್ನು ಗುರುತಿಸಿ ಗೌರವಿಸಲಾಯಿತು
ಸಂಘದ ಉಪಾಧ್ಯಕ್ಷ ಪದ್ಮನಾಭ ವಿ. ಸ್ವಾಗತಿಸಿದರು.ವೆಂಕಟೇಶ್ ಕೃಷ್ಣಾಪುರ ಮತ್ತು ಶಿವರಾಮ್ ಮರ್ತಾಜೆ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಸತೀಶ್ಪಲ್ಲಮಜಲು ವಂದಿಸಿದರು.