ಬಂಟ್ವಾಳ: ನಮ್ಮಲ್ಲಿ ಸದ್ವಿಚಾರ, ಸತ್ ಚಿಂತನೆ ಇದ್ದಾಗ ಭಗವಂತನ ಸಾಕ್ಷತ್ಕಾರ ಪಡೆಯಲು ಸಾಧ್ಯವಿದೆ ಎಂದು ಒಡಿಯೂರು ಶ್ರೀ ಗುರುದೇವಾ ದತ್ತ ಸಂಸ್ಥಾನಂ ನ ಸಾಧ್ವಿ ಮಾತಾನಂದಮಯಿ ಹೇಳಿದರು.
ಪುದು ಗ್ರಾಮದ ಸುಜೀರು ದತ್ತನಗರ ಶ್ರೀ ವೀರ ಹನುಮಾನ್ ಮಂದಿರದ 21ನೇ ವಾರ್ಷಿಕೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಶ್ರದ್ಧಾ ಕೇಂದ್ರಗಳು ಆತ್ಮೋನೋತ್ತಿಗೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕೇಂದ್ರಗಳು. ಅಂತರಂಗದ ವಿಕಸನಕ್ಕೆ ಆಧ್ಯಾತ್ಮದ ಪಥದೊಂದಿಗೆ ಮುಂದುವರಿಯಬೇಕು, ಸಂಸ್ಕೃತಿ, ಪ್ರಕೃತಿ ಬೆಳೆಸುವಿದರೊಂದಿಗೆ ವಿಕೃತಿಯನ್ನು ನಾಶಮಾಡಬೇಕು ಎಂದು ತಿಳಿಸಿದರು.ನೈಜೀರಿಯಾದ ಉದ್ಯಮಿ ಅಜಿತ್ ಚೌಟ ದೇವಸ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರ ಹಾಸ ಶೆಟ್ಟಿ ಬೆಂಜನಪದವು ಶ್ರೀ ಕೊರಗಜ್ಜ ಸನ್ನಿಧಿಯ ಧರ್ಮದರ್ಶಿ ವಿಜಯ್ ಕೆ. ಪೂಜಾಇ, ಸುಜೀರು ಶ್ರೀ ರಕ್ತೇಶ್ವರಿ ಸಹಪರಿವಾರ ಸಾನಿಧ್ಯ ಇದರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಶೋಕ್ ಶೆಟ್ಟಿ ಸುಜೀರುಗುತ್ತು, ಪ್ರಮುಖರಾದ ಚಂದ್ರಶೇಖರ ಗಾಂಭೀರ, ಪತ್ರಕರ್ತ ರಾಜಾ ಬಂಟ್ವಾಳ ಫರಂಗಿಪೇಟೆ ಶ್ರೀ ಆಂಜನೇಯ ದೇವಸ್ಥಾನ ದ ಪ್ರಧಾನ ಕಾರ್ಯದರ್ಶಿ ಉಮೇಶ್ ಶೆಟ್ಟಿ ಬರ್ಕೆ, ಉದ್ಯಮಿ ನವೀನ್ ಕುಲಾಲ್ ಕೊಡ್ಮಾಣ್ ಭಾಗವಹಿಸಿದರು.
ಉತ್ಸವ ಸಮಿತಿ ಅಧ್ಯಕ್ಷ ರಕ್ಷಿತ್ ದೈಯ್ಯಡ್ಕ, ಮಹಿಳಾ ಸಮಿತಿ ಅಧ್ಯಕ್ಷೆ ಮೀನಾಕ್ಷಿ ವೇದಿಕೆಯಲ್ಲಿದ್ದರು.
ಅಧ್ಯಕ್ಷ ಸುರೇಂದ್ರ ಕಂಬಳಿ ಸ್ವಾಗತಿಸಿದರು. ಗೌರವಾಧ್ಯಕ್ಷ ಪ್ರಕಾಶ್ಚಂದ್ರ ರೈ ದೇವಸ್ಯ ಪ್ರಾಸ್ತವಿಕವಾಗಿ ಮಾತನಾಡಿದರು. ನಾಗೇಶ್ ದೆಯ್ಯಡ್ಕ ವಂದಿಸಿದರು, ತೇಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು.
ವಾರ್ಷಿಕೋತ್ಸವದ ಪ್ರಯುಕ್ತ ಪೊಳಲಿ ಗಿರಿಪ್ರಕಾಶ್ ತಂತ್ರಿಯವರ ಪೌರೋಹಿತ್ಯದಲ್ಲಿ ಸಾಮಾಹಿಕ ಸತ್ಯನಾರಾಯಣ ಪೂಜೆ, ಗಣಹೊಮ, ಪಂಚಾಮೃತ ಅಭಿಷೇಕ, ಮಹಾಪೂಜೆ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ಕ್ಷೇತ್ರ ಹಿರಿಯಡ್ಕದ ಶ್ರೀ ವೀರಭದ್ರ ಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಮಂತ್ರದ ಮಾಂಗಲ್ಯ ಯಕ್ಷಗಾನ ಬಯಲಾಟ ನಡೆಯಿತು.