Author: admin
ಬಂಟ್ವಾಳ: ಸಮಾಜದಿಂದ ಗಳಿಸಿದ ಸಂಪತ್ತಿನ ಒಂದು ಭಾಗವನ್ನು ಮತ್ತೆ ಸಮಾಜಕ್ಕೆ ಮರಳಿಸುವ ಭಾಗವಾಗಿ ಅದನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಉದ್ದೇಶಕ್ಕಾಗಿ ವ್ಯಯಿಸುತ್ತಿರುವ ಶ್ರೀರಾಮ್ ಟ್ರಾನ್ಸ್‍ಪೋರ್ಟ್ ಫೈನಾನ್ಸ್ ಕಂಪೆನಿ ವಾಣಿಜ್ಯ ಸಂಸ್ಥೆಯ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಹೇಳಿದರು. ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಇದರ ಬಂಟ್ವಾಳ ಶಾಖಾ ವತಿಯಿಂದ ಬಿ ಸಿ ರೋಡಿನ ರಂಗೋಲಿ ಸಭಾಂಗಣದಲ್ಲಿ ಗುರುವಾರ ನಡೆದ ಬಂಟ್ವಾಳ ತಾಲೂಕಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಧಿ ವಿತರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ನಿಧಿ ವಿತರಿಸಿ ಮಾತನಾಡಿದ ಅವರು, ಖಾಸಗಿ ಸಂಸ್ಥೆಗಳು ಶೈಕ್ಷಣಿಕ ಉದ್ದೇಶಕ್ಕಾಗಿ ನೀಡುವ ಪ್ರೋತ್ಸಾಹವನ್ನು ವಿದ್ಯಾರ್ಥಿಗಳು ಸಮಪರ್ಕವಾಗಿ ಬಳಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಕರೆ ನೀಡಿದರು. ಬಂಟ್ವಾಳದಲ್ಲಿ ಸರಕಾರಿ ಶಾಲೆಗಳ ಅಭಿವೃದ್ದಿ ದೃಷ್ಟಿಯಿಂದ ಪ್ರತಿ ಶಾಲೆಗಳಲ್ಲೂ ಹಳೆ ವಿದ್ಯಾರ್ಥಿಗಳನ್ನು ಗುರುತಿಸಿ ಆ ಮೂಲಕ ಶಾಲೆಯ ಅಭಿವೃದ್ದಿಗೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ ಎಂದು ಶಾಸಕ ರಾಜೇಶ್ ನಾಯಕ್ ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥೆಯ ಝೋನಲ್ ಬಿಝಿನೆಸ್ ಹೆಡ್…
ಬಂಟ್ವಾಳ: ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರ ಇದರ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಇಜ್ಜ ಶ್ರೀ ಸತ್ಯ ನಾರಾಯಣ ಭಟ್ ಇವರು ಚಪ್ಪರ ಮುಹೂರ್ತ ನಡೆಸಿದರು. ಕಾರ್ಯಕ್ರಮದಲ್ಲಿ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ದಿನೇಶ್ ಭಂಡಾರಿ, ಪ್ರಮುಖರಾದ ಚೆನ್ನೇಶವ ಡಿ.ಆರ್., ಬೇಬಿ ಪೂಜಾರಿ, ಸುರೇಶ್ ಕುಲಾಲ್, ಉದಯಕುಮಾರ್ ರಾವ್, ಹರೀಶ್ ಶೆಟ್ಟಿ, ಹರೀಶ್ ಯಂ. ಅಶೋಕ್, ಸುರೇಶ್ ಕುಲಾಲ್ ಯಸ್., ಭವಾನಿ ಶಂಕರ ಶೆಟ್ಟಿ, ವಸಂತ ಭಂಡಾರಿ, ಪುಷ್ಪ, ಸುದೇಷ್ ಕುಮಾರ್ ಮೊದಲಾದವರು ಭಾಗವಹಿಸಿದರು.
ಬಂಟ್ವಾಳ: ಕುಲಾಲ ಮಹಿಳಾ ಪ್ರೇರಣಾ ಸಂಘ ನರಿಕೊಂಬು ಇದರ ಆಶ್ರಯದಲ್ಲಿ ಸಂಘದ 5ನೇ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಸತ್ಯನಾರಾಯಣ ಪೂಜೆಯು ಜ.15ರಂದು ಮೊಗರ್ನಾಡುವಿನ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಶ್ರೀ ಅನ್ನಪೂರ್ಣೇಶ್ವರೀ ಸಭಾಭವನದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ
ಬಂಟ್ವಾಳ: ಬಿ.ಸಿ. ರೋಡಿನ ಪೊಲೀಸ್ ಲೇನ್‌ನಲ್ಲಿರುವ ಶ್ರೀ ಅನ್ನಪೂರ್ಣೇಶ್ವರೀ ನಾಗದೇವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಜ.29ರಿಂದ ಆರಂಭಗೊಂಡು ಜ.31ರವರೆಗೆ ನಡೆಯಲಿದೆ.ಕೀಕಾಂಗೋಡು ಬ್ರಹ್ಮಶ್ರೀ ಅರವತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಅರ್ಧ ಏಕಾಹ ಭಜನಾ ಮಹೋತ್ಸವ, ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ಗುಳಿಗ ದೈವದ ವರ್ಷಾವಧಿ ಕೋಲ ಜರುಗಲಿದೆ. ಜ.29ರಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅರ್ಧ ಏಕಾಹ ಭಜನಾ ಮಹೋತ್ಸವ ನಡೆಯಲಿದೆ, ಜ.30ರಂದು ಗಣಪತಿ ಹೋಮ, ನವಚಂಡಿಕಾ ಹೋಮ, ವಿಶೇಷ ನಾಗಾರಾಧನೆ, ನವಚಂಡಿಕಾ ಹೋಮದ ಪೂರ್ಣಾಹುತಿ, ಮಹಾಪೂಜೆ ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದೆ. ಸಂಜೆ 5 ರಿಂದ ಭಜನಾ ಕಾರ್ಯಕ್ರಮ ರಾತ್ರಿ 7ಕ್ಕೆ ಮಹಾಪೂಜೆ ನಂತರ ದೇವರ ನೃತ್ಯ ಬಲಿ, ಬಟ್ಟಲು ಕಾಣಿಕೆ ನಡೆಯಲಿದೆ. ಜ.31ರಂದು ರಾತ್ರಿ 7.30ಕ್ಕೆ ರಂಗ ಪೂಜೆಯೊಂದಿಗೆ ಮಹಾಪೂಜೆ ನಡೆದು ರಾತ್ರಿ 8ರಿಂದ ಗುಳಿಗ ದೈವದ ವರ್ಷಾವಧಿ ಕೋಲ ಹಾಗೂ ಹರಕೆ ಕೋಲ ಜರುಗಲಿದೆ.
ಬಂಟ್ವಾಳ: ಇಲಿನ ಬಡ್ಡಕಟ್ಟೆಯ ರಾಯರ ಚಾವಡಿಯಲ್ಲಿರುವ ಶ್ರೀ ಪಂಜುರ್ಲಿ, ಪಿಲಿಚಾಮುಂಡಿ, ಕಲ್ಲುರ್ಟಿ, ಕಲ್ಕುಡ ದೈವಸ್ಥಾನದಲ್ಲಿ ಜ.27 ಮತು ಜ.28ರಂದು ನೇಮೋತ್ಸವ ನಡೆಯಲಿದೆ.ಜ. 27ರಂದು ಬೆಳಿಗ್ಗೆ 8.30ಕ್ಕೆ ನೇಮೋತ್ಸವದ ಮುಹೂರ್ತ, ಬಳಿಕ ಶ್ರೀ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಪೂಜೆ, ಶ್ರೀ ನಾಗಸನ್ನಿಧಿಯಲ್ಲಿ ನಾಗ ತಂಬಿಲ, ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಮಹಾಪೂಜೆ, ಶ್ರೀ ಅಶ್ವತ್ಥ ನಾರಾಯಣ ಕಟ್ಟೆ ಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4ಕ್ಕೆ ದೈವಸ್ಥಾನದಲ್ಲಿ ನವಕ ಪ್ರಧಾನ ಹೋಮ, ಶ್ರೀ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ರಂಗ ಪೂಜೆ, ರಾತ್ರಿ 8ಗಂಟೆಗೆ ದೈವಸ್ಥಾನದಿಂದ ನೇಮೋತ್ಸವ ಗದ್ದೆಗೆ ಭಂಡಾರ ಹೊರಡುವುದು, ಶ್ರೀ ಪಿಲಿಚಾಮುಂಡಿ, ಕಲ್ಕುಡ ದೈವಗಳಿಗೆ ನೇಮೋತ್ಸವ, ಹಾಗೂ ವಲಸರಿ ನಡೆಯಲಿದೆ. ಜ.28ರಂದು ಸಂಜೆ 5.30ಕ್ಕೆ ಶ್ರೀ ಪಂಜುರ್ಲಿ ದೈವಕ್ಕೆ ಎಣ್ಣೆಬೂಳ್ಯ, ರಾತ್ರಿ 9ಕ್ಕೆ ಶ್ರೀ ಪಂಜುರ್ಲಿ ಕಲ್ಲುರ್ಟಿ ದೈವಗಳಿಗೆ ನೇಮೋತ್ಸವ ನಡೆಲಿದೆ.
ಬಂಟ್ವಾಳ: ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಪ್ರಯುಕ್ತ ಸಮಾಜ ಸೇವೆಯೊಂದಿಗೆ ವಿಕಸನದ ಬೆಳಕ ಬೆಳಗಿಸಿ ಉದ್ಯೋಗ ಕ್ಷೇತ್ರದಲ್ಲಿ ಹೊಸ ಆಯಾಮ ಸೃಷ್ಟಿಸಿದ ಆದರ್ಶ ಯುವ ನಾಯಕ ಪುರಂದರ ಕುಕ್ಕಾಜೆ ಯವರಿಗೆ ಜೇಸಿ ಆದರ್ಶ ನಾಯಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭ ಜೆಸಿಐ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ. ವಲಯ ಸಂಯೋಜಕ ಉಮೇಶ್ ಆರ್.ಮೂಲ್ಯ, ನಿಕಟಪೂರ್ವಾಧ್ಯಕ್ಷ ರೋಷನ್ ರೈ, ಕಾರ್ಯದರ್ಶಿ ರಶ್ಮಿ ಶೆಟ್ಟಿ, ಕೋಶಾಧಿಕಾರಿ ಶ್ರೀನಿವಾಸ ಅರ್ಬಿಗುಡ್ಡೆ, ಪೂರ್ವಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಬಂಟ್ವಾಳ: ಪಾಣೆಮಂಗಳೂರು ಸೇತುವೆ ಸಮೀಪ ನೇತ್ರಾವತಿ ನದಿಯಲ್ಲಿ ಹಿಂದು ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ರಾಜೇಶ್ ಸುವರ್ಣ ಸಾನದ ಮನೆ ಎಂಬವರ ಶವ ಗುರುವಾರ ಬೆಳಗ್ಗೆ ಪತ್ತೆಯಾಗಿದ್ದು, ಈ ಕುರಿತು ಬಂಟ್ವಾಳ ನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ.ಸಜಿಪನಡು ಸಾನದಮನೆ ನಿವಾಸಿ ಹಿಂದುಪರ ಸಂಘಟನೆಗಳ ಮುಖಂಡ ರಾಜೇಶ್ ಸುವರ್ಣ ಎಂಬವರ ಶವ ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಸೇತುವೆ ಬಳಿ ರಾತ್ರಿ ದ್ವಿಚಕ್ರ ವಾಹನವೊಂದು ಕಂಡುಬಂದಿದ್ದು, ಅದನ್ನು ಗಮನಿಸಿದ ಪೊಲೀಸರು ಅಗ್ನಿಶಾಮಕದಳದ ಹಾಗೂ ಸ್ಥಳೀಯರ ಸಹಾಯದಿಂದ ಹುಡುಕಾಟ ನಡೆಸಿದರು. ಈ ಸಂದರ್ಭ ನದಿಯಲ್ಲಿ ಶವ ಪತ್ತೆಯಾಗಿದೆ. ಘಟನೆಗೆ ಕಾರಣವಿನ್ನೂ ಗೊತ್ತಾಗಬೇಕಿದ್ದು, ತನಿಖೆ ಸಾಗಿದೆ. ಸಾವಿನ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವಾರು ಊಹಾಪೋಹಗಳು ಹರಿಡಾಡುತ್ತಿದು ಸಂಶಯ ವ್ಯಕ್ತವಾಗಿದೆ. ಪೊಲೀಸರ ತನಿಖೆಯಿಂದ ನಿಜಾಂಶ ತಿಳಿದು ಬರಬೇಕಾಗಿದೆ.
ಬಂಟ್ವಾಳ: ಮುಯ್ಹುದ್ದಿನ್ ಜುಮ್ಮಾ ಮಸೀದಿ ಮಂಚಿ ಕುಕ್ಕಾಜೆಗೆ ಹೈಕೋರ್ಟ್ ಆದೇಶದಂತೆ ಚುನಾವಣೆಯ ಉಸ್ತುವಾರಿ ಹಾಗೂ ಆಡಳಿತಾಧಿಕಾರಿಗಳಾಗಿ ಕರ್ನಾಟಕ ರಾಜ್ಯ ವಖ್ಫ್ ಬೋರ್ಡ್ ನೇಮಕಾತಿಯಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಆದೇಶದಂತೆ ಜಮಾತಿನವರ ಉಪಸ್ಥಿತಿ ಯಲ್ಲಿ ಬುಧವಾರ ಉಳ್ಳಾಲ ತಾಲೂಕು ಕಚೇರಿ ಸಿಬ್ಬಂದಿಯಾಗಿರುವ ಮೊಹಮ್ಮದ್ ರಫೀಕ್ ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿದ ಬಳಿಕ ಮೊಹಮ್ಮದ್ ರಫೀಕ್ ರವರು ಜಮಾತಿನ ಹಿತದೃಷ್ಟಿಯಿಂದ ಎಲ್ಲರ ಸಹಕಾರ ಕೋರಿದರು. ಮಸೀದಿಯ ಖತೀಬ್ ಮೊಹಮ್ಮದಲಿ ಮುಸ್ಲಿಯಾರ್ ದುಆಗೈದು ಮಾರ್ಗದರ್ಶನ ಮಾಡಿದರು. ಬಂಟ್ವಾಳ ಗ್ರಾಮಾಂತರ ಠಾಣಾ ಉಪನಿರೀಕ್ಷಕರಾದ ಹರೀಶ್ ಹಾಗೂ ಸಿಬ್ಬಂದಿವರ್ಗ ಮಸೀದಿ ಪರಿಸರದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಿದರು.
ಬಂಟ್ವಾಳ: ತಾಲೂಕಿನ ಗ್ರಾಮೀಣ ಪ್ರದೇಶವಾದ ಕಡೇಶ್ವಾಲ್ಯ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯೊಬ್ಬನ ವಿಜ್ಞಾನ ಮಾದರಿಯು ಇದೀಗ ದಕ್ಷಿಣ ಭಾರತ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆಯಾಗಿದ್ದು, ಸರಕಾರಿ ಶಾಲೆಯ ವಿದ್ಯಾರ್ಥಿಯ ಈ ಸಾಧನೆ ಪ್ರಶಂಸೆಗೆ ಪಾತ್ರವಾಗಿದೆ. ಕಡೇಶ್ವಾಲ್ಯ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಯಶವಂತ ಸಾಧಕ ವಿದ್ಯಾರ್ಥಿಯಾಗಿದ್ದು, ಆತನ ಬಹು ಉಪಯೋಗಿ ಕೃಷಿ ಯಂತ್ರದ ಅನ್ವೇಷಣೆಯು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಧಾರವಾಡದ ರಾಯಪುರದಲ್ಲಿ ನಡೆಸಿದ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಬಹುಮಾನ ಪಡೆದು ಕೇರಳದ ತ್ರಿಶೂರ್‌ನಲ್ಲಿ ಜ. ೨೭ರಿಂದ ೩೧ರವರೆಗೆ ನಡೆಯುವ ದಕ್ಷಿಣ ಭಾರತ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆಯಾಗಿದೆ.ರಾಜ್ಯದಿಂದ ದಕ್ಷಿಣ ಭಾರತ ಮಟ್ಟಕ್ಕೆ ಒಟ್ಟು ೨೦ ಮಾದರಿಗಳು ಆಯ್ಕೆಯಾಗಿದ್ದು, ವೈಯಕ್ತಿಕ ವಿಭಾಗದಲ್ಲಿ ದ.ಕ.ಜಿಲ್ಲೆಯಿಂದ ಈ ವಿದ್ಯಾರ್ಥಿಯ ಮಾದರಿ ಮಾತ್ರ ಆಯ್ಕೆಯಾಗಿದೆ. ಕಡೇಶ್ವಾಲ್ಯ ಕೆಮ್ಮಾನು ನಿವಾಸಿ ಲೋಕೇಶ- ಪವಿತ್ರ ದಂಪತಿಯ ಪುತ್ರನಾಗಿರುವ ಯಶವಂತನಿಗೆ ಶಾಲೆಯ ಗಣಿತ ಶಿಕ್ಷಕಿ ಗೀತಾಕುಮಾರಿ ಮಾರ್ಗದರ್ಶನ ನೀಡಿದ್ದರು. ಈ ವಿದ್ಯಾರ್ಥಿಯ ಮಾದರಿಯು ತಾಲೂಕು ಮಟ್ಟದ…
ಬಂಟ್ವಾಳ: ಜೀವನದಲ್ಲಿ ಸ್ವಾವಲಂಬಿಯಾಗಿ ಬದುಕಬೇಕು ಎನ್ನುವ ಧ್ಯೇಯ ಇಟ್ಟುಕೊಂಡು ವ್ಯವಹಾರ ಕ್ಷೇತ್ರಕ್ಕೆ ಕಾಲಿಟ್ಟ ಮಹಿಳೆಯೋರ್ವರು ತನ್ನ ವ್ಯಾಪರ ನಡೆಸುವ ಅಂಗಡಿಯನ್ನು ಸೌರಚಾಲಿತ ವ್ಯವಸ್ಥೆಯಡಿ ಆರಂಭಿಸಿದ್ದಾರೆ. ಕಬ್ಬಿನ ರಸ ತೆಗೆಯುವ ಯಂತ್ರ, ರೆಫ್ರಿಜರೇಟರ್, ಬೆಳಕಿನ ವ್ಯವಸ್ಥೆ ಎಲ್ಲವೂ ಸಂಪೂರ್ಣವಾಗಿ ಸೋಲಾರ್‌ನಿಂದ ಕಾರ್ಯಚರಿಸುತ್ತಿದೆ. ಮಹಿಳೆಯ ಸ್ವಾವಲಂಬಿ ಬದುಕಿಗೆ ಸೆಲ್ಕೋ ಸೋಲಾರ್ ಸಂಸ್ಥೆ ದಾರಿ ದೀಪವಾಗಿದೆ. ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಶಿವಪ್ಪ ಕುಲಾಲ್ ಎಂಬವರ ಪತ್ನಿ ಇಂದಿರಾ ಈ ಹಿಂದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಅಗರ್ ಬತ್ತಿ ತಯಾರಿಕಾ ಘಟಕದಲ್ಲಿ ಹಲವು ವಷರ್ಷಗಳ ಕಾಲ ಕಾರ್ಯ ನಿರ್ವಹಿಸುತಿದ್ದರು. ಇದರಿಂದ ಸ್ಪೂರ್ತಿ ಪಡೆದು ಏನಾದರೂ ಸ್ವ ಉದ್ಯೋಗ ಮಾಡಬೇಕೆಂದು ಯೋಚಿಸುತ್ತಿದ್ದಾಗ ಅವರ ನೆರೆವಿಗೆ ಬಂದದ್ದು ಸೆಲ್ಕೋ ಸೋಲಾರ್ ಸಂಸ್ಥೆ. ಮಣಿಹಳ್ಳ ಬಳಿ ರಾಷ್ಟ್ರೀಯ ಹೆದ್ದಾರಿ ಬದಿ ಸೋಲಾರ್ ಆಧಾರಿತ ಅಂಗಡಿ ವ್ಯವಹಾರವನ್ನು ಆರಂಭಿಸಿದ್ದಾರೆ. ಸಬ್ಸಿಡಿ ಆಧಾರದಲ್ಲಿ ಸಾಲಸೌಲಭ್ಯವನ್ನು ಒದಗಿಸಿ ಮಹಿಳೆಯ ಸ್ವಾವಲಂಬಿ ಉದ್ಯಮಕ್ಕೆ ಸೆಲ್ಕೋ ಸಂಸ್ಥೆ ನೆರವಾಗಿದೆ. ಇವರ ಅಂಗಡಿಯಲ್ಲಿ ತಂಪು ಪಾನೀಯಗಳು ಹಾಗೂ…








