ಬಂಟ್ವಾಳ: ನಾನು ಎಂದಿಗೂ ಶಾಸಕನಾಗುವ ಕನಸು ಕಂಡವನಲ್ಲ, ದೇವರುವ ಕೊಟ್ಟ ಅವಕಾಶದಿಂದ ಶಾಸಕನಾಗಿ ಇಂದು ಜನರ ಪ್ರೀತಿ ಗಳಿಸಲು ಸಾಧ್ಯವಾಯಿತು. ನನ್ನ ಅಧಿಕಾರವಧಿಯಲ್ಲಿ ಕ್ಷೇತ್ರದ ಜನತೆ ತಲೆ ತಗ್ಗಿಸುವ ಕೆಲಸ ನಾನು ಮಾಡಿಲ್ಲ. ಆದ್ದರಿಂದಾಗಿ ಧೈರ್ಯದಿಂದ ಪಾದಯಾತ್ರೆ ಮಾಡಲು ಸಾಧ್ಯವಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಹೇಳಿದರು.
ಗ್ರಾಮ ವಿಕಾಸ ಯಾತ್ರೆ, ಗ್ರಾಮದೆಡೆಗೆ ಶಾಸಕರ ನಡಿಗೆ ಕಾರ್ಯಕ್ರಮದ ಎರಡನೇ ದಿನ ಕಾಪುಮಜಲುವಿನ ಮಲರಾಯ ದೈವಸ್ಥಾನದ ವಠಾರದಲದಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
22 ಕಿ.ಮೀ. ಪಾದಯಾತ್ರೆಯಲ್ಲಿ ಜನರು ನನ್ನ ಜೊತೆ ಉತ್ಸಾಹದಿಂದ ಪಾಲ್ಗೊಂಡಿರುವುದು ಖುಷಿ ನೀಡಿದೆ. .
ದೇವರ ದಯೆ ಹಾಗೂ ಕ್ಷೇತ್ರದ ಜನರ ಪ್ರೀತಿ ಯಿಂದ ಪಾದಯಾತ್ರೆ ಯಶಸ್ವಿಯಾಗಿ ನಡೆಯಲಿದೆ ಎಂದು ತಿಳಿಸಿದರು.
. ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ ಕಾಂಗ್ರೆಸ್ ಹುಟ್ಟಿದ್ದು ಬ್ರಿಟಿಷ್ ಗರ್ಭದಿಂದ. ವ್ಯಾಪರಕ್ಕೆ ಬಂದ ಬ್ರಿಟಿಷರು ಹುಟ್ಟುಹಾಕಿದ ಕಾಂಗ್ರೆಸ್ ಇಂದು ಇಟಲಿಯ ವ್ಯಕ್ತಿಯ ಹಿಡಿತದಲ್ಲಿದೆ ಎಂದು ಕಿಡಿಕಾರಿದರು.
ಮುಂದಿನ ಚುನಾವಣೆ ಭಾರತೀಯ ಸಂಸ್ಕೃತಿ ಉಳಿಬೇಕೋ ಬೇಡವೋ ಎಂದು ನಿರ್ಧರಿಸಲಿರುವ ಚುನಾವಣೆಯಾಗಲಿದೆ. ಮುಂದೆಯೂ ಬಿಜೆಪಿಯ ಮುಖ್ಯಮಂತ್ರಿಯರ ಅಧಿಕಾರಕ್ಕೆ ಬರಲಿದ್ದಾರೆ ಎಂದು ಭವಿಷ್ಯ ನುಡಿದರು.
ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಗ್ರಾಮ ವಿಕಾಸ ಯಾತ್ರೆಯ ಸಹಸಂಚಾಲಕರಾದ ಮಾಧವ ಮಾವೆ, ಸುದರ್ಶನ ಬಜ, ಕ.ನ.ನೀ.ಸರಬರಾಜು ಮಂಡಳಿಯ ನಿರ್ದೇಶಕಿ ಸುಲೋಚನಾ ಭಟ್, ವಿಟ್ಲ ಪಡ್ನೂರು ಪಂಚಾಯತಿ ಅಧ್ಯಕ್ಷೆ ರೇಷ್ಮ ಶಂಕರ್,ಪ್ರಮುಖರಾದ ದಿನೇಶ್ ಅಮ್ಟೂರು, ಸನತ್ ಕುಮಾರ್ ರೈ , ಶಿವಪ್ರಸಾದ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಂಡಲದ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ ಸ್ವಾಗತಿಸಿದರು. ಗ್ರಾಮ ವಿಕಾಸ ಯಾತ್ರೆಯ ಸಂಚಾಲಕ
ದೇವದಾಸ್ ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು. ಡೊಂಬಯ ಅರಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.