ಬಂಟ್ವಾಳ: ಜೇಸಿಐ ಜೋಡುಮಾರ್ಗ ನೇತ್ರಾವತಿ ಯ 2023 ನೇ ಸಾಲಿನ ಅಧ್ಯಕ್ಷರಾಗಿ ಗಾಯತ್ರಿ ಲೋಕೇಶ್ ರವರು ಆಯ್ಕೆಯಾಗಿರುತ್ತಾರೆ.
ಘಟಕದ ಕಾರ್ಯದರ್ಶಿಯಾಗಿ ರಮ್ಯ, ಕೋಶಾಧಿಕಾರಿಯಾಗಿ ದೀಪ್ತಿಶ್ರೀನಿಧಿ ಹಾಗು ಘಟಕದ ಉಪಾಧ್ಯಕ್ಷರುಗಳಾಗಿ ಸುಬ್ರಹ್ಮಣ್ಯ ಪೈ, ಕಿಶನ್ ಎನ್ ರಾವ್, ಅಮಿತಾಹರ್ಷರಾಜ್, ಡಾ.ವಿನಾಯಕ್ ಕೆ.ಎಸ್. ಪ್ರಕಾಶ್ ಆಳ್ವ, ಶ್ರೀನಿಧಿ ಭಟ್ ಆಯ್ಕೆಯಾಗಿರುತ್ತಾರೆ. ಘಟಕದ ಜೇಜೇಸಿ ಅಧ್ಯಕ್ಷರಾಗಿ ರಶ್ಮಿತಾ ಆಯ್ಕೆಯಾಗಿರುತ್ತಾರೆ.
ಘಟಕದ ನಿರ್ದೇಶಕರುಗಳಾಗಿ ಹರಿಶ್ಚಂದ್ರ ಆಳ್ವ, ಹರ್ಷರಾಜ್, ಡಾ.ಧೀರಜ್ ಹೆಬ್ರಿ, ರವೀಂದ್ರ ಕುಕ್ಕಾಜೆ ಆಯ್ಕೆಯಾಗಿರುತ್ತಾರೆ.
ನೂತನ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜ.30 ಸೋಮವಾರ ಸಂಜೆ ಘಂಟೆ 6.30 ಕ್ಕೆ ಬಿ.ಸಿ.ರೋಡಿನ ರೋಟರಿ ಸಭಾ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾವಂತೂರು ಮಹಾಗಣಪತಿ ದೇವಾಲಯ ಸಮಿತಿಯ ಅಧ್ಯಕ್ಷ ಪದ್ಮರಾಜ ಬಲ್ಲಾಳ್ ಮಾವಂತೂರು, ಜೇಸಿಐ ವಲಯ 15 ರ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಪದ ಪ್ರಧಾನ ಅಧಿಕಾರಿಯಾಗಿ ಜೇಸಿಐ ವಲಯ ಉಪಾಧ್ಯಕ್ಷ ಅಜಿತ್ ಕುಮಾರ್ ಭಾಗವಹಿಸಲಿದ್ದಾರೆ.