ಬಂಟ್ವಾಳ: ಜ.26ರಂದು ಪ್ರಜಾಪ್ರಭುತ್ವ ದಿನದ ಅಂಗವಾಗಿ ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ ಪಥಸಂಚಲನದಲ್ಲಿ ರಾಜ್ಯದ ಪ್ರತಿನಿಧಿಯಾಗಿ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಮಿಥುನ್ ಆಯ್ಕೆಯಾಗಿದ್ದಾರೆ.
ತಾಲೂಕಿನ ಶೇರಾ ನಿವಾಸಿ ದಿ|.ಕೃಷ್ಣಪ್ಪ ಪೂಜಾರಿ ಹಾಗೂ ದಿ.| ಭಾರತಿ ಅವರ ಏಕೈಕ ಪುತ್ರನಾಗಿರುವ
ಮಿಥುನ್ ಕುಮಾರ್ ಭಾರತೀಯ ತಟ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಪ್ರಸ್ತುತ ಆಂಧ್ರಪ್ರದೇಶದ ವಿಶಾಖಪಟ್ಟಣಂದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ದೆಹಲಿಯಲ್ಲಿ ಪ್ರಜಾಪ್ರಭುತ್ವ ದಿನದ ಅಂಗವಾಗಿ ನಡೆಯುವ ಪಥಸಂಚಲನಕ್ಕೆ
ಕರ್ನಾಟಕದ ಇಂಡಿಯಾನ್ ಕೋಸ್ಟ್ ಗಾರ್ಡ್ ನಿಂದ ಒರ್ವ ಆಯ್ಕೆಯಾಗಿರುವುದು , ರಾಜ್ಯಕ್ಕೆ ಅತ್ಯಂತ ಸಂತಸದ ವಿಷಯವಾಗಿದೆ. ಇಂದು ನಡೆಯುವ ಪಥಸಂಚಲನದ ಒಂದು ಯುನಿಟ್ ನಲ್ಲಿ 144 ಜನರಿದ್ದು ಅ ತಂಡದಲ್ಲಿ ಮಿಥುನ್ ಪಥಸಂಚನದಲ್ಲಿ ಭಾಗವಹಿಸಲಿದ್ದಾರೆ.
