ಬಂಟ್ವಾಳ: ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಶುಕ್ರವಾರ ಬೆಳಿಗ್ಗೆ 9.18 ರ ಮೀನ ಲಗ್ನ ಸುಮುಹೂರ್ತದಲ್ಲಿ ನಡೆಯಿತು.
ಬೆಳಿಗ್ಗೆ ಗಣಪತಿ ಹೋಮ ನಡೆದು ಶ್ರೀ ವಿನಾಯಕ, ಶ್ರೀ ಶಂಕರನಾರಾಯಣ, ಶ್ರೀ ದುರ್ಗಾಂಬಾ ಸಾನಿಧ್ಯದಲ್ಲಿ ಅಷ್ಟಬಂಧ ಲೇಪನ ನಡೆದು ಶಿಖರ ಪ್ರತಿಷ್ಠೆ, ಪರಿಕಲಶಾಭಿಷೇಕ ಹಾಗೂ ಬ್ರಹ್ಮಕಲಶಾಭಿಷೇಕ ನಡೆಯಿತು.
ಮಧ್ಯಾಹ್ನ ರಥಕ್ಕೆ ಕಲಶಾಭಿಷೇಕ, ಮಹಾಪೂಜೆ, ಪಲ್ಲಪೂಜೆ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಶಾಸಕ ರಾಜೇಶ್ ನಾಯ್ಜ್, ಅಧ್ಯಕ್ಷ ಸಂತೋಷ್ ಶೆಟ್ಟಿ ದಲಂದಿಲ, ಕಾರ್ಯಧ್ಯಕ್ಷ ಕೆ. ವಿಶ್ವನಾಥ ಆಳ್ವ ಕಾಂತಾಡಿಗುತ್ತು, ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿರಾಜ ರಾವ್ ನೂಯಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅರವಿಂದ ಭಟ್,ಕಾರ್ಯನಿರ್ವಾಹಣಾಧಿಕಾರಿ ಜಯಮ್ಮ ಪಿ., ಉದ್ಯಮಿ ವಿನಯ್ ಸಿಂಗ್, ಪ್ರಧಾನ ಅರ್ಚಕ ಮಹೇಶ್ ಭಟ್, ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ಮಾಜಿ ಶಾಸಕ ರುಕ್ಮಯ ಪೂಜಾರಿ, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷರಾದ ಎ.ಸಿ.ಭಂಡಾರಿ, ರಾಧಕೃಷ್ಣ ಆಳ್ವ ಕಂಚಿಲ,
ದೇವಾಡಿಗ ಸಮಾಜ ಶ್ರೀ ನಂದಾವರ ದೇವಸ್ಥಾನ ರಥ ಸಮರ್ಪಣ ಸಮಿತಿ ಅಧ್ಯಕ್ಷ ರಾಮದಾಸ ಬಂಟ್ವಾಳ, ಸುಂದರ ಮೊಯಿಲಿ ವಿವಿಧ ಸಮಿತಿ ಪ್ರಮುಖರಾದ ರವೀಂದ್ರ ಕಂಬಳಿ, ಅಶೋಕ್ ಗಟ್ಟಿ ಕಟ್ಟೆಮಾರ್, ,ಎನ್ ಶಿವಶಂಕರ್, ಎನ್.ಕೆ. ಶಿವ, ಜಯಶಂಕರ ಬಾಸ್ರಿತ್ತಾಯ ಅದ್ರುಕ್ಕು, ಅರುಣ್ ಕುಮಾರ್ ಕುಕ್ಕುದಕಟ್ಟೆ, ದಾಮೋದರ ಬಿ.ಎಂ., ಎಂ. ಉಮೇಶ್, ಸಂದೀಪ್ ಕುಮಾರ್, ರೂಪೇಶ್ ಆಚಾರ್ಯ, ಸತೀಶ್ ಗೌಡ, ಲೋಹಿತ್ ಪಣೋಲಿಬೈಲು, ಸಚಿನ್ ಮೆಲ್ಕಾರ್, ನವೀನ್ ಸುವರ್ಣ, ಕವಿತಾ ವಸಂತ, ಜಯಶ್ರೀ ಅಶೋಕ್, ದೇವಪ್ಪ ನಾಯ್ಕ, ಎನ್. ಮೋಹನದಾಸ ಹೆಗ್ಡೆ, ಯಶವಂತ ದೇರಾಜೆ, ಗಣೇಶ್ ಕಾರಾಜೆ, ಸುಧಾಕರ ಆಚಾರ್ಯ, ಎಂ. ಮಹಾಬಲ ಕೊಟ್ಟಾರಿ, ಶ್ರೀಕಾಂತ ಶೆಟ್ಟಿ, ರತ್ನಾಕರ ನಾಡಾರ್, ಗಿರೀಶ್ ಕುಮಾರ್ ಕುಕ್ಕುದಕಟ್ಟೆ, ಸುರೇಶ್ ಬಂಗೇರ ಆರ್ಯಾಪು, ಕಿಶನ್ ಶೇಣವ, ಕುಶಾಲಪ್ಪ ಅಮ್ಟೂರು, ಜಗದೀಶ್ ಐತಾಳ್, ಪ್ರವೀಣ್ ಶೆಟ್ಟಿ, ಶೈಲೇಶ್ ಪೂಜಾರಿ, ನಾಗೇಶ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.